Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ದೀಪಾವಳಿ: ಮನೆಯಲ್ಲಿ ಈ ವಸ್ತುಗಳಿದ್ದರೆ ಕೂಡಲೇ ಹೊರಹಾಕಿ, ಈ ಅವಲಕ್ಷಣಗಳಿದ್ದರೆ ಲಕ್ಷ್ಮಿ ಪೂಜೆಯ ಫಲ ಸಿಗಲ್ಲ
ದೀಪಾವಳಿ ಹಬ್ಬಕ್ಕೆ ಮೊದಲು ಮಾಡುವ ಸಿದ್ಧತೆ ಎಂದರೆ ಮನೆ ಸ್ವಚ್ಛತೆ. ದೀಪಗಳ ಅಲಂಕಾರಕ್ಕೆ ಮನೆ ಸ್ವಚ್ಛವಾಗಿರಬೇಕು. ಮನೆಯಲ್ಲಿ ದೂಳು ಇದರೆ, ಅವಲಕ್ಷಣದ ವಸ್ತುಗಳಿದ್ದರೆ ಲಕ್ಷ್ಮಿ ಆಕರ್ಷಿತಳಾಗುವುದಿಲ್ಲ, ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ಮುನ್ನ ಮನೆ ಸ್ವಚ್ಛವಾಗಿರಬೇಕು, ಅಲ್ಲದೆ ಮನೆಯಲ್ಲಿ ಈ ಬಗೆಯ ವಸ್ತುಗಳು ಇರಲೇಬಾರದು ನೋಡಿ:
ಒಡೆದು ಹೋದ ಪಾತ್ರೆ, ಗ್ಲಾಸ್: ಸ್ವಲ್ಪ ಒಡೆದಿದೆ, ಅದನ್ನು ಬಳಸಬಹುದು ಎಂದು ಬಳಸಲೇಬೇಡಿ. ಇಂಥ ಒಡೆದ ಪಾತ್ರೆ-ಲೋಟಗಳು ಮನೆಯೊಳಗೆ ಇದ್ದರೆ ಅದು ಶುಭವಲ್ಲ, ಹಾಗಾಗಿ ಈ ಬಗೆಯ ವಸ್ತುಗಳು ಮನೆಯಲ್ಲಿದ್ದರೆ ಮೊದಲು ಹೊರಗಡೆ ಹಾಕಿ. ಈ ಬಗೆಯ ವಸ್ತುಗಳು ಮನೆಯಲ್ಲಿದ್ದರೆ ದರಿದ್ರ ಲಕ್ಷ್ಮಿಯನ್ನು ಆಕರ್ಷಿಸುತ್ತದೆ.

ಮುರಿದ ಕುರ್ಚಿ, ಪೀಠೋಪಕರಣಗಳು: ಈ ಬಗೆಯ ವಸ್ತುಗಳು ಮನೆಯಲ್ಲಿದ್ದರೆ ಒಂದೋ ರಿಪೇರಿ ಮಾಡಿಸಿ ಸರಿಪಡಿಸಿ ಅಥವಾ ಅದನ್ನು ಮನೆಯಿಂದ ಹೊರಗಡೆ ಬಿಸಾಡಿ, ಈ ಬಗೆಯ ವಸ್ತುಗಳು ಮನೆಯಲ್ಲಿರಬಹುದು. ತುಂಬಾ ಜನರು ಇಂಥ ವಸ್ತುಗಳನ್ನು ಮನೆಯ ಒಂದು ಮೂಲೆಯಲ್ಲಿಟ್ಟಿರುತ್ತಾರೆ, ಆ ರೀತಿ ಮಾಡಬೇಡಿ, ಅದು ಬಳಸಲು ಯೋಗ್ಯವಿಲ್ಲ ಎಂದಾದ ಮೇಲೆ ಅದನ್ನು ಮೂಲೆಯಲ್ಲಿ ಇಡಬೇಡಿ, ಬಿಸಾಡಿ.
ಹಳೆಯ ಮುರಿದ ದೀಪ, ಒಡೆದ ದೇವರ ಫೋಟೋ: ದೇವರ ಫೋಟೋ ಒಡೆದಿದ್ದರೆ ಅಥವಾ ದೀಪಾ ಒಡೆದಿದ್ದರೆ ಅದನ್ನು ಬಳಸಬಾರದು, ಅವುಗಳನ್ನು ಕೂಡ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ. ಕೆಲವರು ಒಡೆದ ದೇವರ ಪೋಟೋವನ್ನು ನದಿಗೆ ಎಸೆಯುವುದು ಅಥವಾ ಮರದ ಕೆಳಗಡೆ ತಂದು ಇಟ್ಟು ಹೋಗುವುದು ಮಾಡುತ್ತಾರೆ, ಈ ತಪ್ಪುಗಳನ್ನು ಮಾಡದಿರಿ. ಗಾಜಿನ ಫೋಟೋ ಫ್ರೇಮ್ ಆಗಿದ್ದರೆ ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.
