Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಳ್ಳೆಯವನಂತೆ ಮುಖವಾಡ ಹಾಕಿರುವ ಪುರುಷ ತುಂಬಾನೇ ಅಪಾಯಕಾರಿ
ಅವನು ತುಂಬಾ ಕೆಟ್ಟ ವ್ಯಕ್ತಿ, ಅವನಿಗೆ ಕೆಟ್ಟ ಅಭ್ಯಾಸಗಳಿವೆ ಎನ್ನುವ ಪುರುಷನಿಗಿಂತ ಹೆಚ್ಚು ಅಪಾಯಕಾರಿ ಒಳ್ಳೆಯವನಂತೆ ಮುಖವಾಡ ಹಾಕಿರುವ ಪುರುಷ ತುಂಬಾನೇ ಅಪಾಯಕಾರಿ. ಏಕೆಂದರೆ ಕೆಟ್ಟವನಿಂದ ನಾವು ನಮ್ಮನ್ನು ಜಾಗ್ರತೆ ಮಾಡಬಹುದು, ಆದರೆ ಒಳ್ಳೆಯವನಂತೆ ಕಾಣುತ್ತಾರಲ್ಲಾ ಅವರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬುದ್ಧಿವಂತಿಕೆ ಬೇಕಾಗುತ್ತದೆ, ಅವನಲ್ಲಿ ಕೆಲವೊಂದು ಗುಣಗಳನ್ನು ನಾವು ಗಮನಿಸಿರುತ್ತೇವೆ ಆದರೆ ನಿರ್ಲಕ್ಷ್ಯ ಮಾಡಿರುತ್ತೇವೆ...

ವಿಪರೀತ ಒಳ್ಳೆಯವನಂತೆ ನಟನೆ: ಹೌದು ಅವನು ನಿಮ್ಮ ಬಳಿ ಮಾತನಾಡುವಾಗ ತುಂಬಾನೇ ಒಳ್ಳೆಯವನಂತೆ ನಟಿಸುತ್ತಾನೆ, ಅವನನ್ನು ನೋಡಿದಾಗ ಎಷ್ಟು ಒಳ್ಳೆಯವ ಅಂತ ಅನಿಸುತ್ತದೆ, ಆದರೆ ಅವನು ಬೇರೆಯವರ ಹತ್ರ ಹೇಗೆ ವರ್ತಿಸುತ್ತಿದ್ದಾನೆ ಎಂಬುವುದನ್ನು ಗಮನಿಸಬೇಕು. ಮನುಷ್ಯ ಎಂದ ಮೇಲೆ ಕೋಪ, ಅಸೂಯೆ ಎಲ್ಲವೂ ಸಹಜ, ಆದರೆ ನಾನು ತುಂಬಾ ಒಳ್ಳೆಯವನ ಮುಖವಾಡ ಹಾಕಿದರೆ ಜಾಗ್ರತೆವಹಿಸಿ.
ಬೇರೆ ಹುಡುಗರಂತೆ ನಾನಲ್ಲ ಎಂದು ಹೇಳುವುದು
ನಾನು ಒಳ್ಳೆಯವನು ಎಂದು ಅವನು ಪದೇ ಪದೇ ಹೇಳುತ್ತಿದ್ದಾನೆ ಎಂದರೆ ನೀವು ಜಾಗ್ರತೆ ಮಾಡಬೇಕು. ಏಕೆಂದರೆ ಅವನು ಪದೇ ಪದೇ ಹೇಳ್ತಾ ಇದ್ದಾನೆ ಎಂದಾದರೆ ಅವನು ನೀವು ನಂಬುವಷ್ಟು ಒಳ್ಳೆಯವನ್ನಲ್ಲ ಎಂದರ್ಥ.
ಸುಳ್ಳು ಹೇಳುತ್ತಿದ್ದಾನೆ ಎಂಬ ಅನುಮಾನ ಬಂದಾಗ
ನಿಮಗೆ ಆ ವ್ಯಕ್ತಿ ಮೇಲೆ ಒಂದು ಅಭಿಪ್ರಾಯವಿರುತ್ತದೆ, ಆದರೆ ಬೇರೊಬ್ಬ ವ್ಯಕ್ತಿ ಆ ವ್ಯಕ್ತಿಯ ಬಗ್ಗೆ ಭಿನ್ನ ಅಭಿಪ್ರಾಯ ಹೇಳಿದಾಗ ನೀವು ಜಾಗ್ರತೆವಹಿಸಲೇಬೇಕು.
ಸ್ನೇಹಿತ ಎಂದು ಹೇಳಿದರೂ ನಡತೆ ಬೇರೆ ಇದ್ದರೆ
ಅವನು ಸ್ನೇಹಿತನ ಮುಖವಾಡವಾಗಿರುತ್ತಾನೆ, ಆದರೆ ಅವನ ಸ್ಪರ್ಶ, ಅವನ ನೋಟದಲ್ಲಿ ಬದಲಾವಣೆಯಾದರೆ ನೀವು ತುಂಬಾನೇ ಜಾಗ್ರತೆವಹಿಸಬೇಕು. ಅಂಥ ವ್ಯಕ್ತಿ ಜೊತೆ ಒಂಟಿಯಾಗಿ ಹೋಗಲೇಬಾರದು.
