Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಬುಧಾದಿತ್ಯ ಯೋಗ: ಈ 5 ರಾಶಿಯವರು ರಾಜರಂತೆ ಬದುಕುತ್ತಾರೆ! ಸಂಕಷ್ಟವೆಲ್ಲಾ ಮಾಯ
ಇಂದು ಬುಧಾದಿತ್ಯ ಯೋಗ. ಈ 5 ರಾಶಿಯವರ ಸಂಕಷ್ಟವೆಲ್ಲಾ ದೂರ. ಅದೃಷ್ಟದ ಬಾಗಿಲು ತೆರೆಯಲಿದ್ದು, ಇವರು ರಾಜರಂತೆ ಬದುಕುತ್ತಾರೆ. ನಿಮ್ಮ ರಾಶಿ ಇದೆಯಾ ನೋಡಿ. ಇಂದು (ಜುಲೈ 19) ಖಗೋಳದಲ್ಲಿ ಬುಧಾದಿತ್ಯ ಯೋಗದೊಂದಿಗೆ (Budhaditya Yoga 2025) ಹಲವು ಶುಭ ಯೋಗಗಳು ಸೃಷ್ಟಿಯಾಗುತ್ತಿದೆ. ಇದು ಕೆಲವು ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಶನಿ ದೇವನ ಕೃಪೆಯಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಮತ್ತು ಆ ರಾಶಿಯವರಿಗೆ ಶನಿವಾರ ಹೇಗಿರಲಿದೆ ಎಂಬುದನ್ನು ತಿಳಿಯೋಣ ಬನ್ನಿ.
ಬುಧಾದಿತ್ಯ ಯೋಗವು ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಬುಧ ಗ್ರಹಗಳು ಒಂದೇ ರಾಶಿಯಲ್ಲಿ ಅಥವಾ ನಕ್ಷತ್ರದಲ್ಲಿ ಸೇರಿದಾಗ ಉಂಟಾಗುವ ಒಂದು ಮಂಗಳಕರ ಯೋಗವಾಗಿದೆ. ಈ ಯೋಗವು ವ್ಯಕ್ತಿಯ ಜೀವನದಲ್ಲಿ ಅದೃಷ್ಟ, ಬುದ್ಧಿಶಕ್ತಿ, ಆರ್ಥಿಕ ಲಾಭಗಳು ಮತ್ತು ಸಂವಹನ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಇಂದು ಬುಧಾದಿತ್ಯ ಯೋಗ ಮತ್ತು ಕೇಂದ್ರ ಯೋಗದಂತಹ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳ ಸದುಪಯೋಗ ಪಡೆದುಕೊಳ್ಳಲು ಕೆಲವು ರಾಶಿಗಳಿಗೆ ಅವಕಾಶಗಳಿವೆ. ಜಾತಕದಲ್ಲಿ ಶನಿ ಗ್ರಹದ ಸ್ಥಾನವನ್ನು ಬಲಪಡಿಸಲು ಮತ್ತು ಶನಿ ದೇವನ ಅನುಗ್ರಹ ಪಡೆಯಲು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮೇಷ ರಾಶಿ: ಲವರ್ ಜೊತೆಗೆ ಉತ್ತಮ ಬಾಂಧವ್ಯ
ಮೇಷ ರಾಶಿಯವರಿಗೆ ಇಂದು ಮಂಗಳಕರ ದಿನ. ಮನೆಯಲ್ಲಿ ಸುಖ ಶಾಂತಿ ನೆಲೆಸುವುದು ಮತ್ತು ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ನಿಮ್ಮ ಆಲೋಚನೆಗಳಿಗೆ ಮನ್ನಣೆ ದೊರೆಯುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವ ಸಾಧ್ಯತೆಗಳಿವೆ. ನಿಮ್ಮ ಆತ್ಮವಿಶ್ವಾಸದಿಂದ ನೀವು ತೆಗೆದುಕೊಳ್ಳುವ ನಿರ್ಧಾರಗಳು ಫಲ ನೀಡುತ್ತವೆ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಫಲಿತಾಂಶಗಳು ದೊರೆಯಲಿವೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುವ ಸಾಧ್ಯತೆಯಿದೆ. ನೀವು ಅರಳಿ ಮರಕ್ಕೆ ನೀರನ್ನು ಅರ್ಪಿಸಿ. ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.
