Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮದುವೆಯ ಬಳಿಕ ಪುರುಷ ಮದ್ಯಪಾನದ ಕಡೆ ಒಲವು ಹೊಂದುವುದೇಕೆ?
ಮನೆಯಲ್ಲಿ ಗಂಡ ಹೆಂಡತಿ ಸಂಬಂದ ಹೇಗಿರಬೇಕು ಅಂದ್ರೆ ಮನೆಯ ಸದಸ್ಯರ ಈ ಸಂಬಂಧ ನೋಡಿ ಸಂತೋಷ ಪಡಬೇಕು. ಅಕ್ಕ ಪಕ್ಕದವರು ಹೊಟ್ಟೆ ಉರಿದುಕೊಳ್ಳಬೇಕಂತೆ. ಆದ್ರೆ ಸಂಬಂಧ ಅನ್ನೋದು ಯಾವಾಗಲು ಒಂದೇ ರೀತಿ ಇರುವುದಿಲ್ಲ ಅಲ್ಲಿ ಜಗಳ, ಗಲಾಟೆ, ವಿರಸ, ಕೋಪ ತಾಪ ಕಾಮನ್, ಹಾಗಂತ ಇಷ್ಟಕ್ಕೆ ಸಂಬಂಧಗಳು ಹಾಳಾಗುವುದಿಲ್ಲ, ಇದು ಸಹ ಪ್ರೀತಿಯ ಮತ್ತೊಂದು ರೂಪವಷ್ಟೇ.
ಆದ್ರೆ ಇದೇ ಮನಸ್ಥಾಪಗಳು ಕೆಲವು ವೇಳೆ ಸಂಬಂಧಗಳು ಹಾಳಾಗಲು ಕಾರಣವಾಗುತ್ತವೆ. ಅದು ನಿಮ್ಮ ಜೀವನವನ್ನೇ ದುಸ್ಥರಕ್ಕೆ ತಳ್ಳಬಹುದು. ಇಲ್ಲವೆ ಇಡಿ ಜೀವನ ಕಷ್ಟದ ಹಾದಿಯಾಗಬಹುದು. ಬಹಳ ಸಂಬಂಧಗಳು ಮಧ್ಯದಲ್ಲೇ ಹಾಳಾಗಲು ಹಲವು ಕಾರಣಗಳಿರುತ್ತದೆ. ಜೊತೆಗೆ ಸಾಮಾನ್ಯವಾಗಿ ಮಹಿಳೆಯರ ದೂರಿನಲ್ಲಿ ಪತಿ ಮದ್ಯಪಾನಕ್ಕೆ ದಾಸರಾಗುತ್ತಿದ್ದಾರೆ ಎಂಬುದೇ ಆಗಿರುತ್ತೆ.

ಮದುವೆಯ ನಂತರ ಹಲವು ಪುರುಷರು ಈ ಮದ್ಯಪಾನದ ಮೊರೆ ಹೋಗುತ್ತಾರೆ. ಒಂದು ಕಡೆ ಇದು ಸಂಬಂಧದಲ್ಲಿ ಉಂಟಾಗುವ ಕಾರಣವೂ ಇರಬಹುದು. ಮನೆಯ ಪರಿಸ್ಥಿತಿ ಅವರಲ್ಲಿ ಈ ರೀತಿ ಮದ್ಯಪಾನದ ದಾಸರನ್ನಾಗಿ ಮಾಡಬಹುದು. ಹಾಗಾದ್ರೆ ನಾವಿಂದು ಸಂಬಂಧದಲ್ಲಿ ಯಾವ ಕಾರಣಕ್ಕೆ ಅವರು ಮದ್ಯಪಾನಕ್ಕೆ ದಾಸರಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ನೋಡೋಣ.
ಕುಟುಂಬದ ಒತ್ತಡ
ಮದುವೆಯ ಬಳಿಕ ವ್ಯಕ್ತಿಗೆ ಜವಾಬ್ದಾರಿಗಳು ಹೆಚ್ಚುತ್ತವೆ. ಆತ ಮನೆ, ಸಂಸಾರ ಹೀಗೆ ಎಲ್ಲವನ್ನೂ ಸರಿದೂಗಿಸಬೇಕಾಗುತ್ತದೆ. ಈ ವೇಳೆ ಮನೆಯಲ್ಲಿ ಪೋಷಕರು ಹಾಗೂ ಪತ್ನಿಯ ಬೇಡಿಕೆಗಳು ಈಡೇರಿಸುವ ನಡುವೆ ಒತ್ತಡಕ್ಕೆ ಒಳಗಾಗಬಹುದು. ಇದು ಆತನಲ್ಲಿ ನೆಮ್ಮದಿ ಹುಡಕಲು ಕಾರಣವಾಗಬಹುದು. ಆದರೆ ಆತ ಮದ್ಯಪಾನದ ಮೊರೆ ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ.
ಮನೆಯಲ್ಲಿ ಅತ್ತೆ-ಸೊಸೆ ಸಂಬಂಧ
ಯಾವ ಮನೆಯಲ್ಲಿ ಅತ್ತೆ-ಸೊಸೆ ಸಂಬಂಧ ಹದಗೆಟ್ಟಿರುತ್ತದೆಯೋ ಆ ಮನೆಯಲ್ಲಿ ಪುರುಷ ಮದ್ಯಪಾನದ ದಾಸನಾಗುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಆತ ಮನೆಯಲ್ಲಿ ಇಬ್ಬರನ್ನೂ ಸಂತೃಪ್ತಿ ಮಾಡಲಾಗದೆ, ಆತ ಸಮಸ್ಯೆಗೆ ಒಳಗಾಗಬಹುದು. ಇದು ಮನೆಯ ಪರಿಸರವನ್ನೇ ಹಾಳು ಮಾಡುತ್ತದೆ. ಹೀಗಾಗಿ ಆತ ಮದ್ಯದ ಮೊರೆಹೋಗಬೇಕಾಗುತ್ತದೆ.
ಪತ್ನಿಯಿಂದ ಅಸಡ್ಡೆ
ವ್ಯಕ್ತಿಯೋರ್ವನಿಗೆ ಮದುವೆಯ ಬಳಿಕ ಪತ್ನಿ ಆತನ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಆದರೆ ಕೆಲವೊಮ್ಮೆ ಆಕೆ ಆತನನ್ನು ನಿರ್ಲಕ್ಷಿಸಬಹುದು. ಅಥವಾ ಆರಂಭದಲ್ಲಿ ಈ ಸಂಬಂಧ ಆಕೆಗೆ ಇಷ್ಟವಿಲ್ಲದಿರಬಹುದು. ಆದರೆ ಆತನಿಗೆ ತನ್ನ ಮನೆಯಲ್ಲಿ ಪತ್ನಿಯಿಂದ ಸಿಗಬೇಕಾದ ಗೌರವ, ಸುಖ, ಆರೈಕೆ ಸಿಗದಿದ್ದರೆ ಆತ ಮದ್ಯಪಾನದಂತಹ ಯಾವುದಾದರು ಒಂದು ಚಟಕ್ಕೆ ಒಳಗಾಗಬಹುದು. ಇಲ್ಲವೆ ಪತ್ನಿಯ ಯಾವುದಾದರು ಒಂದು ಗುಣ ಆತನಿಗೆ ಇಷ್ಟವಿಲ್ಲದೆ ಆಕೆಯಿಂದ ನೋವು ಅನುಭವಿಸಿದರೂ ಆತ ದುಶ್ಚಟಕ್ಕೆ ಬಲಿಯಾಗಬಹುದು.
ಸಾಲದ ಸುಳಿಗೆ ಸಿಲುಕುವುದು
ಹಣ ಇಲ್ಲದಾಗ ಸಾಲ ಮಾಡಿರುವ ಮಂದಿ ಅದನ್ನು ತೀರಿಸಲಾಗದೆ ಇರುವ ಪರಿಸ್ಥಿತಿಗೆ ಒಳಗಾದರೆ ಮತ್ತೆ ಸಾಲ ಮಾಡಿ ಮದ್ಯಪಾನದ ಮೊರೆ ಹೋಗುವುದು ಹೆಚ್ಚು. ಏಕೆಂದರೆ ಮದ್ಯ ಪಾನ ಮಾಡಿದಾಗ ಅವರಿಗೆ ಈ ಒತ್ತಡ ಹಾಗೂ ಸಮಸ್ಯೆಯ ಅರಿವಿನಿಂದ ಕೆಲಕಾಲ ಮುಕ್ತಿ ಸಿಗುವ ಕಾರಣಕ್ಕೆ ಈ ಮದ್ಯಪಾನದ ದಾಸರಾಗುವ ಸಂಭವ ಹೆಚ್ಚು.
ಸ್ನೇಹಿತರ ಕೂಟ
ಮದುವೆಯ ಬಳಿಕ ಪುರುಷರು ಹೆಚ್ಚು ಸ್ನೇಹಿತರ ಜೊತೆ ಸೇರುವುದಿಲ್ಲ. ಆದರೆ ಸಂಬಂಧದಲ್ಲಿ ಏನಾದರು ಸಮಸ್ಯೆಗಳು ಎದುರಾದಾಗ ಅವರು ಖಂಡಿತ ಮನೆಯಿಂದ ಹೊರಗೆ ಹೆಚ್ಚು ಕಾಲ ಕಳೆಯಲು ಮುಂದಾಗುತ್ತಾರೆ, ಅಲ್ಲದೆ ಹೊಸ ಸ್ನೇಹಿತರ ಸಂಘವೂ ಹೆಚ್ಚಾಗುತ್ತದೆ. ಈ ವೇಳೆ ಅವರು ಸ್ನೇಹಿತರ ಸಂಘ ಸೇರಿ ಮದ್ಯಪಾನದ ಕಡೆಗೆ ಒಲವು ಹೆಚ್ಚಾಗುವ ಸಾಧ್ಯತೆ ಇರುತ್ತದೆ.



Click it and Unblock the Notifications

