Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನವೆಂಬರ್ 12ಕ್ಕೆ ದೇವೋತ್ಥಾನ ಏಕಾದಶಿ: ಉಳಿದ 23 ಏಕಾದಶಿಗಿಂತ ತುಂಬಾ ವಿಶೇಷವಾದ ಏಕಾದಶಿಯಿದು, ಏಕೆ?
ದೇವೋತ್ಥಾನ ಏಕಾದಶಿ ಧಾರ್ಮಿಕ ಕಾರಣಗಳಿಂದ ತುಂಬಾನೇ ಮಹತ್ವದ ದಿನ, ಇತರ 23 ಏಕಾದಶಿಗಿಂತೀ ಏಕಾದಶಿ ತುಂಬಾನೇ ವಿಶೇಷವಾದದ್ದು. ದೇವೋತ್ಥಾನ ಏಕಾದಶಿ ನವೆಂಬರ್ 12ರಂದು ಆಚರಿಸಲಾಗುತ್ತಿದೆ, ಈ ಏಕಾದಶಿಯ ಮಹತ್ವವೇನು , ಪೂಜಾ ಸಮಯವೇನು, ಕಾರ್ತಿಕ ಮಾಸದಲ್ಲಿ ಬರುವ ಈ ಏಕಾಶಿಯಂದು ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ದೀಪಾವಳಿ ನಂತರ ಬರುವ ಮೊದಲ ಏಕಾದಶಿ
ಈ ಏಕಾದಶಿ ದೀಪಾವಳಿ ಬಳಿಕ ಬರುವ ಮೊದಲ ಏಕಾದಶಿಯಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ಈ ಏಕಾದಶಿಯಂದು ಶ್ರೀ ವಿಷ್ಣುವು ಯೋಗ ನಿದ್ದೆಯಿಂದ ಎಚ್ಚೆರವಾಗುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆ. ಶ್ರೀವಿಷ್ಣು ನಾಲ್ಕು ತಿಂಗಳ ಕಾಲ ಯೋಗ ನಿದ್ದೆಯಲ್ಲಿರುತ್ತಾನೆ, ಈ ಅವಧಿಯಲ್ಲಿ ಮಹೇಶ್ವರನು ಭೂಮಂಡಲದ ಜವಾಬ್ದಾರಿ ಹೊತ್ತಿರುತ್ತಾನೆ, ದೇವೋತ್ಥಾನ ಏಕಾದಶಿಯಂದು ಶ್ರೀ ವಿಷ್ಣು ಯೋಗ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಈ ಏಕಾದಶಿಯನ್ನು ದೇವಪ್ರಭೋಧನಿ ಏಕಾದಶಿ ಅಥವಾ ದೇವುತಾನಿ ಏಕಾದಶಿ ಎಂದು ಕರೆಯಲಾಗುವುದು.
ದೇವೋತ್ಥಾನಿ ಏಕಾಶಿ ಬಳಿಕ ಶುಭ ಕಾರ್ಯಗಳು ಪ್ರಾರಂಭವಾಗುವುದು
ದೇವೋತ್ಥಾನ ಏಕಾದಶಿ ಬಳಿಕ ಶುಭ ಕಾರ್ಯಗಳು ಪ್ರಾರಂಭವಾಗಲಿದೆ. ಮದುವೆ, ಗೃಹ ಪ್ರವೇಶ ಸೇರಿ ಅನೇಕ ಶುಭ ಕಾರ್ಯಗಳನ್ನು ದೇವೋತ್ಥಾನ ಏಕಾದಶಿ ಬಳಿಕ ಪ್ರಾರಂಭಿಸಲಾಗುವುದು.
ದೇವೋತ್ಥಾನಿ ಏಕಾದಶಿತಿಥಿ ಹಾಗೂ ಪೂಜಾ ಮುಹೂರ್ತ
ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ನವೆಂಬರ್ 11 ಸಂಜೆ 06:46ಕ್ಕೆ ಪ್ರಾರಂಭ
ನವೆಂಬರ್ 12 ಸಂಜೆ 04:04ಕ್ಕೆ ಮುಕ್ತಾಯ
ಪಾರಣ ಸಮಯ: ನವೆಂಬರ್ 13 ಬೆಳಗ್ಗೆ 06:18ರಿಂದ 10:08ರವರೆಗೆ ಇದೆ.
ದೇವೋತ್ಥಾನ ಏಕಾದಶಿಯ ಮಹತ್ವ
ಕಾರ್ತಿಕ ಮಾಸವೇ ಧಾರ್ಮಿಕ ದೃಷ್ಟಿಯಿಂದ ವಿಶೇಷವಾದ ದಿನಗಳಾಗಿದೆ, ಈ ಮಾಸದಲ್ಲಿ ಶ್ರೀವಿಷ್ಣು ಮತ್ತು ಶಿವನ ಆರಾಧನೆಗೆ ಮಹತ್ವದ ದಿನಗಳಾಗಿದೆ. ಈ ಏಕಾದಶಿಗೆ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು.
ಈ ದಿನ ಸಂಪೂರ್ಣ ಉಪವಾಸವಿದ್ದು ಪೂಜೆ ಮಾಡಬೇಕು.
ಈ ದಿನ ಅಕ್ಕಿಯ ಆಹಾರ ಪದಾರ್ಥ ಸೇವಿಸಬಾರದು, ಆಹಾರಕ್ಕೆ ಉಪ್ಪು ಹಾಕಿ ಬಳಸಬಾರದು
ಈ ದಿನ ಶ್ರೀ ವಿಷ್ಣು ಹಾಗೂ ಶಿವನ ದೇವಾಲಯಕ್ಕೆಭೇಟಿ ನೀಡಿ
ಈ ದಿನ ತುಳಸಿ ಗಿಡಕ್ಕೆ ಹೂವು ಹಾಕಿ ದೀಪ ಹಚ್ಚಿ
ಶ್ರೀ ವಿಷ್ಣುವಿನ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿ, ಹಣ್ಣುಗಳನ್ನು ಅರ್ಪಿಸಿ.
ನೈವೇದ್ಯ ಅರ್ಪಿಸಿ ಪೂಜೆಯನ್ನು ಸಲ್ಲಿಸಿ.
ಏಕಾದಶಿಯಂದು ಈ ಮಂತ್ರ ಪಠಣೆ ಮಾಡಿ
ಉತ್ತಿಷ್ಟೋ ಉತ್ತಿಷ್ಟ ಗೋವಿಂದೋ
ಉತ್ತಿಷ್ಟೋ ಗರೂಢಧ್ವಜ|
ಉತ್ತಿಷ್ಟೋ ಕಮಲಾಕಾಂತ
ಜಗತಾಂ ಮಂಗಲಂ ಕುರೂ||''
- ''ಬ್ರಹ್ಮೇಂದ್ರರುದಾಗ್ನಿ ಕುಬೇರ ಸೂರ್ಯಸೋಮಾದಿಭಿರ್ವಂದಿತ ವಂದನೀಯ|
ಬುಧ್ಯಸ್ಯ ದೇವೇಶ ಜಗನ್ನಿವಾಸ ಮಂತ್ರ ಪ್ರಭಾವೇಣ ಸುಖೇನ ದೇವ||''
ಈ ಮಂತ್ರಗಳ ಪಠಣೆ ಮಾಡುವುದರಿಂದ ಸಂಪತ್ತು ವೃದ್ಧಿಸುವುದು, ಜೀವನದಲ್ಲಿ ಏನಾದರು ಕಷ್ಟಗಳಿದ್ದರೆ ಅದು ದೂರಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