ಮಿಥುನ ರಾಶಿ: ಹಳೆಯ ಆಸೆಗಳು ಈಡೇರುತ್ತವೆ
ಮಿಥುನ ರಾಶಿಯವರಿಗೆ ಹಳೆಯ ಆಸೆಗಳು ಈಡೇರುತ್ತವೆ. ಹಳೆಯ ಸ್ನೇಹಿತರ ಸಹಾಯದಿಂದ ಲಾಭವಾಗುವ ಸಾಧ್ಯತೆ ಇದೆ. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಶುಭ ದಿನ. ಧನಲಾಭದ ಅವಕಾಶಗಳಿವೆ. ನಿಮ್ಮ ಪ್ರಯತ್ನದಿಂದ ಆದಾಯ ಹೆಚ್ಚಾಗುವುದು. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಗುರುತಿಸಿ ಪ್ರಶಂಸಿಸುತ್ತಾರೆ. ಉದ್ಯೋಗಿಗಳಿಗೆ ಉನ್ನತ ಸ್ಥಾನ ಸಿಗುವ ಸಾಧ್ಯತೆಗಳಿದ್ದು, ಹಿರಿಯ ಸಹೋದರ ಸಹೋದರಿಯರ ಬೆಂಬಲ ದೊರೆಯಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಇಂದು ಯಾವುದಾದರೂ ಆಶ್ರಮದಲ್ಲಿ ಹಿರಿಯ ನಾಗರಿಕರಿಗೆ ಸೇವೆ ಮಾಡಿ.
ಕನ್ಯಾ ರಾಶಿ: ಅಂದುಕೊಂಡ ಸ್ಥಳಕ್ಕೆ ವರ್ಗಾವಣೆ
ಕನ್ಯಾ ರಾಶಿಯವರಿಗೆ ಇದು ಉತ್ತಮ ದಿನ. ನೀವು ಅಂದುಕೊಂಡ ಲಾಭ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳನ್ನು ಕಾಣುವಿರಿ. ನೀವು ಅಂದುಕೊಂಡ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದ್ದು, ಮನೆಯವರ ಬೆಂಬಲ ದೊರೆಯಲಿದೆ. ಹಿರಿಯರ ಅಮೂಲ್ಯ ವಸ್ತುಗಳು ಅಥವಾ ಜವಾಬ್ದಾರಿಗಳು ನಿಮಗೆ ಸಿಗಬಹುದು. ಗೌರವ ಮತ್ತು ಖ್ಯಾತಿ ಹೆಚ್ಚಾಗುವ ಸಾಧ್ಯತೆ ಇದೆ. ಮಾನಸಿಕ ಶಾಂತಿ ದೊರೆಯುವುದು, ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುವುದು. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವಿರುತ್ತದೆ ಮತ್ತು ವೈವಾಹಿಕ ಜೀವನ ಸುಖಮಯವಾಗಿರುತ್ತದೆ.
ಧನು ರಾಶಿ: ಶನಿ ದೇವಸ್ಥಾನಕ್ಕೆ ಹೋಗಿ
ಧನು ರಾಶಿಯವರಿಗೆ ಹೊಸ ಕೆಲಸಗಳನ್ನು ಪ್ರಯತ್ನಿಸಲು ಇದು ಒಳ್ಳೆಯ ದಿನ. ಸಿನಿಮಾ, ಸಂಗೀತ, ನೃತ್ಯ ಕ್ಷೇತ್ರಗಳಿಗೆ ಸಂಬಂಧಿಸಿದವರಿಗೆ ಇದು ಅನುಕೂಲಕರ ದಿನ. ಈ ಹಿಂದೆ ಮಾಡಿದ ಪ್ರಯತ್ನಗಳಿಗೆ ಉತ್ತಮ ಲಾಭ ದೊರೆಯುತ್ತದೆ ಮತ್ತು ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೆಲಸದಿಂದ ಅಧಿಕಾರಿಗಳು ಸಂತೋಷಪಡುತ್ತಾರೆ. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ದಿನ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ. ನೀವು ಶನಿ ದೇವಸ್ಥಾನಕ್ಕೆ ಹೋಗಿ ಶಮಿ ಎಲೆ ಮತ್ತು ಕಪ್ಪು ಎಳ್ಳನ್ನು ಅರ್ಪಿಸಿ.
ಮೀನ ರಾಶಿ: ಸಂಗಾತಿಯೊಂದಿಗೆ ಪ್ರವಾಸ ಸಾಧ್ಯತೆ
ಮೀನ ರಾಶಿಯವರಿಗೆ ಬೇರೆ ಬೇರೆ ಮೂಲಗಳಿಂದ ಧನಲಾಭದ ಅವಕಾಶಗಳಿವೆ. ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ಗೋಚರಿಸುತ್ತವೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಅನುಭವಿ ವ್ಯಕ್ತಿಗಳ ಸಲಹೆ ಪಡೆಯಿರಿ. ಮನೆಯ ಹಿರಿಯರ ಸಹಾಯ ದೊರೆಯುವುದು, ಆತ್ಮವಿಶ್ವಾಸ ಹೆಚ್ಚಾಗುವುದು. ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ. ನೀವು ಶನಿ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












