Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅರ್ಧ ಕೇಂದ್ರ ಯೋಗದಿಂದ 3 ರಾಶಿಯವರಿಗೆ ಧನಪ್ರಾಪ್ತಿ..! ಸಮಸ್ಯೆ ಪರಿಹಾರ!
2025ರಲ್ಲಿ ಹಲವು ಬಗೆಯ ಯೋಗಗಳು, ಗ್ರಹಗಳ ಚಲನೆಯಲ್ಲಿ ಬದಲಾವಣೆ, ಹೊಸ ರಾಶಿಗೆ ಗ್ರಹಗಳ ಸಂಚಾರ ನೋಡಲಿದ್ದೇವೆ. ಈ ನಡುವೆ 2025ರಲ್ಲಿ ವಿಶೇಷವಾಗಿ ಕೆಲವೊಂದು ಯೋಗಗಳು ರೂಪುಗೊಳ್ಳುತ್ತಿವೆ. ಅದರಲ್ಲೂ ಹಲವು ವರ್ಷಗಳಲ್ಲಿ ಒಮ್ಮೆ ಸಂಭವಿಸುವ ಯೋಗಗಳು ಕೂಡ ಈ ಬಾರಿ ಉಂಟಾಗುತ್ತಿದೆ. ಇಂತಹ ವಿಶೇಷ ಯೋಗದಲ್ಲಿ ಮೌನಿ ಅಮವಾಸ್ಯೆಯ ಸಮಯದಲ್ಲಿ ಒಂದು ವಿಶೇಷ ಯೋಗ ಏರ್ಪಡುತ್ತಿದೆ.
ಈ ಸಮಯದಲ್ಲಿ ಜನವರಿ ಕೊನೆಯಲ್ಲಿ ಗುರು ಮತ್ತು ಮಂಗಳ ಗ್ರಹಗಳು 45 ಡಿಗ್ರಿಯ ಸ್ಥಾನ ಪಲ್ಲಟವು ಅರ್ಧಕೇಂದ್ರ ಯೋಗಕ್ಕೆ ಕಾರಣವಾಗುತ್ತಿದೆ. ಇದು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ. ಹಾಗೆ ಬುಧ ಗ್ರಹವು ಮಕರ ರಾಶಿಗೆ ಚಲಿಸುತ್ತಿದೆ ಅದರಲ್ಲೂ ಅರ್ಧ ಕೇಂದ್ರ ಯೋಗದ ನಡುವೆ ಈ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಈ ಅಪರೂಪದ ಗ್ರಹಗತಿಗಳ ಬದಲಾವಣೆಯಿಂದಾಗಿ ಯಾವೆಲ್ಲಾ ರಾಶಿಯವರಿಗೆ ಶುಭ ಫಲ ನೀಡುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ಅರ್ಧಕೇಂದ್ರ ಯೋಗದ ಕಾರಣದಿಂದಾಗಿ ಹಲವರ ಅದೃಷ್ಟ ಬದಲಾಗಲಿದೆ. ಅರ್ಧಕೇಂದ್ರ ಯೋಗವು ಎರಡು ಗ್ರಹಗಳ ಸಮನಾಂತರ ದೂರದಲ್ಲಿ ನೆಲೆಗೊಳ್ಳುವ ಅಪರೂಪದ ಪ್ರಕ್ರಿಯೆಯಾಗಿದೆ. ನಾವಿಂದು ಯಾವೆಲ್ಲಾ ರಾಶಿಯವರಿಗೆ ಈ ಅರ್ಧ ಕೇಂದ್ರ ಯೋಗವು ಲಾಭದಾಯಕ ರೀತಿಯಲ್ಲಿ ಅದೃಷ್ಟ ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಗುರುವಿನ ಸ್ಥಾನಪಲ್ಲಟವು ಹಾಗೂ ಅರ್ಧ ಕೇಂದ್ರ ಯೋಗದಿಂದಾಗಿ ಅತ್ಯಧಿಕ ಲಾಭವಾಗುತ್ತದೆ. ಹಾಗೆ ಶನಿಯು ಮೇಷ ರಾಶಿಯ ಹನ್ನೊಂದನೇ ಮನೆಯಲ್ಲಿರುತ್ತಾನೆ ಮತ್ತು ಬುಧನು ಮೇಷ ರಾಶಿಯ ಹತ್ತನೇ ಮನೆಯಲ್ಲಿರುತ್ತಾನೆ. ಇದು ಮೇಷ ರಾಶಿಯವರ ವೃತ್ತಿಜೀವನದ ಮೇಲೆ ಸಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತಿ. ನಿಮ್ಮ ಕೆಲಸದಲ್ಲಿ ಶ್ರದ್ಧೆ ಇರುವುದರಿಂದ ಅದರಿಂದ ಪ್ರತಿಫಲ ಕೂಡ ಸಿಗುತ್ತದೆ. ಹಾಗೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ನಿಮ್ಮ ಸಂಬಂಧದಲ್ಲಿ ಉತ್ತಮ ಬಾಂಧವ್ಯ ಇರಲಿದೆ. ಆರೋಗ್ಯದಲ್ಲೂ ಸುಧಾರಣೆ ಕಾಣಲಿದ್ದೀರಿ. ನಿಮ್ಮ ವ್ಯಾಪಾರಕ್ಕೆ ಇದ್ದ ಅಡ್ಡಿಯೊಂದು ನಿವಾರಣೆಯಾಗುತ್ತದೆ. ಹಾಗೆ ಹಲವು ಸಮಸ್ಯೆಗಳಿಗೆ ನೀವು ಬಹುಬೇಗ ಪರಿಹಾರ ಪಡೆಯುತ್ತೀರಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಅರ್ಥಕೇಂದ್ರ ಯೋಗವು ತುಂಬಾ ಪ್ರಯೋಜನಕಾರಿಯಾಗಿದೆ. ಕರ್ಕ ರಾಶಿಯವರು ಈ ಯೋಗದಿಂದ ವೃತ್ತಿಪರ ಯಶಸ್ಸಿಗೆ ಕಾರಣರಾಗಲಿದ್ದಾರೆ. ನಿಮ್ಮ ಕೆಲಸಕ್ಕೆ ಅಗತ್ಯವಾಗಿ ಬೇಕಾದ ತಯಾರಿ ಮಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಉದ್ಯಮಿಗಳು, ವ್ಯಾಪಾರಿಗಳು, ಈ ಸಮಯದಲ್ಲಿ ಅತ್ಯಧಿಕ ಆರ್ಥಿಕ ಲಾಭ ಪಡೆಯಲಿದ್ದೀರಿ. ವಿದೇಶ ಪ್ರವಾಸ, ಶುಭ ಕಾರ್ಯ ಈ ರೀತಿಯ ಸಂತಸದ ಕ್ಷಣಕ್ಕೆ ನೀವು ಸಾಕ್ಷಿಯಾಗುತ್ತೀರಿ.
ಮಕರ ರಾಶಿ
ಮಕರ ರಾಶಿಯವರಿಗೆ ಅರ್ಧ ಕೇಂದ್ರ ಯೋಗವು ಅಪಾರ ಪ್ರಯೋಜನಗಳ ನೀಡಲಿದೆ. ಅವರು ವಿವಿಧ ರೀತಿಯಲ್ಲಿ ಹಣ ಸಂಪಾದಿಸಬಹುದು. ನಿಮ್ಮ ವ್ಯವಹಾರಗಳು ಅಡೆತಡೆಯಿಲ್ಲದೆ ನಡೆಯಲಿವೆ. ನಿಮ್ಮ ಕುಟುಂಬಸ್ಥರ ಬಳಿ ನಿಮ್ಮ ಮನಸ್ಥಾಪ ಬಗೆಹರಿಯಲಿದೆ. ದೀರ್ಘಕಾಲದ ಹೂಡಿಕೆಗಳಿಗೆ ನೀವು ಮುಂದಾಗಬಹುದು. ಇದರಿಂದ ನಿಮಗೆ ಲಾಭವಾಗುವ ಸಾಧ್ಯತೆ ಹೆಚ್ಚಾಗಲಿದೆ. ನಿಮ್ಮ ಸಂಬಂಧಿಕರ ಭೇಟಿಯಿಂದ ನಿಮಗೆ ಶುಭ ಸುದ್ದಿ ಕೇಳುವ ಭಾಗ್ಯವಿದೆ. ನಿಮ್ಮ ಬಹುದಿನಗಳ ಬಯಕೆಯೊಂದು ಈಡೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
