ಅಯೋಧ್ಯೆ ರಾಮ ಮಂದಿರದಲ್ಲಿ ಕಲಶಾಭಿಷೇಕವನ್ನು ಮಾಡಲು ದುಡ್ಡಿದ್ದರೆ ಸಾಲುದು, ಈ ಅರ್ಹತೆ ಇರಬೇಕು

ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರ 22ಕ್ಕೆ ಪ್ರಾಣಪ್ರತಿಷ್ಠಾಪನೆ, ಪೂಜೆಗಳು ನಡೆಯಲಿದೆ. ಶ್ರೀರಾಮ ಭಕ್ತರು ಇಷ್ಟು ವರ್ಷಗಳಿಂದ ಎದುರು ನೋಡುತ್ತಿದ್ದ ಶುಭ ಘಳಿಗೆ ಬಂದಿದೆ. ಶ್ರೀರಾಮ ಮಂದಿರಲ್ಲಿ ಪ್ರತಿದಿನ ಲಕ್ಷಾಂತರ ಜನರು ಆಗಮಿಸಲಿದ್ದಾರೆ, ದೇಶದ ಧಾರ್ಮಿಕ ಕ್ಷೇತ್ರಗಳಲ್ಲಿ ಈ ದೇವಾಲಯ ಅತ್ಯಂತ ಪ್ರಮುಖ ಆಕರ್ಷಣೆಯಾಗಲಿದೆ.

ರಾಮಮಂದಿರ ಲೋಕಾರ್ಪಣೆಯಾಗುವಾಗ ಭಕ್ತರಿಗೆ ನೀಡಲು ತಿರುಪತಿಯಿಂದ 1 ಲಕ್ಷ ಲಡ್ಡು ಕಳುಹಿಸಲಾಗುವುದು, ಶ್ರೀರಾಮ ಮಂದಿರದಲ್ಲಿ ಕಲ್ಲು ಸಕ್ಕರೆಯ ಪ್ರಸಾದವನ್ನು ನೀಡಲಾಗುವುದು, ಅಲ್ಲದೆ ಇಲ್ಲಿ ಇತರ ದೇವಾಲುಗಳಲ್ಲಿ ಇರುವಂತೆ ತುಲಾಭಾರ, ಮುಡಿ ಕೊಡುವುದು ಮುಂತಾದ ಸೇವೆಗಳಿಲ್ಲ, ಆದರೆ ಭಕ್ತರು ಕಲಶಾಭಿಷೇಕ ಮಾಡಬಹುದು. ಕಲಶಾಭಿಷೇಕ ಮಾಡಲು 1 ಲಕ್ಷ ರುಪಾಯಿ ಮೊತ್ತ ನಿಗದಿ ಮಾಡಿದೆ.

Ayodhya Ram Mandir

ದುಡ್ಡಿದ್ದರೆ ಕಲಶಾಭಿಷೇಕ ಮಾಡಲು ಸಾಧ್ಯವಿಲ್ಲ?
ಒಂದು ಲಕ್ಷ ಕೊಟ್ಟರೆ ಯಾರು ಬೇಕಾದರೂ ದೇವರಿಗೆ ಕಲಶಾಭೀಷೇಕ ನೆರವೇರಿಸಬಹುದೇ? ಖಂಡಿತ ಇಲ್ಲ, ಅದಕ್ಕೂ ಕೆಲವು ಮಾನದಂಡಗಳನ್ನು ಟ್ರಸ್ಟ್ ವಿಧಿಸಿದೆ. ಸಮಾಜಸೇವೆ ಮಾಡಿದವರಿಗೆ ಮಾತ್ರ ಕಲಶಾಭಿಷೇಕ ಮಾಡಲು ಅವಕಾಶ ಇದೆ. ಆದ್ದರಿಂದ ದುಡ್ಡು ಇದೆ ಎಂದ ಮಾತ್ರಕ್ಕೆ ಶ್ರೀರಾಮನಿಗೆ ಕಲಶ ಸೇವೆ ಮಾಡುವಂತಿಲ್ಲ. ಬದಲಿಗೆ, ಕಲಶಾಭಿಷೇಕ ಮಾಡಬೇಕಾದರೆ ಅವರು ಸಮಾಜಕ್ಕೆ ಏನಾದರೂ ಸೇವೆ ಮಾಡಿರಬೇಕು.

ಸಮಾಜಸೇವೆ ಹೇಗಿರಬೇಕು ಎಂಬುದನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀಥ೯ ಸ್ವಾಮೀಜಿ ವಿವರಿಸಿದ್ದಾರೆ.

ಕಲಶಾಭಿಷೇಕಕ್ಕೆ ಒಂದು ಲಕ್ಷ ರುಪಾಯಿ ಮೊತ್ತ ನೀಡಬೇಕು. ಯಾರು ಸೇವೆ ಮಾಡುತ್ತಾರೋ ಹತ್ತು ಪಟ್ಟು ಅಂದರೆ 10 ಲಕ್ಷ ರು.ಗಳಷ್ಟು ಮೌಲ್ಯದ ಸಮಾಜಸೇವೆಯನ್ನು ಸೇವಾಕರ್ತರು ಮಾಡಿರಬೇಕು. 2023-24 ನೇ ಸಾಲಿನಲ್ಲಿ ಇಂಥ ಸಾಮಾಜಿಕ ಸೇವಾ ಕಾಯ೯ ಮಾಡಿದ್ದಾಗಿರಬೇಕು. ಇಂಥ ಸಮಾಜಸೇವೆ ಮಾಡಿದ್ದೇನೆ ಎಂದು ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣ ಪತ್ರ ತರಬೇಕು. ಹೀಗಿದ್ದರೆ ಮಾತ್ರ ಅಂಥವವರಿಗೆ ಶ್ರೀರಾಮನಿಗೆ ಕಲಶಾಭಿಷೇಕ ಮಾಡಲು ಅವಕಾಶ ಸಿಗಲಿದೆ. ಕಲಶಾಭಿಷೇಕ ಮಾಡಿಸಿದವರು ಸೇವೆ ಮುಗಿದ ಬಳಿಕ ಕಳಸವನ್ನು ಮನೆಗೆ ಕೊಂಡೊಯ್ದು ಮನೆಯಲ್ಲಿ ಪ್ರಸಾದ ರೂಪದಲ್ಲಿ ಶಾಶ್ವತವಾಗಿ ಕಲಶ ಇಟ್ಟುಕೊಳ್ಳಬಹುದು.