ಹರಿದು ಹೋದ ಬೆಡ್: ಮಲಗುವ ಬೆಡ್ ಹರಿದಿದ್ದರೆ ಅದರಲ್ಲಿ ಮಲಗಬಾರದು, ಇಂಥ ಬೆಡ್‌ಗಳು ನಿಮ್ಮ ಮನೆಯಲ್ಲಿದ್ದರೆ ಅದನ್ನು ಮನೆಯಿಂದ ಹೊರಹಾಕಿ. ಹರಿದ ಹಾಸಿಗೆ ಗಂಡ ಹೆಂಡತಿ ನಡುವೆ ಕಲಹ ಉಂಟು ಮಾಡುತ್ತದೆ, ಮನೆಯ ನೆಮ್ಮದಿ ಹಾಳು ಮಾಡುತ್ತದೆ. ಕೆಲವೊಂದು ಹಾಸಿಗೆಗಳನ್ನು ರಿಪೇರಿ ಮಾಡಬಹುದು. ಇದನ್ನು ದೀಪಾವಳಿ ಕಳೆದ ಮೇಲೆ ಮಾಡುವ ಅಂತ ಯೋಚಿಸಬೇಡಿ, ಲಕ್ಷ್ಮಿ ಪೂಜೆ ಸಮಯದಲ್ಲಿ ಇಂಥ ವಸ್ತುಗಳು ಮನೆಯಲ್ಲಿದ್ದರೆ ಲಕ್ಷ್ಮಿ ಆ ಮನೆಗೆ ಬರಲ್ಲ.
ನಿಂತು ಹೋದ ಗಡಿಯಾರ
ಕೆಲವು ಮನೆಗಳಲ್ಲಿ ನಿಂತು ಹೋದ ಗಡಿಯಾರ ಹಾಗೆ ಮನೆಯ ಗೋಡೆ ಮೇಲೆ ಇರುತ್ತದೆ. ಬ್ಯಾಟರಿ ಹಾಕಿಯೂ ಆ ಗಡಿಯಾರ ನಡೆಯುತ್ತಿಲ್ಲ ಎಂದಾದರೆ ಅದನ್ನು ಗೋಡೆ ಮೇಲೆ ಇಡಬೇಡಿ, ಇದನ್ನು ಮನೆಯ ಪ್ರಗತಿ ಹಾಳು ಮಾಡುತ್ತದೆ. ಹಾಗಾಗಿ ಇಂಥ ವಸ್ತುಗಳು ಮನೆಯಲ್ಲಿರಬಹುದು.
ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ:
ದೀಪಾವಳಿ ಸಮಯದಲ್ಲಿ ಮನೆಯಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ, ಮನೆಯ ಮುಂದೆ ರಂಗೋಲಿ ಹಾಕಿ ಸ್ವಸ್ತಿಕ್ ಚಿಹ್ನೆ ಬರೆಯಬೇಕು. ಮನೆಯಲ್ಲಿ 13 ಹಣತೆಗಳನ್ನು ಹಚ್ಚಿಡಬೇಕು, ಮನೆಯಲ್ಲಿ ಸಂತೋಷದ ವಾತಾವರಣ ಇರಬೇಕು. ಜೋರು ಕಿರುಚಾಡಬಾರದು, ಕೋಗೊಳ್ಳಬಾರದು, ಎಲ್ಲರೂ ಸಂತೋಷದಿಂದ ಇರಬೇಕು, ಮನೆ ಆ ರೀತಿಯಿದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು, ಲಕ್ಷ್ಮಿಯೂ ಆಕರ್ಷಿತಳಾಗುತ್ತಾಳೆ.
ದೀಪಾವಳಿಯಲ್ಲಿ ಮಾಡುವ ಲಕ್ಷ್ಮಿ ಪೂಜೆ
ದೀಪಾವಳಿಯಂದು ಮನೆಗೆ ಅಭಿವೃದ್ಧಿ ಬಯಸಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು, ಶ್ರೀ ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಲಕ್ಷ್ಮಿಪೂಜೆ ಮಾಡಲಾಗುವುದು.
ಲಕ್ಷ್ಮಿ ಪೂಜೆಗೆ ಶುಭ ಸಮಯ
ಅಕ್ಟೋಬರ್ 31ರಂದು ಲಕ್ಷ್ಮಿ ಪೂಜೆ ಮಾಡಲಾಗುವುದು.
ನೀವು ಸಂಜೆ 05: 36ರಿಂದ ರಾತ್ರಿ08: 11ರವರೆಗೆ ಲಕ್ಷ್ಮಿ ಪೂಜೆಗೆ ಶುಭ ಸಮಯವಿದೆ, ಈ ಸಮಯದಲ್ಲಿ ಪೂಜೆ ಮಾಡಬಹುದು.
ಮಧ್ಯರಾತ್ರಿ ಪೂಜೆ ಮಾಡುವುದಾದರೆ
ದೀಪಾವಳಿಯಂದು ರಾತ್ರಿ 11: 39ರಿಂದ 12:31ರವರೆಗೆ ಸಮಯವಿದೆ. ಸುಮಾರು 52 ನಿಮಿಷ ಪೂಜೆಗೆ ಶುಭ ಸಮಯವಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











