Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮದುವೆಗೆ ಜಾತಕ ಮ್ಯಾಚ್‌ಗಿಂತ ಬಹುಮುಖ್ಯ ನೋಡಿ ಈ ಹೆಲ್ತ್ ಚೆಕಪ್
ಜಾತಕ ಕೂಡಿ ಬಂದರೆ , ಹುಡುಗ ಹುಡುಗಿ ಒಬ್ಬರನ್ನೊಬ್ಬರು ಇಷ್ಟ ಪಟ್ಟರೆ ಮದುವೆ ಮಾಡಿಸುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ.
ಇನ್ನೂ ಕೆಲವು ಕಡೆಗಳಲ್ಲಂತೂ ವಧು ವರರ ಅಭಿಪ್ರಾಯಗಳನ್ನೂ ಕೇಳದೇ ಮನೆಯವರೇ ನಿರ್ಧರಿಸಿ ವಿವಾಹ ಕಾರ್ಯ ನೆರವೇರಿಸಿದ ಸಾಕಷ್ಟು ಉದಾಹರಣೆಗಳು ನಮ್ಮ ನಡುವೆ ಇದೆ. ಆದರೆ ಮದುವೆ ಎಂದರೆ ಕೇವಲ ಇಷ್ಟೇ ಅಲ್ಲ. ಮದುವೆ ಆಗಬೇಕು ಎಂದು ನೀವು ನಿರ್ಧಾರ ಮಾಡಿದ ಸಂದರ್ಭದಲ್ಲಿ ನೀವು ಆರೋಗ್ಯದ ವಿಚಾರದಲ್ಲಿಯೂ ಮದುವೆಯಾಗಲು ಸದೃಢರಿದ್ದೀರಿ ಎಂಬುದನ್ನೂ ನೀವು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ..?

ಮದುವೆಗೂ ಮುನ್ನ ಆರೋಗ್ಯ ಪರೀಕ್ಷೆ ಏಕೆ ಅಗತ್ಯ..?
ಇಂಥಹದ್ದೊಂದು ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜ. ಮದುವೆಯ ಸಂದರ್ಭದಲ್ಲಿ ಮನಸ್ಸುಗಳು ಜೊತೆಯಾದರೆ ಸಾಕಲ್ಲವೇ..? ಆರೋಗ್ಯವೂ ಜೊತೆಯಾಗಬೇಕೇ..? ಎನ್ನುವ ಪ್ರಶ್ನೆ ಉದ್ಭವಿಸಬಹುದು. ಆದರೆ ಮದುವೆಯಾದ ಬಳಿಕ ಸತಿ ಪತಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವುದಕ್ಕೂ ಮುನ್ನ ಈ ವಿಚಾರದಲ್ಲಿ ನೀವು ಎಷ್ಟು ಆರೋಗ್ಯವಂತರಿದ್ದೀರಿ..? ನಿಮ್ಮಿಂದ ನಿಮ್ಮ ಸಂಗಾತಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲವಾ..?ನಿಮಗೆ ಯಾವುದಾರೂ ಲೈಂಗಿಕ ಸೋಂಕುಗಳು ಇರಬಹುದೇ..? ಎಂಬೆಲ್ಲ ವಿಚಾರಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.
ಕೇವಲ ಲೈಂಗಿಕ ವಾಗಿ ನೀವು ಆರೋಗ್ಯವಾಗಿದ್ದೀರೇ..? ಎಂದು ತಿಳಿದುಕೊಳ್ಳುವುದು ಮಾತ್ರವಲ್ಲ. ಉಳಿದೆಲ್ಲ ವೈದ್ಯಕೀಯ ಪರೀಕ್ಷೆಗಳನ್ನು ಮೊದಲೇ ಮಾಡಿಸಿಕೊಂಡರೇ ಭವಿಷ್ಯದ ದೃಷ್ಟಿಯಿಂದ ನಿಮಗೂ ಒಳ್ಳೆಯದು. ಇದು ಮಾತ್ರವಲ್ಲದೇ ಮದುವೆಯಾಗಲಿರುವ ವಧು - ವರರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿಕೊಳ್ಳಬೇಕು. ಅಲ್ಲದೇ ನಿಮ್ಮ ಕುಟುಂಬಕ್ಕೆ ಅನುವಂಶೀಯವಾಗಿ ಯಾವುದಾದರೂ ಆರೋಗ್ಯ ಸಮಸ್ಯೆ ಬಾಧಿಸುತ್ತಿದ್ದಲ್ಲಿ ಮದುವೆಗೂ ಮುಂಚೆಯೇ ನಿಮ್ಮ ಸಂಗಾತಿಯಾಗುವವರ ಜೊತೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದು ನಿಜಕ್ಕೂ ಉತ್ತಮವಾಗಿದೆ.
ಮದುವೆಗೂ ಮುನ್ನ ಆರೋಗ್ಯ ಪರೀಕ್ಷೆಗೆ ಒಳಗಾಗುವುದು ಕೇವಲ ನಿಮ್ಮ ಸಂಗಾತಿಗೆ ಮಾತ್ರವಲ್ಲ. ನಿಮಗೂ ಸಾಕಷ್ಟು ಲಾಭಗಳನ್ನು ತಂದುಕೊಡುತ್ತದೆ. ಇದರಿಂದ ಮುಂದೆ ಬರುವ ಅಪಾಯಗಳನ್ನು ತಡೆಯಲು ಸಾಧ್ಯವಾಗಬಹುದು. ಅಲ್ಲದೇ ನಿಮ್ಮ ಸಂಗಾತಿಯೊಂದಿಗೆ ಈ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವುದರಿಂದ ನಿಮ್ಮಿಬ್ಬರ ನಡುವಿನ ನಂಬಿಕೆ ಇನ್ನಷ್ಟು ದೃಢಗೊಳ್ಳುವ ಸಾಧ್ಯತೆ ಕೂಡ ಇರುತ್ತದೆ.
ಮದುವೆಗೂ ಮುಂಚೆ ಯಾವೆಲ್ಲ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು..?
ಮದುವೆಗೂ ಮುನ್ನ ನೀವು ಒಮ್ಮೆ ವೈಯಕ್ತಿಕವಾಗಿ ನಿಮ್ಮ ವೈದ್ಯರೊಂದಿಗೆ ಚರ್ಚೆ ಮಾಡುವುದು ಉತ್ತಮ. ಲೈಂಗಿಕವಾಗಿ ನೀವು ಆರೋಗ್ಯವಂತರೇ..?
ನಿಮ್ಮ ರಕ್ತದಲ್ಲಿ ಏನಾದರೂ ಸಮಸ್ಯೆಯಿದೆಯೇ..? ಅಥವಾ ನಿಮ್ಮ ದೇಹದ ಒಳಗಿನ ಭಾಗಗಳಿಗೆ ಏನಾದರೂ ಹಾನಿಯಾಗಿದೆಯೇ..? ಈ ಹಿಂದೆ ನಿಮಗಾದ ಯಾವುದೋ ಸರ್ಜರಿಯು ನಿಮಗೆ ಭವಿಷ್ಯದಲ್ಲಿ ತೊಂದರೆ ಕೊಡಬಹುದೇ..? ಅನುವಂಶೀಯವಾಗಿ ನಿಮ್ಮ ಕುಟುಂಬಕ್ಕೆ ಬಾಧಿಸುತ್ತಿರುವ ಕಾಯಿಲೆಯೊಂದು ನಿಮ್ಮ ಆವರಿಸಿದೆಯೇ..? ಒಂದು ವೇಳೆ ಆವರಿಸದೇ ಇದ್ದಲ್ಲಿ ಅದರಿಂದ ಪಾರಾಗಲು ನೀವು ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು..? ಎಂಬುದರ ಬಗ್ಗೆಯೆಲ್ಲ ನೀವು ಚರ್ಚೆ ಮಾಡಬೇಕು.
ವೈದ್ಯರು ನಿಮ್ಮ ಈ ಎಲ್ಲಾ ಗೊಂದಲಗಳನ್ನು ಪರಿಹರಿಸಲು ನಿಮಗೆ ವಿವಿಧ ಪರೀಕ್ಷೆಗೆ ಒಳಗಾಗಲು ಸಲಹೆ ನೀಡಬಹುದು. ಆ ಎಲ್ಲಾ ಪರೀಕ್ಷೆಗಳಿಗೆ ಒಳಗಾಗುವುದರ ಮೂಲಕ ನೀವು ನಿಮ್ಮ ಆರೋಗ್ಯದ ಬಗ್ಗೆ ಸ್ಪಷ್ಟ ಚಿತ್ರಣ ಪಡೆದುಕೊಳ್ಳಲು ಸಾಧ್ಯವಿದೆ.
ಇನ್ನೂ ಕೆಲವರು ಆಸ್ಪತ್ರೆಗೆ ಹೋಗುವುದು, ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುವುದು ಎಂದರೆ ಆತಂಕಕ್ಕೆ ಒಳಗಾಗುತ್ತಾರೆ. ಇಂಥಹ ಸಂದರ್ಭದಲ್ಲಿ ನೀವು ನಿಮಗೆ ಧೈರ್ಯ ತಂದುಕೊಳ್ಳಬೇಕು. ಮುಂದೆ ಎಂದೋ ಕಾಡುವ ಭಯಾನಕ ಆಘಾತಕ್ಕಿಂತ ಅರಂಭದಲ್ಲಿಯೇ ಮುನ್ಸೂಚನೆ ಪಡೆದುಕೊಳ್ಳುವುದು ಒಳ್ಳೆಯದು ಎಂಬ ರೀತಿಯಲ್ಲಿ ನಿಮ್ಮ ಮನಸ್ಥಿತಿ ಬದಲಾಗಬೇಕು.
ಯಾರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ನಿರ್ಧರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಈಗಾಗಲೇ ಇರುವ ಆದರೆ ನಮ್ಮ ಗಮನಕ್ಕೆ ಬಾರದಿರುವಂತಹ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ನಮಗೆ ಸಾಧ್ಯವಿದೆ ಎಂದರೆ ಅದನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂಬ ಮನಸ್ಥಿತಿ ನಿಮಗೆ ಬಂದರೆ ಅದು ಒಳ್ಳೆಯದು.



Click it and Unblock the Notifications