ಯಾರು ಸಮಾಜದಲ್ಲಿ ಜನೋಪಯೋಗಿ ಸೇವೆಗಳನ್ನು ಮಾಡಿರುತ್ತಾರೋ ಯಾರು ಸಮಾಜಸೇವಾ ಮಾಡಿರುತ್ತಾರೋ ಅಂಥ ಜನಸೇವಕರಿಗೆ ಮಾತ್ರ ಶ್ರೀರಾಮನಿಗೆ ಕಲಶಾಭೀಷೇಕಕ್ಕೆ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಯಾವುದೇ ರೀತಿಯಲ್ಲಿಯೂ ಹರಕೆ ಅಥವಾ ಇತರ ಸೇವೆಗಳು ಶ್ರೀರಾಮ ದೇವಾಲಯದಲ್ಲಿ ಇರುವುದಿಲ್ಲ ಎಂದೂ ಸ್ವಾಮೀಜಿ ಸ್ಪಷ್ಟಪಡಿಸುತ್ತಾರೆ.

ಅಯೋಧ್ಯೆಯ ಶ್ರೀರಾಮಚಂದ್ರನ ದಶ೯ನಕ್ಕೆ ಹೋದಾಗ ಶ್ರೀರಾಮ ಪ್ರಭುವೇ ನಾನು ನಿನ್ನ ಹೆಸರಿನಲ್ಲಿ ಸಮಾಜಕ್ಕೆ, ಸಮಾಜಬಾಂಧವರಿಗೆ ಇಂಥ ಸತ್ಕಾಯ೯ ಮಾಡಿದ್ದೇನೆ. ಈ ಸೇವಾ ಕಾಯ೯ ನಿನಗೇ ಅಪಿ೯ತವಾಗಿದೆ ಎಂದು ಹೇಳಿದಾಗ ಅದು ಶ್ರೀರಾಮನಿಗೆ ನಿಜವಾದ ಸೇವೆ ಎನಿಸುತ್ತದೆ. ಇಂಥ ಸೇವೆಯನ್ನು ಒಬ್ಬ ಸೇವಾಕತ೯ ಮಾಡಬಹುದು ಅಥವಾ ಸಮೂಹಿಕವಾಗಿ, ಗುಂಪಾಗಿಯೂ ಮಾಡಲು ಅವಕಾಶವಿದೆ ಎನ್ನುತ್ತಾರೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀಥ೯ ಸ್ವಾಮೀಜಿ.

ಕಲಶಾಭಿಷೇಕ ಮಾಡಿದರೂ ಸಮಾಜ ಸೇವೆ ಮಾಡಿದಂತೆ
ಕಲಶಾಭಿಷೇಕಕ್ಕೆ 1 ಲಕ್ಷ ರುಪಾಯಿ ಕೊಡಬೇಕು, ಆದರೆ ಆ ಹಣ ಸಮಾಜದ ಕಲ್ಯಾಣಕ್ಕೆ ಉಪಯೋಗವಾಗುತ್ತದೆ. ಈ ಹಣದಲ್ಲಿ ಬಡವರಿಗೆ ಮನೆ, ಶಾಲೆ, ಆಸ್ಪತ್ರೆ ನಿರ್ಮಿಸುವ ಉದ್ದೇಶ ಹೊಂದಿದೆ. ಗೋವುಗಳನ್ನು ದತ್ತು ಪಡೆದು ಸುಸಜ್ಜಿತತ ಗೋಶಾಲೆಯನ್ನು ನಿಮಿ೯ಸುವ ಉದ್ದೇಶವಿದೆ. ಎಲ್ಲವನ್ನೂ ಸಕಾ೯ರದ ಅನುದಾನದಿಂದಲೇ ನಿರೀಕ್ಷಿಸದೇ ಭಕ್ತರು ತಾವಾಗಿಯೇ ನೀಡುವ ಆಥಿ೯ಕ ನೆರವಿನಿಂದ ಶ್ರೀರಾಮನ ಸನ್ನಿಧಿಯಲ್ಲಿ ಸಲ್ಲಿಸಲ್ಪಡುವ ಸೇವೆಯ ಮೂಲಕ ಸಾವಿರಾರು ಮಂದಿಗೆ ಪ್ರಯೋಜನವಾಗುವ ಯೋಜನೆಯನ್ನು ಟ್ರಸ್ಟ್ ರೂಪಿಸಿದೆ, ಹೀಗೆ ರಾಮನ ಪೂಜೆ ಮಾಡುವ ಮೂಲಕ ಸಮಾಜ ಸೇವೆಗೆ ನೆರವಾಗುತ್ತಿದ್ದೇವೆ... ಜೈ ಶ್ರೀರಾಮ್....

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Ayodhya Ram Mandir: All People Can't Do Kalashabisheka To Lord Rama In Kannada

Ayodhya Ram Mandir: Do you know only these people can do Kalashabisheka To Lord Rama, read on..
Story first published: Tuesday, January 9, 2024, 22:30 [IST]
X
Desktop Bottom Promotion