Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಧನಲಕ್ಷ್ಮಿ ಯೋಗದಿಂದಾಗಿ ಈ ರಾಶಿಯವರು ಸಂಪತ್ತು ಹೆಚ್ಚಲಿದೆ
ಅದೃಷ್ಟ ಎಂಬುವುದು ಕೆಲವೊಂದು ಸಂದರ್ಭದಲ್ಲಿ ಹೆಚ್ಚಾಗುವುದು. ಅದೃಷ್ಟವೊಂದಿದ್ದರೆ ನಮ್ಮ ಪ್ರಯತ್ನಕ್ಕೆ, ಶ್ರಮಕ್ಕೆ ತುಸು ಅಧಿಕವೇ ಫಲ ಸಿಗುವುದು. ವೈದಿಕ ಶಾಸ್ತ್ರದ ಪ್ರಕಾರ ನಮ್ಮ ಅದೃಷ್ಟಕ್ಕೆ ಗ್ರಹಗಳು ಕಾರಣವಾಗಿರುತ್ತದೆ. ಧನಲಕ್ಷ್ಮಿ ಯೋಗ ಕೂಡಿ ಬಂದರೆ ವ್ಯಕ್ತಿಗೆ ತುಂಬಾನೇ ಅದೃಷ್ಟ, ಅವನ ಆದಾಯ ಹೆಚ್ಚಾಗುವುದು. ಇದೀಗ ಧನಲಕ್ಷ್ಮಿ ಯೋಗ ಏರ್ಪಟ್ಟಿದೆ. ಗುರು ಗ್ರಹದ ಬೆಂಬಲ, ಸೂರ್ಯನ ಶಕ್ತಿ ಎರಡೂ ಇರುವುದರಿಂದ ಧನಲಕ್ಷ್ಮಿ ಯೋಗ ತುಂಬಾನೇ ಶುಭ.

ಧನಲಕ್ಷ್ಮಿ ಯೋಗದ ಪ್ರಯೋಜನಗಳು
* ಅದೃಷ್ಟ ಹೆಚ್ಚುವುದು: ಸಾಮಾನ್ಯಕ್ಕಿಂತ ಅಧಿಕ ಅದೃಷ್ಟ ನಿಮ್ಮ ಪಾಲಿಗಿರುತ್ತದೆ.
* ವೈಯಕ್ತಿಕವಾಗಿ ಹಾಗೂ ವೃತ್ತಿ ಪರವಾಗಿ ಬೆಳವಣಿಗೆ ಕಾಣುತ್ತೀರಿ ಇದರಿಂದ ಆರ್ಥಿಕ ಬದುಕು ತುಂಬಾನೇ ಚೆನ್ನಾಗಿರುತ್ತದೆ.
* ಮುಟ್ಟಿದ್ದೆಲ್ಲಾ ಚಿನ್ನಾ ಅಂತಾರಲ್ಲ ಹಾಗೆ ನೀವು ಮಾಡುವ ಕಾರ್ಯಗಳಿಗೆ ಉತ್ತಮ ಫಲ ಸಿಗುವುದು
* ವ್ಯಾಪಾರಸ್ಥರು ಉತ್ತಮ ಲಾಭ ಗಳಿಸುತ್ತಾರೆ. ಮನೆಯಲ್ಲಿ ಸೌಕರ್ಯಗಳು ಹೆಚ್ಚುವುದು, ಉಳಿತಾಯ ಮಾಡಲು ಸಾಧ್ಯವಾಗುವುದು.
ಈ ಧನಲಕ್ಷ್ಮಿ ಯೋಗ ಈ ರಾಶಿಯವರಿಗೆ ಅಧಿಕ ಅದೃಷ್ಟದ ತಂದಿದೆ
ಮೇಷ ರಾಶಿ
ನೀವು ವೃತ್ತಿ ಹಾಗೂ ಆರ್ಥಿಕ ಬದುಕಿನಲ್ಲಿ ಉತ್ತಮ ಬೆಳವಣಿಗೆ ಕಾಣುತ್ತೀರಿ. ಸೂರ್ಯ 5ನೇ ಮನೆಯಲ್ಲಿದ್ದು ಗುರು 11ನೇ ಮನೆಯಲ್ಲಿದ್ದಾಗ ಧನಲಕ್ಷ್ಮಿ ಯೋಗ ಏರ್ಪಡುವುದು.
