Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೋಡಲು ತುಂಬಾ ಸುಂದರಿಯಾದ ಹೆಣ್ಣಿಗೇ ಕಾಡುವುದು ನೋವು, ಒಂಟಿತನ, ಕಾರಣವೇನಿರಬಹುದು?
ಹೆಣ್ಣಿಗೆ ಸೌಂದರ್ಯ ಶಾಪ ಎಂಬ ಮಾತಿದೆ, ತುಂಬಾನೇ ರೂಪವಂತಳಾಗಿದ್ದರೆ ಅವಳಿಗೆ ಸದಾ ನೋವು, ಒಂಟಿತನ ಕಾಡುತ್ತದೆ ಎಂದು ಹೇಳಲಾಗುವುದು. ಸಾಮಾನ್ಯ ರೂಪಿನ ಹೆಣ್ಮಕ್ಕಳಿಗಿಂತ ಅತಿ ನೋವು ಅನುಭವಿಸುವುದು ತುಂಬಾನೇ ಸೌಂದರ್ಯ ಇರುವ ಹೆಣ್ಮಕ್ಕಳು, ಸೌಂದರ್ಯದ ಖನಿಗೆ ಒಂಟಿತನ ಕಾಡುವುದಂತೆ, ಇದನ್ನು ಕೇಳಿದಾಗ ನಿಮಗೆ ಆಶ್ಚರ್ಯ ಅನಿಸಬಹುದು ಅಲ್ವಾ? ನೋಡಲು ತುಂಬಾನೇ ಅಂದವಾಗಿದ್ದರೆ ಈ ಸಮಸ್ಯೆಗಳನ್ನು ಎದುರಿಸುತ್ತಾರಂತೆ......

ಅವಳು ತುಂಬಾ ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ಅವಳ ಬಳಿ ಪ್ರೀತಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ
ಅವಳು ನೋಡುವುದಕ್ಕೆ ತುಂಬಾನೇ ಚೆನ್ನಾಗಿದ್ದಾಳೆ, ಅವಳಿಗೆ ಸಿಕ್ಕಾಪಟ್ಟೆ ಲವ್ ಪ್ರಪೋಸಲ್ ಬಂದಿರಬಹುದು ಎಂದು ನೋಡಲು ತುಂಬಾನೇ ಆಕರ್ಷಕವಾಗಿರುವ ಹೆಣ್ಮಕ್ಕಳ ಬಗ್ಗೆ ಅಭಿಪ್ರಾಯ ಹಲವರಲ್ಲಿದೆ ಅಲ್ವಾ? ಆದರೆ ಅವಳು ತುಂಬಾನೇ ಚೆನ್ನಾಗಿದ್ದಾಳೆ ಎಂದು ಅಂದುಕೊಳ್ಳುತ್ತಾರೆ, ಅಂಥ ರೂಪಸಿ ನನ್ನವಳಾಗಬೇಕು ಎಂದು ಪುರುಷರು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ, ಆದರೆ ಅವಳಿಗೆ ಲವ್ ಪ್ರಪೋಸ್ ಮಾಡುವ ಧೈರ್ಯ ಮಾಡಲ್ಲ. ಅವಳು ನನ್ನನ್ನು ಸ್ವೀಕರಿಸಲ್ಲ ಎಂಬ ಅಳುಕು ಕೆಲವರಲ್ಲಿ ಮೂಡಿದರೆ, ಇನ್ನು ಕೆಲವರು ಅವಳು ನೋಡಲು ಇಷ್ಟೊಂದು ಚೆನ್ನಾಗಿರುವಾಗ ಖಂಡಿತ ಬಾಯ್‌ಫ್ರೆಂಡ್ ಇರ್ತಾನೆ ಎಂದು ತಾವೇ ಊಹಿಸಿ ಅವಳಿಗೆ ಪ್ರಪೋಸ್ ಮಾಡಲು ಹೋಗಲ್ಲ.
ಈ ಕಾರಣಕ್ಕೆ ನೋಡಲು ತುಂಬಾ ಸುಂದರಿಯಾಗಿರುವ ಹೆಣ್ಮಕ್ಕಳಿಗೆ ಲವ್ ಪ್ರಪೋಸ್ ಬರುವುದು ತುಂಬಾ ಕಡಿಮೆ. ನೀವು ನಿಮ್ಮ ಸರ್ಕಲ್‌ನಲ್ಲಿಯೇ ಗಮನಿಸಿ ಸಾಧಾರಣ ರೂಪಿನ ಹೆಣ್ಣಿಗೆ ಲವ್ ಪ್ರಪೋಸ್ ಬರಬಹುದು, ಆದರೆ ತುಂಬಾ ಸುಂದರಿಯಾಗಿರುವ ಹೆಣ್ಣಿಗೆ ಲವ್ ಪ್ರಪೋಸ್ ಬರುವುದು ತುಂಬಾ ಕಡಿಮೆ.
ಚೆಲುವಿನ ಖನಿಗೆ ಒಂಟಿತನ ಹೆಚ್ಚಾಗಿ ಕಾಡುತ್ತದೆಯಂತೆ
ಇವರ ರೂಪ ನೋಡಿ ಎಷ್ಟೊಂದು ಚೆನ್ನಾಗಿದ್ದಾಳೆ ಎಂದು ಅಂದುಕೊಳ್ಳುತ್ತಾರೆ, ಆದರೆ ಅವಳ ಜೊತೆ ಬೆರೆಯಲು ಹಿಂದೇಟು ಹಾಕುತ್ತಾರೆ, ಅವಳಿಗೆ ಕೊಬ್ಬು ಇರಬಹುದು, ತಾನು ನೋಡುವುದಕ್ಕೆ ಚೆನ್ನಾಗಿದ್ದೇನೆ ಎಂಬ ಅಹಂಕಾರ ಅವಳ ತಲೆಯಲ್ಲಿದೆ ಎಂದು ತಾವಾಗಿಯೇ ಯೋಚಿಸಿ ಅವಳನ್ನು ದೂರವಿಡಲು ಪ್ರಯತ್ನ ಮಾಡುತ್ತಾರೆ. ಹೀಗಾಗಿ ಅವಳಿಗೆ ಒಂಟಿತನ ಕಾಡುವುದು. ತನ್ನನ್ನು ಯಾರೂ ಅಷ್ಟಾಗಿ ಪ್ರೀತಿಸುತ್ತಿಲ್ಲ, ನನ್ನಿಂದ ದೂರವುಳಿಯುತ್ತಾರೆ ಎಂಬ ಭಾವನೆ ಅವಳಿಗೆ ಮೂಡುವುದು.
ತುಂಬಾ ಸೌಂದರ್ಯವಿದ್ದರೆ ಸಂಗಾತಿಗೆ ಸಂಶಯ ಕಾಯಿಲೆ ಶುರುವಾಗುವುದು
ತನ್ನ ಪತ್ನಿ ತುಂಬಾ ಚೆನ್ನಾಗಿದ್ದಾಳೆ ಎಂಬ ಖುಷಿಯ ಜೊತೆಗೆ ಅವಳು ತುಂಬಾ ಚೆನ್ನಾಗಿದ್ದಾಳೆ ಎಂಬ ಕಾರಣಕ್ಕೆ ಅವನಿಗೆ ಸಂಶಯವೂ ಶುರುವಾಗುವುದು. ಈ ಕಾರಣಕ್ಕೆ ಅವರಿಬ್ಬರಲ್ಲಿ ಜಗಳಗಳು, ಮನಸ್ತಾಪಗಳು ಉಂಟಾಗಬಹುದು. ಈಕೆಗೆ ತನ್ನ ಸಂಗಾತಿ ನನ್ನನ್ನು ಅಷ್ಟಾಗಿ ಪ್ರೀತಿಸುತ್ತಿಲ್ಲ ಎಂದನಿಸಿದರೆ ಆಕೆಯ ಪತಿಗೆ ನನ್ನ ಪತ್ನಿಯ ಸೌಂದರ್ಯವನ್ನು ಪ್ರತಿಯೊಬ್ಬರು ಹೊಗಳುತ್ತಾರೆ ಎಂಬ ಕಾರಣಕ್ಕೆ ಅಸೂಯೆ ಕೂಡ ಉಂಟಾಗಬಹುದು. ಇಬ್ಬರು ಜೊತೆಯಾಗಿ ಹೋಗುವಾಗ ಅವಳನ್ನು ಎಲ್ಲರೂ ಗಮನಿಸುತ್ತಾರೆ ಎಂಬುವುದು ಆತನಲ್ಲಿ ಹೊಟ್ಟೆ ಕಿಚ್ಚು, ಅಸೂಯೆ, ಸಂಶಯ ಈ ಬಗೆಯ ಕಾಯಿಲೆಗಳನ್ನು ಹುಟ್ಟು ಮಾಡುತ್ತದೆ. ಇದನ್ನು ಆತ ತನ್ನ ವರ್ತನೆಯಲ್ಲಿ ವ್ಯಕ್ತಪಡಿಸಲಾರಂಭಿಸಿದಾಗ ಅವಳಿಗೂ ಕಿರಿಕಿರಿ, ನೋವು ಉಂಟಾಗುವುದು.
ತುಂಬಾನೇ ಸುಂದರಿಯಾಗಿರುವ ಹೆಣ್ಣಿಗೆ ಮದುವೆಗೆ ಹುಡುಗ ಹುಡುಕುವುದು ಕಷ್ಟ
ಅವಳ ರೂಪಕ್ಕೆ ಅನುರೂಪವಾದ ಹುಡುಗಬೇಕೆಂದು ಬಯಸಿದರೆ ಬೇಗನೆ ಮದುವೆ ಸೆಟ್ ಆಗಲ್ಲ, ಅವಳಂಥ ಚೆಲುವೆ ಮದುವೆಯಾಗಲು ಮುಂದೆ ಬರುವುದಕ್ಕಿಂತ ಹಿಂದೇಟು ಹಾಕುವ ಪುರುಷರೇ ಹೆಚ್ಚಿರುತ್ತಾರೆ, ಅದೇ ಮೊದಲೇ ಹೇಳಿದಂತೆ ಇವಳಿಗೆ ನಾನು ಸರಿಯಾದ ಜೋಡಿಯೇ ಎಂಬ ಅಳಕು ಅವನ ಮನಸ್ಸಿಗೆ ಬರುತ್ತದೆ. ಒಂದು ವೇಳೆ ಮದುವೆಯಾದರೂ ಅವನು ಅವಳ ಬಗ್ಗೆ ತುಂಬಾನೇ ಪೊಸೆಸಿವ್ ಆಗುವ ಸಾಧ್ಯತೆ ಇದೆ. ..
ಅಲ್ಲದೆ ತುಂಬಾ ಸುಂದರಿಯಾದ ಹೆಣ್ಣು ಎದುರಿಸುವ ಸಮಸ್ಯೆಗಳನ್ನು ಸಾಧಾರಣ ರೂಪಿನ ಹೆಣ್ಣು ಎದುರಿಸುವ ಪ್ರಸಂಗ ಬರಲ್ಲ, ಸೌಂದರ್ಯದ ಕಾರಣಕ್ಕೆ ಅವಳಲ್ಲಿ ಒಂಟಿತನ ಮಾತ್ರವಲ್ಲ ಅಸುರಕ್ಷತೆಯ ಭಾವನೆಯೂ ಉಂಟಾಗುವುದು. ಹಾಗಾಗಿಯೇ ಹೇಳುವುದು ಹೆಣ್ಣಿಗೆ ಅತಿಯಾದ ಸೌಂದರ್ಯ ಶಾಪ ಅಂತ..................



Click it and Unblock the Notifications
