Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಡಿ. 18ಕ್ಕೆ ಸುಬ್ರಹ್ಮಣ್ಯ ಷಷ್ಠಿ: ಚಂಪಾ ಷಷ್ಠಿಯ ದಿನ ಹೀಗೆ ಮಾಡುವುದರಿಂದ ಸರ್ಪದೋಷ, ಕುಜದೋಷ ನಿವಾರಣೆ
ಚಂಪಾ ಷಷ್ಠಿಯನ್ನು ಕರ್ನಾಟಕದಲ್ಲಿ ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಈ ದಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು ಭಕ್ತರ ಸಂಖ್ಯೆ ಎಂದಿಗಿಂತಲೂ ಹತ್ತುಪಟ್ಟು ಅಧಿಕವಿರುತ್ತದೆ .
ಷಷ್ಠಿಯನ್ನು ಚಂಪಾ ಷಷ್ಠಿಯೆಂದು ಕರೆಯಲಾಗುವುದು. ಸುಬ್ರಹ್ಮಣ್ಯನನ್ನು ಕಾರ್ತಿಕೇಯ, ಸ್ಕಂದ, ಮುರುಗನ್, ವೇಲನ್ ಕುಮಾರ್ ಹೀಗೆ ನಾನಾ ಹೆಸರಿನಿಂದ ಕರೆಯಲಾಗುವುದು. ಚಂಪಾ ಷಷ್ಠಿಯಂದು ಸುಬ್ರಹ್ಮಣ್ಯನ ಭಕ್ತರು ಆತನ ಜಪ ಮಾಡುತ್ತಾ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡುತ್ತಾರೆ. ಈ ದಿನ ಸುಬ್ರಹ್ಮಣ್ಯ ದೇವಾಲಯದಲ್ಲಿ ಹೋಮ, ವ್ರತೋಪವಾಸಾದಿ ಆಚರಣೆಗಳ ನಡೆಯುವುದು.
ಸರ್ಪ ದೋಷ ಸಮಸ್ಯೆ ಇರುವವರು ಈ ದಿನ ಸುಬ್ರಹ್ಮಣ್ಯನನ್ನು ಆರಾಧಿಸಿದರೆ ಸರ್ಪದೋಷದಿಂದ ಮುಕ್ತರಾಗಬಹುದು. ಈ ವರ್ಷ ಯಾವಾಗ ಚಂಪಾ ಷಷ್ಠಿ ಆಚರಿಸಲಾಗುವುದು,ಈ ದನ ಪೂಜೆಯ ಮಹತ್ವವೇನು ನೋಡೋಣ ಬನ್ನಿ:

ಚಂಪ ಷಷ್ಠಿಯನ್ನು ಡಿಸೆಂಬರ್ 18ರಂದು ಆಚರಿಸಲಾಗುವುದು
ಷಷ್ಠಿ ತಿಥಿ ಪ್ರಾರಂಭ: ಡಿಸೆಂಬರ್ 17 ಸಂಜೆ 05:33ಕ್ಕೆ
ಷಷ್ಠಿ ತಿಥಿ ಮುಕ್ತಾಯ: ಡಿಸೆಂಬರ್ 18 ಮಧ್ಯಾಹ್ನ 03:13ಕ್ಕೆ
ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಡೆಯಲಿದೆ ವಿಶೇಷ ಪೂಜೆ
ಎಲ್ಲೆಲ್ಲಿ ಸುಬ್ರಹ್ಮಣ್ಯನ ದೇಗುಲಗಳಿರುತ್ತೋ ಅಲ್ಲಿ ಚಂಪಾ ಷಷ್ಠಿಯಂದು ವಿಶೇಷ ಪೂಜೆಗಳನ್ನು ನಡೆಸಲಾಗುವುದು. ಈ ದಿನ ನಮ್ಮ ಆಸೆ ಈಡೇರಲು ಭಕ್ತರು ಉಪವಾಸ ವ್ರತವಿದ್ದು ಅಶ್ವತ್ಥ ಕಟ್ಟೆ ಮೇಲೆ ಸರ್ಪ ವಿಗ್ರಹವಿಟ್ಟು ಸುಗ್ರಹ್ಮಣ್ಯ ಸ್ವಾಮಿಯ ಆವಾಹನೆ ಮಾಡಿ ಹಾಲೆರೆದು, ಅಭಿಷೇಕ ಮಾಡಿ, ದೇವರಿಗೆ ನೈವೇದ್ಯ ಅರ್ಪಿಸಿ ಆಚರಣೆ ಮಾಡಲಾಗುವುದು.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
ಈ ದಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ಇಲ್ಲಿ ನಾಗಪೂಜೆ ಸಲ್ಲಿಸಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ದಿನ ಅಲ್ಲಿ ಹುತ್ತದ ಮಣ್ಣನ್ನು ಪ್ರಸಾದವಾಗಿ ನೀಡಲಾಗುವುದು. ಸರ್ಪದೋಷಕ್ಕೊಳಗಾದವರು, ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವವರು ಈ ದಿನದಂದು ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಬರುತ್ತಾರೆ.
