Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಮಾರ್ಚ್ 29ರಂದು ಸಂಭವಿಸಲಿದೆ ಈ 5 ಘಟನೆಗಳು, ಹಾಗಾಗಿ ವಿಶೇಷ ದಿನವಾಗಿದೆ
ಈ ಮಾಸ ಜ್ಯೋತಿಷ್ಯದ ದೃಷ್ಟಿಯಿಂದ ನೋಡುವುದಾದರೆ ತುಂಬಾನೇ ವಿಶೇಷವಾಗಿರಲಿದೆ, ಅದರಲ್ಲಿಯೂ ಮಾರ್ಚ್ 29ನೇ ದಿನ ಹಲವು ಕಾರಣಗಳಿಂದ ತುಂಬಾನೇ ವಿಶೇಷವಾಗಿದೆ. ಮಾರ್ಚ್ 29ಕ್ಕೆ ಪ್ರಮುಖ ಗ್ರಹಗಳ ಸ್ಥಾನ ಬದಲಾವಣೆಯಾಗಲಿದೆ, ಅಮವಾಸ್ಯೆಯ ದಿನ ಸೂರ್ಯಗ್ರಹಣ ಕೂಡ ಇದೆ, ಹೀಗೆ ಈ ದಿನ ತುಂಬಾನೇ ವಿಶೇಷವಾಗಿರಲಿದೆ, ಬನ್ನಿ ಜ್ಯೋತಿಷ್ಯ ಕಾರಣದಿಂದ ಈ ದಿನ ಯಾವೆಲ್ಲಾ ವಿಶೇಷ ಘಟನೆಗಳು ನಡೆಯಲಿದೆ ಎಂದು ನೋಡೋಣ:

ಮಾರ್ಚ್ 29ಕ್ಕೆ ಅಮವಾಸ್ಯೆ
ಮಾರ್ಚ್ 29ಕ್ಕೆ ಚೈತ್ರ ಅಮವಾಸ್ಯೆ. ಸನಾತನ ಧರ್ಮದಲ್ಲಿ ಈ ಅಮವಾಸ್ಯೆಗೆ ತುಂಬಾನೇ ಮಹತ್ವವಿದೆ, ಇದಕ್ಕೆ ದರ್ಶ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು
ಅಲ್ಲದೆ ಶನಿವಾರ ಕೂಡ ಬಂದಿರುವುದರಿಂದ ಶನಿ ಅಮವಾಸ್ಯೆ ಕೂಡ ಇದೇ ದಿನ ಬಂದಿದೆ
ಶನಿ ಅಮವಾಸ್ಯೆಯ ಮಹತ್ವ
ಶನಿ ಸಾಡೇಸಾತಿ ಇರುವವರೆಗೆ ಈ ದಿನ ತುಂಬಾ ಮುಖ್ಯವಾಗಿದೆ, ಈ ದಿನ ಶನಿದೋಷಕ್ಕೆ ಪರಿಹಾರ ಮಾಡಿದರೆ ಕಷ್ಟಗಳು ಕಡಿಮೆಯಾಗುವುದು, ಶನಿ ಸಾಡೇಸಾತಿಯಿಂದ ಉಂಟಾಗುವ ತೊಂದರೆಗಳು ಕಡಿಮೆಯಾಗುವುದು.
ಸೂರ್ಯ ಗ್ರಹಣ
ವರ್ಷದ ಮೊದಲ ಸೂರ್ಯ ಗ್ರಹಣ ಮಾರ್ಚ್ 29ಕ್ಕೆ ನಡೆಯಲಿದೆ. ಸೂರ್ಯಗ್ರಹಣವು ಮಧ್ಯಾಹ್ನ 2:20ರಿಂದ ಶುರುವಾಗಿ ಸಂಜೆ 06:16ರವರೆಗೆ ಇರಲಿದೆ.
ಶನಿಯ ರಾಶಿ ಬದಲಾವಣೆ
ಈ ದಿನ ಪ್ರಮುಖ ಗ್ರಹವಾದ ಶನಿಯು ರಾಶಿ ಬದಲಾವಣೆ ಮಾಡಲಿದೆ, ಶನಿಯು ಎರಡೂವರೆ ವರ್ಷಗಳ ಬಳಿಕ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಸಂಚಾರ ತುಂಬಾನೇ ಪ್ರಮುಖವಾಗಿದೆ. ಈ ಸಂಚಾರದ ಬಳಿಕ ಮಕರ ರಾಶಿಯಲ್ಲಿ ಶನಿ ಸಾಡೇಸಾತಿ ಮುಕ್ತಾಯವಾದರೆ ಮೇಷ ರಾಶಿಯವರಿಗೆ ಶುರುವಾಗಲಿದೆ, ಕುಂಭ ಹಾಗೂ ಮೀನ ರಾಶಿಯಲ್ಲಿ ಶನಿ ಸಾಡೇಸಾತಿ ಮುಂದುವರೆಯಲಿದೆ.
