Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುಷಾರ್.. ಪತ್ನಿಯರು ಗಂಡಂದಿರಿಂದ ಈ 4 ವಿಷಯಗಳನ್ನು ಮುಚ್ಚಿಡಲೇಬಾರದು! ಜೀವನವೇ ನರಕ
ಸುಖ ಸಂಸಾರಕ್ಕೆ ಕಂಟಕ! ಗಂಡಂದಿರಿಂದ ಪತ್ನಿಯರು ಈ ವಿಷಯಗಳನ್ನು ಮುಚ್ಚಿಡಲೇಬಾರದು. ಹೌದು, ಗಂಡ-ಹೆಂಡತಿಯರ (Husband and wife) ಸಂಬಂಧವು ಸುಂದರವಾದ ಕೋಟೆ ಇದ್ದಂತೆ. ಈ ಕೋಟೆಯ ಅಡಿಪಾಯ ನಂಬಿಕೆ. ಪ್ರೀತಿಯು ಗೋಡೆಗಳು ಮತ್ತು ಸಾಮರಸ್ಯ ಅಥವಾ ಅನ್ಯೋನ್ಯತೆಯು ಮೇಲ್ಛಾವಣಿ. ಆದರೆ, ರಹಸ್ಯಗಳು ಎಂಬ ಗೆದ್ದಲು ಹುಳುಗಳು ಈ ಕೋಟೆಯನ್ನು ಆಕ್ರಮಿಸಿದರೆ, ಅಡಿಪಾಯ ದುರ್ಬಲಗೊಂಡು ಸಂಬಂಧ ಎಂಬ ಸೌಧ ಕುಸಿಯಲು ಹೆಚ್ಚು ಸಮಯ ಬೇಕಿಲ್ಲ.
ಸಂಸಾರ ಅಥವಾ ದಾಂಪತ್ಯ ಜೀವನ ಸುಗಮವಾಗಿ ಸಾಗಬೇಕೆಂದರೆ, ಗಂಡ-ಹೆಂಡತಿಯರ (Husband and wife Relationship) ನಡುವೆ ಯಾವುದೇ ರಹಸ್ಯ (Secret), ಮುಚ್ಚುಮರೆ ಇರಬಾರದು. ಕಷ್ಟ-ಸುಖ, ಆನಂದ-ದುಃಖ (ವಿಷಾಧ) ಎಲ್ಲವನ್ನೂ ಇಬ್ಬರೂ ಹಂಚಿಕೊಂಡಾಗ ಮಾತ್ರ ಸಂಬಂಧವು ಸದಾ ಹಸಿರಾಗಿ ಬೆಳೆಯುತ್ತದೆ. ಆದರೂ, ಕೆಲವೊಮ್ಮೆ ಅರಿವಿಲ್ಲದೆ ಅಥವಾ ಗೊತ್ತಿದ್ದೂ ಸಂಗಾತಿಗಳು ಪರಸ್ಪರ ಕೆಲವು ವಿಷಯಗಳನ್ನು ಮರೆಮಾಚುತ್ತಾರೆ.

ವಿಶೇಷವಾಗಿ, ಪತ್ನಿಯರು ಕೆಲವು ಸೂಕ್ಷ್ಮ ವಿಷಯಗಳನ್ನು ತಮ್ಮ ಪತಿಯರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಇದು ತಾತ್ಕಾಲಿಕವಾಗಿ ಸಮಸ್ಯೆಯನ್ನು ದೂರ ಮಾಡಿದಂತೆ ಕಂಡರೂ, ದೀರ್ಘಕಾಲಿಕ ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಈ ಲೇಖನದಲ್ಲಿ ಸಂತೋಷಕರ ಮತ್ತು ಗಟ್ಟಿಯಾದ ದಾಂಪತ್ಯ ಜೀವನಕ್ಕೆ (Happy Married Life) ಪತ್ನಿಯರು ತಮ್ಮ ಪತಿಯಿಂದ ಮರೆಮಾಚಬಾರದ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಅವು ಈ ಕೆಳಗಿನಂತಿವೆ.
ಹಣಕಾಸಿನ ವಿಷಯಗಳು
ಮಾನವ ಸಂಬಂಧಗಳು ಕೆಲವೊಮ್ಮೆ ಹಣಕಾಸಿನ ಸಂಬಂಧಗಳಾಗಿ ಮಾರ್ಪಡುತ್ತವೆ. ಈ ಹಣವು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಹಾಗೆಯೇ, ಮುರಿಯಲೂ ಬಹುದು. ನಿಮ್ಮ ಸಂಬಳ, ಆದಾಯ, ಉಳಿತಾಯದಂತಹ ವಿವರಗಳನ್ನು ನಿಮ್ಮ ಪತಿಯೊಂದಿಗೆ ಹಂಚಿಕೊಳ್ಳಲು ಹಿಂಜರಿಯಬೇಡಿ. ಮುಖ್ಯವಾಗಿ, ನೀವು ಯಾರಿಗಾದರೂ ಸಾಲ ಕೊಟ್ಟಿದ್ದರೆ ಅಥವಾ ಯಾರಿಂದಾದರೂ ಸಾಲ ಪಡೆದಿದ್ದರೆ, ಆ ವಿಷಯವನ್ನು ತಕ್ಷಣವೇ ಪತಿಗೆ ತಿಳಿಸಬೇಕು.
ಹಣಕಾಸಿನ ವಿಷಯಗಳಲ್ಲಿ ಪಾರದರ್ಶಕತೆ ಇದ್ದಾಗ, ಇಬ್ಬರೂ ಒಟ್ಟಾಗಿ ಉತ್ತಮ ಹಣಕಾಸು ಯೋಜನೆಗಳನ್ನು ರೂಪಿಸಬಹುದು. ಭವಿಷ್ಯಕ್ಕಾಗಿ ಒಟ್ಟಾಗಿ ಗುರಿಗಳನ್ನು ನಿಗದಿಪಡಿಸಬಹುದು. ಇದು ನಿಮ್ಮ ಸಂಬಂಧದಲ್ಲಿ ಜವಾಬ್ದಾರಿ ಮತ್ತು ಪಾಲುದಾರಿಕೆಯನ್ನು ಹೆಚ್ಚಿಸುತ್ತದೆ.
ಮನಸ್ಸಿನ ಆತಂಕಗಳು
ಪ್ರತಿಯೊಬ್ಬ ಮನುಷ್ಯನಿಗೂ ಆತಂಕಗಳು ಮತ್ತು ಭಯಗಳಿರುವುದು ಸಹಜ. ಅವುಗಳನ್ನು ನಿಮ್ಮಲ್ಲೇ ಇಟ್ಟುಕೊಂಡು ಕುಗ್ಗಬೇಡಿ, ಕೊರಗಬೇಡಿ. ನಿಮ್ಮ ಮನಸ್ಸನ್ನು ಕಾಡುತ್ತಿರುವ ಯಾವುದೇ ಆತಂಕ ಅಥವಾ ಹೃದಯದಲ್ಲಿ ಮನೆ ಮಾಡಿರುವ ಯಾವುದೇ ಭಯವಿರಲಿ, ಅದನ್ನು ನಿಮ್ಮ ಪತಿಯೊಂದಿಗೆ ಹಂಚಿಕೊಳ್ಳಿ. ಅವರು ನಿಮ್ಮ ಜೀವನ ಸಂಗಾತಿ. ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಗೆಳೆಯ.
ನಿಮ್ಮ ಭಯವನ್ನು ಹಂಚಿಕೊಂಡಾಗ ಅದು ಅರ್ಧದಷ್ಟು ಕಡಿಮೆಯಾಗುತ್ತದೆ. ನಿಮ್ಮ ಪತಿ ನಿಮಗೆ ಧೈರ್ಯ ನೀಡಬಹುದು. ಸಮಸ್ಯೆಗೆ ಪರಿಹಾರ ತೋರಿಸಬಹುದು ಅಥವಾ ಕನಿಷ್ಠ 'ನಾನು ನಿನ್ನೊಂದಿಗೆ ಇದ್ದೇನೆ' ಎಂಬ ಭರವಸೆಯೊಂದಿಗೆ ನಿಮ್ಮ ಭಾರವನ್ನು ಕಡಿಮೆ ಮಾಡಬಹುದು.
