Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಷಾಢ ಅಮವಾಸ್ಯೆ: ಯಾವ ಸಮಯದೊಳಗೆ ಎಡೆ ಬಡಿಸಬೇಕು? ಈ ಭೀಮನ ಅಮವಾಸ್ಯೆ ಹೆಣ್ಮಕ್ಕಳಿಗೆ ವಿಶೇಷವಾದದ್ದು ಏಕೆ?
ಆಷಾಢ ಅಮವಾಸ್ಯೆ ಹಿಂದೂಗಳಿಗೆ ಬಹು ಪ್ರಮುಖವಾದ ದಿನ, ಈ ದಿನದಂದು ಪಿತೃಗಳಿಗೆ ತರ್ಪಣ ನೀಡಿದರೆ ಅವರಿಗೆ ಮೋಕ್ಷ ಸಿಗುವುದು, ಕುಟುಂಬದಲ್ಲಿ ನೆಮ್ಮದಿ, ಸಂತೋಷ ಇರುತ್ತದೆ ಎಂಬ ನಂಬಿಕೆ. ಈ ಪಿತೃ ತರ್ಪಣವನ್ನು ಕೆಲವೊಂದು ವಿಶೇಷ ದಿನಗಳಲ್ಲಿ ಮಾಡಲಾಗುವುದು, ಆಷಾಢ ಅಮವಾಸ್ಯೆ, ದೀಪಾವಳಿ ಸಮಯದಲ್ಲಿ ಹಾಗೂ ಪಿತೃ ಪಕ್ಷದ ಸಮಯದಲ್ಲಿ ಪಿತೃ ತರ್ಪಣ ಕಾರ್ಯ ಮಾಡುತ್ತಾರೆ.
ಸತ್ತ ದಿನಾಂಕ, ತಿಥಿ ತಿಳಿದಿರದಿದ್ದರೆ ಈ ಸಮಯದಲ್ಲಿ ತರ್ಪಣ ನೀಡಬಹುದು. ಈ ದಿನಗಳಲ್ಲಿ ಪಿತೃ ತರ್ಪಣ ನೀಡುವುದರಿಂದ ಎಲ್ಲಾ ಹಿರಿಯರ ಆಶೀರ್ವಾದ ಸಿಗುತ್ತದೆ, ಎಲ್ಲರಿಗೂ ಮೋಕ್ಷ ಸಿಗುತ್ತದೆ, ಹಾಗಾಗಿ ಅವರು ಸಂಂತೋಷದಿಂದ ನಮ್ಮನ್ನು ಹರಿಸುತ್ತಾರೆ, ಅವರ ರಕ್ಷಣೆ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುವುದು. ಹೀಗಾಗಿ ಈ ಪಿತೃ ತರ್ಪಣಕ್ಕೆ ತುಂಬಾನೇ ಮಹತ್ವವಿದೆ.
ಆಷಾಢ ಅಮವಾಸ್ಯೆಯನ್ನು ಭೀಮನ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು. ಆಷಾಢ ಅಮವಾಸ್ಯೆ ಈ ಬಾರಿ ಆಗಸ್ಟ್ 4ಕ್ಕೆ ಬಂದಿದೆ, ಅಮವಾಸ್ಯೆ ತಿಥಿ ಶನಿವಾರದಂದು ಮಧ್ಯಾಹ್ನ 03:54ಕ್ಕೆ ಶುರುವಾಗಿ ಆಗಸ್ಟ್ 4 ಸಂಜೆ 4:44ಕ್ಕೆ ಮುಕ್ತಾಯವಾಗಲಿದೆ.

ಆಷಾಢ ಅಮವಾಸ್ಯೆ ಎಡೆ ಬಡಿಸುವ ಪದ್ಧತಿ ಇದೆ
ಕೆಲವರಿ ಈ ದಿನ ಪಿತೃತರ್ಪಣವನ್ನು ಅರ್ಪಿಸಿ ಬರುತ್ತಾರೆ, ಇನ್ನು ಕೆಲವರು ಪಿತೃ ತರ್ಪಣ ಅರ್ಪಿಸಿ ಬಂದ ಮೇಲೆ ಹಿರಿಯರಿಗೆ ಎಡೆ ಅರ್ಪಿಸುತ್ತಾರೆ. ಈ ದಿನ ಅವರಿಗೆ ಇಷ್ಟವಾದ ಭಕ್ಷ್ಯ ಮಾಡಿ ಎಡೆ ಬಡಿಸಲಾಗುವುದು.
ಈ ವರ್ಷ ಎಡೆಯನ್ನು ಸಮಯದಲ್ಲಿ ಬಡಿಸಬೇಕು?
ತೀರಿ ಹೋದ ಪೂರ್ವಜರಿಗೆ ಎಡೆಯನ್ನು ಅಮವಾಸ್ಯೆಯ ತಿಥಿಯ ಒಳಗಡೆ ಬಡಿಸಬೇಕು, ಹಾಗಾಗಿ ಈ ವರ್ಷ ಕೆಲವರು ಶನಿವಾರ ಸಂಜೆ ಎಡೆ ಇಡುತ್ತಿದ್ದಾರೆ, ಭಾನುವಾರ ಇಡುವುದಾದರೆ ಸಂಜೆ 04:44ರ ಒಳಗಾಗಿ ಇಡಬೇಕು.
ಭೀಮನ ಅಮವಾಸ್ಯೆ
ಆಷಾಢ ಅಮವಾಸ್ಯೆಯನ್ನು ಭೀಮನ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ, ಈ ದಿನ ಮಹಿಳೆಯರಿಗೆ ತುಂಬಾನೇ ವಿಶೇಷ, ಗಂಡನ ಹಾಗೂ ಒಡಹುಟ್ಟಿದ ಸಹೋದರರ ಶ್ರೇಯೋಭಿವೃದ್ಧಿಗಾಗಿ ಭೀಮನ ಅಮವಾಸ್ಯೆ ಆಚರಿಸುತ್ತಾರೆ.
ಶಿವನಿಗೆ ಆರಾಧನೆಗೆ ವಿಶೇಷ ದಿನ:
ಈ ದಿನ ಶಿವನ ಆರಾಧನೆಗೆ ತುಂಬಾನೇ ವಿಶೇಷವಾದ ದಿನವೆಂದು ಹೇಳಲಾಗುವುದು. ಈ ದಿನ ವಿವಾಹಿತರು ಗಂಡನ ಆರೋಗ್ಯ, ಆಯುಸ್ಸಿಗೆ ಪ್ರಾರ್ಥನೆ ಮಾಡಿದರೆ, ಅವಾಹಿತ ಹೆಣ್ಮಕ್ಕಳು ಒಳ್ಳೆಯ ಗಂಡನ ನೀಡು ಎಂದು ಪ್ರಾರ್ಥಿಸಿ ಈ ದಿನ ಪೂಜೆ ಮಾಡುತ್ತಾರೆ.
ಈ ದಿನ ಎರಡು ವಿಶೇಷ ದೀಪಗಳನ್ನು ಹಚ್ಚಲಾಗುವುದು, ಇದನ್ನು ಕಾಳಿಕಾಂಬ ದೀಪವೆಂದು ಕರೆಯಲಾಗುವುದು, ನಂತರ ಶಿವ-ಪಾರ್ವತಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
