ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದಂದು ಜನಿಸಿದವರು ಪ್ರತಿಭಾವಂತರಂತೆ! ಯಾವ ದಿನಗಳು ನೋಡಿ..!

ಒಬ್ಬ ವ್ಯಕ್ತಿ ತಾನು ಜನಿಸಿದ ಕಾಲ, ಸಮಯ, ದಿನಾಂಕದ ಆಧಾರದ ಮೇಲೆ ಆತನ ಇಡೀ ಜೀವನದ ಆಗು ಹೋಗುಗಳ ಗುರುತಿಸಬಹುದು. ಅಲ್ಲದೆ ಆತನ ಗುಣ, ಸ್ವಭಾವವನ್ನೂ ಅಳೆಯಬಹುದು. ಏಕೆಂದರೆ ನಮ್ಮ ಜನ್ಮ ದಿನಾಂಕದಿಂದಾಗಿಯೇ ಕುಂಡಲಿ ಹಾಗೂ ಜಾತಕ ನಿರ್ಧಾರವಾಗುತ್ತದೆ. ಅಲ್ಲಿ ಗಳಿಗೆ, ಕಾಳಮಾನ, ಗೋತ್ರ ಇತ್ಯಾದಿ ನಿರ್ಧಾರವಾಗುತ್ತದೆ.

ಹೀಗಾಗಿ ಒಬ್ಬ ವ್ಯಕ್ತಿ ಜನಿಸಿದ ತಕ್ಷಣವೇ ಆ ಸಮಯವನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ ನಿಮ್ಮ ಹುಟ್ಟಿದ ದಿನಾಂಕದಿಂದಾಗಿಯೇ ನಿಮ್ಮ ವ್ಯಕ್ತಿತ್ವ ಅಳೆಯಬಹುದು. ಅಲ್ಲದೆ ನಿಮ್ಮ ಗುಣಗಳೇನು? ನೀವ ಯಾವ ರೀತಿಯ ವ್ಯಕ್ತಿತ್ವ ಹೊಂದಿದ್ದೀರಿ ಎಂಬುದನ್ನು ಸಹ ಪತ್ತೆ ಮಾಡಬಹುದು. ಆದರೆ ನಾವಿಂದು ಯಾವ ದಿನಾಂಕದಲ್ಲಿ ಹುಟ್ಟಿದವರು ತುಂಬಾ ಪ್ರತಿಭಾವಂತರಾಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

According To Numerology Those Born On This Date Are Geniuses

ಪ್ರತಿ ವ್ಯಕ್ತಿಯ ಜನ್ಮದಿನವನ್ನು ಒಟ್ಟುಗೂಡಿಸಿ ಅನುಗುಣವಾದ ಸಂಖ್ಯೆಗಳನ್ನು ಕಂಡುಹಿಡಿಯಲಾಗುತ್ತದೆ. ಉದಾಹರಣೆಗೆ, ಒಬ್ಬರ ಜನ್ಮದಿನವು 25 ಎಂದು ಭಾವಿಸೋಣ. ಅವರ ಜನ್ಮದಿನಗಳ ಮೊತ್ತ 7 ಆಗಿರಲಿದೆ. ಹೇಗೆಂದರೆ 2+5=7 ಎಂಬುದಾಗಿ ಲೆಕ್ಕ ಹಾಕಲಾಗುತ್ತದೆ.

(ಸಂಖ್ಯೆ 4) 4, 13, 22, 31 ರಂದು ಜನಿಸಿದ ಜನರನ್ನು ಅತ್ಯಂತ ಪ್ರತಿಭಾವಂತರೆಂದು ಪರಿಗಣಿಸಲಾಗುತ್ತದೆ. ಅವರು ತಾವು ಕೆಲಸ ಮಾಡುವ ಕಡೆ ಅತ್ಯುತ್ತಮ ಸ್ಥಾನ ಪಡೆಯುವ ಸಾಧ್ಯತೆ ಇರುತ್ತದೆ. ಜೊತೆಗೆ ಆ ಸಂಸ್ಥೆಯ ಕೀರ್ತಿ ಮತ್ತಷ್ಟು ಹೆಚ್ಚಾಗಲು ಅವರ ಕೊಡುಗೆಯೂ ಇರಲಿದೆ. ಅಂದರೆ ಅವರು ಯಾವುದೇ ಕೆಲಸ ಮಾಡುತ್ತಿದ್ದರು ಅವರೊಂದು ಆಸ್ತಿಯಾಗುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದವರು ಗುರಿಯನ್ನು ಹೊಂದಿಸಿದರೆ ಅದನ್ನು ಸಾಧಿಸಲು ಶ್ರಮಿಸುತ್ತಾರೆ. ಅವರು ಯಾವುದೇ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸುತ್ತಾರೆ. ಆದರೆ ಕಠಿಣ ಪರಿಶ್ರಮದಿಂದ ಅವರು ಅದನ್ನು ನಿಭಾಯಿಸುತ್ತಾರೆ.

