Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಏಪ್ರಿಲ್ 13-20ರವರೆಗಿನ ಹಿಂದೂ ಪಂಚಾಂಗ: ಮೇಷ ಸಂಕ್ರಾಂತಿ, ರಾಮನವಮಿ ಸೇರಿ ಈ ವಾರದಲ್ಲಿ ಇರುವ ಧಾರ್ಮಿಕ ವಿಶೇಷತೆಗಳು
ಏಪ್ರಿಲ್ 13ರಿಂದ 20 ಧಾರ್ಮಿಕ ದೃಷ್ಟಿಯಿಂದ ತುಂಬಾನೇ ವುಶೇಷವಾದ ವಾರವಾಗಿದೆ. ಈ ವಾರ ಮೇಷ ಸಂಕ್ರಾಂತಿಯಿದೆ, ಶುಕ್ರ ನಕ್ಷತ್ರ ಬದಲಾವಣೆಯಿದೆ, ರಾಮ ನವಮಿಯಿದೆ ಹೀಗೆ ಹಲವು ಧಾರ್ಮಿಕ ಕಾರಣಗಳಿಂದ ವಿಶೇಷವಾಗಿದೆ.
ಈ ವಾರ ಧಾರ್ಮಿಕ ಆಚರಣೆಗಳ ಕಾರಣದಿಂದಾಗಿ ಹಬ್ಬದ ವಾತಾವರಣ ಸೃಷ್ಟಿಸಲಿದೆ.

ಈ ವಾರದಲ್ಲಿ ಶುಭ ಕಾರ್ಯಗಳಿಗೆ ಈ ದಿನಾಂಕಗಳು ಶುಭವಾಗಿದೆ
ವಿವಾಹ ಮುಹೂರ್ತ: ಏಪ್ರಿಲ್ 17 ಮಧ್ಯರಾತ್ರಿ 12:44ರಿಂದ ಏಪ್ರಿಲ್ 18, ಗುರುವಾರ ಬೆಳಗ್ಗೆ 05:51ರೊಳಗೆ ಮದುವೆಗೆ ಶುಭಮುಹೂರ್ತವಿದೆ. ಇದಾದ ಬಳಿಕ ಯಾವುದೇ ಶುಭ ಮುಹೂರ್ತವಿಲ್ಲ.
ಇನ್ನು ಈ ವಾರ ಗೃಹ ಪ್ರವೇಶ, ಮನೆ ಬದಲಾವಣೆಗೆ ಯಾವುದೇ ಶುಭ ದಿನಾಂಕಗಳಿಲ್ಲ.
ಈ ವಾರ ವಾಹನ ಖರೀದಿಸುವುದಾದರೆ ಏಪ್ರಿಲ್ 13 ಬೆಳಗ್ಗೆ 05:58ರೊಳಗೆ ಅಥವಾ ಏಪ್ರಿಲ್ 15ಕ್ಕೆ ಶುಭ ಸಮಯವಿದೆ.
ಈ ಗ್ರಹಗಳ ರಾಶಿ ಹಾಗೂ ನಕ್ಷತ್ರ ಬದಲಾವಣೆಯಿದೆ
ಏಪ್ರಿಲ್ 13ಕ್ಕೆ ಮೇಷ ಸಂಕ್ರಾಂತಿ: ಸೂರ್ಯನು ಹಿಂದೂ ಮೊದಲ ಮಾಸ ಮೇಷ ರಾಶಿಗೆ ಸಂಚರಿಸಲಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಮೇಷ ಮೊದಲ ತಿಂಗಳಾಗಿದ್ದು ಯುಗಾದಿಯಂದ ಅಥವಾ ಈ ದಿನದಂದು ಹೊಸ ವರ್ಷ ಎಂದು ಪರಿಗಣಿಸಲಾಗುವುದು. ಸೂರ್ಯ ಪ್ರತಿ ತಿಂಗಳು ರಾಶಿ ಬದಲಾಯಿಸುತ್ತಾನೆ. ಮೇಷ ರಾಶಿಯಲ್ಲಿ 30 ದಿನವಿದ್ದು ನಂತರ ವೃಷಭ ರಾಶಿಗೆ ಹೋಗಲಿದೆ. ಸೂರ್ಯ ರಾಶಿ ಬದಲಾವಣೆ ಮಾಡಿದಂತೆ ಇದರ ಪ್ರಭಾವ ಭಿನ್ನವಾಗಿರುತ್ತದೆ.
ಶುಕ್ರ ಹಾಗೂ ಗುರು ಗ್ರಹಗಳ ನಕ್ಷತ್ರ ಬದಲಾವಣೆ
ಶುಕ್ರ ರೇವತಿ ನಕ್ಷತ್ರಕ್ಕೆ ಏಪ್ರಿಲ್ 13ರಂದು ಸಂಚರಿಸಲಿದೆ
ಗುರು ಕೃತಿಕಾ ನಕ್ಷತ್ರಕ್ಕೆ ಏಪ್ರಿಲ್ 17ರಂದು ಸಂಚರಿಸಲಿದೆ.
ಶುಕ್ರ ಮತ್ತು ಗುರುವಿನ ನಕ್ಷತ್ರ ಬದಲಾವಣೆ ಕೂಡ ವೈದಿಕ ಶಾಸ್ತ್ರದ ದೃಷ್ಟಿಯಿಂದ ಪ್ರಮುಖವಾಗಿದೆ.
ಈ ವಾರದಲ್ಲಿ ಬರುವ ಹಬ್ಬಗಳು
ಪ್ರಮುಖ ಹಬ್ಬಗಳೆಂದರೆ ರಾಮ ನವಮಿ ಹಾಗೂ ವಿಷು
ಏಪ್ರಿಲ್ 14ರಂದು ವಿಷು: ಈ ವರ್ಷ ಏಪ್ರಿಲ್ 14ರಂದು ವಿಷು ಆಚರಿಸಲಾಗುವುದು, ದಕ್ಷಿಣ ಕನ್ನಡ ಹಾಗೂ ಕೇರಳದಲ್ಲಿ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುವುದು.ಈ ಹಬ್ಬದಂದು ಶ್ರೀ ಕೃಷ್ಣನನ್ನು ಆರಾಧಿಸಲಾಗುವುದು. ಈ ದಿನದಂದು ವಿಷು ಕಣಿ ತುಂಬಾನೇ ವಿಶೇಷವಾಗಿದೆ. ಬೆಳಗ್ಗೆ ಎದ್ದು ವಿಷುಕಣಿ ಕಂಡರೆ ವರ್ಷವಿಡೀ ಉತ್ತಮವಾಗಿರುತ್ತದೆ ಎಂಬ ನಂಬಿಕೆ.
ಏಪ್ರಿಲ್ 17 ರಾಮ ನವಮಿ
ಶ್ರೀರಾಮನನ್ನು ವಿಷ್ಣುವಿನ 7ನೇ ಅವತಾರ ಎಂದು ಹೇಳಲಾಗುವುದು. ಶ್ರೀ ರಾಮ ಚಂದ್ರ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುವುದು. ರಾಮನು ಭೂಲೋಕದಲ್ಲಿ ರಾಜ ದಶರಥ ಮತ್ತು ರಾಣಿ ಕೌಶಲ್ಯೆಯ ಮಗನಾಗಿ ಅಯೋಧ್ಯೆಯಲ್ಲಿ ಜನಿಸಿದನು.
ರಾಮ ನವಮಿಯು ಹಿಂದೂಗಳಿಗೆ ಹೆಚ್ಚು ಪವಿತ್ರವಾಗಿದ್ದು, ಈ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ರಾಮ ನವಮಿ ಆಚರಣೆ ಬೆಳಗ್ಗಿನಿಂದ ಆರಂಭವಾಗಿ ಮರುದಿನ ಬೆಳಗ್ಗಿನ ತನಕ ಇರುತ್ತದೆ. ಈ ದಿನ ರಾಮಾಯಣ ಪಠಿಸುತ್ತಾ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಂತನನ್ನು ಪೂಜಿಸಲಾಗುವುದು. ಈ ವರ್ಷ ರಾಮನವಮಿ ಸಡಗರ ಎಲ್ಲಾ ವರ್ಷಕ್ಕಿಂತ ಹೆಚ್ಚಾಗಿದೆ, ಏಕೆಂದರೆ ಈ ದಿನ ರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮನ ಗುಡಿ ತೆರೆದಿದೆ. ಈ ದಿನ ಅಯೋಧ್ಯೆ ತಳಿರು, ತೋರಣ, ರಂಗೋಲಿಯಿಂದ ಸಿಂಗಾರಗೊಳ್ಳಲಿದೆ.
ರಾಮ ನವಮಿಯಂದು ಉಪವಾಸವಿದ್ದು ಈ ದಿನವನ್ನು ಆಚರಿಸಲಾಗುವುದು. ಈ ದಿನ ಪಾನಕ ತಯಾರಿಸಿ ಸವಿಯಲಾಗುವುದು, ಪಾದ ಯಾತ್ರೆ ಮಾಡುವವರಿಗೆ ಹಂಚಲಾಗುವುದು.
ಶ್ರೀ ಕೃಷ್ಣ, ಶ್ರೀರಾಮ ಎಲ್ಲವೂ ಶ್ರೀ ವಿಷ್ಣುವಿನ ಅವತಾರವಾಗಿದ್ದು ಈ ವಾರ ಶ್ರೀ ವಿಷ್ಣುವಿನ ವಾರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











