Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಕಾರಣಗಳಿಂದಾಗಿ ಜೋಡಿಗಳಿಗೆ ಮಳೆಯಲ್ಲಿ ರೊಮ್ಯಾಂಟಿಕ್ ಟ್ರಿಪ್‌ಗೆ ಕೊಡಗು ಬೆಸ್ಟ್
ವೀಕೆಂಡ್‌ಗೆ ನೀವೊಂದು ರೊಮ್ಯಾಂಟಿಕ್ ಟ್ರಿಪ್ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದರೆ ಬೆಂಗಳೂರಿನಿಂದ 250 ಕಿ. ಮೀ ದೂರು ಕ್ರಮಿಸಿದರೆ ಚುಮು-ಚುಮು ಮಳೆಯಲ್ಲಿ ನಾನು-ನೀನು ಜೊತೆಯಲ್ಲಿ ಎಂದು ಹಾಡುತ್ತಾ ರೊಮ್ಯಾಂಟಿಕ್ ಟ್ರಿಪ್ ಮಾಡಲು ಕೊಡಗು ತುಂಬಾನೇ ಸೂಕ್ತವಾಗಿದೆ. ಅದರಲ್ಲೂ ನೀವು ಅಡ್ವೆಂಚರ್ ಇಷ್ಟಪಡುವುದಾದರೆ ಇಲ್ಲಿಯ ತಾಣಗಳು ನಿಮ್ಮ ನಿರೀಕ್ಷೆಗೆ ಹೇಳಿ ಮಾಡಿಸಿದಂತಿದೆ.
ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗು ಪ್ರವಾಸಿಗರನ್ನು ತನ್ನ ರಮಣೀಯ ಸೌಂದರ್ಯದಿಂದ ಕೈ ಬೀಸಿ ಕರೆಯುತ್ತಿದೆ. ಇದೀಗ ಮಳೆಗಾಲ, ಮಳೆಗಾಲದಲ್ಲಂತೂ ಇಲ್ಲಿಯ ಸ್ಥಳಗಳು ಹೊಸದಾಗಿ ಮದುವೆಯಾದ ಜೋಡಿಗಳಿಗೆ ಹನಿಮೂನ್‌ಗೆ ಹೇಳಿ ಮಾಡಿಸಿದಂತಾಗಿದೆ. ಕೈ ಕೈ ಹಿಡಿದು ಅಬ್ಬಿ ಜಲಪಾತವನ್ನು ಕಣ್ತುಂಬಿಕೊಳ್ಳುವುದೇ ಸಕತ್ ರೊಮ್ಯಾಂಟಿಕ್ ಆಗಿರುತ್ತದೆ. ಬರೀ ಹೊಸದಾಗಿ ಮದುವೆಯಾದವರಷ್ಟೇ ಅಲ್ಲ, ಮದುವೆಯಾಗಿ ಹಲವು ವರ್ಷಗಳು ಕಳೆದಿದ್ದು ಇದೀಗ ಸಂಸಾರ ಜಂಜಾಟ ಅಂತ ಒದ್ದಾಡುತ್ತಿರುವಾಗ ಇಂಥ ಸ್ಥಳಗಳಿಗೆ ಸಂಗಾತಿ ಜೊತೆ ಬಂದು ಹೋದರೆ ಒಂಥರಾ ರಿಫ್ರೆಷ್ ಆದಂತಾಗುವುದು, ಇಬ್ಬರಲ್ಲಿ ಮರೆಯಾಗಿದ್ದ ರೊಮ್ಯಾಂಟಿಕ್ಸ್ ಫೀಲಿಂಗ್ಸ್ ಮತ್ತೆ ಚಿಗುರೊಡೆಯುವುದು.

ಅಡ್ವೆಂಚರ್ ಇಷ್ಟ ಪಡುವ ಜೋಡಿಗಳಿಗೆ ಬೆಸ್ಟ್ ಪ್ಲೇಸ್
ಇನ್ನು ಇಲ್ಲಿ ರಿವರ್ ರ‍್ಯಾಫ್ಟಿಂಗ್, ಮಾಂದಲ್ ಪಟ್ಟಿ ಟ್ರಕ್ಕಿಂಗ್, ಕೆಲವೊಂದು ಅಡ್ವೆಂಚರಸ್ ಗೇಮ್‌ಗಳು ಎಲ್ಲಾ ಇರುವುದರಿಂದ ಅಡ್ವೆಂಚರ್ ಪ್ರೇಮಿಗಳಿಗೆ ತುಂಬಾನೇ ಇಷ್ಟವಾಗುವುದು. ಬೆಂಗಳೂರಿನಿಂದ ಒಂದು ಎರಡು ದಿನದ ಶಾರ್ಟ್ ಟ್ರಿಪ್ ಹೋಗಿ ಬರೋಣ ಎಂದು ಬಯಸುವ ಜೋಡಿಗಳು ಈ ಸ್ಥಳಕ್ಕೆ ಭೇಟಿ ನೀಡಬಹುದು.
ಬೈಕ್ ಪ್ರೇಮಿಗಳಿಗಂತೂ ಸ್ವರ್ಗ
ಮಳೆಯಲ್ಲಿ ಜೋಡಿಯಾಗಿ ರೈಡ್ ಹೋಗುವುದು ಅಂದರೆ ತುಂಬಾ ಜನರಿಗೆ ತುಂಬಾನೇ ಇಷ್ಟ. ಮಳೆ ಸುರಿಯುತ್ತಿರುವಾಗ ಜಾಲಿ ರೈಡ್ ಹೋಗುವುದು ತುಂಬಾ ಖುಷಿ ನೀಡುವುದು
ರೊಮ್ಯಾಂಟಿಕ್ ಟ್ರಿಪ್ ನಿಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುವುದು
ದಿನಾ ಕೆಲಸದ ಒತ್ತಡ, ಟಾರ್ಗೆಟ್ ಟೆನ್ಷನ್ ಅಂತ ಇರುವವರಿಗೆ ತಮಗಾಗಿ ಸಮಯ ಕಂಡುಕೊಳ್ಳುವುದೇ ಕಷ್ಟವಾಗುವುದು. ಎಷ್ಟೋ ಸಂಸಾರಗಳಲ್ಲಿ ಕೆಲಸದ ಒತ್ತಡದ ಸಂಸಾರದ ಮೇಲೆ ಗಂಭೀರ ಪ್ರಭಾವ ಬೀರುತ್ತಿದೆ. ಇಂಥ ಚಿಕ್ಕ ಟ್ರಿಪ್ ನಿಮ್ಮಲ್ಲಿ ನವಚೈತನ್ಯ ಮೂಡುವಂತೆ ಮಾಡುವುದರಲ್ಲಿ ನೋ ಡೌಟ್...
ಜೋಡಿಗಳು ಈ ರೀತಿಯ ಶಾರ್ಟ್ ಟ್ರಿಪ್ ಮಾಡುವುದರಿಂದ ದೊರೆಯುವ ಪ್ರಯೋಜನಗಳು
* ಇಬ್ಬರ ನಡುವೆ ಅನುರಾಗ ಹೆಚ್ಚುವುದು
* ಒಬ್ಬರಿಗೊಬ್ಬರು ತುಂಬಾ ಸಮಯ ನೀಡುವುದರಿಂದ ನಿಮ್ಮವರನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು
* ಕೆಲಸದ ಒತ್ತಡ ಕಡಿಮೆಯಾಗುವುದು
* ಹೊಸ ಉತ್ಸಾಹದಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಮರಳಬಹುದು



Click it and Unblock the Notifications
