Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ತಾನು ಪ್ರೀತಿಸುವ ಹುಡುಗಿಯ ನಿರ್ಲಕ್ಷಿಸುವ ಪುರುಷ: ಏಕೆ ಗೊತ್ತಾ?
ಮಹಿಳೆಯರ ಮನದಲ್ಲಿ ಯಾವ ವಿಚಾರ ಓಡುತ್ತಿದೆ ಅಂತ ಅಂದಾಜು ಮಾಡಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತಿದೆ. ಯಾಕಂದ್ರೆ ಆಕೆ ಕ್ಷಣ ಕ್ಷಣಕ್ಕು ಬದಲಾಗುವ ಚಂಚಲೆಯಂತೆ. ಅವರ ಅರ್ಥ ಮಾಡಿಕೊಳ್ಳೋಕೆ ಯಾರಿಂದಲೂ ಸಾಧ್ಯವಿಲ್ಲ ಅನ್ನೋ ಮಾತು ಸಹ ಇದೆ. ಆದರೆ ಭಾವನೆಗಳ ವಿಚಾರದಲ್ಲೂ ಸಹ ಮಹಿಳೆಯ ಮನದಲ್ಲಿ ಯಾವ ಆಲೋಚನೆಗಳಿವೆ ಎಂಬುದನ್ನು ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲವಂತೆ.
ಅದರಂತೆ ಪುರುಷರು ಸಹ ಅವರ ಮನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥೈಸಲು ಸಾಧ್ಯವಿಲ್ಲ. ಅದು ಅಷ್ಟೊಂದು ಸುಲಭವಲ್ಲ, ಅವರು ಯಾವ ವಿಚಾರಕ್ಕೆ ಹೇಗೆ ವರ್ತಿಸುತ್ತಾರೆ. ಯಾವ ವಿಚಾರವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದು ನಿಜಕ್ಕೂ ನಿಗೂಢವೆ.

ನಿಜ ಹೇಳಬೇಕೆಂದರೆ ಅವರು ತಮ್ಮೊಳಗಿನ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಅವರು ಅದನ್ನು ಅನೇಕ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಪುರುಷರು ಹೇಗೆ ಇರಬೇಕು ಎಂದು ಸಮಾಜವು ವಿಧಿಸಿರುವ ಕೆಲವು ನಿಯಮಗಳು ಪುರುಷರು ತಮ್ಮ ಭಾವನೆಗಳನ್ನು ನಿಗ್ರಹಿಸುವಂತೆ ಮಾಡುತ್ತವೆ.
ಅದರಲ್ಲು ಪುರುಷರ ಕೆಲವೊಂದು ವರ್ತನೆಗಳು ತುಂಬಾನೆ ನಿಗೂಢ ಪ್ರಶ್ನೆಗಳ ಹುಟ್ಟುಹಾಕುತ್ತವೆ. ಅದ್ರಲ್ಲಿ ಒಬ್ಬ ಹುಡುಗ ಒಬ್ಬ ಹುಡುಗಿಯನ್ನು ನಿರಾಕರಿಸಲು ಆರಂಭಿಸಿದರೆ ಅಕೆ ವಿನಾಕಾರಣ ಆತ ಏಕೆ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂಬ ಗೊಂದಲಕ್ಕೆ ಬೀಳುತ್ತಾಳೆ. ಆದರೆ ಆತನದಲ್ಲಿ ನಡೆಯುವ ಆಲೋಚನೆ ಇದಕ್ಕಿಂತ ಭಿನ್ನವಾಗಿರುತ್ತೆ.
ಪ್ರೀತಿಯನ್ನ ಸಂಬಂಧವಾಗಿ ಪರಿವರ್ತಿಸಲು ಸಿದ್ಧರಿಲ್ಲ
ಪ್ರೀತಿಯಲ್ಲಿ ಬೀಳುವುದು ಸುಲಭ. ಆದರೆ ಸದನ್ಉ ಉಳಿಸಿಕೊಳ್ಳುವು ಕಷ್ಟ ಎಂಬ ಮಾತಿನಂತೆ ಇಲ್ಲಿ ಹುಡುಗ ಆ ಪ್ರೀತಿಯನ್ನು ಗಟ್ಟಿಯಾದ ಸಂಬಂಧವನ್ನಾಗಿ ಪರಿವರ್ತಿಸಲು ಸಿದ್ದವಿಲ್ಲದೆ ಇದ್ದಾಗ ಆತ ನಿಮ್ಮ ಕಡೆ ನಿರ್ಲಕ್ಷಿಸಿದಂತೆ ವರ್ತಿಸಬಹುದು. ಆದರೆ ಆತನ ಮನದಲ್ಲಿ ಎಂದಿಗೂ ನಿಮ್ಮ ಕುರಿತ ನೆನಪು ಕಾಡುತ್ತಲೇ ಇರುತ್ತದೆ.
