Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕಾವೇರಿ ತೀರ್ಥೋದ್ಭವ: ಕಾವೇರಿ ನದಿಯ ಉಗಮ ಸ್ಥಾನದಲ್ಲಿ ನಡೆಯುವ ಪವಾಡ ವಿಜ್ಞಾನ ತರ್ಕಕ್ಕೆ ಸಿಗಲ್ಲ
ಅಕ್ಟೋಬರ್ 17ಕ್ಕೆ ತುಲಾ ಸಂಕ್ರಮಣ, ಈ ದಿನ ಧಾರ್ಮಿಕ ದೃಷ್ಟಿಯಿಂದ ತುಂಬಾ ಮಹತ್ವದ ದಿನ, ಅದರಲ್ಲಿಯೂ ಕೊಡಗಿನಲ್ಲಿ ತುಂಬಾನೇ ವಿಶೇಷವಾದ ದಿನ, ಕೊಡಗಿನಲ್ಲಿ ಹುಟ್ಟಿ ಹರಿಯುವ, ಕರ್ನಾಟಕದ ಜೀವನದಿಯಾಗಿರುವ ಕಾವೇರಿ ತೀರ್ಥ ರೂಪಿಣಿಯಾಗಿ ದರ್ಶನ ನೀಡುವ ದಿ, ಕಾವೇರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಕೊಡಗಿನ ಉಗಮ ಸ್ಥಾನದಲ್ಲಿ ಸೇರಿದ್ದಾರೆ. ಈ ದಿನವನ್ನು ಕೊಡಗಿನಲ್ಲಿ ಕಾವೇರಿ ಸಂಕ್ರಮಣ ಎಂದು ಆಚರಿಸಲಾಗುತ್ತಿದೆ.

ಈ ಬಾರಿ ತೀರ್ಥೋದ್ಭವ ಸಮಯ
ಕಾವೇರಿ ಮಾತೆ ಅಕ್ಟೋಬರ್ 17 ಬೆಳಗ್ಗೆ 7:40ಕ್ಕೆ ತೀರ್ಥರೂಪಿಣೀಯಾಗಿ ದರ್ಶನ ನೀಡಿದ್ದಾಳೆ, ಈ ಕ್ಷಣಕ್ಕಾಗಿ ಭಕ್ತರು ಕಾತರದಿಂದ ಎದುರು ನೋಡುತ್ತಿದ್ದರು, ಇದೀಗ ಕಾವೇರಿಯ ತೀರ್ಥವನ್ನು ಮನೆಗೆ ತೆಗೆದುಕೊಂಡು ಹೋಗಲು ಬಿಂದಿಗೆ ತಂದಿದಿದ್ದಾರೆ. ಹೀಗೆ ತಗೊಂಡು ಹೋಗುವ ತೀರ್ಥವನ್ನು ಅಕ್ಕ-ಪಕ್ಕದ ಮನೆಗಳಿಗೆ ಹಂಚುತ್ತಾರೆ, ಇದನ್ನು ಮುಂದಿನ ವರ್ಷದವರೆಗೆ ಇಟ್ಟುಕೊಳ್ಳುತ್ತಾರೆ.
ತಲಾ ಕಾವೇರಿಯ ಕುಂಡಿಕೆಯಲ್ಲಿ ಪೂಜಾ ಕಾರ್ಯಗಳು ನಡೆಯಲಿದೆ
ತುಲಾ ಸಂಕ್ರಮಣದಂದು ಕಾವೇರಿಯು ತೀರ್ಥ ರೂಪದಲ್ಲಿ ಕಾಣಿಸಿಕೊಳ್ಳಲಿದೆ, ಇದನ್ನು ಕಣ್ತುಂಬಿಕೊಳ್ಳಲು ಬರೀ ಕೊಡಗಿನಿಂದ ಮಾತ್ರವಲ್ಲ ಕರ್ನಾಟಕದಿಂದ, ಹೊರ ರಾಜ್ಯದಿಂದ ಕೂಡ ಬರ್ತಾರೆ. ಇಲ್ಲಿಯ ತೀರ್ಥ ತಗೊಂಡು ತಮ್ಮ ಮನೆಗಳಲ್ಲಿ ಇಟ್ಟು ಬಳಸುತ್ತಾರೆ. ಕೊಡಗಿನ ಮನೆ ಮನೆಗಳಲ್ಲಿ ಈ ತೀರ್ಥವಿರುತ್ತದೆ. ತಲಾಕಾವೇರಿಯ ಕುಂಡಿಕೆಯಲ್ಲಿ ಪೂಜಾ ಕಾರ್ಯಗಳನ್ನು ಮಾಡಲಾಗುತ್ತಿದೆ, ಜೈ ಜೈ ಕಾವೇರಿ ಮಾತೆ ಎಂಬ ಘೋಷಣೆಯೊಂದಿಗೆ ಭಕ್ತರು ಕಾವೇರಮ್ಮನ ಆಗಮನ ಎದುರು ನೋಡುತ್ತಿದ್ದಾರೆ.
ಕೊಡಗಿನಲ್ಲಿರುವ ಬಾವಿಗಳಿಗೆ ಕೂಡ ಪೂಜೆ ಸಲ್ಲಿಸುತ್ತಾರೆ, ಬಾವಿಯಲ್ಲಿ ನೀರು ಗುಳ್ಳೆ-ಗುಳ್ಳೆ ರೀತಿಯಲ್ಲಿ ಉಕ್ಕುವುದನ್ನು ಕಾಣಬಹುದು ಅಂತಾರೆ ಈ ಭಾಗದ ಭಕ್ತರು.
