Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಗಂಡ-ಹೆಂಡತಿ ಸಂಬಂಧದಲ್ಲಿ ವೈಯಕ್ತಿಕ ಜಾಗ ಕೊಡೋದ್ರಿಂದ ಏನು ಲಾಭ?
ಗಂಡ-ಹೆಂಡತಿ ಅಥವಾ ಪ್ರೀತಿಸಿದವರಿಬ್ಬರ ನಡುವಿನ ಭಾಂದವ್ಯ ಎಷ್ಟು ಗಟ್ಟಿಯಾಗಿರುತ್ತೆ ಅನ್ನೋದು ಗೊತ್ತಿರುತ್ತೆ. ಅವರಿಬ್ಬರ ಮಧ್ಯೆ ಯಾವುದೇ ರೀತಿ ರಹಸ್ಯಗಳು ಅನ್ನೋದು ಇರೋದಿಲ್ಲ. ಪ್ರತಿಯೊಂದು ವಿಚಾರವನ್ನು ಇಬ್ಬರೂ ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಎಂತಹದ್ದೇ ಪರಿಸ್ಥಿತಿ ಎದುರಾದರೂ ಕೂಡ ಒಬ್ಬರನ್ನೊಬ್ಬರು ಬಿಟ್ಟು ಕೊಡೋದಿಲ್ಲ.
ಇಂಥಹ ಭಾಂದವ್ಯದಲ್ಲೂ ಕೆಲವೊಂದು ಸಲ ವೈಯಕ್ತಿಕ ಜಾಗ ಅಥವಾ ಪರ್ಸನಲ್ ಸ್ಪೇಸ್ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಎಲ್ಲಾ ಸಮಯದಲ್ಲೂ ಸಂಗಾತಿಯ ಜೊತೆಗೆ ಇರೋದಿಕ್ಕೆ ಆಗೋದಿಲ್ಲ. ಕೆಲವೊಂದು ರಹಸ್ಯಗಳು ಸಂಗಾತಿಯ ಬಳಿ ಕೂಡ ಶೇರ್ ಮಾಡೋದಕ್ಕೆ ಆಗೋದಿಲ್ಲ. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲೂ ಪರ್ಸನಲ್ ಸ್ಪೇಸ್ ತುಂಬಾನೇ ಮುಖ್ಯವಾಗುತ್ತದೆ. ಹಾಗಾದ್ರೆ ವ್ಯಕ್ತಿಯ ಜೀವನದಲ್ಲಿ ವೈಯಕ್ತಿಕ ಜಾಗ ಮುಖ್ಯ ಯಾಕೆ ಅನ್ನೋದನ್ನ ತಿಳಿಯೋಣ.

1. ಸಂಬಂಧಿಕರು, ಸ್ನೇಹಿತರಿಗಾಗಿ ಸಮಯ ಮೀಸಲಿಡಲು
ಮುದುವೆಯಾದ ಮೇಲೆ ಅಥವಾ ಪ್ರೀತಿಯಲ್ಲಿ ಬಿದ್ದ ಮೇಲೆ ನಮ್ಮ ಸಂಗಾತಿಯನ್ನು ಬಿಟ್ಟು ಬೇರೆ ಪ್ರಪಂಚ ನಮಗೆ ಕಾಣೋದಿಲ್ಲ. ಇಡೀ ದಿನವನ್ನು ಅವರಿಗಾಗಿ ಮೀಸಲಿಡುತ್ತೇವೆ. ಸಮಯ ಸಿಕ್ಕಾಗಲೆಲ್ಲಾ ಅವರ ಜೊತೆಗೆ ಕಾಲ ಕಳೆಯುತ್ತೇವೆ. ಹೀಗಾಗಿ ನಿಮ್ಮ ಸ್ನೇಹಿತರು, ಸಂಬಂಧಿಕರು ನಿಮ್ಮಿಂದ ದೂರವಾಗುತ್ತಾರೆ. ಕೊನೆಪಕ್ಷ ನಿಮಗೇನಾದರೂ ಅವರನ್ನು ಭೇಟಿಯಾಗಬೇಕು ಎಂದೆನಿಸಿದರೂ ಕೂಡ ನಿಮ್ಮ ಸಂಗಾತಿ ನಿರ್ಬಂಧ ಹೇರಬಹುದು. ಆದರೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗಾಗಿ ಸಮಯ ಮೀಸಲಿಡೋದು ತುಂಬಾನೇ ಮುಖ್ಯವಾಗುತ್ತದೆ. ಯಾಕೆಂದರೆ ನಿಮಗೆ ಸಂಗಾತಿ ಸಿಕ್ಕ ನಂತರ ನಿಮ್ಮ ಮೇಲೆ ಪ್ರೀತಿ ತೋರುತ್ತಿದ್ದ ನಿಮ್ಮ ಆಪ್ತರನ್ನು ಬಿಟ್ಟು ಬಿಡೋದಕ್ಕೆ ಆಗೋದಿಲ್ಲ. ಹೀಗಾಗಿ ಆಪ್ತರಿಗಾಗಿ ವೈಯಕ್ತಿಕ ಜಾಗ ನೀಡೋದು ತುಂಬಾನೇ ಮುಖ್ಯವಾಗುತ್ತದೆ.
2. ದಂಪತಿಗಳ ನಡುವೆ ನಂಬಿಕೆ ಹೆಚ್ಚಾಗುತ್ತದೆ
ಒರ್ವ ವ್ಯಕ್ತಿ ತನ್ನ ಪತಿ ಅಥವಾ ಪತ್ನಿಗೆ ವೈಯಕ್ತಿಕ ಜಾಗ ನೀಡುತ್ತಿದ್ದಾನೆ ಎಂದರೆ ಅದರ ಅರ್ಥ ಅವರು ತಮ್ಮ ಸಂಗಾತಿಯ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದ್ದಾರೆ ಅಂತಾನೇ ಹೇಳಬಹುದು. ನಂಬಿಕೆ ಇದ್ದಾಗ ಮಾತ್ರ ಒರ್ವ ವ್ಯಕ್ತಿ ಈ ರೀತಿ ನಡೆದುಕೊಳ್ಳೋದಕ್ಕೆ ಸಾಧ್ಯ. ಇದರಿಂದ ಅವರಿಬ್ಬರ ನಡುವೆ ಗೌರವ, ಪ್ರೀತಿ ಹೆಚ್ಚಾಗುತ್ತದೆ. ಒಬ್ಬರಿಗೊಬ್ಬರು ಮೋಸ ಮಾಡುವಂತಹ ಪ್ರಸಂಗಗಳೇ ಎದುರಾಗೋದಿಲ್ಲ. ಇದರಿಂದ ಸುಖ ಸಂಸಾರ ನಡೆಸೋದಕ್ಕೆ ಸಾಧ್ಯ.
3. ವೈಯಕ್ತಿಕ ಅಭಿವೃದ್ಧಿ ಸಾಧ್ಯವಾಗುತ್ತದೆ
ಸಂಗಾತಿಗಳಿಬ್ಬರ ನಡುವೆ ಪ್ರೀತಿ ಇರಬೇಕು. ಆದರೆ ಆ ಪ್ರೀತಿಯೇ ಅವರನ್ನು ಉಸಿರುಗಟ್ಟಿಸುವಂತೆ ಮಾಡಬಾರದು. ಇಡೀ ದಿನ ನಿಮ್ಮ ಪ್ರೀತಿಯ ಬಂಧನದಲ್ಲಿ ಅವರನ್ನು ಕಟ್ಟಿ ಹಾಕೋದು ಸರಿಯಲ್ಲ. ನಿಮ್ಮ ಸಂಗಾತಿಗೆ ವೈಯಕ್ತಿಕ ಜಾಗವನ್ನು ನೀಡಿದಾಗ ಅವರ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತದೆ. ಆಗ ನೀವಿಬ್ಬರೂ ಸೇರಿ ಆ ಸಾಧನೆಯ ಖುಷಿಯನ್ನು ಆಚರಣೆ ಮಾಡಬಹುದು.
