Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ
ಮಕ್ಕಳ ಮುಂದೆ ಪೋಷಕರು ಜಗಳವಾಡಿದರೆ ಮಕ್ಕಳಲ್ಲಿ ಆಗುತ್ತೆ ಈ ಬದಲಾವಣೆ
ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಯಿತು ಎನ್ನುವ ಮಾತು ಸಾರ್ವಕಾಲಿಕ ಸತ್ಯ ಎಂದೇ ಹೇಳಬಹುದು. ಯಾಕೆಂದರೆ ಸಾಮಾನ್ಯ ಹುಡುಗ ಹಾಗೂ ಹುಡುಗಿಯರ ನಡುವೆ ಸಾಕಷ್ಟು ವಿಚಾರದಲ್ಲಿ, ವಿಚಾರಧಾರೆಯಲ್ಲಿ ವ್ಯತ್ಯಾಸ ಇರುತ್ತದೆ ಒಬ್ಬರ ಮಾತನ್ನು ಇನ್ನೊಬ್ಬರು ಪ್ರತಿ ಬಾರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಜಗಳ ನಡೆಯುವುದು ಸಹಜ. ಹಾಗಂದ ಮಾತ್ರಕ್ಕೆ ನೀವು ನಿಮ್ಮ ಮಕ್ಕಳ ಎದುರಿನಲ್ಲಿಯೇ ಕಿತ್ತಾಡುವುದು ಎಷ್ಟು ಸರಿ?
ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೆ ಎಂದಷ್ಟೇ ಇದ್ದರೆ ಚಂದ. ಅದರ ಬದಲು ರೂಮ್ ನಿಂದ ಆಚೆಗೆ ಫೈಟಿಂಗ್ ಶುರುವಾದರೆ ಅದು ನೇರವಾಗಿ ಪರಿಣಾಮ ಬೀರುವುದು ನಿಮ್ಮ ಎದುರಿಗೆ ಇರುವ ಪುಟ್ಟ ಕಂದಮ್ಮನ ಮೇಲೆ. ಎಷ್ಟೋ ಬಾರಿ ಕೆಲವು ಪತಿ-ಪತ್ನಿ ಕೈ ಕೈ ಮಿಲಾಯಿಸಿ ಹೊಡೆದಾಟ ಮಾಡಿಕೊಳ್ಳುವ ಮಟ್ಟಕ್ಕೆ ಜಗಳವಾಡುತ್ತಾರೆ. ಕೇವಲ ಬಾಯಿ ಮಾತಲ್ಲಿ ಅಲ್ಲದೆ ಒಬ್ಬರನ್ನ ಒಬ್ಬರು ತಿಳಿಸುವಷ್ಟು ಕೋಪ ಕ್ರೋಧ ಬೆಳೆಸಿಕೊಂಡಿರುತ್ತಾರೆ. ಇವುಗಳನ್ನು ಮಗು ನೇರವಾಗಿ ನೋಡಿದಾಗ ಅದರ ಮನಸ್ಸಿನ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಒಂದು ಅಧ್ಯಯನದ ಪ್ರಕಾರ ಕೆಲವು ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಮೇಲೆ ನಡೆಸಿರುವ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ತಂದೆ ತಾಯಿ ಸದಾ ಸಂಘರ್ಷಕ್ಕೆ ಒಳಗಾಗಿರುವ ಮನೆಯಲ್ಲಿ ಬದುಕುವ ಮಗುವಿನಲ್ಲಿ ಒತ್ತಡದ ಹಾರ್ಮೋನು ಕಾರ್ಟಿಸೋಲ್ ಅಧಿಕವಾಗಿರುತ್ತದೆ ಶಾಂತವಾಗಿರುವ ಕುಟುಂಬದಲ್ಲಿ ಇರುವ ಮಗುವಿನಲ್ಲಿ ಒತ್ತಡದ ಹಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಇದರಿಂದಾಗಿ ಯಾವ ಮಗುವಿನಲ್ಲಿ ಕಾರ್ಟಿಸೋಲ್ ಹೆಚ್ಚಾಗಿರುತ್ತದೆಯೋ ಅಂತಹ ಮಗು ಅನಾರೋಗ್ಯಕ್ಕೆ ಒಳಗಾಗುತ್ತದೆ ಎಲ್ಲರ ಜೊತೆಗೆ ಸುಲಭವಾಗಿ ಬರೆಯುವುದಿಲ್ಲ ಶಾಲೆಗಳಲ್ಲಿ ಇತರರ ಜೊತೆಗೆ ಆಟ ಆಡುವುದು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇವುಗಳಿಂದ ಹಿಂದೆ ಉಳಿಯುತ್ತದೆ. ಎಲ್ಲರ ಜೊತೆಗೂ ಆ ಮಗು ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ. ಇನ್ನು ಕೆಲವು ಮಕ್ಕಳು ಬಹಳ ಕೋಪ ಹಾಗೂ ಕ್ರೋಧದ ಮನೋಭಾವ ಬೆಳೆಸಿಕೊಳ್ಳುತ್ತಾರೆ ಇದರಿಂದ ಇತರ ವಿದ್ಯಾರ್ಥಿಗಳಿಗೂ ಕೂಡ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಈ ರೀತಿ ಪೋಷಕರು ಜಗಳಾಡುವುದರಿಂದ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಗೊತ್ತೇ!?
ಮಗುವಿನ ಮನಸ್ಸಿನಲ್ಲಿ ಅಭದ್ರತೆ ಉಂಟಾಗಬಹುದು!
ಪಾಲಕರು ಅಂದರೆ ಮಕ್ಕಳಿಗೆ ಅವರನ್ನು ರಕ್ಷಿಸುವ ದೇವರು ಇದ್ದಂತೆ ಒಂದು ವೇಳೆ ಇಂತಹ ಪಾಲಕರೇ ಮಕ್ಕಳ ಎದುರಿಗೆ ಜಗಳ ಮಾಡಿಕೊಳ್ಳುವುದನ್ನು ಮಕ್ಕಳು ನೋಡಿದರೆ ಅವರ ಮನಸ್ಸಿನಲ್ಲಿ ಅಭದ್ರತೆ ಉಂಟಾಗುತ್ತದೆ ನಾನು ಯಾರನ್ನು ನಂಬಲಿ ಯಾರನ್ನು ರಕ್ಷಣೆಗಾಗಿ ಕೇಳಲಿ ಎನ್ನುವಂತಹ ಭಾವನೆ ಅವರನ್ನು ಕಾಡುತ್ತದೆ ಇದು ಮಕ್ಕಳ ಮನಸ್ಸನ್ನು ಬಹಳ ಬೇಗ ಘಾಸಿಗೊಳಿಸುತ್ತದೆ.
ಮಕ್ಕಳು ಪಾಲಕರನ್ನು ದ್ವೇಷಿಸಬಹುದು!
ಸದಾ ಮಕ್ಕಳ ಎದುರಿಗೆ ತಂದೆ ತಾಯಿಯನ್ನು ತಾಯಿ ತಂದೆಯನ್ನು ದೂಷಿಸುತ್ತಾ ಒಬ್ಬರನ್ನು ಒಬ್ಬರು ಬ್ಲೇಮ್ ಮಾಡುತ್ತಾ ಇದ್ದರೆ ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ತನ್ನ ತಂದೆ ತಾಯಿ ಸರಿ ಇಲ್ಲ ಎನ್ನುವ ಭಾವನೆ ಉಂಟಾಗಬಹುದು ಇದರಿಂದ ತಂದೆ ತಾಯಿಯ ಬಗ್ಗೆ ಯಾವುದೇ ಕಾರಣಕ್ಕೂ ಗೌರವ ಉಳಿಸಿಕೊಳ್ಳದೆ ಇರಬಹುದು ಇಂತಹ ಸಂದರ್ಭದಲ್ಲಿ ಪಾಲಕರು ಮಕ್ಕಳನ್ನು ಕಳೆದುಕೊಳ್ಳಬೇಕಾಗುತ್ತದೆ ಅಂದರೆ ಮಕ್ಕಳು ಪಾಲಕರ ಕೈ ತಪ್ಪಿ ಹೋಗಬಹುದು.
ಮಕ್ಕಳ ಮೇಲೆ ಒತ್ತಡ!
ಮಗು ಶಾಲೆಯಿಂದ ಮನೆಗೆ ಬರುವಾಗ ಮನೆಯ ವಾತಾವರಣ ಖುಷಿಯಿಂದ ಇದ್ದರೆ ಆ ಮಗು ಕೂಡ ಚೆನ್ನಾಗಿಯೇ ಅಭ್ಯಾಸ ಮಾಡುತ್ತದೆ ಹಾಗೂ ಆ ಮಗು ಕೂಡ ಉತ್ತಮ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತದೆ. ಒಂದು ವೇಳೆ ಪ್ರತಿದಿನ ತಂದೆ ತಾಯಿಯ ನಡುವೆ ಜಗಳ ಆಗುತ್ತಿರುವುದನ್ನು ನೋಡಿದರೆ ಮಗುವಿನ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಆಗ ಆ ಮಗು ಬೇರೆ ಯಾವ ಚಟುವಟಿಕೆಯಲ್ಲೂ ಪಾಲ್ಗೊಳ್ಳುವುದಿಲ್ಲ. ಮಕ್ಕಳ ಶಾಲೆಯ ವಿದ್ಯಾಭ್ಯಾಸ ಕೂಡ ಕುಂಠಿತಗೊಳ್ಳುತ್ತದೆ.
ಅನಾರೋಗ್ಯಕ್ಕೆ ದಾರಿಯಾಗಬಹುದು!
ಮನೆಯ ವಾತಾವರಣ ಚೆನ್ನಾಗಿದ್ದರೆ ಮಗುವು ಕೂಡ ಆರೋಗ್ಯಕರವಾಗಿಯೇ ಇರುತ್ತದೆ. ಆದರೆ ಯಾವಾಗ ಕುಟುಂಬದಲ್ಲಿ ಜಗಳ ಹೆಚ್ಚಾಗುತ್ತದೆಯೋ ಆಗ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯ ಮಾತ್ರವಲ್ಲದೆ ದೈಹಿಕ ಆರೋಗ್ಯವೂ ಕೂಡ ದಿನದಿಂದ ದಿನಕ್ಕೆ ಕುಂಠಿತಗೊಳ್ಳುತ್ತದೆ. ಸದಾ ಮನೆಯಲ್ಲಿ ಜಗಳ ಆಗುತ್ತಿದ್ದರೆ ಮಗು ಸರಿಯಾಗಿ ಊಟ ನಿದ್ದೆ ಮಾಡದೇ ಇರಬಹುದು ಅಥವಾ ಆ ಮಗುವಿನ ಬಗ್ಗೆ ತಂದೆ ತಾಯಿಗೆ ಲಕ್ಷ ಕೊಡಲು ಸಾಧ್ಯವಾಗದೇ ಇರಬಹುದು. ಇಂತಹ ಸಂದರ್ಭದಲ್ಲಿ ಮಗು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಬಹುದು ಖಿನ್ನತೆಯಂತಹ ಮಾನಸಿಕ ಅನಾರೋಗ್ಯ ಮಗುವನ್ನು ಕಾಡಬಹುದು. ಒಂದು ವೇಳೆ ಆರಂಭದ ಹಂತದಲ್ಲಿಯೇ ಇದು ಸರಿ ಹೋಗದೆ ಇದ್ದಲ್ಲಿ ಮಗು ದೊಡ್ಡವಳಾಗಿ ಅಥವಾ ದೊಡ್ಡವನಾಗಿ ಬೆಳೆದ ನಂತರವೂ ಅವರ ಮನಸ್ಸು ಸರಿ ಹೋಗುವುದಿಲ್ಲ.
ಪಾಲಕರೇ ಇನ್ನಾದರೂ ಎಚ್ಚೆತ್ತುಕೊಳ್ಳಿ!
ತಂದೆ ತಾಯಿಯ ಜಗಳದಿಂದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಅಂತಹ ಮಕ್ಕಳ ಜೀವನವೇ ಸರ್ವನಾಶ ಆಗಿರುವ ಸಾಕಷ್ಟು ಘಟನೆಗಳು ನಡೆದಿದೆ. ಗಂಡ ಹೆಂಡತಿ ಜಗಳ ಮಾಡಿಕೊಳ್ಳುವುದು ಸಾಮಾನ್ಯ ವಿಷಯ ಆದರೆ ಅದಕ್ಕೂ ಒಂದು ಮಿತಿ ಇರಬೇಕು ಮಕ್ಕಳ ಮುಂದೆ ನೀವು ಮನಸ್ಸಿಗೆ ಬಂದ ಹಾಗೆ ಕಿತ್ತಾಡಿದರೆ ಆ ಮಗು ಖಂಡಿತವಾಗಿಯೂ ಕೆಟ್ಟ ಭವಿಷ್ಯವನ್ನು ನೋಡಬೇಕಾಗುತ್ತದೆ. ಅಷ್ಟಾಗಿಯೂ ಗಂಡ ಹೆಂಡತಿ ಜಗಳ ನಿಲ್ಲಿಸಲು ಸಾಧ್ಯವಾಗದೇ ಇದ್ದಾಗ ವಿಚ್ಛೇದನ ತೆಗೆದುಕೊಳ್ಳುವುದು ಸೂಕ್ತ. ಬದಲಿಗೆ ಮಕ್ಕಳನ್ನ ಎದುರಿನಲ್ಲಿ ಇಟ್ಟುಕೊಂಡು ಜಗಳ ಆಡುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಇದು ಮನೆಯ ವಾತಾವರಣ ಹಾಳು ಮಾಡುವುದು ಮಾತ್ರವಲ್ಲದೆ ಮಕ್ಕಳ ಆರೋಗ್ಯದ ಮೇಲೆ ಮನಸ್ಸಿನ ಮೇಲೆ ಒಟ್ಟಾರೆಯಾಗಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ.



Click it and Unblock the Notifications