ಸಿಂಹ ರಾಶಿ
ಸಿಂಹ ರಾಶಿಯವರು ಈ ಅವಧಿಯಲ್ಲಿ ಉತ್ತಮ ಆರ್ಥಿಕ ಲಾಭವನ್ನು ಕಾಣಬಹುದು, ವೃತ್ತಿ ಜೀವನದಲ್ಲಿ ಅದೃಷ್ಟದ ಬಲವಿರುತ್ತದೆ. ಸಿಂಹ ರಾಶಿಯಲ್ಲಿ ಮಂಗಳ 4ನೇ ಸ್ಥಾನದಲ್ಲಿದ್ದಾಗ ಈ ಅವಧಿಯಲ್ಲಿ ಹೆಚ್ಚಿನ ಆರ್ಥಿಕ ಲಾಭ ಉಂಟಾಗುವುದು.
ಧನು ರಾಶಿ
ಧನು ರಾಶಯವರಿಗೆ ವೃತ್ತಿ ಜೀವನದಲ್ಲಿ ಅನೇಕ ಉತ್ತಮ ಅವಕಾಶಗಳು ದೊರೆಯಲಿದೆ. ಈ ಅವಧಿಯಲ್ಲಿ ಆರ್ಥಿಕ ಲಾಭ ಗಳಿಸಲು ಸಾಧ್ಯವಾಗುವುದು, ನಿಮ್ಮ ಕೆಲಸದಲ್ಲಿ ಯಶಸ್ಸು ಗಳಿಸುವುದರಿಂದ ನೀವು ಖುಷಿಯಾಗಿರುತ್ತೀರಿ.
ಮೀನ ರಾಶಿ
ಮೀನ ರಾಶಿಯವರಿಗೂ ಧನ ಯೋಗವಿದೆ, ಆದ್ದರಿಂದ ಆರ್ಥಿಕವಾಗಿ ಈ ಸಮಯ ತುಂಬಾನೇ ಒಳ್ಳೆಯದಿದೆ. ಈ ಅವಧಿಯಲ್ಲಿ ವ್ಯವಹಾರದಲ್ಲಿ ಉತ್ತಮ ಪ್ರಯೋಜನ ಪಡೆಯಲು ಸಾಧ್ಯವಾಗುವುದು.
ಜ್ಯೋತಿಷ್ಯವು ಈ ರೀತಿ ಇದ್ದಾಗ ಧನ ಯೋಗ ಏರ್ಪಡುವುದು ಎಂದು ಹೇಳುತ್ತದೆ
* ಬುಧ ಮೇಷ ಅಥವಾ ಕರ್ಕ ರಾಶಿಯಲ್ಲಿದ್ದರೆ , ಗುರು 9 ಅಥವಾ 11ನೇ ಮನೆಯಲ್ಲಿದ್ದು ಸೂರ್ಯ 5ನೇ ಮನೆಯಲ್ಲಿದ್ದರೆ ಆ ವ್ಯಕ್ತಿ ಶ್ರೀಮಂತನಾಗುತ್ತಾನೆ
* ಚಂದ್ರ, ಗುರು, ಶುಕ್ರ 5ನೇ ಮನೆಯಲ್ಲಿದ್ದರೆ ಆ ವ್ಯಕ್ತಿ ಆರ್ಥಿಕವಾಗಿ ತುಂಬಾನೇ ಬೆಳೆಯುತ್ತಾನೆ.
* ಸೂರ್ಯ 6 ಅಥವಾ 11ನೇ ಮನೆಯಲ್ಲಿದ್ದರೆ ಆ ರಾಶಿಯವರಿಗೂ ಒಳ್ಳೆಯದು
* ಮಂಗಳ ಅಥವಾ ಶನಿ 7ನೇ ಮನೆಯಲ್ಲಿ, ಶನಿ ಅಥವಾ ಗುರು ಅಥವಾ ಮಂಗಳ 11ನೇ ಮನೆಯಲ್ಲಿದ್ದರೆ ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದು
* ಮಂಗಳ 4ನೇ ಮನೆಯಲ್ಲಿದ್ದು, ಸೂರ್ಯ 5 ಗುರು 11 ಅಥವಾ 5ನೇ ಮನೆಯಲ್ಲಿದ್ದಾಗ ಆ ವ್ಯಕ್ತಿ ಪೂರ್ವಜರ ಆಸ್ತಿಯಿಂದ ಉತ್ತಮ ಲಾಭ ಪಡೆಯುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