ಸಂಬಂಧ ಮುರಿದು ಬೀಳುವ ಭಯ
ಪ್ರೇಮ ನಿವೇದನೆ ಮಾಡಿಕೊಂಡರೆ ತಮ್ಮ ಬಾಂಧವ್ಯ ಇಲ್ಲಿಗೆ ಅಂತ್ಯವಾಗಲಿದೆ ಎಂಬ ಭಯ ಅವರಲ್ಲಿ ಕಾಡುತ್ತಿರುತ್ತದೆ. ಒಳಗೊಳಗೆ ಗಾಢವಾದ ಪ್ರೀತಿ ಇದ್ದರೂ ನಾಚಿಕೆಯಿಂದಲೋ, ಹಿಂಜರಿಕೆಯಿಂದಲೋ ಹೇಳಿಕೊಳ್ಳದ ಎಷ್ಟೋ ಪುರುಷರು ಇದ್ದಾರೆ.
ಕೆಲಸ ಹಾಗೂ ಕೋಪ
ನಿಮ್ಮನ್ನು ಗಾಢವಾಗಿ ಪ್ರೀತಿಸುತ್ತಿದ್ದರೂ ಕೂಡ ಆತ ನಿರ್ಲಕ್ಷ ಮಾಡಿದಂತೆ ವರ್ತಿಸುತ್ತಾನೆ. ಇದಕ್ಕೆ ಆತನಲ್ಲಿರುವ ಕೋಪ ಹಾಗೂ ಕೆಲಸದ ಒತ್ತಡ ಕಾರಣವಾಗಿರಬಹುದು. ಪುರುಷರು ಕೆಲವೊಮ್ಮೆ ಜೀವನದ ಬಿಡುವಿಲ್ಲದ ಕಾರಣ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಕುಟುಂಬ, ಕೆಲಸ, ಸ್ನೇಹಿತರು ಮತ್ತು ಇತರ ಭಾವೋದ್ರೇಕಗಳ ನಡುವೆ ಸಂಬಂಧವನ್ನು ಸಾಗಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ.
ಪ್ರೀತಿ ಪಾತ್ರರು ದೂರಾಗುವ ಭಯ
ಯಾವಾಗಲು ತಮ್ಮ ಪ್ರೀತಿ ಪಾತ್ರರೊಂದಿಗೆ ತುಂಬಾನೆ ಪ್ರೀತಿ ತೋರುವುದು, ಅವರ ಇಂಪ್ರೆಸ್ ಮಾಡುವುದು ಎಲ್ಲಿಯಾದರು ಅವರ ಸಂಬಂಧಕ್ಕೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಇಷ್ಟವಿಲ್ಲದೆ ನಿಮ್ಮನ್ನು ನಿರ್ಲಕ್ಷಿಸಿರಬಹುದು. ಇದರಲ್ಲಿ ನಿಮ್ಮನ್ನು ಪ್ರೀತಿಸುತ್ತಿದ್ದರೂ ಕೂಡ ಈ ಮಾತು ಹೇಳದೆ ಅವರು ನಿರ್ಲಕ್ಷ ತೋರಬಹುದು.
ಸಂಬಂಧ ಇಷ್ಟವಿಲ್ಲದೆಯೂ ಇರಬಹುದು
ಕೆಲವೊಮ್ಮೆ ಪ್ರೀತಿ ಇಷ್ಟವಿಲ್ಲದ ಕಾರಣದಿಂದಲೂ ನಿಮ್ಮನ್ನು ಅವರು ನಿರ್ಲಕ್ಷಿಸಿರಬಹುದು. ಆದರೆ ಅದನ್ನು ನಿಮ್ಮ ಮುಂದೆ ಹೇಳಲಾಗದೆ ಅವರು ನಿರ್ಲಕ್ಷ ಮಾಡುತ್ತಿರಬಹುದು.



Click it and Unblock the Notifications