ಮದುವೆ ಭಾಗ್ಯ ಕೋರಿ ಈ ದಿನ ಪ್ರಾರ್ಥನೆ ಮಾಡಲಾಗುವುದು
ಕೆಲವರಿಗೆ ವಯಸ್ಸು ಮೀರುತ್ತಿದ್ದರೂ ಮದುವೆ ಭಾಗ್ಯ ಕೂಡಿ ಬರುವುದಿಲ್ಲ. ಈ ದಿನದಂದು ಸುಬ್ರಹ್ಮಣ್ಯನ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿ ಹೋದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಅಲ್ಲದೆ ಕೆಲವರ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರುತ್ತದೆ, ಈ ಸಮಸ್ಯೆ ಬಗೆಹರಿಯಲು ಚಂಪಾ ಷಷ್ಠಿಯಂದು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ವಿಸೇಷ ಪೂಜೆ ಸಲ್ಲಿಸಲಾಗುವುದು. ಅಲ್ಲದೆ ಸುಬ್ರಹ್ಮಣ್ಯನ ಪೂಜೆ ಮಾಡುವುದರಿಂದ ಕುಜದೋಷದ ಪರಿಹಾರ ಸಿಗುವುದು
ಚಂಪಾ ಷಷ್ಠಿಯಂದು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು:
* ಮದುವೆ ವಿಳಂಬವಾಗಿದ್ದರೆ ಶೀಘ್ರವೇ ಮದುವೆ ಕೂಡಿರಲಿದೆ.
* ಸರ್ಪ ದೋಷ ನಿವಾರಣೆಯಾಗಲಿದೆ.
* ಉದ್ಯೋಗದಲ್ಲಿ ಪ್ರಗತಿಯಿಲ್ಲ, ಮಕ್ಕಳಾಗಿಲ್ಲ, ವ್ಯಾಪಾರ ಸರಿಹೋಗುತ್ತಿಲ್ಲ ಹೀಗೆ ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನೀವು ಸರ್ಪದೋಷ ನಿವಾರಣೆಗೆ ಪೂಜೆ ಮಾಡಿದರೆ ನಿಮ್ಮೆಲ್ಲಾ ಸಮಸ್ಯೆ ದೂರಾಗುವುದು. ಆದ್ದರಿಂದ ಈ ದಿನ ಸುಬ್ರಹ್ಮಣ್ಯಕ್ಕೆ ಕ್ಷೇತ್ರಕ್ಕೆ ಹೋಗಿ ಆಶ್ಲೇಷ ಬಲಿ ಪೂಜೆ ಮಾಡಿದರೆ ಸರ್ಪದೋಷ ನಿವಾರಣೆಯಾಗುವುದು. ಹಾಗಾಗಿ ಚಂಪಾಷಷ್ಠಿಯಂದು ಭಕ್ತರು ಬಂದು ಆಶ್ಲೇಷ ಬಲಿ ಪೂಜೆ ಮಾಡಿ ಬಂದು ಹೋಗುತ್ತಾರೆ,
ಚಂಪಾ ಷಷ್ಠಿಯಂದು ಉಪವಾಸ ವ್ರತದ ಮಹತ್ವ
ಸಂತಾನ ಭಾಗ್ಯಕ್ಕಾಗಿ ಅಪೇಕ್ಷಿಸುತ್ತಿರುವ ದಂಪತಿ ಚಂಪಾ ಷಷ್ಠಿ ದಿನದಂದು ಉಪವಾಸ ವ್ರತ ಮಾಡಿ ಪೂಜೆ ಮಾಡುವುದರಿಂದ ಸಂತಾನ ಭಾಗ್ಯ ಲಭಿಸುವುದು. ಅಲ್ಲದೆ ಜಾತಕ ದೋಷ, ಶತ್ರು ಸಂಬಂಧಿತ ಸಮಸ್ಯೆಗಳಿಂದ ಮುಕ್ತರಾಗಲು ಚಂಪಾ ಷಷ್ಠಿಯ ಆಚರಣೆ ಮಹತ್ವವಾಗಿದೆ,
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
