Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೀಪಾವಳಿ 2023 ಕ್ಯಾಲೆಂಡರ್: ಈ ವರ್ಷ ನವೆಂಬರ್ 13ರಂದು ಹಬ್ಬವಿಲ್ಲ, ಯಾವ ದಿನ ಯಾವ ಹಬ್ಬ?
ದೀಪಾವಳಿ ಎಂಬುವುದು ಒಂದು ದಿನದ ಸಡಗರವಲ್ಲ, 5 ದಿನಗಳವರೆಗೆ ನಡೆಯುವ ಸಂಭ್ರಮ. ಈ 5 ದಿನಗಳ ಬೆಳಕಿನ ಹಬ್ಬದಲ್ಲಿ ಒಂದೊಂದು ದಿನ ಒಂದೊಂದು ಆಚರಣೆಯಿದೆ, ಆ ಆಚರಣೆಗೆ ತುಂಬಾನೇ ಮಹತ್ವವಿದೆ. ಈ ವರ್ಷ ಯಾವ ದಿನ ಯಾವ ಹಬ್ಬವನ್ನು ಆಚರಿಸಲಾಗುವುದು ಎಂದು ನೋಡೋಣ ಬನ್ನಿ:
5 ದಿನಗಳ ದೀಪಾವಳಿ ಆಚರಣೆ
ಶುಕ್ರವಾರ ನವೆಂಬರ್ 10, 2023: ಧನ್‌ತೆರೇಸ್ ಅಥವಾ ಧನ್ ತ್ರಯೋದಶಿ
ಶನಿವಾರ ನವೆಂಬರ್ 11, 2023: ಚೋಟಿ ಅಥವಾ ಚಿಕ್ಕ ದೀಪಾವಳಿ
ಭಾನುವಾರ ನವೆಂಬರ್ 12 , 2023: ಲಕ್ಷ್ಮಿ ಪೂಜೆ, ನರಕ ಚತುರ್ದಶಿ
ಮಂಗಳವಾರ, ನವೆಂಬರ್ 14, 2023: ಗೋವರ್ಧನ ಪೂಜೆ, ಬಲಿಪ್ರತಿಪಾದ
ಬುಧವಾರ, ನವೆಂಬರ್ 15, 2023: ಭಾಯಿ ದೂಜ್

ನವೆಂಬರ್ 13 ಶುಭ ದಿನವಲ್ಲ ಹಾಗಾಗಿ ಈ ದಿನ ಹಬ್ಬವನ್ನು ಆಚರಿಸುವುದಿಲ್ಲ.
ಧನ್ತೇರಸ್: ಇದು ದೀಪಾಳಿಯ ಮೊದಲ ದಿನ. ಪ್ರತೀವರ್ಷ ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು ಧನ್ತೇರಸ್ ಆಚರಿಸಲಾಗುವುದ. ಈ ದಿನ ಚಿನ್ನ- ಬೆಳ್ಳಿ ಖರೀದಿಗೆ ತುಂಬಾನೇ ಶುಭ ಎಂದು ಪರಿಗಣಿಸಲಾಗುವುದು. ಧನ್ತೇರಸ್ ದಿನದಂದು ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚಿಟ್ಟು ಚಿನ್ನವನ್ನು ಇರಿಸಿ ಪೂಜಿಸಲಾಗುವುದು, ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆಯಿದೆ. ಈ ದಿನದಂದು ಗಿಫ್ಟ್ಸ್ ಕೊಡುವುದಾಗಲಿ, ತಗೊಳುವುದು ಮಾಡಬಾರದು. ಈ ದಿನ ಪಾತ್ರೆಗಳನ್ನು ತಗೊಂಡರೆ ಅದರಲ್ಲಿ ಏನಾದರು ಆಹಾರ ವಸ್ತು ಹಾಕಿ ಕೊಂಡೊಯ್ಯಿರಿ, ಖಾಲಿ ಕೊಂಡಯ್ಯಬೇಡಿ.
