Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವರ್ಷದ ಮೊದಲ ಶನಿ ತ್ರಯೋದಶಿ: ಪ್ರದೋಷ(ಸಂಜೆ) ಸಮಯದಲ್ಲಿ ಈ ಪರಿಹಾರ ಮಾಡಿದರೆ ಕಷ್ಟಗಳು ದೂರಾಗುವುದು
ವರ್ಷದ ಮೊದಲ ಶನಿ ತ್ರಯೋದಶಿ ಈ ದಿನ(ಜನವರಿ 11ಕ್ಕೆ ಬಂದಿದೆ). ಶನಿವಾರ ಶನಿದೇವನ ಆರಾಧನೆಗೆ ಮೀಸಲಾದ ದಿನ, ಇದೇ ದಿನದಂದು ಪ್ರದೋಷ ವ್ರತ ಕೂಡ ಬಂದರೆ ಆ ದಿನವನ್ನು ಶನಿ ತ್ರಯೋದಶಿಯೆಂದು ಆಚರಿಸಲಾಗುವುದು, ಶನಿಯ ದೋಷಗಳಿದ್ದರೆ ಅದರ ನಿವಾರಣೆ ಈ ದಿನ ಅತ್ಯಂತ ಶ್ರೇಷ್ಠವಾಗಿದೆ.
ಈ ದಿನ ಶನಿ ತ್ರಯೋದಶಿ ಆಚರಣೆ ಮಾಡುವುದರಿಂದ ಶನಿದೋಷವಿದ್ದರೆ ಅದು ಕಡಿಮೆಯಾಗಲಿದೆ, ಶನಿ ದೋಷಕ್ಕೆ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಹಾಗಾಗಿ ಶನಿಸಾಡೇಸಾತಿ ನಡೆಯುತ್ತಿರುವವರೆಗೆ ಈ ದಿನ ದಿನ ಅತ್ಯಂತ ಮುಖ್ಯವಾಗಿದೆ, ಶನಿತ್ರಯೋದಶಿಯಂದು ಪ್ರದೋಷ ಕಾಲದಲ್ಲಿ ಮಾಡುವ ಪೂಜೆ ತುಂಬಾನೇ ವಿಶೇಷವಾಗಿದೆ, ಇದರ ಬಗ್ಗೆ ಮತ್ತಷ್ಟು ಮಾಹಿತಿ ನೋಡೋಣ:

ಈ ಶನಿ ತ್ರಯೋದಶಿ ದಿನ ಏನು ಮಾಡಬೇಕು?
ಶನಿ ತ್ರಯೋದಶಿಯಂದು ಉಪವಾಸವಿದ್ದು ದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆಯಲ್ಲಿ ನಮ್ಮ ಮುಖವನ್ನು ನೋಡಿ ದೇವಾಲಯಕ್ಕೆ ಅರ್ಪಿಸಿ ಬರಬೇಕು, ಹೀಗೆ ಮಾಡುವುದರಿಂದ ಶನಿದೋಷವಿರುವುದು ಕಡಿಮೆಯಾಗುತ್ತದೆ.
ಈ ದಿನ ಮಾಡುವ ದಾನಕ್ಕೆ ಮಹತ್ವವಿದೆ
ಶನಿ ತ್ರಯೋದಶಿಯಂದು ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ, ಈ ದಿನ ಕಪ್ಪು ಕಂಬಳಿ, ವಸ್ತ್ರಗಳು, ಕಪ್ಪು ಎಳ್ಳು ಇವುಗಳನ್ನು ದಾನ ಮಾಡಿ. ಈ ರೀತಿ ಮಾಡುವ ದಾನದಿಂದ ನಿಮ್ಮ ಕಷ್ಟಗಳು ಕಡಿಮೆಯಾಗುವುದು. ಶನಿಯ ತನ್ನ ಕಠಿಣ ದೃಷ್ಟಿ ಬೀರುವುದಿಲ್ಲ, ಹೀಗಾಗಿ ಶನಿ ದೋಷ ನೀಡುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.
ಪ್ರದೋಷ ಸಮಯದಲ್ಲ ಶಿವಲಿಂಗಕ್ಕೆ ಅಭಿಷೇಕ ಮಾಡಿ
ಪ್ರದೋಷ ಸಮಯದಲ್ಲಿ ಶಿವ ಪೂಜೆಯನ್ನು ಮಾಡಬೇಕು, ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಕಷ್ಟಗಳ ನಿವಾರಣೆಗೆ ತುಂಬಾನೇಸಹಕಾರಿಯಾಗಿದೆ. ರುದ್ರಾಭಿಷೇಕ ಮಾಡಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೇವೆ, ಶಿವನ ಕೃಪೆಯಿಂದ ಕಷ್ಟಗಳ ನಿವಾರಣೆಯಾಗಲಿದೆ, ಶನಿದೋಷದಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು.
ಶನಿಸಾಡೇಸಾತಿ ಅತ್ಯಂತ ಕಠಿಣದ ಸಮಯ ಏಕೆ?
ಧಾರ್ಮಿಕ ನಂಬಿಕೆ ಪ್ರಕಾರ ಒಬ್ಬ ಮನುಷ್ಯನ ಜೀವನದಲ್ಲಿ ಅತ್ಯಂತ ಕಷ್ಟದ ಸಮಯವೆಂದರೆ ಶನಿಸಾಡೇಸಾತಿ ಸಮಯ. ಶನಿ ಸಾಡೇಸಾತಿ ಅವಧಿ ಅಂದರೆ ಏಳೂವರೆ ವರ್ಷ. ಈ ಸಮಯದಲ್ಲಿ ಅವನು ತುಂಬಾನೇ ಕಷ್ಟ ಅನುಭವಿಸುತ್ತಾನೆ, ಅವಮಾನಗಳು, ಸೋಲು, ಆರ್ಥಿಕ ನಷ್ಟ, ವೃತ್ತಿ ಬದುಕಿನಲ್ಲಿ ಏರಳಿತ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಈ ಶನಿಸಾಡೇಸಾತಿ ತಮ್ಮ ರಾಶಿಯಲ್ಲಿರುವವರು ಶನಿಗೆ ಸಂಬಂಧಿಸಿದ ಪೂಜೆ ಮಾಡಿದರೆ ಶನಿ ದೋಷ ಕಡಿಮೆಯಾಗುವುದು, ಶನಿ ಸಾಡೇಸಾತಿಗೆ ಶನಿತ್ರಯೋದಶಿಯಂದ ಮಾಡುವ ಪೂಜೆ ಅತ್ಯಂತ ಮಹತ್ವದ್ದಾಗಿದೆ.
ಶನಿ ಮಂತ್ರ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
' ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
