Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿರುವ ಶ್ರೀರಾಮ ಎಷ್ಟೊಂದು ಮನೋಹರವಾಗಿದೆ ನೋಡಿ
ಜೈ ಜೈ ರಾಮ, ಜೈ ಶ್ರೀ ರಾಮ ದೇಶದ ಎಲ್ಲಡೆ ಕೇಳಿಬರುತ್ತಿದೆ ಶ್ರೀರಾಮ ನಾಮ. ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯಾದಾಗ ಶ್ರೀರಾಮ ಭಕ್ತಾದಿಗಳಿಗೆ ಜನ್ಮ ಪಾವನವಾಯಿತು ಎಂದನಿಸಿದ ಕ್ಷಣ. ಕೋಟ್ಯಾಂತರ ಭಕ್ತರ ಕನಸು ನನಸಾದ ದಿನ. ಅಯೋಧ್ಯೆ ಇನ್ನು ದೇಶದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಲಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ಶ್ರೀರಾಮನ ದರ್ಶನ ಪಡೆದು ಹೋಗಲಿದ್ದಾರೆ. ಅಯೋಧ್ಯೆ ಭಕ್ತಿಯ ಕ್ಷೇತ್ರವಾಗಿದೆ, ಶ್ರೀರಾಮ ಅಯೋಧ್ಯೆಗೆ ಮತ್ತೆ ಮರಳಿದ್ದಾನೆ.

ಅಯೋಧ್ಯೆಯ ಮಂದಿರದಲ್ಲಿ ವಿರಾಜಮಾನವಾಗಿರುವ ಶ್ರೀರಾಮನನ್ನು ನೋಡುವಾಗ ನಮ್ಮಲ್ಲಿ ಭಕ್ತಿ ಭಾವ ಉಕ್ಕಿ ಹರಿಯುವುದು. ಶ್ರೀರಾಮನ ಆ ಮೂರ್ತಿ ನೋಡಿದಾಗ ಮೂರ್ತಿಯಲ್ಲ ಸಾಕ್ಷಾತ್ ಶ್ರೀರಾಮನೇ ನಿಂತಿರುವಂತಿದೆ, ಅಷ್ಟೊಂದು ಮನೋಹರವಾಗಿದೆ ಆ ಮೂರ್ತಿ. ಅದರಲ್ಲೂ ಇಂದು ಚಿನ್ನ-ವಜ್ರ ಆಭರಣಗಳಿಂದ ಅಲಂಕೃತವಾಗಿರುವ ಶ್ರೀರಾಮನನ್ನು ನೋಡಲು ತುಂಬಾನೇ ಆಕರ್ಷಕವಾಗಿದೆ. ಅಯೋಧ್ಯೆ ಮಂದಿರದಲ್ಲಿ ಶ್ರೀ ರಾಮನಗಳು ಫೋಟೋಗಳು ಇಲ್ಲಿವೆ ನೋಡಿ:
ಕಲ್ಲಿನಿಂದ ಕೆತ್ತಲಾಗಿರುವ ಶ್ರೀರಾಮ
ಶ್ರೀರಾಮನ ಮೂರ್ತಿಗೆ ಕರ್ನಾಟಕದಲ್ಲಿ ಸಿಕ್ಕ ಕಲ್ಲನ್ನು ಬಳಸಲಾಗಿದೆ. ರಾಮದಾಸ್ ಎಂಬುವವರ ತೋಟದಲ್ಲಿ ಸಿಕ್ಕ ಕಲ್ಲಿನಿಂದ ಈ ಮೂರ್ತಿಯನ್ನು ಕೆತ್ತಲಾಗಿದೆ. ಅರುಣ್ ಯೋಗಿರಾಜ್ ಎಂಬ ಮೈಸೂರಿನ ಶಿಲ್ಪಿ ಈ ವಿಗ್ರಹವನ್ನು ಕೆತ್ತಲಾಗಿದೆ. ಹೀಗಾಗಿ ಇಂದು ಜಗತ್ತು ಬೆರಗು ಕಣ್ಣಿನಿಂದ ರಾಮ ಭಕ್ತರು ಭಕ್ತಿಯಿಂದ ನೀಡುತ್ತಿರುವ ಶ್ರೀರಾಮ ಮೂರ್ತಿಯ ಕಲ್ಲು ಅದನ್ನು ಕೆತ್ತಿದ ವ್ಯಕ್ತಿ ನಮ್ಮವರು ಎಂಬ ಹೆಮ್ಮೆ ಕನ್ನಡಿಗರಿಗೆ.