ವಿಜ್ಞಾನದ ತರ್ಕಕ್ಕೆ ನಿಲುಕದ ವಿಷಯಗಳಿವು
ತಲಾ ಕಾವೇರಿ ಕೊಡಗಿನವರ ದೇವತೆ, ಪ್ರತಿಯೊಂದು ಕ್ಷಣ, ಪ್ರತಿಯೊಂದು ಶುಭ ಕಾರ್ಯವನ್ನು ಕಾವೇರಿಯನ್ನು ಸ್ಮರಿಸುವ ಕೊಡಗಿನವರು ಈ ದಿನವನ್ನು ಇನ್ನಷ್ಟು ವಿಶೇಷವಾಗಿ ಆಚರಿಸುತ್ತಾಳೆ. ಕಾವೇರಿ ತೀರ್ಥೋದ್ಭವ ವಿಜ್ಞಾನ ತರ್ಕಗಳಿಗೆ ಸಿಗಲ್ಲ, ಇದೊಂದು ಪವಾಡವೇ ಸರಿ. ವರ್ಷದ ಇತರ ಯಾವುದೇ ದಿನದಲ್ಲಿ ಈ ರೀತಿ ಕಂಡು ಬರುವುದಿಲ್ಲ, ತುಲಾ ಸಂಕ್ರಮಣದಂದು ಮಾತ್ರ ತೀರ್ಥ ಉಕ್ಕಿ ಬರುವುದು, ಕಾವೇರಿ ತೀರ್ಥ ಒಂದು ನಿಗದಿತ ಸಮಯದಲ್ಲಿ ಉಕ್ಕಿ ಬರುತ್ತದೆ, ಕಳೆದ ವರ್ಷ ಮಧ್ಯರಾತ್ರಿಯಲ್ಲಿ ಕಾಣಿಸಿಕೊಂಡಿದ್ದಳು, ಈ ಬಾರಿ 07:40ಕ್ಕೆ ಕಾವೇರಿ ದರ್ಶನ ನೀಡಿದ್ದಾಳೆ.
ಪೌರಾಣಿಕ ಕತೆ:
ಪೌರಾಣಿಕ ಕತೆಯ ಪ್ರಕಾರ ಕಾವೇರನ ಪುತ್ರಿ ಕಾವೇರಿ, ಕಾವೇರಿಯನ್ನು ಅಗಸ್ತ್ಯ ಮಹರ್ಷಿ ಮದುವೆಯಾಗಲು ಬರುವಾಗ ಕಾವೇರಿ ಒಂದು ಷರತ್ತು ಹಾಕುತ್ತಾಳೆ, ಸದಾ ನನ್ನ ಜೊತೆಯೇ ಇರಬೇಕು, ಅರೆಕ್ಷಣ ದೂರಾದರೂ ನಾನು ನಿಮ್ಮೊಂದಿಗೆ ಇರಲ್ಲ ಅಂತಾಳೆ, ಅಗಸ್ತ್ಯರು ಇದನ್ನು ಒಪ್ಪಿ ಕಾವೇರಿಯನ್ನು ಮದುವೆಯಾಗುತ್ತಾನೆ. ಕಾವೇರಿ ಲೋಕ ಕಲ್ಯಾಣಕ್ಕಾಗಿ ಜನಿಸಿದವಳು, ಹಾಗಾಗಿ ನದಿಯಾಗಿ ಹರಿಯುವ ಅವಕಾಶಕ್ಕೆ ಕಾಯುತ್ತಿರುತ್ತಾಳೆ, ಒಮ್ಮೆ ಅಗಸ್ತ್ಯರ ಕೋಪಗೊಂಡ ಕಾವೇರಿ ಕಮಂಡಲದಿಂದ ಉಕ್ಕಿ ಹರಿಯಲಾರಂಭಿಸುತ್ತಾಳೆ, ಅವಳನ್ನು ತಡೆಯುವ ಪ್ರಯತ್ನ ಮಾಡಿದರು ತಡೆಯಲು ಸಾಧ್ಯವಾಗಲ್ಲ, ಆವಾಗ ಕಾವೇರಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ನಿಮಗೆ ದರ್ಶನ ನೀಡುತ್ತೇನೆ ಎಂದು ಹೇಳಿ ಹರಿಯಲಾರಂಭಿಸುತ್ತಾಳೆ.
ಕಾವೇರಿ ಇಂದು ಲಕ್ಷಾಂತರ ಜನರನ್ನು ಉಳಿಸಿ ಬೆಳೆಸುತ್ತಿರುವ ದೇವತೆ. ಕರ್ನಾಟಕ ಮಾತ್ರವಲ್ಲ ತಮಿಳುನಾಡು ಕೂಡ ಕಾವೇರಿ ನೀರನ್ನು ಆಶ್ರಯಿಸುತ್ತಿದೆ.
ಕಾವೇರಿ ಸಂಕ್ರಮಣದಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ರೋಗ ರುಜಿನಗಳು ದೂರಾಗುವುದು, ಕಷ್ಟಗಳು ದೂರಾಗುವುದು, ಪುಣ್ಯದ ಫಲ ಹೆಚ್ಚುವುದು ಎಂಬ ನಂಬಿಕೆಯಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications