Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಗಾತಿಗೆ ಪ್ರತಿನಿತ್ಯ ಅಪ್ಪುಗೆ ನೀಡಿದರೆ ಬದುಕಿಗೆ ಇಷ್ಟೆಲ್ಲಾ ಒಳಿತಿದೆ ಗೊತ್ತಾ?
ಒಂದು ಅಪ್ಪುಗೆ ಸಾಕು ಆ ವ್ಯಕ್ತಿ ನಾವೆಷ್ಟು ಮುಖ್ಯ ಎಂದು ತಿಳಿಸಲು, ಪರಸ್ಪರ ಅಪ್ಪಿಕೊಂಡು ವಿಶ್ ಮಾಡುತ್ತೇವೆ, ಆದರೆ ಬಿಗಿದಪ್ಪಿ ಮುದ್ದಾಡುವುದು, ಸಂತೈಸುವುದು ನಮಗೆ ಆ ವ್ಯಕ್ತಿ ಅಷ್ಟು ಮುಖ್ಯವಾಗಿರಬೇಕು ಅಂತವರನ್ನು ಮಾತ್ರ.
ಅಪ್ಪುಗೆಯಲ್ಲಿ ಹಲವಾರು ವಿಧ, ಅಪ್ಪ-ಅಮ್ಮನ ಅಪ್ಪುಗೆಯಲ್ಲಿ ಮಮತೆ ಕಂಡರೆ , ಸ್ನೇಹಿತರ ಅಪ್ಪುಗೆಯಲ್ಲಿ ಸ್ನೇಹ, ಸಂಗಾತಿಯ ಅಪ್ಪುಗೆಯಲ್ಲಿ ಪ್ರೀತಿ ವ್ಯಕ್ತವಾಗುತ್ತದೆ, ಅವರು ಅಪ್ಪಿಕೋಂಡಾಗ ಆ ಅನುಭವ ನಮ್ಮ ಅನುಭವಕ್ಕೆ ಬರುತ್ತದೆ, ಆದ್ದರಿಂದ ಎಲ್ಲಾ ಅಪ್ಪುಗೆ ಒಂದೇ ಅಲ್ಲ...ಅದರಲ್ಲೂ ರೊಮ್ಯಾಂಟಿಕ್ ಸಂಬಂಧದಲ್ಲಿ ಅಪ್ಪುಗೆ ತುಂಬಾನೇ ಮುಖ್ಯ...

ರೊಮ್ಯಾಂಟಿಕ್ ಅಪ್ಪುಗೆ ಪ್ರೀತಿ ಬಂಧವನ್ನು ಗಟ್ಟಿಯಾಗಿಸುತ್ತದೆ
ಸಂಗಾತಿ ಹಾಗೂ ನಿಮ್ಮ ನಡುವೆ ಅಪ್ಪುಗೆ ಕಡಿಮೆಯಾದರೆ ಆ ಸಂಸಾರದಲ್ಲಿ ಏನೋ ಸಮಸ್ಯೆಯಿದೆ ಎಂದರ್ಥ, ಒಂದು ಅಪ್ಪುಗೆ ಸಂಗಾತಿಯ ಸುಖ ನಿದ್ದೆಗೆ ಕಾರಣವಾಗುತ್ತದೆ, ಅದೇ ಪಕ್ಕದಲ್ಲಿ ಮಲಗಿರುವ ತನ್ನವನು/ತನ್ನವಳು ಒಂದು ಅಪ್ಪುಗೆ ನೀಡದಿದ್ದರೆ ಮನಸ್ಸಿನಲ್ಲಿ ಏನೋ ಕಳವಳ, ಎಷ್ಟೇ ಹೊರಳಾಡಿದರೂ ನಿದ್ದೆ ಕಣ್ಣಿಗೆ ಹತ್ತುವುದು ಕಷ್ಟವಾಗುವುದು. ಮನಸ್ಸಿಗೆ ತುಂಬಾನೇ ಕಷ್ಟವಾಗುವುದು ಅಲ್ವಾ?
ಅದೇ ಒಂದು ಅಪ್ಪುಗೆ ನಮ್ಮೆಲ್ಲಾ ಕೋಪ, ಮುನಿಸು ಎಲ್ಲವನ್ನು ದೂರ ಮಾಡಿ, ನಮ್ಮನ್ನು ಹತ್ತಿರ ಮಾಡುತ್ತದೆ, ಸಂಗಾತಿ ಬಿಸಿ ಅಪ್ಪುಗೆ ಐಸ್‌ಕ್ರೀಮ್‌ನಂತೆ ಕರಗುವಂತೆ ಮಾಡುತ್ತದೆ, ಎಲ್ಲಾ ಮರೆತು ಒಂದಾಗುತ್ತೇವೆ. ಆದ್ದರಿಂದ ರಿಲೇಷನ್‌ಶಿಪ್ ಎಕ್ಸ್‌ಪರ್ಟ್ ಪ್ರೇಮ ಹಾಗೂ ದಾಂಪತ್ಯ ಜೀವನದಲ್ಲಿ ಅಪ್ಪುಗೆ ತುಂಬಾನೇ ಮುಖ್ಯ ಎಂದು ಹೇಳಲಾಗುವುದು.
ಅಪ್ಪುಗೆ ನಮ್ಮ ಸಂಬಂಧವನ್ನು ಹೇಗೆ ಗಟ್ಟಿಯಾಗಿಸುತ್ತದೆ?
ಒಬ್ಬರನ್ನೊಬ್ಬರು ಅಪ್ಪಿಕೊಂಡಾಗ ಅವರ ಎಮೋಷನಲ್ ನಮಗೆ ಅರ್ಥವಾಗುವುದು, ನಮ್ಮ ಸಂಗಾತಿ ಬೇಸರದಲ್ಲಿ ಇದ್ದಾರೆಯೇ?ಖುಷಿಯಲ್ಲಿ ಇದ್ದಾರೆಯೇ, ರೊಮ್ಯಾಂಟಿಕ್ ಮೂಡ್‌ನಲ್ಲಿ ಇದ್ದಾರೆಯೇ? ಎಂಬುವುದನ್ನು ಅವರ ಅಪ್ಪುಗೆಯೇ ಹೇಳುತ್ತದೆ, ಇಲ್ಲಿ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪದಗಳು ಬೇಕಾಗಿರಲ್ಲ, ಹೇಳದೆಯೇ ಅವರ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಅವರು ನೀಡುವ ಅಪ್ಪುಗೆ ನಮ್ಮ ಮನಸ್ಸಿನ ಭಾರವೆಲ್ಲಾ ಕಡಿಮೆ ಮಾಡುವುದು.
ಸುರಕ್ಷತೆ ಭಾವನೆ ನೀಡುತ್ತದೆ
ಸಂಗಾತಿಯ ನಡುವೆ ಅಪ್ಪುಗೆ ಸುರಕ್ಷತೆಯ ಭಾವನೆಯನ್ನು ನೀಡುತ್ತದೆ. ಅವರು ನಮಗಾಗಿ ಸದಾ ಇದ್ದಾರೆ ಎಂಬ ಸುರಕ್ಷತೆಯ ಭಾವನೆಯನ್ನು ಅಪ್ಪುಗೆ ನೀಡುವುದು. ನಾವು ನಮ್ಮ ಪ್ರೀತಿಯ ವ್ಯಕ್ತಿಗೆ ಅಪ್ಪುಗೆ ನೀಡಿದಾಗ ಅವರಲ್ಲಿರುವ ಮಾನಸಿಕ ಒತ್ತಡ ಕಡಿಮೆಯಾಗುವುದು. ಅಲ್ಲದೆ ಖಿನ್ನತೆಯನ್ನು ಕಡಿಮೆಯಾಗುವುದು. ಅಲ್ಲದೆ ಒಳ್ಳೆಯ ಸಂಬಂಧ ಆರೋಗ್ಯಕ್ಕೂ ಒಳ್ಳೆಯದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇಬ್ಬರು ಪ್ರೀತಿಯಿಂದ ನೀಡುವ ಅಪ್ಪುಗೆ ನಮ್ಮ ಬಾಂಧವ್ಯ ಗಟ್ಟಿಯಾಗಿದೆ ಎಂಬುವುದನ್ನು ತೋರಿಸುತ್ತದೆ, ಅವರು ಸಂಬಂಧದಲ್ಲಿ ಸುರಕ್ಷತೆ ಬಾವ ಅನುಭವಿಸುತ್ತಾರೆ. ಸುರಕ್ಷತೆ ಭಾವನೆ ಇಲ್ಲಿದ್ದಾಗ ಮಾತ್ರ ಸಂಶಯ ಮೂಡುವುದು, ಆದರೆ ಇಬ್ಬರು ಖುಷಿಯಾಗಿದ್ದಾಗ ಅಂಥ ಭಾವನೆ ಬರಲ್ಲ.
ಇಬ್ಬರೂ ಖುಷಿಯಾಗಿರುತ್ತೀರಿ
ಒಂದು ಅಪ್ಪುಗೆ ಇಬ್ಬರನ್ನೂ ಖುಷಿಯಾಗಿಡುತ್ತದೆ, ಇಬ್ಬರು ತಮ್ಮ ಭಾವನೆಗಳನ್ನು ತಿಳಿಸಬಹುದು, ಇಬ್ಬರ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೆ ಎಲ್ಲವೂ ಸರಿಯಾಗುವುದು, ಅಲ್ಲದೆ ಇಬ್ಬರೂ ಖುಷಿಯಾಗಿರುತ್ತೀರಿ, ಇಬ್ಬರು ಮನಸ್ಸು ಬಿಚ್ಚಿ ಮಾತನಾಡುತ್ತೀರಿ, ಇದರಿಂದ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು.
ಕುಟುಂಬಕ್ಕೂ, ಕೆಲಸಕ್ಕೂ ಒಳ್ಳೆಯದು
ಗಂಡ-ಹೆಂಡತಿ ಖುಷಿಯಾಗಿದ್ದರೆ ಆ ಕುಟುಂಬ ತುಂಬಾ ಚೆನ್ನಾಗಿರುತ್ತದೆ, ಅಲ್ಲದೆ ಇಬ್ಬರು ಖುಷಿಯಾಗಿದ್ದರೆ ತಮ್ಮ ಕುಟುಂಬದ ಕಡೆಗೆ ಗಮನ ನೀಡಲು ಸಾಧ್ಯವಾಗುವುದು. ಹಾಗಾಗಿ ಅಪ್ಪುಗೆ ಕುಟುಂಬದ ಒಳಿತಿಗೂ ಒಳ್ಳೆಯದು, ಅಪ್ಪುಗೆಯಲ್ಲಿ ಇಷ್ಟೆಲ್ಲಾ ಮ್ಯಾಟರ್ ಇವೆ, ಆದ್ದರಿಂದ ನೀವು ನಿಮ್ಮ ಸಂಗಾತಿಗೆ ದಿನಕ್ಕೊಮ್ಮೆಯಾದರೂ ಒಂದು ಅಪ್ಪುಗೆ ನೀಡಿ, ದೂರವಿದ್ದರೆ ಒಳ್ಳೆಯ ಮಾತುಗಳನ್ನಾಡಿ.



Click it and Unblock the Notifications
