Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಎರಡು ನಕ್ಷತ್ರದವರಿಗೆ ಶಿವನ ವಿಶೇಷ ಅನುಗ್ರಹ: ಶಿವರಾತ್ರಿಯ ಸಮಯ ಶುಭ ಕಾಲ!!
ಶಿವರಾತ್ರಿ ಸಮೀಪಿಸುತ್ತಿದೆ. ಈ ವರ್ಷದ ಫೆಬ್ರವರಿಯ 26ರಂದು ದೇಶದಾದ್ಯಂತ ಸಂಭ್ರಮದ ಶಿವರಾತ್ರಿ ಆಚರಿಸಲಾಗುತ್ತಿದೆ. ಈ ಶಿವರಾತ್ರಿ ಹಲವು ಕಾರಣಗಳಿಂದ ವಿಶೇಷ ಎನಿಸಿದೆ. ಶಿವರಾತ್ರಿಯ ಪೂಜೆಗೆ ಅತ್ಯುತ್ತಮ ಸಮಯ ಅಂದರೆ ಅದು ಮೊದಲ ಪ್ರಹಾರ ಪೂಜೆ ಸಮಯ ಫೆಬ್ರವರಿ 26 ರಂದು ಸಂಜೆ 06:19 ರಿಂದ 09:26 ರವರೆಗೆ. ಈ ಪೂಜೆ ಮಾರನೆ ದಿನ ಫೆಬ್ರವರಿ 27ರ ವರೆಗೂ ಮುಂದುವರೆಯಲಿದೆ.
ಮಹಾ ಶಿವರಾತ್ರಿಯು ಭಕ್ತಿ, ಉಪವಾಸ ಮತ್ತು ಧ್ಯಾನದ ಸಂಕೇತವಾಗಿ ಆಚರಿಸಲಾಗುತ್ತದೆ. ಆ ದಿನ ಶಿವನನ್ನು ಆರಾಧಿಸುತ್ತಾರೆ. ಆತನ ಆಶೀರ್ವಾದ, ಅನುಗ್ರಹ ಪಡೆಯಲು ಇಡೀ ರಾತ್ರಿ ಜಾಗರಣೆ, ನಾಮಸ್ಮರಣೆ ಮಾಡಲಾಗುತ್ತದೆ. ದೈವಿಕ ನೃತ್ಯ ಪ್ರದರ್ಶನ, ಭಜನೆ, ಶಿವನಾಮಸ್ಮರಣೆ, ವಿಶೇಷ ಪೂಜೆಗಳು, ಆರಾಧನೆಗಳು ಈ ದಿನದ ರಾತ್ರಿ ನಡೆಯುತ್ತದೆ.

ಸಾಮಾನ್ಯವಾಗಿ ಈ ದಿನದಂದು ಶಿವ ಹಾಗೂ ಪಾವರ್ತಿಯ ವಿವಾಹ ನಡೆದಿದೆ ಎಂದು ನಂಬಲಾಗುತ್ತದೆ. ಈ ದಿನದಲ್ಲಿ ಹಲವು ವಿಶೇಷತೆಗಳಿವೆ. ಈ ಮಹಾ ಶಿವರಾತ್ರಿಯಂದು ಉಪವಾಸ ಮಾಡಿದವರಲ್ಲಿ ಅನೇಕ ರೀತಿಯ ಲಾಭ ನೋಡಬಹುದಂತೆ. ಹಾಗೆ ಶಿವನಿಂದ ಆಶೀರ್ವಾದ ಪಡೆಯುತ್ತಾರೆ ಎಂದು ಕೂಡ ನಂಬಲಾಗಿದೆ. ಇನ್ನು ಶಿವರಾತ್ರಿಯ ಸಮಯದಲ್ಲಿ ಕೆಲವು ಗ್ರಹಗತಿಗಳ ಬದಲಾವಣೆ ಕೂಡ ನಿಮ್ಮ ಜೀನದಲ್ಲಿ ಹಲವು ರೀತಿ ಬದಲಾವಣೆಗೆ ಕಾರಣವಾಗಬಹುದು.
ಇನ್ನು ಶಿವ ಹಲವು ನಕ್ಷತ್ರಗಳೊಂದಿಗೂ ಸಂಬಂಧ ಹೊಂದಿದ್ದಾನೆ. ಹಾಗೆ ಕೆಲವು ರಾಶಿಗಳ ಮೇಲೂ ಆತನ ಪ್ರಭಾವ ಇರುವುದು ನೋಡಬಹುದು. ಹಾಗೆ ಈ ಜನ್ಮ ನಕ್ಷತ್ರದಲ್ಲಿ ಜನಿಸಿದವರು ಶಿವನಿಂದ ವಿಶೇಷ ಲಾಭ ಪಡೆಯುತ್ತಾರೆ. ಏಕೆಂದರೆ ಈ ಎರಡು ಜನ್ಮ ನಕ್ಷತ್ರವು ಶಿವನಿಗೆ ನೇರವಾಗಿ ಸಂಬಂಧಿಸಿದೆ. ಶಿವನು ವೃಷಭ ಹಾಗೂ ಮಿಥುನ ರಾಶಿಯವರಿಗೆ ವಿಶೇಷ ಲಾಭಗಳಿಗೆ ಈ ಸಮಯದಲ್ಲಿ ಕಾರಣನಾಗುತ್ತಾನೆ. ಹಾಗೆ ಈ ಎರಡು ನಕ್ಷತ್ರಗಳಿಲ್ಲೂ ಲಾಭದಾಯಕ ದಿನಗಳ ನೋಡಬಹುದು.