ಭಾವನೆಗಳ ಅಭಿವ್ಯಕ್ತಿ
ಹೆಚ್ಚಿನ ಮಹಿಳೆಯರು ತಮ್ಮ ಭಾವನೆಗಳನ್ನು ವಿಶೇಷವಾಗಿ, ಕೋಪ ಮತ್ತು ದುಃಖದಂತಹವುಗಳನ್ನು ವ್ಯಕ್ತಪಡಿಸಲು ಇಷ್ಟಪಡುವುದಿಲ್ಲ. ಇದು ಮನೆಯಲ್ಲಿ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು ಎಂದು ಅವರು ಭಾವಿಸುತ್ತಾರೆ. ಆದರೆ, ನೀವು ಭಾವನೆಗಳನ್ನು ನಿಗ್ರಹಿಸುವುದರಿಂದ ಅವು ಒಳಗೆಯೇ ಕೊಳೆಯುತ್ತವೆ ಮತ್ತು ಒಂದು ದಿನ ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುವ ಅಪಾಯವಿದೆ.
ನಿಮ್ಮ ಸಂತೋಷ, ದುಃಖ, ಕೋಪ.. ಪ್ರತಿಯೊಂದು ಭಾವನೆಯನ್ನೂ ಅವರೊಂದಿಗೆ ಹಂಚಿಕೊಳ್ಳಿ. ಇದರಿಂದ ಅವರು ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಅವರಿಗೆ ಸ್ಪಷ್ಟವಾಗಿ ತಿಳಿಯುತ್ತದೆ. ಇದು ತಪ್ಪು ತಿಳುವಳಿಕೆಗಳಿಗೆ ಅವಕಾಶ ನೀಡುವುದಿಲ್ಲ.
ಇಷ್ಟ-ಅನಿಷ್ಟಗಳ ಸಮ್ಮಿಲನ
ಅವರಿಗೆ ಇಷ್ಟವಾದುದ್ದೇ ನನಗೂ ಇಷ್ಟ ಎಂದು ಹೊಂದಾಣಿಕೆ ಮಾಡಿಕೊಳ್ಳುವುದು ಒಳ್ಳೆಯದು. ಆದರೆ, ನಿಮಗೇ ಆದ ಸ್ವಂತ ಇಷ್ಟ-ಅನಿಷ್ಟಗಳಿರುವುದು ಸಹ ಅಷ್ಟೇ ಮುಖ್ಯ. ನಿಮಗೆ ಇಷ್ಟವಾದುದನ್ನು ಮತ್ತು ಇಷ್ಟವಾಗದಿರುವುದನ್ನು ಗಂಡ ಅಥವಾ ಸಂಗಾತಿಯೊಂದಿಗೆ ನಿರ್ದಾಕ್ಷಿಣ್ಯವಾಗಿ ಹೇಳಿ. ನಿಮಗೆ ಇಷ್ಟವಾದ ಬಣ್ಣ, ನೀವು ನೋಡಲು ಬಯಸುವ ಸಿನಿಮಾ, ನಿಮಗೆ ತಿನ್ನಲು ಇಷ್ಟವಿಲ್ಲದ ತರಕಾರಿ.. ಹೀಗೆ ಚಿಕ್ಕ ವಿಷಯಗಳೇ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತವೆ.
ನಿಮ್ಮ ಇಷ್ಟಗಳನ್ನು ಅವರೊಂದಿಗೆ ಹಂಚಿಕೊಂಡಾಗ, ಅವರು ಅವುಗಳನ್ನು ಗೌರವಿಸಲು ಮತ್ತು ನಿಮ್ಮನ್ನು ಇನ್ನಷ್ಟು ಸಂತೋಷಪಡಿಸಲು ಪ್ರಯತ್ನಿಸುತ್ತಾರೆ. ಇದು ನಿಮ್ಮಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಮಧುರವಾಗಿಸುತ್ತದೆ.



Click it and Unblock the Notifications










