Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಆಯುಧ ಪೂಜೆಗೆ ಗಾಡಿ ಪೂಜೆ ಮಾಡದಿದ್ದರೆ ಇನ್ಯಾವಾಗ ಮಾಡಬಹುದು, ದೀಪಾವಳಿ ಕ್ಯಾಲೆಂಡರ್
ನವರಾತ್ರಿ, ದಸರಾ ಸಡಗರ ಮುಗಿಯುತ್ತಾ ಬಂದಿದೆ, ಇನ್ನೇನಿದ್ದರೂ ದೀಪಾವಳಿ ಸಂಭ್ರಮ ಎದುರು ನೋಡುತ್ತಿದ್ದೇವೆ, ಈ ಆಯುಧ ಪೂಜೆಗೆ ಕೆಲವು ಕಾರಣಗಳಿಂದ ಗಾಡಿ ಪೂಜೆ ಮಾಡಿಲ್ಲ ಎಂದಾದರೆ ಲಕ್ಷ್ಮಿ ಪೂಜೆ ದಿನ, ದೀಪಾವಳಿ ದಿನ ಕೂಡ ಪೂಜೆ ಮಾಡಬಹುದು. ಪ್ರತಿವರ್ಷ ಕಾರ್ತಿಕ ಅಮವಾಸ್ಯೆಯ ದಿನ ದೀಪಾವಳಿಯನ್ನು ಆಚರಿಸಲಾಗುವುದು.
ಐದು ದಿನಗಳ ದೀಪಾವಳಿ ಸಂಭ್ರಮ ಧನ್ತೇರಸ್‌ನಿಂದ (ಧನ್‌ತೆರೇಸ್) ಶುರುವಾಗುವುದು. ನಂತರನರಕ ಚತುರ್ದಶಿ, ದೀಪಾವಳಿ, ದೀಪಾವಳಿಯಂದ ಲಕ್ಷ್ಮಿ ಪೂಜೆ, ಗೋರ್ವಧನ ಪೂಜೆ ಕೊನೆಯ ದಿನ ಭಾಯಿ ಧೂಜ್ ಎಂದು ಆಚರಿಸಲಾಗುವುದು, ಆದರೆ ಕರ್ನಾಟಕದಲ್ಲಿ ಗೋರ್ವಧನ ಪೂಜೆಯೊಂದಿಗೆ ದೀಪಾವಳಿ ಆಚರಣೆ ಮುಗಿಯುತ್ತದೆ, ಬಾಯಿ ಧೂಜ್ ಆಚರಣೆ ಹೆಚ್ಚಾಗಿ ಮಾಡುವುದಿಲ್ಲ.

ಈ ವರ್ಷ ದೀಪಾವಳಿ ಯಾವಾಗ ಆಚರಿಸಲಾಗುವುದು?
ಈ ವರ್ಷ ಅಕ್ಟೋಬರ್ 31ರಂದು ದೀಪಾವಳಿ ಬಂದಿದೆ.
ದೀಪಾವಳಿ ಅಮವಾಸ್ಯೆ ತಿಥಿಯು ಅಕ್ಟೋಬರ್ 31 ಮಧ್ಯಾಹ್ನ 03. 52ಕ್ಕೆ ಶುರುವಾಗಿ ನವೆಂಬರ್ 1 ಸಂಜೆ 6. 16ಕ್ಕೆ ಕೊನೆಗೊಳ್ಳುವುದು. ಉದಯ ತಿಥಿ ನವೆಂಬರ್ 1ಕ್ಕೆ ಬಂದಿದೆ ಹಾಗಾಗಿ ಉದಯ ತಿಥಿಯ ಪ್ರಕಾರ ನವೆಂಬರ್ 1ಕ್ಕೆ ದೀಪಾವಳಿ ಆಚರಿಸಲಾಗುವುದು.
ಈ ವರ್ಷದ ದೀಪಾವಳಿ ಕ್ಯಾಲೆಂಡರ್ ಬಗ್ಗೆ ಹೇಳುವುದಾದರೆ:
ಧನ್ತೇರಸ್: ಅಕ್ಟೋಬರ್ 29
ನರಕ ಚತುರ್ದಶಿ: ಅಕ್ಟೋಬರ್ 31
ದೀಪಾವಳಿ: ನವೆಂಬರ್ 1, ಈ ದಿನ ಲಕ್ಷ್ಮಿ ಪೂಜೆ ಮಾಡಲಾಗುವುದು
ಗೋವರ್ಧನ ಪೂಜೆ: ನವೆಂಬರ್ 2
ಧನ್ತೇರಸ್
ಚಿನ್ನ, ಬೆಳ್ಳಿ ಖರೀದಿಗೆ ಧನ್ತೇರಸ್ ಅತ್ಯಂತ ಶುಭದಿನಗಳಲ್ಲಿ ಒಂದಾಗಿದೆ, ಅಕ್ಷಯ ತೃತೀಯದಂತೆ ಈ ದಿನ ಕೂಡ ಚಿನ್ನ ಖರೀದಿ ತುಂಬಾ ಶುಭವಾಗಿದೆ. ಈ ದಿನ ಚಿನ್ನ ಮತ್ತು ಬೆಳ್ಳಿ ಹಾಗೂ ಮನೆಗೆ ಸಂಬಂಧಿಸಿ ವಸ್ತುಗಳನ್ನು ಖರೀದಿಸುತ್ತಾರೆ, ಈ ದಿನ ಗಾಡಿ ಕೂಡ ಖರೀದಿ ಮಾಡುತ್ತಾರೆ. ಖರೀದಿ ಮಾತ್ರವಲ್ಲ ಗಾಡಿಯ ಪೂಜೆಯನ್ನೂ ಈ ದಿನ ಮಾಡಬಹುದು.
ಅಕ್ಟೋಬರ್ 31ಕ್ಕೆ ನರಕ ಚತುರ್ದಶಿ
ಈ ದಿನ ಕೂಡ ಪಿತೃ ತರ್ಪಣ ನೀಡಲಾಗುವುದು, ನರಕ ಚತುರ್ದಶಿಯಂದು ತೀರಿ ಹೋದವರಿಗೆ ಎಡೆ ಇಡುತ್ತಾರೆ, ಇದರಿಂದ ಪಿತೃದೋಷದಿಂದ ಮುಕ್ತರಾಗುತ್ತಾರೆ.
ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ ಯಾವಾಗ?
ಲಕ್ಷ್ಮಿ ಪೂಜೆಯನ್ನು ಪ್ರದೋಷ ಕಾಲದಲ್ಲಿ ಮಾಡಲಾಗುವುದು. ಸೂರ್ಯಾಸ್ತದ ನಂತರ ಪ್ರದೋಷ ಸಮಯ ನೋಡಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು. ಲಕ್ಷ್ಮಿ ಕೃಪೆಯಿಂದ ಒಳಿತಾಗಲಿದೆ.
ಈ ವರ್ಷ ವೃಷಭ ರಾಶಿಯಲ್ಲಿ ಲಕ್ಷ್ಮಿ ಪೂಜೆ ಬಂದಿದೆ.
ನವೆಂಬರ್ 1 ಸಂಜೆ 05:36ರಿಂದ 6:16ರವರೆಗೆ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತವಿದೆ.
ದೀಪಾವಳಿ ಬಳಿಕ ಗೋವರ್ಧನ ಪೂಜೆ
ಗೋವರ್ಧನ ಪೂಜೆಯನ್ನು ಪ್ರತಿಪಾದದ ದಿನದಂದು ಆಚರಿಸಲಾಗುವುದು, ಈ ದಿನ ಮೈಗೆ ಎಣ್ಣೆ ಹಾಕಿ ತಿಕ್ಕಿ ಸ್ನಾನ ಮಾಡಲಾಗುವುದು, ಬಳಿಕ ಶ್ರೀ ಕೃಷ್ಣನ ವಿಗ್ರಹವನ್ನು ಅಲಂಕರಿಸಿ ಗೋವಿನ ಸೆಗಣಿಯಿಂದ ಗೋವರ್ಧನ ಬೆಟ್ಟ ಮಾಡಲಾಗುವುದು. ಬಳಿಕ ವಿವಿಧ ಬಗೆಯ ಭಕಕ್ಷ್ಯಗಳನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಗುವುದು. ಈ ದಿನ ಗೋವರ್ಧನ ಬೆಟ್ಟದ ಕತೆ ಕೇಳಿದರೆ ಒಳ್ಳೆಯದು ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