4. ಯಾರ ಸಹಾಯವಿಲ್ಲದೇ ಸಮರ್ಥರಾಗಿ
ಕೆಲವೊಂದು ಸಲ ಪತ್ನಿ ಸಂಪೂರ್ಣವಾಗಿ ಪತಿಯ ಮೇಲೆ ಅವಲಂಬಿತಳಾಗಿ ಬಿಡುತ್ತಾಳೆ. ಪತಿ ಬಿಟ್ಟು ಬೇರೆ ಪ್ರಪಂಚ ಆಕೆಗೆ ಗೊತ್ತಿಲ್ಲ. ಏನು ಕೆಲಸ ಆಗಬೇಕಾದರೂ ಕೂಡ ಪ್ರತಿಯೊಂದನ್ನು ಪತಿಯೇ ಮಾಡಬೇಕು. ಆಕೆ ವೈಯಕ್ತಿಕ ಜಾಗ ಬೇಕೆಂದು ಕೂಡ ಬಯಸೋದಿಲ್ಲ. ಆದರೆ ಪತಿಯಾದವನು ಆಕೆಗೆ ಪರ್ಸನಲ್ ಸ್ಪೇಸ್ ನೀಡಬೇಕು. ಜೊತೆಗೆ ಒಬ್ಬಂಟಿಯಾಗಿ ಯಾವ ರೀತಿ ಬದುಕಬೇಕು ಅನ್ನೋದನ್ನ ತೋರಿಸಿ ಕೊಡಬೇಕು. ಯಾಕಂದ್ರೆ ಒಂದು ವೇಳೆ ಏಕಾಏಕಿ ಪತಿ ಇಲ್ಲವಾದರೆ ಪತ್ನಿಗೆ ಕೈ ಕಾಲು ಆಡೋದಿಲ್ಲ. ಆಕೆಗೆ ಏನು ಮಾಡಬೇಕು ಎಂದು ತೋಚೋದಿಲ್ಲ. ಆಕೆ ಒಬ್ಬಂಟಿಯಾಗಿ ಬಿಡುತ್ತಾಳೆ.
5. ಸಂಗಾತಿಯ ಆಸೆ, ಆಕಾಂಕ್ಷೆಗಳಿಗೂ ಬೆಲೆ ಕೊಡಿ
ಸಂಗಾತಿಯನ್ನು ಕೇವಲ ನಿಮ್ಮ ಪ್ರೀತಿಯೆಂಬ ಬಂಧನದಲ್ಲಿ ಬಚ್ಚಿಡೋದು ಸರಿಯಲ್ಲ. ಅವರಿಗೂ ಆಸೆ, ಆಕಾಂಕ್ಷೆಗಳಿರುತ್ತದೆ. ತನ್ನ ಸ್ನೇಹಿತರ ಜೊತೆಗೆ ಹೊರಗಡೆ ಹೋಗಬೇಕು, ಊರೆಲ್ಲಾ ಸುತ್ತಾಡೋ ಆಸೆ ಇರುತ್ತೆ ಅದನ್ನೆಲ್ಲಾ ಪೂರೈಸೋದಕ್ಕೆ ಪ್ತಯತ್ನಿಸಿ. ಆಕೆಗೆ ಮನಬಿಚ್ಚಿ ಮಾತನಾಡಲು ಅವಕಾಶ ನೀಡಿ.
ಪ್ರೀತಿಗೆ ಪವಿತ್ರವಾದ ಸ್ಥಾನವಿದೆ. ಈ ಪ್ರೀತಿ ನಿಮ್ಮವರನ್ನು ಉಸಿರುಗಟ್ಟಿಸಬಾರದಲ್ಲವೇ? ಹೀಗಾಗಿ ವೈಯಕ್ತಿಕ ಸ್ಥಳ ಅನ್ನೋದು ಪ್ರೀತಿಯಲ್ಲಿ ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications



