Latest Updates
-
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು
ದಿನ ಭವಿಷ್ಯ: ಏಪ್ರಿಲ್ 18ರ ಈ ದಿನವು ನಿಮಗೆ ಯಾವ ಲಾಭ ತರಲಿದೆ ನೋಡಿ!
ಶುಭ ದಿನ ಈ ದಿನ ದ್ವಾದಶ ರಾಶಿಗಳ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ತರಲಿದೆ. ನಿಮ್ಮ ಕೆಲಸದಲ್ಲಿ ಯಶಸ್ಸು, ಹಾಗೆ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಹಿಸಿದ್ದ ಕಾರಣಕ್ಕೆ ನಿಮಗೆ ಮೆಚ್ಚುಗೆಯ ಮಾತುಗಳ ಕೇಳಬಹುದು. ಮನೆಮಂದಿರ ಜೊತೆಗೆ ನಿಮ್ಮ ಸಂಬಂಧ ಸಂತಸಮಯವಾಗಿರಲಿದೆ. ಹಾಗೆ ಸ್ನೇಹಿತರೊಂದಿಗೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಪಡೆಯಲಿದ್ದೀರಿ. ನಿಮ್ಮ ಕೆಲಸದ ಸ್ಥಳದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಹೊಸ ಪ್ರಯತ್ನ ಮಾಡುವುದು ನಿಮ್ಮ ಪ್ರಗತಿಗೆ ಕಾರಣವಾಗಲಿದೆ. ಹಣಕಾಸು ಸ್ಥಿತಿ ಸುಧಾರಿಸಲಿದೆ. ಯಾರಿಗೂ ಈ ಸಮಯದಲ್ಲಿ ಮಾತು ನೀಡುವ ಕೆಲಸಕ್ಕೆ ಮುಂದಾಗಬೇಡಿ. ಕೆಲವು ವಿಚಾರಗಳು ನಿಮ್ಮ ಸಂಬಂಧ ಹಾಳು ಮಾಡಬಹುದು. ಎಲ್ಲರ ಗಮನ ನಿಮ್ಮ ಕೆಲಸದ ಮೇಲೆ ಇರಲಿದೆ.
ವೃಷಭ ರಾಶಿ
ಇಂದು ನೀವು ಬುದ್ಧಿವಂತಿಕೆಗೆ ಸವಾಲು ಎದುರಾಗಬಹುದು. ಕೆಲಸದ ನಡುವೆಯೂ ನೀವು ಹೆಚ್ಚು ವಿಶ್ರಾಂತಿ ಪಡೆಯಲು ಮುಂದಾಗಬಹುದು. ಏಕಂದರೆ ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆಗಳ ನೀವು ಎದುರಿಸಬೇಕಾಗಲಿದೆ. ಬ್ಯಾಂಕಿಂಗ್ ವಿಚಾರದಲ್ಲಿ ಅಡೆತಡೆ ಎದುರಾಗಲಿದೆ. ಹಳೆದಿರುವ ಹಣವನ್ನು ಮರಳಿ ಪಡೆಯಲು ನೀವು ಮುಂದಾಗಬಹುದು. ಇದಕ್ಕಾಗಿ ಹೊಸ ಆದಾಯ ಮೂಲಕ ಹುಡುಕಲು ನೀವು ಮುಂದಾಗಬೇಕಾಗುತ್ತದೆ. ದೂರದಲ್ಲಿರುವ ಸಂಬಂಧಿಕರಿಂದ ನೀವು ಕೆಲವು ನಿರಾಶಾದಾಯಕ ಸುದ್ದಿಗಳ ಕೇಳಬಹುದು. ತಂದೆಯ ಬಳಿ ನಿಮ್ಮ ಮುಂದಿನ ವ್ಯವಹಾರಗಳ ಚರ್ಚೆ ಮಾಡುವುದು ಸಹಾಯಕ್ಕೆ ಬರಲಿದೆ. ನೀವು ವ್ಯಾಪಾರಿಗಳಾಗಿದ್ದರೆ ನಿಮ್ಮ ನಷ್ಟಕ್ಕೆ ಕಾರಣವಾಗುತ್ತಿರುವ ವಿಚಾರವನ್ನು ಆದಷ್ಟು ದೂರವೇ ಇಡಿ.

ಮಿಥುನ ರಾಶಿ
ಇಂದು ನಿಮಗೆ ತುಂಬಾ ಮೋಜಿನ ದಿನವಾಗಿರುತ್ತದೆ. ಕೆಲಸದ ಬಗ್ಗೆ ಸೋಮಾರಿತನದಿಂದ ವರ್ತಿಸಬೇಡಿ. ಯಾವುದೇ ಕೆಲಸವನ್ನು ಮುಂದೂಡುವುದು ಈ ಸಮಯದಲ್ಲಿ ನಿಮಗೆ ಸಮಸ್ಯೆ ತರಬಹುದು. ಹಾಗೆ ಎಲ್ಲಾ ಕೆಲಸವನ್ನು ಬುದ್ದಿವಂತಿಕೆಯಿಂದ ಮಾಡಿ ಮುಗಿಸಿ. ಎಲ್ಲಾ ವಿಚಾರಗಳಿಂದ ನಿಮ್ಮಲ್ಲಿ ಹೊಸ ರೀತಿ ಒತ್ತಡ ಇರಲಿದೆ. ನಿಮ್ಮ ಕಲಾತ್ಮಕ ಕೌಶಲ್ಯದಿಂದ ನೀವು ಜನರನ್ನು ಅಚ್ಚರಿಗೊಳಿಸುತ್ತೀರಿ. ನಿಮ್ಮ ಬಹಳ ದಿನಗಳ ಕೆಲಸವೊಂದು ಪೂರ್ಣವಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯ ಸಂಬಂಧ ಚರ್ಚೆ ಇರಲಿದೆ. ವಾಹನ ಖರೀದಿಸುವಂತಹ ನಿಮ್ಮ ಆಸೆಗೆ ಈ ದಿನದಂದು ಬಹಳ ಆಶಾದಾಯಕ ಬೆಳವಣಿಗೆ ನೋಡಬಹುದು.
ಕರ್ಕ ರಾಶಿ
ಇಂದು ನಿಮ್ಮ ಅಗತ್ಯಗಳನ್ನು ಪೂರೈಸುವ ದಿನವಾಗಿರುತ್ತದೆ. ನಿಮ್ಮ ದೊಡ್ಡ ಕೆಲಸಗಳ ಪೂರೈಸಲು ಶ್ರಮ ಹಾಕಬೇಕಾಗುತ್ತದೆ. ಅನಗತ್ಯ ವಿಚಾರವಾಗಿ ಯಾರೊಂದಿಗೂ ನೀವು ಮಾತಿನ ಚಕಮಕಿಯಲ್ಲಿ ತೊಡಗಬೇಡಿ. ಹಾಗೆ ಸಂಬಂಧಿಕರ ಜೊತೆಗೂ ನೀವು ಹಳೆಯ ವಿಚಾರವಾಗಿ ಮತ್ತೆ ಚರ್ಚೆಗೆ ಮುಂದಾಗಬೇಡಿ. ವಿದ್ಯಾರ್ಥಿಗಳ ಜೀವನದಲ್ಲಿ ಬಹುದೊಡ್ಡ ತಿರುವುಗಳು ಸಂಭವಿಸಲಿದೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ಕಷ್ಟಗಳ ನೀವು ಎದುರಿಸಬೇಕಾಗಬಹುದು. ದಾಂಪತ್ಯ ಜೀವನದಲ್ಲಿ ನಿಮ್ಮ ಆಲೋಚನೆಗಳಿಗೆ ಬೆಂಬಲ ಸಿಗಲಿದೆ. ಪತಿ-ಪತ್ನಿ ಇಬ್ಬರೂ ಹಣ ಹೂಡಿಕೆ ಮಾಡಿ ಹೊಸ ಸ್ವಂತ ಉದ್ಯೋಗ ಮಾಡಲು ಮುಂದಾಗುವ ಆಲೋಚನೆ ಮಾಡಬಹುದು.
ಸಿಂಹ ರಾಶಿ
ಇಂದು ಪ್ರೀತಿ ಮತ್ತು ಬೆಂಬಲದ ಭಾವನೆ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಹೊಸ ಕೆಲಸಗಳ ಹುಡುಕುತ್ತಿದ್ದರೆ ಒಳ್ಳೆಯ ಅವಕಾಶ ಸಿಗಲಿದೆ. ಹಣಕಾಸು ವಿಚಾರದಲ್ಲಿ ನಿಮಗೆ ಬಹಳ ಗೌರವದ ಜೊತೆಗೆ ಬೇರೆಯವರಿಗೆ ನೀವು ಸಹಾಯ ಮಾಡುತ್ತೀರಿ. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮನೆಗಾಗಿ ನೀವು ಖರ್ಚು ಮಾಡುತ್ತೀರಿ. ತಾಯಿಯ ಆರೋಗ್ಯ ಸಮಸ್ಯೆಗಳಿಂದಾಗಿ ಹೆಚ್ಚು ಓಡಾಡಬೇಕಾಗುತ್ತದೆ. ನಿಮ್ಮ ಜವಾಬ್ದಾರಿಗಳ ಬಗ್ಗೆ ನೀವು ಹೆಚ್ಚು ಶ್ರಮಿಸಬೇಕು. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಮಕ್ಕಳ ಭವಿಷ್ಯ ಕುರಿತಾದ ಚಿಂತೆ ಹೆಚ್ಚಾಗಬಹುದು. ವ್ಯಾಪಾರಿಗಳು ಈ ಸಮಯದಲ್ಲಿ ಬಹಳ ಲಾಭ ನೋಡಬಹುದು. ಅವರ ಬುದ್ದಿವಂತಿಕೆಯಿಂದ ಲಾಭದ ನಿರೀಕ್ಷೆ ಇದೆ.
ಕನ್ಯಾ ರಾಶಿ
ಇಂದು ನಿಮಗೆ ಒಂದು ಪ್ರಮುಖ ದಿನವಾಗಲಿದೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಸ್ವಲ್ಪ ಕೆಲಸ ಮಾಡುವುದು ಉತ್ತಮ. ಬಹಳ ಸಮಯ ನೀವು ಮನೆಯಿಂದ ಹೊರಗೆ ಕಳೆಬೇಕಾಗಬಹದು, ಅಂದರೆ ಕೆಲಸದ ಕಾರಣಕ್ಕೆ ದೂರ ಪ್ರಯಾಣಕ್ಕೆ ಮುಂದಾಗಬೇಕಾಗಬಹುದು. ಇದರಿಂದ ಆಯಾಸ ಉಂಟಾಗಬಹುದು. ಕಾನೂನು ವಿಚಾರದಲ್ಲಿ ವಕೀಲರೊಬ್ಬರನ್ನು ನೀವು ಭೇಟಿಯಾಗುವ ಸಾಧ್ಯತೆ ಇದೆ. ಸಣ್ಣ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ನೀವು ಹಣ ಉಳಿಸುವ ಸಲುವಾಗಿ ಮಾಡುವ ಕೆಲಸವೊಂದರಿಂದ ಸಮಸ್ಯೆಗೆ ಗುರಿಯಾಗಬಹುದು.
ತುಲಾ ರಾಶಿ
ನಿಮ್ಮ ಈ ದಿನವು ನೆನೆಪಿನಲ್ಲಿ ಉಳಿಯುವ ದಿನವಾಗಲಿದೆ. ಪ್ರೀತಿ ಪಾತ್ರರ ಭೇಟಿಯಿಂದ ನಿಮ್ಮಲ್ಲಿ ಸಂತೋಷ ಇರಲಿದೆ. ಶುಭ ಕಾರ್ಯದಲ್ಲಿ ನೀವು ಭಾಗಿಯಾಗಬಹುದು. ಕುಟುಂಬ ಸದಸ್ಯರ ಮಾತಿನಿಂದ ನಿಮಗೆ ನೋವುಂಟಾಗಬಹುದು. ದೀರ್ಘಗಾಲದ ಅನಾರೋಗ್ಯದಿಂದ ನೀವು ಸಮಸ್ಯೆಗೆ ಒಳಗಾಗಿದ್ದರೆ ಇಂದು
ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನಿಮ್ಮ ಕೆಲವು ವಿಶಿಷ್ಟ ಪ್ರಯತ್ನಗಳು ಫಲ ನೀಡುತ್ತವೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಚಿಂತನಶೀಲವಾಗಿ ಮಾತನಾಡುವುದು ನಿಮಗೆ ಉತ್ತಮ. ಬಹಳ ಸಮಯದಿಂದ ನೀವು ಮುಚ್ಚಿಟ್ಟ ರಹಸ್ಯವೊಂದು ಹೊರಬರಲಿದೆ.
ವೃಶ್ಚಿಕ ರಾಶಿ
ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಜೀವನ ಸಂಗಾತಿಯಿಂದ ನಿಮಗೆ ಸಾಕಷ್ಟು ಬೆಂಬಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮಿಂದಾಗಿ ಸಮಸ್ಯೆ ಮೂಡಬಹುದು ಹೀಗಾಗಿ ಎಚ್ಚರಿಕೆ ಅಗತ್ಯ. ಕೆಲಸದಿಂದ ವಿಶ್ರಾಂತಿ ಪಡೆಯುತ್ತೀರಿ. ಹಾಗೆ ಮನೆಯಲ್ಲಿಯೂ ಧನಾತ್ಮಕ ವಾತಾವರಣ ಕಂಡುಬರಲಿದೆ. ನಿಮ್ಮ ವ್ಯಾಪಾರ ಸಂಬಂಧವಾಗಿ ಯಾವುದೇ ಹೊಸ ಒಪ್ಪಂದ ಮಾಡಲು ಮುಂದಾಗಬೇಡಿ. ಮನೆಗಾಗಿ ನೀವು ಹೊಸ ವಸ್ತುವೊಂದನ್ನು ಖರೀದಿಸಲು ಮುಂದಾಗಬಹುದು. ಇದರಿಂದ ಮನೆಯಲ್ಲಿ ಸಂತೋಷಕ್ಕೆ ಕಾರಣವಾಗಲಿದೆ. ಹಾಗೆ ಮಕ್ಕಳಲ್ಲಿ ಇದು ನೆನಪಿನಲ್ಲಿ ಉಳಿಯುವ ವಸ್ತುವಾಗಲಿದೆ.
ಧನು ರಾಶಿ
ಇಂದು ನೀವು ಕೆಲಸಗಳನ್ನು ಚಿಂತನಶೀಲವಾಗಿ ಮಾಡುವ ದಿನವಾಗಿರುತ್ತದೆ. ಯಾರ ಬಳಿಯೂ ಇಂದು ಹಣ ಕೇಳುವ ಅಥವಾ ನೀಡುವ ಕಾರ್ಯಕ್ಕೆ ಮುಂದಾಗಬೇಡಿ. ಉಚಿತವಾಗಿ ಸಿಗುವ ಯಾವುದೇ ವಸ್ತುವನ್ನು ನೀವಿಂದು ಸೇವಿಸುವುದು ಇಲ್ಲವೆ ಮನೆಗೆ ತರುವುದು ಮಾಡಬೇಡಿ. ವಾಹನ ಸವಾರರು ಎಚ್ಚರಿಕೆ ಅಗತ್ಯ. ನಿಮ್ಮ ಮನೆಯಲ್ಲಿ ಯಾವುದಾದರೂ ಧಾರ್ಮಿಕ ಸಮಾರಂಭವನ್ನು ಆಯೋಜಿಸಿದರೆ ನೀವು ಸಂತೋಷಪಡುತ್ತೀರಿ. ನಿಮ್ಮ ಬಾಕಿ ಇರುವ ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿವಾರಣೆಯಾಗಲಿದೆ.
ಮಕರ ರಾಶಿ
ಇಂದು ಮಕರ ರಾಶಿಯವರಿಗೆ ಬಹಳ ಆರಾಮದಾಯಕ ದಿನ ಎನ್ನಬಹುದು. ನಿಮ್ಮ ನಿತ್ಯದ ದಿನಚರಿಯನ್ನು ಸುಧಾರಿಸುವ ಕಾರ್ಯ ಮಾಡಲಿದ್ದೀರಿ. ಒಂದಿಷ್ಟು ಹಳೆಯ ಕೆಲಸಗಳನ್ನು ಪೂರ್ಣ ಮಾಡುವಿರಿ. ಯಾರಿಂದಾದರು ಹಣಕ್ಕೆ ಬೇಡಿಕೆ ಇಟ್ಟಿದ್ದರೆ ನಿರಾಸೆ ಕಾಡಲಿದೆ. ಹಾಗೆ ಇಂದು ಸಮಾಜಮುಖಿ ಕಾರ್ಯವೊಂದರಲ್ಲಿ ನೀವು ಭಾಗಿಯಾಗುತ್ತೀರಿ. ಇದರಿಂದ ಶಾಂತಿ ನೆಲೆಸುವಂತೆ ಆಗಲಿದೆ. ನಿಮ್ಮ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಮೋಜು ಮಸ್ತಿಯಲ್ಲಿ ತೊಡಗುವಿರಿ. ಬಹಳ ಕಾಲ ಮನೆಯಿಂದ ಹೊರಗೆ ಉಳಿಯಬೇಕಾಗಬಹುದು. ಸಣ್ಣ ವ್ಯಾಪಾರಿಗಳು ಬಹಳ ಲಾಭ ಮಾಡುವ ದಿನವಿದು.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನದಂದು ಹೊಸ ವಸ್ತು ಖರೀದಿಗೆ ಬಹಳ ಒಳ್ಳೆಯ ದಿನ. ನಿಮ್ಮ ವ್ಯಾಪಾರ, ವ್ಯವಹಾರವು ಏರಿಳಿತದಿಂದ ಕೂಡಿರಲಿದೆ. ಕುಟುಂಬದಿಂದ ನಿಮಗೆ ಹಣದ ಕುರಿತಾದ ಒತ್ತಡ ಇರಬಹುದು. ನಿಮ್ಮ ನಿರ್ಧಾರಗಳು ಬೇರೆಯವರಿಗೆ ನೋವುಂಟು ಮಾಡಬಹುದು ಆದ್ರೆ ಅದನ್ನು ಬದಲಾಯಿಸಬೇಡಿ. ಹಾಗೆ ಉಳಿತಾಯ ಮಾಡಿದ ಹಣವನ್ನು ನೀವು ಅಂದುಕೊಂಡ ವಿಚಾರಕ್ಕೆ ಖರ್ಚು ಮಾಡುವುದಿಲ್ಲ. ದೇವಸ್ಥಾನಕ್ಕಾಗಿ ಮುಡಿಪಿಟ್ಟ ವಸ್ತುವೊಂದನ್ನು ಬೇರೆ ಕೆಲಸಕ್ಕೆ ಬಳಸಬೇಡಿ. ನಿಮ್ಮ ಹಿಂದಿನ ಶ್ರಮವೊಂದು ಫಲಿತಾಂಶ ನೀಡುವ ಸಮಯವಿದು. ಚಿನ್ನದ ಮೇಲಿನ ಹೂಡಿಕೆಯಿಂದ ನಿಮಗೆ ಲಾಭ ಸಿಗಬಹುದು.
ಮೀನ ರಾಶಿ
ನಿಮ್ಮ ಈ ದಿನದಲ್ಲಿ ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಬಹುದು. ಹಾಗೆ ನಿಮ್ಮ ಕೆಲಸದಲ್ಲಿ ಸೋಮಾರಿತನ ಪ್ರದರ್ಶಿಸಬೇಡಿ. ಬಹುಮುಖ್ಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯುವುದು ಮುಖ್ಯ. ಯಾರಿಗೂ ಹಣಕಾಸು ನೆರವು ನೋಡುವ ಮಾತು ನೀಡಬೇಡಿ. ಹಾಗೆ ಹಣಕಾಸಿನ ವಿಚಾರವಾಗಿ ನಿರ್ಲಕ್ಷ್ಯದ ನಿರ್ಧಾರ ತೆಗೆದುಕೊಳ್ಳಬೇಡಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿದ್ದರೆ ಇಂದು ನಿವಾರಣೆ ಆಗಲಿದೆ. ನಿಮ್ಮ ಉಳಿತಾಯ ಮಾಡುವ ಮನೋಭಾವ ಹೆಚ್ಚಾಗಲಿದೆ. ನಿಮ್ಮ ಆಪ್ತರೊಬ್ಬರು ನಿಮ್ಮ ಕುರಿತಾಗಿ ಬೇಸರ ಹೊರಹಾಕಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