ಹಾರೋಹಳ್ಳಿ ಗುಜ್ಜೆ ಗೌಡನಪುರದ ದಲಿತ ವ್ಯಕ್ತಿ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕ ಕಲ್ಲು. ಈ ಕಲ್ಲನ್ನು ತೆಗಿಸಿಕೊಟ್ಟವರು ಶ್ರೀನಿವಾಸ್ ಎಂಬವರು. ಉಳುಮೆಗೆ ಯೋಗ್ಯವಾಗಲು ಭೂಮಿಯಿಂದ ಕಲ್ಲನ್ನು ತೆಗಿಸಲಾಗಿತ್ತು, ಆದರೆ ಈ ಕಲ್ಲಿನಿಂದ ಶ್ರೀರಾಮ ಮೂರ್ತಿ ಮಾಡಲು ಬಳಸುತ್ತಾರೆ ಎಂಬುವುದು ಅವರಿಗೆ ಗೊತ್ತಿರುವುದಿಲ್ಲ, ಇದೀಗ ತಮ್ಮ ಜಾಗದಲ್ಲಿನ ಕಲ್ಲಿನಿಂದ ಶ್ರೀರಾಮ ಮೂರ್ತಿಯಾಗಿರುವುದು ಅವರಿಗೆ ತುಂಬಾ ಖುಷಿ ಸಿಕ್ಕಿದೆ. ಈ ಜಾಗದಲ್ಲಿ ಚಪ್ಪರ ಹಾಕಿ ಹಬ್ಬದ ರೀತಿ ಆಚರಣೆ ಮಾಡಲಾಗಿದೆ.
ಶ್ರೀರಾಮ ಮೂರ್ತಿಯಲ್ಲಿರುವ ವಿಶೇಷಗಳಿವು
ಈ ಮೂರ್ತಿಯಲ್ಲಿ ಸ್ವಸ್ಇಕ್, ಓಂ, ಚಕ್ರ, ಗದಾ, ಸೂರ್ಯ, ವಾಮನ, ನರಸಿಂಹ, ವರಹಾ, ಕೂರ್ಮ, ಹನುಮಂತ,ಕಮಲ, ಪರಶುರಾಮ, ರಾಮ,ಕೃಷ್ಣ, ಬುದ್ಧ, ಕಲ್ಕಿ, ಗರುಡಾವನ್ನು ಚಿತ್ರಿಸಲಾಗಿದೆ.
ಇಂದು ಮನೆ ಮನೆಗಳಲ್ಲಿ ಬೆಳಗಲಿದೆ ರಾಮ ಜ್ಯೋತಿ
ದೇಶದ ಪ್ರತಿ ಮನೆಗಳಲ್ಲಿ ರಾಮ ಜ್ಯೋತಿ ಬೆಳಗಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ, ಇಡೀ ದೇಶ ದೀಪಗಳನ್ನು ಬೆಳಗಿ ಶ್ರೀರಾಮ ಬರುವಿಕೆಯನ್ನು ಸಂಭ್ರಮಿಸುತ್ತಿದ್ದಾರೆ. ಈ ರೀತಿ ದೀಪ ಬೆಳಗುವ ಮೂಲಕ ಶ್ರೀರಾಮನ ಕೃಪೆ ನಮ್ಮ ಮೇಲಿರಲಿದೆ, ಶ್ರೀರಾಮನ ಬದುಕು ಇಂದಿಗೂ ಪ್ರತಿಯೊಬ್ಬರ ಬದುಕಿಗೆ ಆದರ್ಶ, ಧರ್ಮ ಪಾಲನೆ, ರಾಜ್ಯ ಪಾಲನೆ, ಎಲ್ಲಾ ವಿಷಯದಲ್ಲಿ ಶ್ರೀರಾಮ ಆದರ್ಶ ಪುರುಷ. ಮುಂದಿನ ಪೀಳಿಗೆಗೆ ಕೂಡ ದಾರಿದೀಪ ರಾಮಾಯಣ.
ಇತಿಹಾಸ ಸೃಷ್ಟಿಸಿದ ದಿನ
ಜನವರಿ 22, 2024 ಈ ದಿನ 1000 ವರ್ಷಗಳ ಕಳೆದರೂ ನೆನಪಿಸಿಕೊಳ್ಳುತ್ತಾರೆ, ಈ ದಿನಗಳಲ್ಲಿ ನಾವ್ಯಾರೂ ಇರಲ್ಲ, ಆದರೆ ರಾಮ ಮಂದಿರವಿರಲಿದೆ, ಶ್ರೀರಾಮ ಇರುತ್ತಾನೆ ನಮ್ಮ ಮುಂದಿನ ಪೀಳಿಗೆಯವರು ಈ ದಿನವನ್ನು ಇತಿಹಾಸದ ಪುಟಗಳಲ್ಲಿ ನೆನಪಿಸಿಕೊಳ್ಳುತ್ತಾರೆ. ಈ ಸುವರ್ಣ ದಿನದಲ್ಲಿ ನಾವೆಲ್ಲಾ ಇರುವುದು ನಮ್ಮ ಪುಣ್ಯವೆಂದು ಎಂದು ಹೇಳುತ್ತಿದ್ದಾರೆ ರಾಮ ಭಕ್ತರು... ಆ ರಾಮ ಕೃಪೆಯಿಂದ ದೇಶ ಸುಭೀಕ್ಷೆಯಾಗಿರಲಿ, ಶಾಂತಿ ನೆಲಿಸಲಿ, ಶ್ರೀರಾಮನ ಕೃಪೆ ಎಲ್ಲರ ಮೇಲಿರಲಿ, ಜೈ ಶ್ರೀರಾಮ್.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications

