Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬುಧ ಗೋಚರ: ಜೂನ್ 22ರಿಂದ ಮೂರು ರಾಶಿಯವರಲ್ಲಿ ನಕಾರಾತ್ಮಕ ಬದಲಾವಣೆ!
ಗ್ರಹಗಳ ಚಲನೆಯನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಬಹುಮುಖ್ಯ ಅಂಶ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಗ್ರಹಗಳು ಕೂಡ ನಿಗದಿತ ಸಮಯದಲ್ಲಿ ತನ್ನ ರಾಶಿ ಬದಲಾಯಿಸುವುದು ಹಲವು ರೀತಿಯಲ್ಲಿ ಪರಿಣಾಮಗಳ ಉಂಟು ಮಾಡುವುದು ನಾವು ನೋಡಬಹುದು. ಇನ್ನು ಪ್ರತಿಯೊಂದು ಗ್ರಹವು ಹಲವು ರಾಶಿಗಳ ಶುಭ ಹಾಗೂ ಅಶುಭ ಕಾರಕವಾಗಿಯೂ ಬದಲಾಗುವುದು ನೋಡಬಹುದು.
ಹಾಗೆ ಪ್ರತಿಯೊಂದು ರಾಶಿಯಲ್ಲಿ ಗ್ರಹಗಳ ಸಂಚಾರವನ್ನು ನಾವು ಪರಿಗಣಿಸಿ ಮುಂದಿನ ದಿನಗಳಲ್ಲಿ ಉಂಟಾಗುವ ಪ್ರಭಾವಗಳ ಅಂದಾಜಿಸಲಾಗುವುದು. ಸದ್ಯ ಈಗ ಕರ್ಕ ರಾಶಿಯಲ್ಲಿ ಬುಧನ ಸಂಚಾರವು ಹಲವು ರಾಶಿಗಳಿಗೆ ಹಾಗು ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗಲಿದೆ. ಬುಧ ಮಿಥುನ ರಾಶಿಯಿಂದ ಕರ್ಕ ರಾಶಿಗೆ ಚಲಿಸಲಿದ್ದಾನೆ.

ಈ ಬುಧ ಗೋಚರದಿಂದಾಗಿ ಹಲವು ರಾಶಿಯವರಿಗೆ ಶುಭ ಕಾಲ ಹಾಗೆ ಹಲವರಿಗೆ ಅಶುಭ ಯೋಗವಿದೆ. ಹಾಗಾದರೆ ಯಾವ ರಾಶಿಯವರಿಗೆ ಬುಧ ಗೋಚರವು ನಕಾರಾತ್ಮಕ ವಿಚಾರಗಳಿಗೆ ಕಾರಣವಾಗಲಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯಿಂದ ಬುಧನು ವಿಶ್ರಮಿಸಲಿದ್ದಾನೆ. ಹೀಗಾಗಿ ಮಿಥುನ ರಾಶಿಯ ಮಂದಿ ಜೂನ್ 22ರಿಂದ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಅದರಲ್ಲೂ ಬುಧ ಕರ್ಕ ರಾಶಿಯಲ್ಲಿ ಗೋಚರವಾಗುವುದು ನಿಮ್ಮ ಉದ್ಯೋಗ ಸಂಬಂಧಿ ಸವಾಲುಗಳಲ್ಲಿ ಕಷ್ಟಗಳ ತರಬಹುದು. ನಿಮ್ಮಲ್ಲಿ ಹಣಕಾಸು ಸಂಬಂಧಿ ಅಸ್ಥಿರ ದಿನಗಳ ಎದುರಾಗಬಹುದು. ನಿಮ್ಮ ವ್ಯಾಪಾರಗಳಲ್ಲಿ ಹಿನ್ನಡೆ, ಲಾಭದಾಯಕ ಆದಾಯದಲ್ಲಿ ಕುಸಿತ ನೋಡಬೇಕಾಗಬಹುದು. ವಿವಾಹಿತರಲ್ಲಿ ಕೌಟುಂಬಿಕ ಸಮಸ್ಯೆಗಳ ಒತ್ತಡ ಹೆಚ್ಚಬಹುದು. ನಿಮ್ಮ ಬಳಿರುವ ವಸ್ತುಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಬಹಳಷ್ಟು ಸಮಯದಿಂದ ನಿಮ್ಮ ಆತಂಕ ಹೆಚ್ಚಿಸಿದ್ದ ಘಟನೆಗಳು ಮತ್ತೆ ಮರುಕಳಿಸಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಈ ಸಮಯದಲ್ಲಿ ಅನೇಕ ಸಮಸ್ಯೆ ಎದುರಿಸಬೇಕಾಗಬಹುದು, ಔದ್ಯೋಗಿಕ ಸಮಸ್ಯೆ, ಹಣಕಾಸು ಸಮಸ್ಯೆ, ವಾಹನ ಸಂಬಂಧಿ ಸಮಸ್ಯೆಗಳು ಹೆಚ್ಚು ಒತ್ತಡ ನೀಡಬಹುದು. ನಿಮ್ಮ ಆತ್ಮವಲೋಕನದ ಸಮಯ ಇದಾಗಿರಲಿದೆ. ಹಿಂದೆ ಮಾಡಿದ್ದ ತಪ್ಪುಗಳನ್ನು ಮತ್ತೆ ಮಾಡುವುದು ಸಮಸ್ಯೆಗಳು ಹೆಚ್ಚಾಗುವಂತೆ ಮಾಡಬಹುದು. ಅನಗತ್ಯ ವಸ್ತುಗಳು ಅಥವಾ ವಿಚಾರಗಳಿಂದಾಗಿ ದುಂದು ವೆಚ್ಚಗಳಿಗೆ ಒಳಗಾಗಬಹುದು. ಸಾಲ ಮರಳಿ ಪಡೆಯುವುದು ಕಠಿಣವಾಗಬಹುದು. ನಿಮ್ಮ ಪ್ರೀತಿ ವಿಚಾರದಲ್ಲೂ ಹಿನ್ನಡೆ ಅನುಭವಿಸುವಿರಿ. ದೊಡ್ಡ ಕನಸುಗಳಿಂದ ಆರಂಭಿಸಿದ ಹೊಸ ಕೆಲಸವೊಂದು ನಿರಾಸೆ ತರಬಹುದು. ಪೋಷಕರ ಆರೋಗ್ಯದಲ್ಲಿ ಏರುಪೇರು ನೋಡುತ್ತೀರಿ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗೆ ತುತ್ತಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಕೆಲಸದ ಸ್ಥಳ, ದಿನಚರಿ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಸಮಯ. ವ್ಯವಹಾರ ಕ್ಷೇತ್ರದಲ್ಲಿ ನೀವು ದೊಡ್ಡ ಹೂಡಿಕೆಯಿಂದ ಹಿಂದೇಟು ಹಾಕುತ್ತೀರಿ. ನಿಮ್ಮ ಅದೃಷ್ಟಗಳ ನಂಬಿಕೊಂಡು ಯಾವುದೇ ಕಲಸಕ್ಕೆ ಮುಂದಾಗಬೇಡಿ. ಹೊಸ ಉದ್ಯೋಗ ಮಾಡಲು ಇದು ಶುಭಕರ ಸಮಯವಲ್ಲ. ಮನೆ, ಆಸ್ತಿ ಖರೀದಿಯಲ್ಲಿ ಹಿನ್ನಡೆಯಾಗಲಿದೆ. ವಾಹನ ಸವಾರರು ನೋವು ಅನುಭವಿಸುವ ಕಾಲ ಇದಾಗಿರಬಹುದು. ನಿಮ್ಮ ಪ್ರಯಾಣಗಳು ನೀವು ಅಂದುಕೊಂಡತೆ ಶುಭಕರ ಫಲಿತಾಂಶಗಳ ನೀಡದೆ ಇರಬಹುದು. ಸರ್ಕಾರಿ ನೌಕರರು ಹಾಗೆ ಖಾಸಗಿ ಕಂಪನಿಗಳಲ್ಲಿ ದುಡಿಯುವವರಿಗೆ ಬಡ್ತಿ, ವರ್ಗಾವಣೆ ವಿಚಾರದಲ್ಲಿ ನಿರಾಸೆ ಕಾಡಬಹುದು. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳಿಂದ ನೀವು ಕಠಿಣ ದಿನಗಳ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











