Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾರ್ಚ್ 24ಕ್ಕೆ ಬಾಲಾರಿಷ್ಟ ದೋಷ: ಬಾಲಾಗ್ರಹ ಸಮಸ್ಯೆ ಇರುವ ಮಕ್ಕಳ ಬಗ್ಗೆ ಜಾಗ್ರತೆ, ಈ ದೋಷಕ್ಕೆ ಜ್ಯೋತಿಷ್ಯ ಪರಿಹಾರವೇನು?
ಈ ತಿಂಗಳಿನಲ್ಲಿ ಚಂದ್ರ ಮತ್ತು ಕೇತು ಗ್ರಹದ ಸಂಯೋಗವಾಗಲಿದೆ. ಈ ಸಂಯೋಗ ಅಷ್ಟು ಒಳ್ಳೆಯದಲ್ಲ, ಇದರಿಂದ ಬಾಲಾರಿಷ್ಟ ದೋಷ ಉಂಟಾಗುವುದು. ಇದರ ಬಗ್ಗೆ ಹೆಚ್ಚಿನ ವಿವರ ಬಗ್ಗೆ ತಿಳಿಯೋಣ ಬನ್ನಿ:
ಕನ್ಯಾರಾಶಿಯಲ್ಲಿ ಮಾರ್ಚ್ 24, 2024 ರಂದು ಮಧ್ಯಾಹ್ನ 02:20 ಕ್ಕೆ ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ಚಂದ್ರ ಮತ್ತು ಕೇತು ಗ್ರಹಗಳ ಸಂಯೋಗವಾಗಲಿದೆ. ಈ ಎರಡು ಗ್ರಹಗಳ ಸಂಯೋಗವು ಬಾಲಾರಿಷ್ಟ ದೋಷವನ್ನು ಉಂಟುಮಾಡುತ್ತದೆ. ಇದು ಚಿಕ್ಕ ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀರುವುದು ಎಂದು ಹೇಳಲಾಗುವುದು.

ಬಾಲಾರಿಷ್ಟ ದೋಷ ಎಂದರೇನು?
ಕೆಲವೊಂದು ಮಕ್ಕಳಿಗೆ ಬಾಲಾಗ್ರಹದ ಸಮಸ್ಯೆ ಇದೆ ಎಂದು ಹೇಳುವುದನ್ನು ಕೇಳಿರಬಹುದು, ಜ್ಯೋತಿಷ್ಯದ ಪ್ರಕಾರ ಇದು ಕೆಲವೊಂದು ಗ್ರಹಗಳ ದೋಷದಿಂದಾಗಿ ಉಂಟಾಗುವುದು. "ಬಾಲ್ಯದಲ್ಲಿ ಅಥವಾ ಜನ್ಮದಲ್ಲಿ ಉದ್ಭವಿಸುವ ಸಮಸ್ಯೆಗಳು ಮಗುವಿಗೆ ಗ್ರಹಗಳ ಸ್ಥಾನದಿಂದಾಗಿ ಬಾಲಾರಿಷ್ಟ ದೊಷ ಉಂಟಾಗುವುದು ಎಂದು ಹೇಳಲಾಗುವುದು. ಈ ಸಮಸ್ಯೆಯಿದ್ದರೆ ಮಗು ಪದೇ ಪದೇ ಕಾಯಿಲೆ ಬೀಳುತ್ತದೆ, ಎಷ್ಟೇ ವೈರದ್ಯರಿಗೆ ತೋರಿಸಿದರು ಕಡಿಮೆಯಾಗಲ್ಲ, ಮಗುವಿನಲ್ಲಿ ಹಠ ತುಂಬಾನೇ ಇರುತ್ತದೆ, ಮಗು ತುಂಬಾನೇ ಅಳುವುದು ಮಾಡುತ್ತದೆ. ಹೀಗಾದಾಗ ಕೆಲವರು ಮಗುವಿಗೆ ಬಾಲಾರಿಷ್ಟ ದೋಷವಿರಬಹುದು ಎಂದು ಹೇಳುತ್ತಾರೆ, ಆದರೆ ಇದಕ್ಕೆ ಜ್ಯೋತಿಷ್ಯ ಪರಿಹಾರ ಮಾಡಿದರೆ ಎಲ್ಲವೂ ಸರಿಯಾಗುವುದು ಅಚ್ಚರಿಯೇ ಸರಿ.
ಬಾಲಾರಿಷ್ಟ ದೋಷವಿದ್ದರೆ ಮಗುವಿನ ಮೇಲಾಗುವ ಪರಿಣಾಮವೇನು?
ಮಗುವಿನ ಜಾತಕದಲ್ಲಿ ಬಾಲಾರಿಷ್ಟ ದೋಷವಿದ್ದರೆ ಆ ಮಗುವಿನ ಮೇಲೆ 12 ವರ್ಷಗಳ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಈ ಬಾಲಾರಿಷ್ಟ ದೋಷವು ಮೂರು ಹಂತಗಳನ್ನು ಹೊಂದಿದೆ:
ಮೊದಲ ಹಂತ: ಮೊದಲ ಹಂತವು ಮಗುವಿನ ಜನನದಿಂದ 4 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಬಾಲಾರಿಷ್ಟ ದೋಷದಿಂದ ಮಗುವಿಗೆ ತೊಂದರೆಯಾಗಿದ್ದರೆ, ಅದು ಅವನ ಹಿಂದಿನ ಜನ್ಮದಲ್ಲಿ ಅವನ ತಾಯಿಯ ಕೆಟ್ಟ ಕಾರ್ಯಗಳಿಂದ ಉಂಟಾಗಿರುವುದು ಎಂದು ಹೇಳಲಾಗುವುದು.
ಎರಡನೇ ಹಂತ: ಬಾಲಾರಿಷ್ಟ ದೋಷದ ಎರಡನೇ ಹಂತವು ಐದನೇ ವರ್ಷದಿಂದ ಪ್ರಾರಂಭವಾಗುತ್ತದೆ ಮತ್ತು 9 ವರ್ಷಗಳವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಮಗುವಿಗೆ ಎದುರಾಗುವ ದೈಹಿಕ ಸಮಸ್ಯೆಗಳು ಹಿಂದಿನ ಜನ್ಮದಲ್ಲಿ ತಂದೆ ಮಾಡಿದ ಕೆಟ್ಟ ಕಾರ್ಯಗಳ ದೋಷದಿಂದ ಬಂದಿರುವುದು ಎಂದು ಹೇಳಲಾಗುವುದು.
ಮೂರನೇ ಹಂತ: ಬಾಲಾರಿಷ್ಟ ದೋಷದ ಮೂರನೇ ಮತ್ತು ಅಂತಿಮ ಹಂತವು 9 ರಿಂದ 12 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಮಗು ಅನುಭವಿಸುವ ಆರೋಗ್ಯ ಸಮಸ್ಯೆಗಳು ಮಗು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಂದಾಗಿ ಈ ರೀತಿಯಾಗಿರುತ್ತದೆ.
ಬಾಲಾರಿಷ್ಟ ದೋಷವು ಅಶುಭ ದೋಷವಾಗಿದ್ದು, ಆರೋಗ್ಯ ಸಮಸ್ಯೆಗಳಿಂದಾಗಿ ಅಥವಾ ತೀವ್ರತರವಾದ ಪ್ರಕರಣಗಳಲ್ಲಿ ಮಗುವಿನ ಮರಣಕ್ಕೆ ಸಹ ಬಾಲ್ಯದಲ್ಲಿ ಕಾರಣವಾಗಬಹುದು. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಬಾಲಾರಿಷ್ಟ ದೋಷವು ಮಗುವಿಗೆ ಹೆಚ್ಚು ಹಾನಿಯನ್ನುಂಟು ಮಾಡುವುದಿಲ್ಲ.
ಗ್ರಹಗಳ ಈ ಸ್ಥಾನದಿಂದ ಬಾಲಾರಿಷ್ಟ ದೋಷ ಉಂಟಾಗುವುದು
ಜಾತಕದಲ್ಲಿ ಹಲವಾರು ಗ್ರಹಗಳ ಸ್ಥಾನವು ಬಾಲಾರಿಷ್ಟ ದೋಷವನ್ನು ಉಂಟುಮಾಡುತ್ತದೆ ಮತ್ತು ಅದನ್ನು ಕೆಳಗೆ ನೀಡಲಾದ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಗುರುತಿಸಬಹುದು.
ಜಾತಕದಲ್ಲಿ ಲಗ್ನ ಮನೆಯ ಅಧಿಪತಿಯ ಸ್ಥಾನವು ದುರ್ಬಲವಾಗಿದ್ದರೆ ಅಥವಾ ಅಶುಭ ಗ್ರಹಗಳು ಅದನ್ನು ನೋಡುತ್ತಿದ್ದರೆ.
ಅಶುಭ ಗ್ರಹಗಳು ಜಾತಕದಲ್ಲಿ 5, 8, 9 ಮತ್ತು 12 ನೇ ಮನೆಯಲ್ಲಿ ಇದ್ದರೆ ಬಾಲಾಗ್ರಹ ದೋಷ ಉಂಟಾಗುವುದು.
ಯಾವುದೇ ಶುಭ ಗ್ರಹದ ಅಂಶವಿಲ್ಲದೆ ಆರನೇ ಅಥವಾ ಎಂಟನೇ ಮನೆಯಲ್ಲಿ ಚಂದ್ರನಿದ್ದಾಗ ಬಾಲಾಗ್ರಹ ದೋಷ ಉಂಟಾಗುವುದು.
ಬಾಲಾಗ್ರಹ ದೋಷ ನಿವಾರಣೆಗೆ ಕಾರಣವೇನು?
ಪ್ರತಿದಿನ ಗಣಪತಿಯನ್ನು ಪೂಜಿಸುವುದರಿಂದ ಬಾಲಾರಿಷ್ಟ ದೋಷಗಳು ಕಡಿಮೆಯಾಗುತ್ತವೆ. ಕೇತುವಿನ ಕಾರಣದಿಂದ ಈ ದೋಷವು ರೂಪುಗೊಂಡಿದ್ದರೆ, ಈ ಪರಿಹಾರವು ಫಲಪ್ರದವಾಗಿದೆ.
ಬಾಲಾರಿಷ್ಟ ದೋಷದ ಅಶುಭ ಪರಿಣಾಮಗಳಿಂದ ಪರಿಹಾರ ಪಡೆಯಲು ದುರ್ಗಾ ದೇವಿಯನ್ನು ಆರಾಧಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಗ್ರಹ ಶಾಂತಿ ನಿವಾರಣಾ ಪೂಜೆಯ ಮೂಲಕ ನೀವು ಬಾಲಾರಿಷ್ಟ ದೋಷವನ್ನು ಸಹ ಶಾಂತಗೊಳಿಸಬಹುದು.
ಬಾಲಾರಿಷ್ಟ ದೋಷದ ದಿನ ಈ ರಾಶಿಯವರು ಜಾಗರೂಕರಾಗಿರಬೇಕು
ಕನ್ಯಾರಾಶಿ
ಚಂದ್ರ ಮತ್ತು ಕೇತುಗಳ ಸಂಯೋಗವು ಕನ್ಯಾರಾಶಿಯಲ್ಲಿ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಇರಲಿದೆ. ಈ ಸಂಯೋಗವು ನಿಮ್ಮ ಮೊದಲ ಮನೆಯಲ್ಲಿ ಬಾಲಾರಿಷ್ಟ ದೋಷವನ್ನು ಉಂಟುಮಾಡುತ್ತದೆ. ಈ ಅವಧಿಯಲ್ಲಿ ಜನಿಸುವ ಅಥವಾ ಈಗಾಗಲೇ ತಮ್ಮ ಜಾತಕದಲ್ಲಿ ಬಾಲಾರಿಷ್ಟ ದೋಷವನ್ನು ಹೊಂದಿರುವ ಮಕ್ಕಳು ಈ ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಮಕ್ಕಳ ಪೋಷಕರು ತಮ್ಮ ಮಕ್ಕಳ ಬಗ್ಗೆ ಬಹಳ ಜಾಗರೂಕರಾಗಿರಬೇಕು.
ಮೀನ ರಾಶಿ
ಮೀನ ರಾಶಿಯ ಜನರ ಜಾತಕದ ಏಳನೇ ಮನೆಯಲ್ಲಿ ಕೇತು ಮತ್ತು ಚಂದ್ರರು ಸಂಯೋಗವನ್ನು ರಚಿಸುತ್ತದೆ. ಎರಡು ಗ್ರಹಗಳ ದೃಷ್ಟಿ ನಿಮ್ಮ ಮೊದಲ ಮನೆಯಲ್ಲಿ ಇರುತ್ತದೆ, ಅಂಈ ರಾಶಿಯ ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಅನೇಕ ಕಾಯಿಲೆಗಳೊಂದಿಗೆ ಹೋರಾಡುತ್ತಿರುವುದನ್ನು ಕಾಣಬಹುದು. ಮೀನ ರಾಶಿಯ ಮಕ್ಕಳ ಪೋಷಕರು ಈ ಅವಧಿಯಲ್ಲಿ ಜಾಗರೂಕರಾಗಿರಲು ಸಲಹೆ ನೀಡಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