ಒಳ್ಳೆಯವನ ಮುಖವಾಡ ಹಾಕಿ ಪ್ರೀತಿಯ ನಾಟಕ'
ಎಷ್ಟೋ ಹೆಣ್ಮಕ್ಕಳು ಇಂಥ ವ್ಯಕ್ತಿಗಳಿಗೆ ಮೋಸ ಹೋಗುತ್ತಾರೆ, ಅವನು ತುಂಬಾನೇ ಒಳ್ಳೆಯವನಂತೆ ಕಾಣಿಸುತ್ತಿದ್ದಾನೆ ಎಂದು ಇಷ್ಟಪಡುತ್ತಾರೆ, ಆದರೆ ಕೆಲವು ದಿನಗಳು ಹೋದ ಮೇಲೆ ಅವನ ನಿಜವಾದ ಬಣ್ಣ ಹೊರಬರುತ್ತದೆ.
ಈ ವ್ಯಕ್ತಿ ಒಳ್ಳೆಯವನೇ, ನಾಟಕ ಆಡುತ್ತಿಲ್ಲ ಎಂದು ತಿಳಿಯುವುದು ಹೇಗೆ?
ಆ ವ್ಯಕ್ತಿ ಒಳ್ಳೆಯ ಸ್ವಭಾವದನೇ ಆಗಿದ್ದರೆ ಅವನು ತುಂಬಾ ಸಹಜವಾಗಿರುತ್ತಾನೆ, ಅವನು ನಿಮ್ಮನ್ನು ನೋಡಿಕೊಳ್ಳುವ ರೀತಿ ಏನೂ ತುಂಬಾನೇ ಸ್ಪೆಷಲ್ ಅನಿಸುವುದಿಲ್ಲ, ಬಣ್ಣದ ಮಾತುಗಳನ್ನಾಡಲ್ಲ, ನಿಮ್ಮ ಮುಂದೆ ನಾನು ಒಳ್ಳೆಯವನು ಎಂದು ಸೋಗು ಹಾಕಲ್ಲ, ಅವನಿಗೆ ಅವನೇ ಸರ್ಟಿಫಿಕೇಟ್ ಕೊಡಲ್ಲ, ಆದ್ದರಿಂದ ಒಳ್ಳೆಯವನ ರೀತಿ ಕಾಣುವ ವ್ಯಕ್ತಿ ಆತ ನಿಜವಾಗಲೂ ಒಳ್ಳೆಯವನೇ ಎಂದು ಪರೀಕ್ಷಿಸಿ.
ತಿಳಿಯುವುದು ಹೇಗೆ?
ಅವನ ಸ್ನೇಹಿತರ ಬಳಗ ಅವನಿಗೆ ತಿಳಿಯದಂತೆ ತಿಳಿದುಕೊಳ್ಳಿ, ಇದಕ್ಕಾಗಿ ಡಿಟೆಕ್ಟಿವ್ ಏಜೆನ್ಸಿಯವರು ಕೂಡ ಸಿಗ್ತಾರೆ, ಅವನ ಸ್ನೇಹಿತರಿಂದ ಇವನ ಬಗ್ಗೆ ಅಭಿಪ್ರಾಯ ಪಡೆಯಬೇಕು. ಆದರೆ ಸ್ನೇಹಿತರಿಗೆ ನಾವು ಅವರಿಂದ ಈ ವ್ಯಕ್ತಿ ಕುರಿತು ತಿಳಿಯ ಬಯಸುತ್ತೇವೆ ಎಂದು ಗೊತ್ತಾಗಬಾರದು, ಆ ರೀತಿಯಲ್ಲಿ ಮಾಹಿತಿ ಪಡೆಯಿರಿ.
ಕೆಲವೊಂದು ಸಂದರ್ಭದಲ್ಲಿ ಅವರ ವರ್ತನೆ ಗಮನಿಸಿ
ಹಣದ ವಿಷಯವಾಗಿರಬಹುದು, ನಿಮ್ಮ ಸ್ನೇಹ ಬಳಗದ ಬಗ್ಗೆ ಇರಬಹುದು ಅವನ ವರ್ತನೆ ಹೇಗಿದೆ ಎಂಬವುದನ್ನು ಗಮನಿಸಿ. ಆತ ಹಣಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾನೆ ಅಥವಾ ನಿಮ್ಮನ್ನು ನಿಮ್ಮ ಸ್ನೇಹಿತರು, ಮನೆಯವರಿಂದ ದೂರ ಮಾಡುತ್ತಿದ್ದಾನೆ, ತುಂಬಾ ನಯವಾಗಿ ಮಾತನಾಡಿ ಇದೆಲ್ಲಾ ಮಾಡ್ತಾ ಇದ್ದಾನೆ ಎಂದರೆ ನೀವು ಜಾಗ್ರತೆವಹಿಸಿ.



Click it and Unblock the Notifications