ಆರ್ದ್ರಾ ನಕ್ಷತ್ರ
ಆರ್ದ್ರಾ ನಕ್ಷತ್ರದಲ್ಲಿ ಜನಿಸಿದವರು ಬಹಳ ಭಾವನಾತ್ಮಕ ಜೀವಿ ಆಗಿರುತ್ತಾರೆ. ಅವರ ನಕ್ಷತ್ರದ ಚಿಹ್ನೆ ಕೂಡ ನೀರಿನ ಹನಿಯಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ವಿಶೇಷವಾಗಿ ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಆರ್ದ್ರಾದ ಪೂರ್ವದಲ್ಲಿ ಮೃಗಶಿರ ನಕ್ಷತ್ರಕ್ಕೆ ಬರುತ್ತದೆ. ಆರ್ದ್ರಾ ನಕ್ಷತ್ರದಲ್ಲಿ ಶಿವನು ರುದ್ರ ರೂಪದಲ್ಲಿರುತ್ತಾನೆ. ಹೀಗಾಗಿ ಈ ಜನ್ಮ ನಕ್ಷತ್ರದಲ್ಲಿ ಜನಿಸಿದ ಮಂದಿಗೆ ಶಿವನಿಂದ ವಿಶೇಷ ಆಶೀರ್ವಾದ ಪಡೆಯುತ್ತಾರೆ.
ನೀವು ಆರ್ದ್ರಾ ನಕ್ಷತ್ರದಲ್ಲಿ ಜನಿಸಿದ್ದರೆ ನಿಮ್ಮ ಕುಟುಂಬದಿಂದ ವಿಶೇಷ ಬೆಂಬಲ ಪಡೆಯುತ್ತೀರಿ. ಶಿವನ ಬಲದಿಂದಾಗಿ ನಿಮ್ಮ ಜೀವನದ ಪ್ರಮುಖ ಘಟ್ಟದಲ್ಲಿ ಅತ್ಯುತ್ತಮ ಯಶಸ್ಸು ಪಡೆಯುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರ್ಥಿಕ ವಿಚಾರದಲ್ಲಿ ನೀವು ಹೆಚ್ಚು ಸದೃಢರು ಹಾಗೆ ಹಣಕ್ಕಿಂತ ಮಿಗಿಲಾಗಿ ವಸ್ತುಗಳಿಗೆ ಬೆಲೆ ನೀಡುವುವವರು ಇದರಿಂದ ಸಂಬಂಧಗಳಲ್ಲಿ ನಿಮ್ಮ ಬಾಂಧವ್ಯ ಹೆಚ್ಛಾಗುವುದು. ಶಿವನ ಅನುಗ್ರಹದಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಸುಖ, ನೆಮ್ಮದಿ ಕಾಣಬಹುದು. ಹಾಗೆ ಸಂತಾನ ಭಾಗ್ಯ, ಸಂಪತ್ತು ಭಾಗ್ಯ ಕೂಡ ನಿಮ್ಮ ಪರವಾಗಿರುವುದು.
ಮೃಗಶಿರ ನಕ್ಷತ್ರ
ನೀವು ಮೃಗಶಿರ ನಕ್ಷತ್ರದಲ್ಲಿ ಜನಿಸಿದ್ದರೆ ಶಿವನ ವಿಶೇಷ ಆಶೀರ್ವಾದಕ್ಕೆ ನೀವು ಕಾರಣರಾಗುತ್ತೀರಿ. ಚಂದ್ರನಿಂದ ಆಳಲ್ಪಡುವ ನಕ್ಷತ್ರ ಇದಾಗಿದೆ. ಚಂದ್ರ ಹಾಗೂ ಶಿವನಿಗೆ ನೇರ ಸಂಬಂಧವಿದೆ. ಹೀಗಾಗಿ ಮೃಗಶಿರ ನಕ್ಷತ್ರದವರು ಜೀವನದ ಪ್ರತಿ ಹಂತದಲ್ಲು ಯಶಸ್ಸಿನ ಉತ್ತುಂಗದಲ್ಲಿರುತ್ತಾರೆ, ಚಂದ್ರ ಹೇಗೆ ಶೀವನ ಶಿರ ಮೇಲಿರಲಿದ್ಯೋ ಅದೇ ರೀತಿ ಮೃಗಶಿರ ನಕ್ಷತ್ರದವರು ಯಶಸ್ಸು, ಉನ್ನತ ಹುದ್ದೆ ಗೌರವದಂತಹ ವಿಚಾರದಲ್ಲಿ ಉತ್ತುಂಗದಲ್ಲಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರ ಕೆಲಸ ಕಾರ್ಯಗಳಲ್ಲಿ ಅಡೆತಡೆಯಿಲ್ಲದ ದಿನಗಳ ನೋಡುತ್ತಾರೆ. ನೀವು ಬಹಳ ಶಾಂತ ಪ್ರಿಯರಾಗಿರುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications