Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
100 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನದಂದು ಗಜಕೇಸರಿ ಯೋಗ: ಈ 3 ರಾಶಿಯವರು ಸಂಪತ್ತು ಹೆಚ್ಚಲಿದೆ
ವೈಶಾಖ ಮಾಸದ 3ನೇ ದಿನ ಅಕ್ಷಯ ತೃತೀಯ, ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗಿದೆ. ಈ ವರ್ಷ ಇನ್ನೂ ವಿಶೇಷವಾಗಿದೆ, ಏಕೆಂದರೆ ಅಕ್ಷಯ ತೃತೀಯದಂದು ಗಜಕೇಸರಿ ಯೋಗವಿದೆ. 100 ವರ್ಷದ ಬಳಿಕ ಇಂಥದ್ದೊಂದು ರಾಜಯೋಗ ಅಕ್ಷಯ ತೃತೀಯ ಶುಭ ದಿನದಂದೇ ಬಂದಿದೆ.
ವೈದಿಕ ಜ್ಯೋತಿಷ್ಯದಲ್ಲಿ ಗಜಕೇಸರಿ ಯೋಗವನ್ನು ಅತ್ಯಂತ ಶುಭ ಯೋಗವೆಂದು ಪರಿಗಣಿಸಲಾಗಿದೆ. ಏಕೆಂದರೆ ಗುರು ಮತ್ತು ಚಂದ್ರನ ಸಂಯೋಗವಾಗಿದೆ. ಈ ಗಜಕೇಸರಿ ಯೋಗದಿಂದಾಗಿ ಈ ರಾಶಿಯವರು ತಮ್ಮ ಸಂಪತ್ತು ವೃದ್ಧಿಯಾಗುವುದನ್ನು ನೋಡಬಹುದು:

ಮೇಷ ರಾಶಿ
ಮೇಷ ರಾಶಿಯವರಿಗೆ ಗಜಕೇಸರಯೋಗವಿದೆ. ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಪಡೆಯುತ್ತೀರಿ. ಉದ್ಯೋಗಗಳು ಸಂಬಳ ಬಡ್ತಿ ಪಡೆಯುವಿರಿ, ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲು ಅಭಿವೃದ್ಧಿ ಕಾಣಬಹುದು. ಈ ವರ್ಷ ನೀವು ಬಯಸಿದ್ದು ಸಾಧಿಸಲು ಸಾಧ್ಯವಾಗುವುದು, ಆಸ್ತಿ, ಮನೆಯೆಂಬ ಕನಸು ನನಸಾಗಲಿದೆ.
ಕರ್ಕ ರಾಶಿ
ಅಕ್ಷಯ ತೃತೀಯದಲ್ಲಿ ರೂಪುಗೊಂಡ ಗಜಕೇಸರಿ ರಾಜಯೋಗದಿಂದಾಗಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ನಿಮ್ಮ ಯಾವುದೇ ಅಪೂರ್ಣವಾಗಿರುವ ಕೆಲಸ ಪೂರ್ಣಗೊಳ್ಳಲಿದೆ. ಇನ್ನು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಉತ್ತಮ ಅವಕಾಶ ದೊರೆಯಲಿದೆ. ಈ ಯೋಗದಿಂದಾಗಿ ವಿದ್ಯಾರ್ಥಿಗಳಿಗೆ ಅದ್ಭುತವಾಗಿರಲಿದೆ, ನೀವು ನಿಮ್ಮ ಗುರಿ ತಲುಪಲು ಸಾಧ್ಯವಾಗುವುದು. ಆರ್ಥಿಕ ಜೀವನದಲ್ಲಿನ ಸಮಸ್ಯೆಗಳು ಸಹ ದೂರವಾಗುತ್ತವೆ, ಒಟ್ಟು ನಿಮ್ಮ ಬದುಕಿನಲ್ಲಿ ಎಲ್ಲಾ ರೀತಿಯಲ್ಲಿಯೂ ಯಶಸ್ಸು ಪಡೆಯಲು ಸಾಧ್ಯವಾಗುವುದು.
ಸಿಂಹ ರಾಶಿ
ಅಕ್ಷಯ ತೃತೀಯದಂದು ರೂಪುಗೊಳ್ಳುವ ಗಜಕೇಸರಿ ರಾಜಯೋಗವು ನಿಮಗೆ ತುಂಬಾ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಈ ಈ ಗಜಕೇಸರಿಯೋಗದಿಂದಾಗಿ ಅತ್ಯುತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಉದ್ಯೋಗಿಗಳು ವೃತ್ತಿ ಬದುಕಿನಲ್ಲಿ ಬಡ್ತಿ ಪಡೆಯುತ್ತೀರಿ. ಕುಟುಂವ ಜೀವನ ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳುವುದರಿಂದ ನಿಮ್ಮ ಸೌಕರ್ಯ ಹೆಚ್ಚಾಗಲಿದೆ.
ಅಕ್ಷಯ ತೃತೀಯ ಶುಭ ಮುಹೂರ್ತ
ಲಕ್ಷ್ಮಿ ಪೂಜೆಗೆ ಬೆಳಗ್ಗೆ 5:33 ರಿಂದ ಮಧ್ಯಾಹ್ನ 12:18 ರವರೆಗೆ ಪೂಜೆಗೆ ಶುಭ ಮುಹೂರ್ತವಿದೆ.
ಅಕ್ಷಯ ತೃತೀಯದಂದು ಸುಕರ್ಮ ಯೋಗವು ಮಧ್ಯಾಹ್ನ 12:08 ರಿಂದ ಪ್ರಾರಂಭವಾಗಲಿದೆ ಮತ್ತು ಇದು ದಿನವಿಡೀ ಮುಂದುವರಿಯುತ್ತದೆ. ಈ ದಿನ ರವಿಯೋಗವೂ ಇದೆ. ರವಿಯೋಗವು ಬೆಳಗ್ಗೆ 5:33 ರಿಂದ 10:37 ರವರೆಗೆ ಇರುತ್ತದೆ. ಈ ದಿನದಂದು ಚಿನ್ನ ಖರೀದಿಸಿದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ.
ಚಿನ್ನ ಖರೀದಿಸಲು ಮಧ್ಯಾಹ್ನ 12:18 ರಿಂದ 1:59 ರವರೆಗಿನ ಸಮಯವು ತುಂಬಾ ಶುಭವಾಗಿರುತ್ತದೆ. ಸಂಜೆ 9:40 ರಿಂದ 10:59 ರ ಸಮಯವು ತುಂಬಾ ಮಂಗಳಕರವಾಗಿರುತ್ತದೆ.
ಅಕ್ಷಯ ತೃತೀಯದಂದು 5 ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ
ಅಕ್ಷಯ ತೃತೀಯ ಶುಕ್ರವಾರ ಬಂದಿದೆ. ಈ ದಿನ ಸುಕರ್ಮ ಯೋಗ ಕೂಡ. ಸುಕರ್ಮ ಯೋಗವು ಮರುದಿನ 12:07 ರಿಂದ 10:00 ರವರೆಗೆ ಇರುತ್ತದೆ. ಇದಲ್ಲದೇ ಈ ದಿನ ರೋಹಿಣಿ ನಕ್ಷತ್ರವಿದೆ. ರೋಹಿಣಿ ನಕ್ಷತ್ರವು 10:48 ರವರೆಗೆ ಇರುತ್ತದೆ.
ಈ ನಕ್ಷತ್ರದಲ್ಲಿ ಏನೇ ಮಾಡಿದರು ಶುಭ ಎಂದು ಹೇಳಲಾಗುವುದು.ಈ ನಕ್ಷತ್ರದಲ್ಲಿ ಮಾಡುವ ಯಾವುದೇ ಕೆಲಸವು ನಿಮಗೆ ಮಂಗಳಕರವಾಗಿರುತ್ತದೆ. ಇದರ ನಂತರ, ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾದ ಮೃಗಶಿರಾ ನಕ್ಷತ್ರವು ದಿನವಿಡೀ ಇರುತ್ತದೆ. ಅಕ್ಷಯ ತೃತೀಯ ದಿನದಂದು, ತೈತಿಲ್ ಮತ್ತು ಗರ್ ಕರಣಗಳು ಸಹ ನಡೆಯಲಿವೆ, ಹಾಗಾಗಿ ಈ ದಿನ ತುಂಬಾ ಮುಖ್ಯವಾಗಿದೆ. ಹಾಗಾಗಿ ಶುಭ ಕಾರ್ಯಕ್ಕೆ ಈ ದಿನ ತುಂಬಾ ಒಳ್ಳೆಯದಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications