Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಯುಗಾದಿ ಭವಿಷ್ಯ 2024: ಈ ಸಂವತ್ಸರದಲ್ಲಿ ಕುಂಭ ರಾಶಿಯವರ ರಾಶಿಫಲ ಹೇಗಿದೆ?
ಕುಂಭ ರಾಶಿಯವರಲ್ಲಿ ಶನಿ ಸಂಚಾರವಾಗಿದೆ, ರಾಹು ಮನೆಯಲ್ಲಿದೆ, ಕೇತು ಗ್ರಹವು 8ನೇ ಮನೆಯಲ್ಲಿದೆ. ಮೇ 1ರಿಂದ ಗುರುವು 4ನೇ ಮನೆಯಲ್ಲಿ ಇರಲಿದೆ. ಈ ವರ್ಷ ಪೂರ್ತಿ ಈ ಗ್ರಹಗಳ ಸ್ಥಾನ ಕುಂಭ ರಾಶಿಯಲ್ಲಿ ಹೀಗೆಯೇ ಇರಲಿದ್ದು ಈ ಗ್ರಹಗಳು ಕುಂಭ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ಯುಗಾದಿ ಭವಿಷ್ಯದಲ್ಲಿ ನೋಡೋಣ ಬನ್ನಿ:

ವ್ಯಾಪಾರ ಭವಿಷ್ಯ
ವ್ಯವ್ಹಾರದಲ್ಲಿ ಜಾಗ್ರತೆವಹಿಸಿ. ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ ಪಾಲುದಾರರ ಜೊತೆಗೆ ತಪ್ಪುಗ್ರಹಿಕೆ ಉಂಟಾಗದಂತೆ ಜಾಗ್ರತೆವಹಿಸಿ. ವ್ಯಾಪಾರದಲ್ಲಿ ಒತ್ತಡ ಇರಲಿದೆ. ನೀವು ಬಯಸಿದಂತೆ ಲಾಭ ಗಳಿಸಲು ಸಾಧ್ಯವಾಗಲ್ಲ. ಇದರಿಂದ ನಿಮಗೆ ತುಂಬಾನೇ ನಿರಾಸೆಯಾಗಬಹುದು. ಪಾಲುದಾರಿಕೆಯ ವ್ಯವಹಾರದಲ್ಲಿ ನಷ್ಟಕ್ಕೆ ನಿಮ್ಮನ್ನು ಹಿಣೆ ಮಾಡಬಹುದು, ಹಾಗಾಗಿ ಜಾಗ್ರತೆವಹಿಸಿ. ಲಾಭ, ನಷ್ಟದ ಪರಿಸ್ಥಿತಿ ಇರುತ್ತದೆ. ಯಾವುದೇ ಹೊಸ ವ್ಯವಹಾರ ಮಾಡುವಾಗ ಅದರ ಬಗ್ಗೆ ಚೆನ್ನಾಗಿ ವಿಚಾರಿಸಿ ಮಾಡಬೇಕು, ಇಲ್ಲದಿದ್ದರೆ ಹಣ ನಷ್ಟವಾಗುವ ಸಾಧ್ಯತೆ ಇದೆ.
ಉದ್ಯೋಗ ಭವಿಷ್ಯ
ಉದ್ಯೋಗಿಗಳಿಗೆ ಮಿಶ್ರಫಲಿತಾಂಶ. ನಿಮ್ಮ ಕೆಲಸದಲ್ಲಿ ಬದಲಾವಣೆಗಳ ಸಾಧ್ಯತೆಗಳಿವೆ. ಈ ಅವಧಿ ಕೆಲಸದ ಒತ್ತಡ ಅಧಿಕವಿದ್ದು ಕೆಲಸ ಬದಲಾಯಿಸಲು ಯೋಚಿಸಬಹುದು. ನೀವು ತುಂಬಾನೇ ಕಷ್ಟಪಟ್ಟು ದುಡಿದರೂ ನಿರೀಕ್ಷೆಯಂತೆ ಲಾಭ ಅಥವಾ ಯಶಸ್ಸು ಸಿಗುವುದು ಕಷ್ಟವಾಗುವುದು. ಇದರಿಂದ ಮಾನಸಿಕ ಒತ್ತಡ ಅಧಿಕವಾಗಲಿದೆ. ನೀವು ಕೆಲಸ ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನ ತೀವ್ರಗೊಳಿಸಿ, ಆದರೆ ಒಂದು ಕೆಲಸ ಭದ್ರವಾಗುವವರೆಗೆ ಇರುವ ಕೆಲಸ ಬಿಡಬೇಡಿ. ತರಾತುರಿಯಿಂದ ಬಿಟ್ಟರೆ ಸಮಸ್ಯೆ ಎದುರಿಸಬೇಕಾಗಬಹುದು.
ಆರ್ಥಿಕ ಭವಿಷ್ಯ
ಏಪ್ರಿಲ್ ಮಾಸದಲ್ಲಿ ಅನುಕೂಲಕರ, ನಂತರ ಮೇ.1 ಗುರುವಿನ ಸಾಗಣೆಯು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ, ಗುರುವು ನಾಲ್ಕನೇ ಮನೆಗೆ ಸಾಗುವುದರಿಂದ, ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನದ ಕಾಯ್ದುಕೊಳ್ಖುವುದು ಕಷ್ಟವಾಗುವುದು. ಈ ಅವಧಿಯಲ್ಲಿ ಅನಗ್ಯತ ಖರ್ಚು ಕಡಿಮೆ ಮಾಡಲು ಸಲಹೆ ನೀಡಲಾಗುವುದು. ಹಣವನ್ನು ನೋಡಿಕೊಂಡು ಖರ್ಚು ಮಾಡಬೇಕು, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಎದುರಾಗುವುದು. ನೀವು ಆದಾಯ ಹಾಗೂ ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು.
ಎರಡನೇ ಮನೆಯಲ್ಲಿ ರಾಹು ಇರುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಏರುಪೇರುಗಳಿರಬಹುದು. ಆದಷ್ಟು ಹಣವನ್ನು ನೋಡಿಕೊಂಡು ಖರ್ಚು ಮಾಡಿ, ಇಲ್ಲದಿದ್ದರೆ ಸಮಸ್ಯೆ ಎದುರಾಗುವುದು. ಹೀಗಾಗಿ ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ನಿಮಗೆ ಮಿಶ್ರಫಲ.
ಕುಟುಂಬ ಜೀವನ
ಈ ವರ್ಷದ ಮೊದಲ ನಾಲ್ಕು ತಿಂಗಳುಗಳು ಕುಟುಂಬದ ವಿಷಯಗಳಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧ ಚೆನ್ನಾಗಿರಲಿದೆ, ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ಮೇ ನಂತರ ನಿಮ್ಮ ಕುಟುಂಬದ ಪರಿಸ್ಥಿತಿಗಳಲ್ಲಿ ಬದಲಾವಣೆಗಳಾಗುತ್ತವೆ. ಕೆಲಸ, ವ್ಯಾಪಾರ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ನೀವು ಮನೆಯಿಂದ ದೂರ ಉಳಿಯಬೇಕಾಗಬಹುದು.
ಆರೋಗ್ಯ ಭವಿಷ್ಯ
ಈ ವರ್ಷ ನಿಮಗೆ ಮಿಶ್ರಫಲಿತಾಂಶ. ನೀವು ಆಹಾರಕ್ರಮದ ಕಡೆಗೆ ಗಮನಹರಿಸಬೇಕು. ಶನಿ ಹಾಗೂ ಗುರುವಿನ ಸಂಚಾರ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು. ನೀವು ಆಹಾರಕ್ರಮದ ಕಡೆಗೆ ಗಮನಹರಿಸಿ. ನಿಯಮಿತ ವ್ಯಾಯಾಮ ಮಾಡಿ. ಹೀಗೆ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು, ಆರೋಗ್ಯ ಸಮಸ್ಯೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ.
ವಿದ್ಯಾರ್ಥಿಗಳ ಭವಿಷ್ಯ
ವಿದ್ಯಾರ್ಥಿಗಳಿಗೆ ಮಿಶ್ರಫಲಿತಾಂಶ. ವಿದ್ಯಾರ್ಥಿಗಳಲ್ಲಿ ಸೋಮಾರಿತನ ಕಾಡುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಯತ್ನಿಸುವವರಿಗೆ ಈ ವರ್ಷ ಅನುಕೂಲಕರವಾಗಿದೆ. ನೀವು ನಿಮ್ಮ ಗುರಿಯತ್ತ ಗಮನಹರಿಸಿದರೆ ಯಶಸ್ಸು ಸಿಗಲಿದೆ.
ಈ ಯುಗಾದಿ ಭವಿಷ್ಯವನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳಿದ್ದು ಇದುವೇ ನಿಖರ ಎಂದು ಹೇಳುತ್ತಿಲ್ಲ. ಜ್ಯೋತಿಷ್ಯ ಎಂಬುವುದು ಭವಿಷ್ಯದ ಬಗ್ಗೆ ಊಹೆ ಮಾಡುವುದು ಅಷ್ಟೇ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











