Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಎಷ್ಟೇ ಬ್ಯುಸಿ ಇರಿ, ವೀಕೆಂಡ್ ಹೀಗೆ ಕಳೆದರೆ ಗಂಡ-ಹೆಂಡತಿ ನಡುವೆ ಸಮಸ್ಯೆ ಬರಲ್ಲ
ವಾರವಿಡೀ ಕೆಲಸ, ಕೆಲಸ ಅಂತ ಒತ್ತಡದ ಬದುಕು, ವಾರಾಂತ್ಯ ಬರ್ತಾ ಇದ್ದಂತೆ ಸ್ವಲ್ಪ ರಿಲ್ಯಾಕ್ಸ್, ಈ ಎರಡು ದಿನ ಸ್ವಲ್ಪ ಆರಾಮವಾಗಿ ಕಳೆಯಬೇಕೆಂದು ಪ್ಲ್ಯಾನ್ ಮಾಡುತ್ತಾರೆ.
ಬೆಂಗಳೂರಿನಂಥ ಸಿಟಿಗಳಲ್ಲಿ ವೀಕೆಂಡ್ ಪ್ಲ್ಯಾನ್ ಎಂದರೆ ಔಟಿಂಗ್ ಪ್ಲ್ಯಾನ್. ಸ್ಥಳಗಳ ವೀಕ್ಷಣೆಗೆ, ಶಾಪಿಂಗ್, ರೆಸ್ಟೋರೆಂಟ್ ಅಂತ ಹೊರಗಡೆ ಹೋಗಲು ಬಯಸುತ್ತಾರೆ. ಇದನ್ನು ಬ್ಯಾಚುಲರ್‌ಗಳು ಮಾಡ್ತಾರೆ, ವಿವಾಹಿತರು ಮಾಡ್ತಾರೆ, ಅದರೆ ಸಿಗುವ ಈ ಸಮಯದಲ್ಲಿ ನಮಗೆ ಕ್ವಾಲಿಟಿ ಸಮಯ ಸಿಗುವುದೇ ಎಂದು ಗಮನಹರಿಸಬೇಕಾಗುತ್ತದೆ.

ಹೌದು ಸಿಗುವ ಎರಡು ದಿನ ನಿಮ್ಮಿಬ್ಬರಿಗೆ ಖುಷಿ ಕೊಡುವ ರೀತಿಯಲ್ಲಿ ಸಮಯ ಕಳೆಯಲು ಪ್ರಯತ್ನಿಸಬೇಕು, ಈಗೀನ ಕಾಲದಲ್ಲಿ ಇದು ತುಂಬಾನೇ ಮುಖ್ಯವಾಗಿದೆ, ಏಕೆ?
ಗಂಡ ಹೆಂಡತಿ ಇಬ್ಬರು ದುಡಿಯುವವರಾದರೂ ಅಥವಾ ಪತ್ನಿ ಗೃಹಿಣಿಯಾದರೂ ಕ್ವಾಲಿಟಿ ಸಮಯ ಕಳೆಯಬೇಕಾಗುತ್ತೆ
ಹೌದು ಈಗ ಅಂತು ಬಹುತೇಕ ಕುಟುಂಬಗಳಲ್ಲಿ ಒಟ್ಟಿಗೆ ಕೂತು ಮಾತನಾಡಲು, ಕೆಲ ಸಮಯ ಒಟ್ಟಿಗೆ ಮಾತನಾಡುತ್ತಾ ಕಳೆಯಲು ಪುರುಸೊತ್ತು ಇರಲ್ಲ. ಇಬ್ಬರೂ ಬ್ಯುಸಿ, ವಾರದ ಉಳಿದ ದಿನಗಳಲ್ಲಿ ಕೆಲಸದ ಅಂತ ಬ್ಯುಸಿ, ವೀಕೆಂಡ್‌ನಲ್ಲಿ ಕ್ಲೀನಿಂಗ್ , ಶಾಪಿಂಗ್, ಸಿನಿಮಾ, ಸುತ್ತಾಟ ಅಂತ ಬ್ಯುಸಿ. ಇಬ್ಬರು ದಿನವಿಡೀ ಜೊತೆಯಲ್ಲಿ ಕಳೆದಿರಬಹುದು, ಆದರೆ ತಮಗಾಗಿ ಒಂದಿಷ್ಟು ಸಮಯ ಕಂಡುಕೊಂಡರೇ? ಎಂದು ಕೇಳಿದರೆ ನೂರಕ್ಕೆ 90ರಷ್ಟು ದಂಪತಿಗಳ ಉತ್ತರ ನೋ ಎಂದಿರುತ್ತದೆ.
ತಮಗಾಗಿ ಒಂದಿಷ್ಟು ಸಮಯ ಕಳೆಯುವುದು ಎಂದರೇನು?
ಒಟ್ಟಿಗೆ ಟ್ರಿಪ್ ಹೋಗುವುದು, ಒಟ್ಟಿಗೆ ಶಾಪಿಂಗ್ ಮಾಡುವುದು, ರೆಸ್ಟೋರೆಂಟ್ ಪಾರ್ಟಿ ಅಂತ ಹೋಗುವುದು ಒಳ್ಳೆಯ ವಿಚಾರವೇ, ಆದರೆ ಇಷ್ಟು ಮಾತ್ರ ಪ್ರತಿವಾರವೂ ಮಾಡ್ತಾ ಇದ್ದರೆ ಬದುಕು ಒಂಥರಾ ಯಾಂತ್ರಿಕ ಅನಿಸಲಾರಂಭಿಸುತ್ತದೆ.
ಮತ್ತೇನು ಮಾಡಬೇಕು?
ವೀಕೆಂಡ್‌ನಲ್ಲಿ ನೀವು ಒಂದಿಷ್ಟು ಸಮಯ ನಿಮ್ಮಿಬ್ಬರಿಗೋಸ್ಕರ ಕಂಡು ಕೊಳ್ಳಿ, ಮನೆಯಲ್ಲಿ ಕಾಫಿಯೋ ಅಥವಾ ನಿಮಗಿಷ್ಟವಾದ ಫುಡ್ ತರಿಸಿ ಸವಿಯುತ್ತಾ ಇಬ್ಬರ ಮನಸ್ಸು ಬಿಚ್ಚಿ ಮಾತನಾಡಿ. ನೀವು ಪ್ರೇಮಿಗಳಾಗಿದ್ದಾಗ ಎಷ್ಟೊಂದು ಮಾತನಾಡುತ್ತಿದ್ದಿರಿ ಅಲ್ವಾ? ಆ ಮಾತುಗಳು ಈಗಲೂ ಕಡಿಮೆಯಾದಂತೆ ಅನಿಸಬಹುದು ಅಲ್ವಾ? ನೀವು ಮನಸ್ಸು ಬಿಚ್ಚಿ ಮಾತನಾಡಿ. ಒಂದಿಷ್ಟು ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಿರಿ, ಇದು ನಿಮ್ಮಬ್ಬರ ಬಾಂಧವ್ಯಕ್ಕೆ ಹೊಸ ಚೈತನ್ಯ ನೀಡುತ್ತದೆ.
ಹೊರಗಡೆ ಹೋದಾಗ ಫೋಟೋಗೆ ರೊಮ್ಯಾಂಟಿಕ್ ಪೋಸ್ ನೀಡಬಹುದು, ಮನೆಗೆ ಬಂದಾಗ ಸುಸ್ತಾಗಿರುತ್ತೀರ, ಪರಸ್ಪರ ಮಾತನಾಡಿಕೊಂಡು ಕೂರಲು ಸಮಯವಾಗಲಿ, ಆಸಕ್ತಿಯಾಗಲಿ ಉಳಿಯಲ್ಲ, ಹಾಗಾಗಿ ನಿಮ್ಮದೇ ಆ ಕ್ಷಣಗಳನ್ನು ಸೃಷ್ಟಿಸಲು ಮರೆಯಬೇಡಿ. ಇಬ್ಬರು ಜೊತೆ ಸೇರಿ ಹೊರಗಡೆ ಹೋಗಿ ಬರುವುದಕ್ಕಿಂತ ಮನೆಯಲ್ಲಿದ್ದು ಇಬ್ಬರು ಸೇರಿ ಮಾಡಿದ ಸ್ಪೆಷಲ್ ಅಡುಗೆ ತುಂಬಾನೇ ಸ್ಪೆಷಲ್ ಅನಿಸುವುದು.
ಎಲ್ಲಾ ವಾರ ಈ ರೀತಿ ಇರಲು ಸಾಧ್ಯವಿಲ್ಲ, ಆದರೆ ಕೆಲವೊಂದು ವಾರಗಳನ್ನು ತುಂಬಾ ರಿಲ್ಯಾಕ್ಸ್ ಆಗಿ ಕಳೆಯಲು ಪ್ರಯತ್ನಿಸಿ. ಪ್ರತಿವಾರ ಟ್ರಿಪ್, ಔಟಿಂಗ್ ಅಂತ ಮಾಡದೆ ಕೆಲವೊಂದು ವಾರ ನೀವಿಬ್ಬರು ತುಂಬಾ ಸಮಯ ಕಳೆಯಲು ಪ್ರಯತ್ನಿಸಿ. ಈಗ ಇವೆಲ್ಲಾ ತುಂಬಾನೇ ಅವಶ್ಯಕವಾಗಿದೆ, ಎಷ್ಟೋ ಕುಟುಂಬದಲ್ಲಿ ಗಂಡ-ಹೆಂಡತಿ ಸಂಬಂಧ ದುರ್ಬಲವಾಗಲು ಒಬ್ಬರನನ್ನೊಬ್ಬರು ಅರ್ಥ ಮಾಡಿಕೊಳ್ಳದೆ ಇರುವುದೇ ಪ್ರಮುಖ ಕಾರಣವಾಗಿದೆ. ಅದೇ ಇಬ್ಬರು ಹೆಚ್ಚು ಸಮಯ ಒಟ್ಟಿಗೆ ಕಳೆಯುವುದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯವಾಗುವುದು.
ವೀಕೆಂಡ್ ಅಂತ ಪ್ರತಿದಿನವೂ ನಿಮ್ಮಿಬ್ಬರಿಗಾಗಿ ಸಮಯ ಕಂಡುಕೊಳ್ಳಿ
ಇಬ್ಬರು ಎಷ್ಟೇ ಬ್ಯುಸಿಯಿದ್ದರೂ ಜೊತೆಗೆ ಊಟ ಮಾಡುವುದು ಅಥವಾ ಜೊತೆಯಾಗಿ ಕಾಫಿ ಹೀರುತ್ತಾ ಮಾತನಾಡಿ, ಇನ್ನು ಮಲಗುವ ಮುನ್ನ ಇಬ್ಬರು ಕೆಲಸ ಅದರ ಬಗ್ಗೆ ಹೇಳದೆ ಈ ದಿನ ನಿನಗೆ ಹೇಗಿತ್ತು ಎಂದು ಕೇಳಿ, ನಿಮ್ಮ ದಿನದ ಬಗ್ಗೆ ಹೇಳಿ ಇದರಿಂದ ನಿಮ್ಮಿಬ್ಬರಲ್ಲಿ ಹೊಂದಾಣಿಕೆ ಹೆಚ್ಚಾಗುತ್ತಾ ಹೋಗುತ್ತದೆ.
ಎಷ್ಟೋ ಸಂಸಾರದಲ್ಲಿ ಸಮಸ್ಯೆಗೆ ಕಾರಣ ಸಮಯ ನೀಡದಿರುವುದು, ಇದನ್ನು ನೀಡಿ ಏನೇ ಸಮಸ್ಯೆಯಿದ್ದರೂ ಮಂಜಿನಂತೆ ಕರಗಿ ನಿಮ್ಮ ಬಾಳು ಸುಂದರವಾಗಿರುತ್ತದೆ.



Click it and Unblock the Notifications