(ಸಂಖ್ಯೆ 5) 5, 14, 23 ರಂದು ಜನಿಸಿದ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ತಮ್ಮ ಗುರಿಗಳನ್ನು ಸಾಧಿಸುತ್ತಾರೆ. ಅವರು ಬಹುಕಾರ್ಯಕ ಪ್ರವೃತ್ತಿಯನ್ನು ಹೊಂದಿದ್ದಾರೆ. ಬಹು ಕಾರ್ಯವನ್ನು ಉತ್ಸಾಹದಿಂದ ಮತ್ತು ಪರಿಣಾಮಕಾರಿಯಾಗಿ ಮಾಡುವುದರಿಂದ ಅವರು ಎಲ್ಲರಿಗೂ ಅಚ್ಚುಮೆಚ್ಚಾಗಿರುತ್ತಾರೆ. ಇವರಲ್ಲಿ ಬಡ್ತಿ, ವೇತನ ಹೆಚ್ಚಳ ಇತ್ಯಾದಿ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಇವರು ಆರ್ಥಿಕವಾಗಿಯೂ ಬಲಶಾಲಿಗಳಾಗಿರುತ್ತಾರೆ. ಜೊತೆಗೆ ಯಾವಾಗಲೂ ಕೆಲಸದ ಕಡೆಗೆ ಅವರ ಗಮನವಿರುತ್ತದೆ. ಹೀಗಾಗಿ ಪ್ರತಿಭಾವಂತರು ಎಂದು ಗುರುತಿಸಿಕೊಳ್ಳುತ್ತಾರೆ.

(ಸಂಖ್ಯೆ 6) 6, 15, 24 ರಂದು ಜನಿಸಿದವರು ಜವಾಬ್ದಾರಿ ಮತ್ತು ಶ್ರದ್ಧೆಯುಳ್ಳವರು. ಅವರು ಸ್ವಾಭಾವಿಕವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಅವರು ಇತರರಿಗೆ ಸಹಾಯ ಮಾಡುವಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಕೆಲಸದ ವಿಚಾರದಲ್ಲಿ ಅವರು ರಾಜಿಯಾಗದೆ ಕಷ್ಟಪಟ್ಟು ದುಡಿಯುವವರು, ಯಾವಾಗಲು ಲಾಭದ ದೃಷ್ಟಿಯಿಲ್ಲದೆ ಸಹಾಯದ ದೃಷ್ಟಿಯಿಂದಲೂ ಆ ಕೆಲಸವನ್ನು ನೋಡುವವರು. ಈ ದಿನಾಂಕಗಳಲ್ಲಿ ಜನಿಸಿದ ಜನರು ಇತರರಿಗೆ ಸಹಾಯ ಮಾಡುವಲ್ಲಿ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ.

(ಸಂಖ್ಯೆ 8) 8,17,26 ರಂದು ಜನಿಸಿದವರು ಬಹಳ ಮುಂದಾಲೋಚನೆ ಹೊಂದಿರುತ್ತಾರೆ. ಗುರಿ ಸಾಧಿಸಲು ಶ್ರಮಿಸುವಿರಿ. ಯಾವುದೇ ಕೆಲಸವನ್ನು ಯಶಸ್ವಿಗೊಳಿಸಲು ಸಂಕಲ್ಪದಿಂದ ಮಾಡುತ್ತಿರುತ್ತಾರೆ. ಇವರಲ್ಲಿ ಹೆಚ್ಚು ಆತ್ಮವಿಶ್ವಾಸ, ಹೆಚ್ಚು ಮನೋಬಲದ ಕಾರಣದಿಂದಾಗಿ ಎಂತಹ ಕೆಲಸವನ್ನಾದರು ಒಪ್ಪಿಕೊಳ್ಳುತ್ತಾರೆ. ಜೊತೆಗೆ ಎಷ್ಟೇ ಸವಾಲುಗಳಿದ್ದರು ಅದನ್ನು ಎದುರಿಸಿ ಆ ಕೆಲಸ ಪೂರೈಸುವ ಮನೋಬಲ ಹೊಂದಿದವರಾಗಿರುತ್ತಾರೆ. ಇವರಲ್ಲಿ ಹೆಚ್ಚಿನವರು ಎಲ್ಲಾ ಕಡೆಗಳಲ್ಲಿ ತಮ್ಮ ಕೆಲಸದಿಂದ ಗುರುತಿಸಿಕೊಂಡಿರುತ್ತಾರೆ. ಅವರ ಹೆಸರಿಗಿಂತಲು ಅವರ ಕೆಲಸದಿಂದ ಜನರು ಅವರನ್ನು ಗುರುತಿಸುವುದು ನೋಡಬಹುದು. ಇದು ಅವರ ಪ್ರತಿಭೆಯಿಂದ ಮಾತ್ರ ಸಾಧ್ಯವಾಗಿರುತ್ತದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

According To Numerology Those Born On This Date Are Geniuses

What are your qualities? You can also find out what kind of personality you have. But let's find out which date people born are very talented.
Story first published: Monday, July 1, 2024, 16:00 [IST]
X
Desktop Bottom Promotion