Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಅಯೋಧ್ಯೆಯ ರಾಮ ಮಂದಿರಕ್ಕೆ 5000 ವಜ್ರ ಕಲ್ಲುಗಳಿರುವ ರಾಮ ಮಂದಿರ ಥೀಮ್‌ನ ನೆಕ್ಲೇಸ್ ಕಾಣಿಕೆ ನೀಡಿದ ಗುಜರಾತಿನ ವ್ಯಾಪಾರಿ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ಕೋಟ್ಯಾಂತರ ಹಿಂದೂಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಭವ್ಯ ಶ್ರೀರಾಮ ಮಂದಿರ ಹೊಸ ವರ್ಷದಲ್ಲಿ ಉದ್ಘಾಟನೆಯಾಗಲಿದ್ದು, ಅಯೋಧ್ಯೆಯಲ್ಲಿರುವ ಶ್ರೀರಾಮನ ಕಣ್ತುಂಬಿಕೊಳ್ಳುವ ಆಸೆ ಪ್ರತಿಯೊಬ್ಬ ಹಿಂದೂಗಳಲ್ಲಿಯೂ ಇದೆ. ಅಯೋಧ್ಯೆ ರಾಮ ಮಂದಿರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಈಗಾಗಲೇ ದೇಶದ ಎಲ್ಲಾ ಕಡೆಯಿಂದ ಶ್ರೀರಾಮನಿಗೆ ಕಾಣಿಕೆಗಳು ಹರಿದು ಬರುತ್ತಿವೆ.

ಜನವರಿ 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ
ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಮೆಗೆ ಸಮಯ ನಿಗದಿಪಡಿಸಲಾಗಿದೆ, ಹೊಸ ವರ್ಷದ ಜನವರಿ 22, 2024ರಂದು ಅಭಿಜಿತ್ ಲಗ್ನ, ಮೃಗಶಿರ ನಕ್ಷತ್ರದಲ್ಲಿ ಮಧ್ಯಾಹ್ನ 12:20ಕ್ಕೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಲಾಗುವುದು.
ಹರಿದು ಬರುತ್ತಿರುವ ಕಾಣಿಕೆಗಳು
ಅಯೋಧ್ಯೆ ರಾಮಮಂದಿರ ಕಟ್ಟಲಾರಂಭಿಸಿದ ದಿನದಿಂದಲೇ ರಾಮನ ಭಕ್ತರು ಮಂದಿರ ಕಟ್ಟಲು ತಮ್ಮ ಕೈಯಲ್ಲಾದ ದಾನ ಮಾಡುತ್ತಿದ್ದರೆ, ಇದೀಗ ಭವ್ಯ ಮಂದಿರ ನಿರ್ಮಾಣವಾಗಿದೆ, ಇದನ್ನು ನೋಡುವಾಗ ಭಕ್ತರ ಖುಷಿ ಇನ್ನಷ್ಟು ಹೆಚ್ಚಾಗಿದೆ, ಭಕ್ತರು ಅಳಿವು ಸೇವೆಯಂತೆ ತಮ್ಮ ಶಕ್ತಿಗೆ ಏನು ಸಾಧ್ಯವೋ ಆ ಕಾಣಿಕೆಗಳನ್ನು ಪ್ರೀತಿಯಿಂದ ಅರ್ಪಿಸುತ್ತಿದ್ದಾರೆ, ಆದರೆ ಈಗ ತುಂಬಾನ ಗಮನ ಸೆಳೆದಿರುವುದು ಗುಜರಾತಿನ ಚಿನ್ನದ ವ್ಯಾಪಾಡಿ ನೀಡಿರುವ ಉಡುಗೊರೆ.
ರಾಮ ಮಂದಿರ ವಿನ್ಯಾಸ ಹೋಲುವ ವಜ್ರದ ನೆಕ್ಲೇಸ್
ಗುಜರಾತಿನ ವಜ್ರದ ವ್ಯಾಪಾರಿ ಶ್ರೀರಾಮನಿಗಾಗಿ ಅಯೋಧ್ಯೆ ರಾಮಮಂದಿರ ಹೋಲುವ ಹಾರ ತಯಾರಿಸಿದ್ದಾರೆ. ಈ ಹಾರ ನಿರ್ಮಿಸಲು 5000 ಅಮೆರಿಕನ್ ವಜ್ರಗಳನ್ನು ಬಳಸಲಾಗಿದೆಯಂತೆ. 2 ಕೆಜಿ ಬೆಳ್ಳಿಯನ್ನು ಬಳಸಲಾಗಿದೆ. ಈ ಹಾರವನ್ನು ಚಿನ್ನ, ಬೆಳ್ಳಿ, ವಜ್ರ ಬಳಸಿ ತಯಾರಿಸಲಾಗಿದೆ.
ಈ 40 ಜನ ಪರಿಣಿತ ಅಕ್ಕ ಸಾಲಿಗರು ಈ ಸರವನ್ನು ಮಾಡಲು 30 ದಿನ ತೆಗೆದುಕೊಂಡಿದ್ದಾರೆ. ಇದರ ವಿನ್ಯಾಸ ರಾಮ ಮಂದಿರಂತೆಯೇ ಅದ್ಭುತವಾಗಿದೆ, ಈ ಮೂಲಕ ಸೂರತ್‌ನ ಕರಕುಶಲತೆ ಕೂಡ ಪ್ರದರ್ಶಿಸಲು ಈ ಹಾರವನ್ನು ಕಾಣಿಕೆಯಾಗಿ ನೀಡಲಾಗಿದೆ. ಇದನ್ನು ಕಾಣಿಕೆಯಾಗಿ ನೀಡುತ್ತಿರುವ ವ್ಯಾಪಾರಿ ಕೌಶಿಕ್ ಕಾಕಾಡಿಯಾ ಇದನ್ನು ಯಾವುದೇ ವ್ಯವಹಾರ ಉದ್ದೇಶಕ್ಕೆ ನೀಡುತ್ತಿಲ್ಲ, ಶ್ರೀರಾಮ ಮಂದಿರಕ್ಕೆ ನಮ್ಮಿಂದಾಗುವ ಏನಾದರೂ ನೀಡಬೇಕು ಎಂಬ ಉದ್ದೇಶದಿಂದಷ್ಟೇ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಅಮೃತ ಮಹೋತ್ಸವ
ಜನವರಿ 14-22ರವರೆಗೆ ಅಯೋಧ್ಯೆಯಲ್ಲಿ ಅಮೃತ ಮಹೋತ್ಸವ. ಈ ಧಾರ್ಮಿಕ ಹಬ್ಬದಲ್ಲಿ ಲಕ್ಷಾಂತರ ಭಕ್ತರ ಭಾಗವಹಿಸಲಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