ಗುರು ಗ್ರಹದ ರಾಶಿ ಬದಲಾವಣೆ
ಗುರು ಗ್ರಹ ಕೂಡ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಂಚಾರ ಮಾಡಲಿದೆ, ಹೀಗೆ ಈ ಎಲ್ಲಾ ಕಾರಣಗಳಿಂದ ಈ ಮಾರ್ಚ್ 29 ತುಂಬಾನೇ ವಿಶೇಷವಾಗಿರಲಿದೆ.
ಈ ದಿನದ ಬಳಿಕ ಕೆಲ ರಾಶಿಗಳಿಗೆ ಶುಭ ಸಮಯ ಶುರುವಾಗಲಿದೆ, ಆ ರಾಶಿಗಳೆಂದರೆ
ಮೇಷ ರಾಶಿ:
ಈ ವರ್ಷದ ಮೊದಲ ಸೂರ್ಯಗ್ರಹಣದ ಬಳಿಕ ಮೇಷ ರಾಶಿಯವರು ತಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣುತ್ತೀರಿ. ನೀವು ವೃತ್ತಿ ಜೀವನದಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವೈಯಕ್ತಿಕ ಜೀವನ ಕೂಡ ತುಂಬಾ ಚೆನ್ನಾಗಿರಲಿದೆ. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ಉದ್ಯೋಗ ಬದಲಾವಣೆ ಮಾಡಲು ಬಯಸಿದರೆ ಈ ಸಮಯದ ಬಳಿಕ ನಿಮಗೆ ಉತ್ತಮ ಅವಕಾಶ ದೊರೆಯಲಿದೆ. ಗುರು ನಿಮಗೆ ಬಲವಾದ ಸ್ಥಾನದಲ್ಲಿರುವುದರಿಂದ ನೀವು ಅತ್ಯುತ್ತಮವಾದ ಪ್ರಯೋಜನ ಪಡೆಯುತ್ತೀರಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಶನಿ ದೈಯ್ಯ ಮುಗಿಯುವುದರಿಂದ ಈ ಸೂರ್ಯಗ್ರಹಣ ಬಳಿಕ ನಿಮಗೆ ಒಳಿತಾಗಲಿದೆ. ಉದ್ಯೋಗದಲ್ಲಿ ಅಥವಾ ವ್ಯವಹಾರದಲ್ಲಿ ನೀವು ಎದುರಿಸುತ್ತಿದ್ದ ಸವಾಲುಗಳು ದೂರಾಗಲಿದೆ. ಉದ್ಯೋಗ ಹುಡುಕುತ್ತಿರುವವರು ಉತ್ತಮ ಅವಕಾಶ ಪಡೆಯುತ್ತೀರಿ. ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ.
ಮಕರ ರಾಶಿ
ಮಕರ ರಾಶಿಯವರಲ್ಲಿ ಶನಿ ಸಾಡೇಸಾತಿ ಮುಕ್ತಾಯವಾಗುವುದರಿಂದ ಮಾರ್ಚ್ 29ರಿಂದ ನಿಮ್ಮ ಬದುಕಿನಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಲಗೊಳ್ಳಲಿದೆ. ಶನಿಸಾಡೇಸಾತಿ ಇರುವಾಗ ಅನುಭವಿಸಿದ್ದ ಅಡ್ಡಿ ಆತಂಕಗಳು ದೂರಾಗಲಿದೆ. ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.
ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸಲಿದೆ, ಎರಡೂವರೆ ವರ್ಷ ಇದೇ ರಾಶಿಯಲ್ಲಿ ಇರಲಿದೆ.
ಹೌದು ಈ ಗ್ರಹಣ ಭಾರತದಲ್ಲಿ ಗೋಚರಿಸಲಿದೆ.
ಸೆಪ್ಟೆಂಬರ್ 21ಕ್ಕೆ ವರ್ಷದ ಎರಡನೇ ಸೂರ್ಯಗ್ರಹಣ ಸಂಭವಿಸಲಿದೆ.



Click it and Unblock the Notifications