ಚೋಟಿ ದೀಪಾವಳಿ: ಈ ದಿನದಂದು ಯಮದೀಪವನ್ನು ಹಚ್ಚಿ ಯಮಧರ್ಮನನ್ನು ಪೂಜಿಸಲಾಗುವುದು. ಯಮಧರ್ಮನನ್ನು ಪೂಜಿಸುವುದರಿಂದ ಅಕಾಲಿಕ ಸಾವಿನ ಭಯದ ದೂರಾಗುವುದು. ಈ ದೀಪಾವಳಿಯಂದು 14 ದೀಪಗಳನ್ನು ಹಚ್ಚಿಟ್ಟು ದೀಪಾವಳಿ ಹಬ್ಬವನ್ನು ಆಚರಿಸಲಾಗುವುದು.
ಲಕ್ಷ್ಮಿ ಪೂಜೆ: ಕಾರ್ತಿಕ ಮಾಸದ ಅಮವಾಸ್ಯೆಯ ಪ್ರದೋಷ ಕಾಲದಂದು ಲಕ್ಷ್ಮಿಯನ್ನು ಆರಾಧಿಸಿದರೆ ಸಂಪತ್ತು ವೃದ್ಧಿಯಾಗುವುದು. ಈ ದಿನ ಲಕ್ಷ್ಮಿ, ಗಣೇಶ, ಸರಸ್ವತಿ, ಸಂಪತ್ತಿನ ದೇವರು ಕುಬೇರನನ್ನು ಪೂಜಿಸಲಾಗುವುದು. ಈ ದಿನ ಮನೆಯನ್ನು ಅಲಂಕರಿಸಿ, ಲಕ್ಷ್ಮಿ ಫೋಟೋಗೆ ಹೂ, ಚಿನ್ನಾಭರಣಗಳನ್ನು ಹಾಕಿ ಅಲಂಕರಿಸಿ, ನಾಣ್ಯಗಳು, ಹಣವನ್ನು ಇಟ್ಟು ಆರಾಧಿಸಲಾಗುವುದು.
ಗೋವರ್ಧನ ಪೂಜೆ: ಬಲಿಪಾಡ್ಯಮಿ ದಿನದಂದು ಗೋವರ್ಧನ ಪೂಜೆ ಮಾಡಲಾಗುವುದು. ಈ ದಿನ ಸಗಣಿಯಿಂದ ಗೋವರ್ಧನ ಬೆಟ್ಟ ಮಾಡಿ ಗೋವುಗಳನ್ನು ಪೂಜಿಸಲಾಗುವುದು. ಗೋವರ್ಧನ ಪೂಜೆಯನ್ನು ಅನ್ನಕೂಟ ಎಂದು ಕರೆಯಲಾಗುವುದು. ಈ ಪೂಜೆಯಲ್ಲಿ ದೇವರಿಗೆ ಅರ್ಪಿಸುವ ಸಿಹಿತಿಂಡಿಗಳು, ಅಗರಬತ್ತಿಗಳು, ಹೂವುಗಳು, ತಾಜಾ ಹೂವುಗಳಿಂದ ಮಾಡಿದ ಹೂಮಾಲೆಗಳು, ರೋಲಿ, ಅಕ್ಕಿ ಮತ್ತು ಹಸುವಿನ ಸಗಣಿಯನ್ನು ಗೋವರ್ಧನ ಪೂಜೆಗೆ ಬಳಸಲಾಗುವುದು. ದೇವರಿಗೆ ಪಂಚಾಮೃತ ಅರ್ಪಿಸಲಾಗುವುದು.
ಭಾಯಿಧೂಜ್: ಇದನ್ನು ನಮ್ಮ ಕಡೆ ಹೆಚ್ಚು ಆಚರಿಸುವುದಿಲ್ಲ, ಆದರೆ ಉತ್ತರ ಭಾರತದ ಕಡೆ ಆಚರಸಲಾಗುವುದು. ಇದು ಸಹೋದರತ್ವ ಸಾರುವ ಹಬ್ಬವನ್ನಾಗಿ ಆಚರಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
