Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಲವ್ ಮ್ಯಾರೇಜ್ ಆಗಲು ಪೋಷಕರ ಒಪ್ಪಿಗೆ ಬೇಕೆ ಬೇಕು, ಸದ್ಯದಲ್ಲಿಯೇ ಬರಲಿದೆ ಇಂಥದ್ದೊಂದು ಕಾನೂನು
ಲವ್ ಮ್ಯಾರೇಜ್ ಆಗಬೇಕೆಂದರೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿ ಬೇಕು ಎಂಬ ಕಾನೂನು ಬಂದರೆ? ಅಯ್ಯೋ ಇಂಥ ಕಾನೂನು ಬಂದರೆ ಕತೆ ಮುಗಿಯಿತು ಎಷ್ಟೋ ಜೋಡಿಗಳು ಮದುವೆಯಾಗದೇ ಇರಬೇಕಾಗುತ್ತೆ ಎಂದನಿಸಿರಬಹುದು ಅಲ್ವಾ? ಆದರೆ ಇಂಥದ್ದೊಂದು ಕಾನೂನು ನಮ್ಮ ದೇಶದಲ್ಲಿ ಜಾರಿಗೆ ತಂದರೆ ಹೇಗೆ ಎಂಬ ಚಿಂತನೆ ನಡೆಯುತ್ತಿದೆ. ಇಷ್ಟಕ್ಕೂ ಇಂಥದ್ದೊಂದು ಕಾನೂನು ಜಾರಿಗೆ ತರಬೇಕೆಂದು ಗುಜರಾತ್ ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಇದನ್ನು ಕೇಳಿದಾಗ ಪೋಷಕರಿಗೆ ತುಂಬಾ ಖುಷಿಯಾದರೆ ಮಕ್ಕಳಿಗೆ ಅಬ್ಬಾ ಈ ಕಾನೂನು ಅಂತು ಬಂದರೆ ನಮ್ಮ ಮದುವೆ ಆದಂತೆಯೇ ಎಂದು ಅನಿಸುವಂತಾಗಿದೆ. ಮುಖ್ಯಮಂತ್ರಿಯ ಈ ಮಾತುಗಳಿಗೆ ಅನೇಕ ರಿಯಾಕ್ಷನ್‌ಗಳು ಸಾಮಾಜಿಕ ತಾಣದಲ್ಲಿ ವ್ಯಕ್ತವಾಗುತ್ತಿದೆ.

ಪೋಷಕರು ಮದುವೆಗೆ ಒಪ್ಪಿಗೆ ನೀಡಿದರೆ ಲವ್ ಕಂ ಅರೇಂಜ್ ಮ್ಯಾರೇಜ್ ಆಗುತ್ತಾರೆ, ಅದೇ ಒಪ್ಪದೇ ಸಿಗದಿದ್ದಾಗ ಮಾತ್ರ ಲವ್ ಮ್ಯಾರೇಜ್ ಅಂದ್ರೆ ಅವರಿಷ್ಟಕ್ಕೆ ಓಡಿ ಹೋಗಿ ಮದುವೆಯಾಗುತ್ತಾರೆ, ಅಂಥದ್ದರಲ್ಲಿ ಲವ್ ಮ್ಯಾರೇಜ್‌ಗೆ ಪೋಷಕರ ಒಪ್ಪಿಗೆ ಬೇಕೇ ಬೇಕು ಅಂತ ಕಾನೂನು ಎಲ್ಲಾದರೂ ಬಂದರೆ ಲವ್ ಮಾಡಿದವರ ಪಾಡು ಊಹಿಸಿದಾಗಲೇ ಅಯ್ಯೋ ಪಾಪ ಅನಿಸದೆ ಇರಲ್ಲ ಅಲ್ವಾ?
ಲವ್ ಮ್ಯಾರೇಜ್‌ನಲ್ಲಿ ಪೋಷಕರನ್ನು ಒಪ್ಪಿಸುವುದು ಸುಲಭದ ಕೆಲಸವಲ್ಲ ಎಂಬುವುದು ಲವ್‌ನಲ್ಲಿರುವವರಿಗೆ, ಲವ್ ಮಾಡಿ ಮಾಡಿ ಮದುವೆಯಾಗಿರುವವರಿಗೆ ಅನುಭವಕ್ಕೆ ಬಂದಿರುತ್ತದೆ. ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೂರೆಂಟು ಕನಸುಗಳಿರುತ್ತದೆ, ಅವರ ಬಾಳ ಸಂಗಾತಿಯಾಗಿ ಎಂಥ ವ್ಯಕ್ತಿ ಬರಬೇಕು ಎಂಬ ಕಲ್ಪನೆಯೂ ಇರುತ್ತದೆ.
