Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಧನು ರಾಶಿಯಲ್ಲಿ ಬುಧಾದಿತ್ಯ ಯೋಗ: ಈ 3 ರಾಶಿಯವರಿಗೆ ತುಂಬಾನೇ ಒಳ್ಳೆಯದು
ಡಿಸೆಂಬರ್ 16ಕ್ಕೆ ಸೂರ್ಯ ಧನು ರಾಶಿಗೆ ಸಂಚರಿಸಿದೆ, ಬುಧವೂ ಇದೇ ರಾಶಿಯಲ್ಲಿದೆ. ಬುಧ ಹಾಗೂ ಸೂರ್ಯ ಒಂದೇ ರಾಶಿಯಲ್ಲಿ ಇದ್ದಾಗ ಬುಧಾದಿತ್ಯ ಯೋಗ ಉಂಟಾಗಲಿದೆ. ಈ ಬುಧಾದಿತ್ಯ ಯೋಗವೆಂಬುವುದು ಅದೃಷ್ಟದ ಯೋಗವಾಗಿದೆ, ಈ ಯೋಗ ಕೆಲವೊಂದು ರಾಶಿಗಳಿಗೆ ತುಂಬಾನೇ ಒಳ್ಳೆಯದು.
ಧನು ರಾಶಿಯಲ್ಲಿ ಬುಧಾದಿತ್ಯ ಯೋಗದಿಂದಾಗಿ ಈ 6 ರಾಶಿಯವರು ತುಂಬಾನೇ ಪ್ರಯೋಜನ ಪಡೆಯುತ್ತಾರೆ ನೋಡಿ:

ಧನು ರಾಶಿ
ಧನು ರಾಶಿಯಲ್ಲಿ ಸೂರ್ಯ, ಬುಧದ ಸಂಯೋಗವಾಗಿ ಬುಧಾದಿತ್ಯ ಯೋಗ ಉಂಟಾಗಿದೆ. ಈ ಬುಧಾದಿತ್ಯ ಯೋಗದಿಂದಾಗಿ ನೀವು ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳೂ ದೊರೆಯಲಿವೆ. ಈ ಅವಧಿಯಲ್ಲಿ ನೂವು ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಈ ಅವಧಿಯಲ್ಲಿ ಆತ್ಮ ವಿಶ್ವಾಸದ ಹೆಚ್ಚಳವು ವ್ಯಕ್ತಿತ್ವದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮದುವೆಗೆ ಸೂಕ್ತವಾದ ಸಂಗಾತಿಯನ್ನು ಹುಡುಕುತ್ತಿರುವವರು ಈ ಅವಧಿಯಲ್ಲಿ ಉತ್ತಮ ಸಂಗಾತಿಯನ್ನು ಪಡೆಯಬಹುದು, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಸಹ ಬಗೆಹರಿಯುವ ಸಾಧ್ಯತೆಯಿದೆ.
ಮೇಷ ರಾಶಿ
ಬುಧಾದಿತ್ಯ ಯೋಗದಿಂದಾಗಿ ಈ ಅವಧಿ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಜತೆಗೆ ಆರ್ಥಿಕ ವಲಯದಲ್ಲಿ ಬರುತ್ತಿದ್ದ ಸಮಸ್ಯೆಗಳು ಬಗೆಹರಿಯಲಿದ್ದು, ಹೊಸ ಆದಾಯದ ಮೂಲಗಳಿಂದ ಹಣ ಗಳಿಸುವುದರಿಂದ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಆಧ್ಯಾತ್ಮಿಕತೆಯ ಕಡೆಗೂ ಒಲವು ಹೆಚ್ಚಾಗುವುದು. ವ್ಯಾಪಾರಿಗಳು ತಮ್ಮ ವ್ಯಾಪಾರ ವಿಸ್ತರಣೆ ಮಾಡಬಹುದು. ಇದರಿಂದ ಆರ್ಥಿಕ ಲಾಭ ಗಳಿಸುತ್ತೀರಿ.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಬುಧಾದಿತ್ಯ ಯೋಗದಿಂದಾಗಿ ಈ ಅವಧಿ ಮಂಗಳಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದು. ಈ ಅವಧಿಯಲ್ಲಿ ಭೂಮಿ, ವಾಹನ ಇತ್ಯಾದಿ ಸುಖಗಳನ್ನು ಅನುಭವಿಸಬಹುದು. ಭೂಮಿ ಮತ್ತು ಆಸ್ತಿ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸ ಮಾಡುವವರು ಉತ್ತಮ ಲಾಭ ಗಳಿಸಬಹುದು. ಕನ್ಯಾ ರಾಶಿಯವರಿಗೆ ಈ ಸಮಯವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಹ ಯಶಸ್ಸನ್ನು ಸಾಧಿಸಬಹುದು. ಈ ಸಮಯದಲ್ಲಿ, ಪೋಷಕರೊಂದಿಗೆ ಸೌಹಾರ್ದಯುತ ಸಂಬಂಧವಿರುತ್ತದೆ, ವ್ಯವಹಾರದಲ್ಲಿ ಲಾಭದ ಸಾಧ್ಯತೆಗಳಿವೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications