Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಇದೇನಿದು ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ?

ಏನು ನಿಮ್ಮೀ ಮಾತಿನ ಅರ್ಥ? ಇದರಿಂದ ಭ್ರಷ್ಟರ ಪಟಾಲಂಗೆ ಏನು ಸಂದೇಶ ಹೋಗುತ್ತದೆ ಎಂಬುದರ ಪರಿಜ್ಞಾನ ಇದೆಯಾ ನಿಮಗೆ? ಇರ್ಲಿ ಬಿಡಿ. ಭ್ರಷ್ಟಾತಿಭ್ರಷ್ಟರು ನಿಮ್ಮ ಹೆಗಲ ಮೇಲೆ ಕೈಹಾಕಿಕೊಂಡಿರುವಾಗ (ಒಮ್ಮೆ ಪಕ್ಕದ ಚಿತ್ರ ನೋಡಿ) ನಿಮ್ಮಂಥವರಿಂದ ಇನ್ನೆಂಥ ಮಾತು ಬರಲು ಸಾಧ್ಯ ಅಲ್ಲವೇ!?
ಇದು ನೂರಕ್ಕೆ ನೂರರಷ್ಟು ನಿಮಗೇ ತಿರುಗುಬಾಣವಾಗುವ ಖಾತ್ರಿ ನಮಗಿದೆ, ಗೊತ್ತಾ? ಯಾಕೆ, ಈ ಪಾಟಿ ಹತಾಶರಾದಿರಿ ಸದಾ ಆನಂದದ ಗೌಡರೇ? ಆಯ್ತು. ನ್ಯಾ. ಬನ್ನೂರುಮಠರು ನಿಮ್ಮ ಮಾತನ್ನು ಯಥಾವತ್ತಾಗಿ ಸ್ವೀಕರಿಸಿ ನಾಳೆ ದಿನ ಲೋಕಾಯುಕ್ತರಾದರು ಅಂತಿಟ್ಟುಕೊಳ್ಳಿ. ಆಗ ಏನಾದೀತು ಲೋಕಾಯುಕ್ತದ ಘನತೆ. ಹೋಗಲಿ ಅಂಥಾ 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಲೋಕಾಯುಕ್ತರಿಂದ ಜನತೆ ಏನನ್ನು ತಾನೇ ನಿರೀಕ್ಷಿಸಿಯಾರು.
'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿಲ್ಲದ' ವ್ಯಕ್ತಿಗಳಿಗೆ ಮಣೆ ಹಾಕುವ ಮೂಲಕ ನೀವೇನು ಭ್ರಷ್ಟಾಚಾರವನ್ನು ಸಾರ್ವತ್ರಿಕಗೊಳಿಸ ಬಯಸಿದ್ದೀರಾ? ಶೇಮ್ ಆನ್ ಯು.
ನ್ಯಾ. ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿಸುವ ಮೊದಲು 'ನಾನು ನೂರಕ್ಕೆ 99ರಷ್ಟು ಪರಿಪೂರ್ಣನಾಗಿದ್ದೆ. ಸರಿ ನನ್ನನ್ನೇ ಲೋಕಾಯುಕ್ತರನ್ನಾಗಿ ಮಾಡಿ ಎಂದು ನ್ಯಾ. ಶಿವರಾಜ್ ಪಾಟೀಲ್ ನಿಮ್ಮ ಮನೆಯ ಬಾಗಿಲು ಬಡಿದರೆ ಏನು ಉತ್ತರ ನೀಡುವಿರಿ. ಹೆಚ್ಚೇನೂ ಇಲ್ಲ. ಇಬ್ಬರೂ ಒಂದೇ ಬಡಾವಣೆಯ ಫಲಾನುಭವಿಗಳು. 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಇಬ್ಬರನ್ನು ನೇಮಕ ಮಾಡುವ ಸುಯೋಗ ನಿಮ್ಮದಾಗುತ್ತದೆ. ನೋಡಿ, ಏನು ಮಾಡುತ್ತೀರೋ?



Click it and Unblock the Notifications