ಆದರೆ ಮಗ/ ಮಗಳ ತನಗೆ ಇಷ್ಟವಾದ ವ್ಯಕ್ತಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದಾಗ ಆ ವ್ಯಕ್ತಿ ಬಗ್ಗೆ ಪೋಷಕರಿಗೆ ಹೆಚ್ಚೇನು ಗೊತ್ತಿರುವುದಿಲ್ಲ, ನನ್ನ ಮಗ-ಮಗಳು ಅವರ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿರುವ ವ್ಯಕ್ತಿ ನಮ್ಮ ಕುಟುಂಬಕ್ಕೆ ಹೊಂದಿಕೊಂಡು ಹೋಗುತ್ತಾರೆಯೇ? ಆ ವ್ಯಕ್ತಿಯಿಂದ ನನ್ನ ಮಗ/ಮಗಳು ಸುಖವಾಗಿ ಬಾಳುತ್ತಾರೆಯೇ ಎಂದು ಯೋಚಿಸುತ್ತಾರೆ, ಆವಾಗ ಅವರಿಗೆ ಸ್ವಲ್ಪ ಡೌಟ್ ಬಂದರೂ ಆ ಮದುವೆಗೆ ಒಪ್ಪುವುದಿಲ್ಲ... ಹೀಗೆ ಒಪ್ಪದಿದ್ದಾಗ ನಮ್ಮ ಪ್ರೀತಿ ಬಿಟ್ಟು ನಮಗಿರಲು ಸಾಧ್ಯವಿಲ್ಲ ಓಡಿ ಹೋಗಿಯೋ, ರಿಜಿಸ್ಟರ್ ಆಗಿಯೋ ಮದುವೆಯಾಗುತ್ತಾರೆ. ಮಕ್ಕಳು ಹೀಗೆ ಮಾಡಿದಾಗ ಕೆಲ ಪೋಷಕರು ಆ ಮಕ್ಕಳ ಜೊತೆ ಮಾತುಕತೆಯೇ ನಿಲ್ಲಿಸಿ ಬಿಡುತ್ತಾರೆ, ಇನ್ನು ಕೆಲವರು ಕೆಲವು ತಿಂಗಳುಗಳು ಅಥವಾ ವರ್ಷಗಳು ಕಳೆದ ಮೇಲೆ ತಮ್ಮ ಅಳಿಯ/ ಸೊಸೆಯನ್ನು ಒಪ್ಪಿಕೊಳ್ಳುತ್ತಾರೆ... ಇವಿಷ್ಟು ಎಲ್ಲಾ ಲವ್ ಮ್ಯಾರೇಜ್‌ನ ಕತೆಗಳು ಅಲ್ವಾ?
ಲವ್ ಮ್ಯಾರೇಜ್‌ಗೆ ಪೋಷಕರ ಒಪ್ಪಿಗೆ ಬೇಕು ಎಂಬ ಕಾನೂನು ಬಂದರೆ ಒಂದು ರೀತಿಯಲ್ಲಿ ಒಳ್ಳೆಯದೂ ಒಂದು ರೀತಿಯಲ್ಲಿ ಅಲ್ಲ...
ಈ ಕಾನೂನು ಬಂದರೆ ಒಳ್ಳೆಯದು ಏಕೆ ಎಂದು ಹೇಳುವುದಾದರೆ ....
ಮಕ್ಕಳು ಪೋಷಕರ ಒಪ್ಪಿಗೆ ಪಡೆದು ಅಥವಾ ಅವರನ್ನು ಒಪ್ಪಿಸುವ ಮೂಲಕ ಮದುವೆಯಾದರೆ ಅಪ್ಪ-ಅಮ್ಮ-ಮಕ್ಕಳ ಸಂಬಂಧ ಕೂಡ ಚೆನ್ನಾಗಿರುತ್ತದೆ, ಅಲ್ಲದೆ ಪೋಷಕರು ನಾವು ಸಾಕಿ ಬೆಳೆಸಿದ ಮಕ್ಕಳು ನಮ್ಮ ವಿರುದ್ಧ ಹೋದರೆಲ್ಲಾ ಎಂಬ ನೋವು ಕಾಡುವುದಿಲ್ಲ. ಅಲ್ಲದೆ ಎಲ್ಲರ ವಿರೋಧ ಕಟ್ಟಿ ಲವ್ ಮ್ಯಾರೇಜ್ ಆಗುವುದೇನೋ ಸುಲಭವಾಗಿ ಆಗುತ್ತಾರೆ, ಆದರೆ ಅದರ ನಂತರ ಚೆನ್ನಾಗಿ ಬಾಳುವವರು ತುಂಬಾನೇ ಕಡಿಮೆ... ಇಬ್ಬರ ನಡುವೆ ಹೊಂದಾಣಿಕೆಯ ಕೊರತೆ ಬಂದಾಗ ಅವರನ್ನು ಸರಿಪಡಿಸಲು ಹಿರಿಯರ ಮಾರ್ಗದರ್ಶನ ಕೂಡ ಇರುವುದಿಲ್ಲ, ಈ ಕಾರಣ ಲವ್ ಮ್ಯಾರೇಜ್ ಆದವರಲ್ಲಿ ತುಂಬಾ ಸಂಬಂಧಗಳು ನಂತರ ತುಂಬಾ ಕಾಂಪ್ಲಿಕೇಟ್ ಆಗುತ್ತದೆ.
ಈ ಕಾನೂನು ಬಂದ್ರೆ ಪ್ರೇಮಿಗಳಿಗೆ ಕಷ್ಟವಾಗುವುದು
ಒಂದು ವೇಳೆ ಇಂಥದ್ದೊಂದು ಕಾನೂನು ಬಂದರೆ ಪೋಷಕರು ಒಪ್ಪದೇ ಇದ್ದರೆ ಅಂಥ ಪ್ರೇಮಿಗಳಿಗೆ ತುಂಬಾನೇ ಕಷ್ಟವಾಗುವುದು, ಇದರಿಂದ ಇಬ್ಬರ ಬದುಕು ಹಾಳಾಗಬಹುದು, ಒಬ್ಬರನ್ನೊಬ್ಬರು ಮರೆತು ಬಾಳುವುದು ಕಷ್ಟವಾಗುವುದು.
ಆದ್ದರಿಂದ ಈ ಕಾನೂನು ತರುವುದರ ಕುರಿತು ಪರ-ವಿರೋಧ ತುಂಬಾನೇ ಸದ್ದು ಮಾಡುತ್ತಿದೆ, ಈ ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.



Click it and Unblock the Notifications
