Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಪತಿ ಬೇರೆ ಮಹಿಳೆಗೆ ಮೆಸೇಜ್ ಕಳುಹಿಸುತ್ತಿದ್ದರೆ ಅದು ಅನೈತಿಕ ಸಂಬಂಧವಿರಬಹುದೇ?
ಕೆಲವರಿಗೆ ಗಂಡನ ಫೋನ್ ತೆಗೆದು ಪರೀಕ್ಷಿಸುವ ಅಭ್ಯಾಸ ಇರುತ್ತದೆ, ಈ ಅಭ್ಯಾಸ ಖಂಡಿತ ಒಳ್ಳೆಯದಲ್ಲ ಅಂತ ಗೊತ್ತಿರುತ್ತದೆ, ಆದರೆ ಗಂಡನ ಮೊಬೈಲ್ ಪರೀಕ್ಷಿಸುವ ಕೆಟ್ಟ ಚಟ. ಈ ರೀತಿ ಗಂಡನ ಮೊಬೈಲ್ ನೋಡಿದಾಗ ಯಾವುದೋ ಒಬ್ಬ ಮಹಿಳೆ ಜೊತೆ ಗಂಡ ತುಂಬಾ ಚಾಟ್ ಮಾಡುತ್ತಿದ್ದಾರೆ ಅಥವಾ ಕಾಲ್ ಮಾಡುತ್ತಿದ್ದಾರೆ ಎಂದಾಗ ಗೊತ್ತಾದಾಗ ನನಗೆ ಮೋಸ ಮಾಡುತ್ತಿದ್ದಾರೆಯೇ ಎಂದು ಅಳು, ಕೋಪ ಎಲ್ಲಾ ಜೊತೆ ಜೊತೆಯಲ್ಲಿ ಬರುವುದು.
ನನ್ನ ಗಂಡ ಬೇರೆ ಮಹಿಳೆ ಜೊತೆ ತುಂಬಾ ಹೊತ್ತು ಮಾತನಾಡುತ್ತಾರೆ ಅವರಿಗೆ ಟೆಕ್ಸ್ಟ್ ಮಾಡುತ್ತಿದ್ದಾರೆ ಎಂದಾದರೆ ಆ ಮಹಿಳೆ ಜೊತೆ ನಿಮ್ಮ ಗಂಡನ ಸಂಬಂಧ ಎಂಥದ್ದು ಎಂದು ತಿಳಿದುಕೊಳ್ಳುವುದು ಒಳ್ಳೆಯದು.

ಈ ಕಾರಣಕ್ಕೆ ನಿಮ್ಮ ಗಂಡ ಆ ಮಹಿಳೆ ಜೊತೆ ತುಂಬಾ ಮಾತನಾಡುತ್ತಿದ್ದರೆ, ಮೆಸೇಜ್ ಕಳುಹಿಸುತ್ತಿದ್ದರೆ ಇವುಗಳಲ್ಲಿ ಒಬ್ಬರಾಗಿರಬಹುದು
ಒಳ್ಳೆಯ ಫ್ರೆಂಡ್
ಫ್ರೆಂಡ್ ಅಂದರೆ ಬರೀ ಪುರುಷರೇ ಆಗಿರಬೇಕು ಎಂದಿಲ್ಲ, ಮಹಿಳೆಯೂ ಆಗಿರಬಹುದು. ಈ ಕಾರಣಕ್ಕೆ ಇಬ್ಬರು ತುಂಬಾ ಚಾಟ್ ಮಾಡಬಹುದುದು. ಆದರೆ ಈ ಬಗೆಯ ಚಾಟ್‌ನಲ್ಲಿ ಸ್ನೇಹದ ಗಡಿಯನ್ನು ಮೀರಿದ ಯಾವುದೇ ಪದಗಳಿರಲ್ಲ, ಹಾಗದ್ದರೆ ಅದು ಸ್ನೇಹವಲ್ಲ.
ಸಹೋದ್ಯೋಗಿಯಾಗಿರಬಹುದು
ಸಹೋದ್ಯೋಗಿಯಾಗಿದ್ದಾಗ ಕೆಲವೊಂದು ಕೆಲಸಕ್ಕೆ ಸಂಬಂಧಿಸಿದಂತೆ ಚಾಟ್‌ಗಳಿರಬಹುದು ಅಲ್ಲದೆ ಅವರಿಬ್ಬರು ಸ್ನೇಹಿತರಾಗಿದ್ದರೆ ಇಬ್ಬರ ಚಾಟ್‌ನಲ್ಲಿ ನಿಮಗೆ ತಪ್ಪು ಕಂಡು ಹಿಡಿಯಲು ಸಾಧ್ಯವಾಗಲ್ಲ
ಅನೈತಿಕ ಸಂಬಂಧ ಅಥವಾ ನಿಮ್ಮ ಗಂಡನಿಗೆ ಆ ಮಹಿಳೆ ಕಡೆಗೆ ಸೆಳೆತವಿದ್ದಾಗ
ಅವರಿಬ್ಬರ ನಡುವೆ ಅನೈತಿಕ ಸಂಬಂಧವಿದ್ದಾಗ ಅಥವಾ ನಿಮ್ಮ ಗಂಡನಿಗೆ ಆ ಹೆಂಗನಿಸಿ ಕಡೆಗೆ ಸೆಳೆತವಿದ್ದಾಗ ಪದೇ ಪದೇ ಮೆಸೇಜ್‌ಗಳು ಹರಿದಾಡಬಹುದು.
ನಿಮ್ಮ ಗಂಡ ಬೇರೆ ಮಹಿಳೆ ಜೊತೆ ತುಂಬಾ ಮಾತನಾಡುತ್ತಿದ್ದರೆ ಹೇಗೆ ರಿಯಾಕ್ಟ್ ಮಾಡಬಾರದು?
ನಿಮ್ಮ ಗಂಡನ ಬಳಿ ಸೀದಾಹೋಗಿ ನೀನು ಮೋಸ ಮಾಡುತ್ತಿದ್ದೀಯಾ? ಎಂದೆಲ್ಲಾ ಜೋರಾಗಿ ಕಿರಿಚಾಡಿ ಮನೆಯನ್ನು ರಂಪ ಮಾಡುವ ಮೊದಲಿಗೆ ನಿಜವಾಗಲೂ ನಿಮ್ಮ ಗಂಡ ಮೋಸ ಮಾಡುತ್ತಿದ್ದಾರೆಯೇ ಅಥವಾ ಅವರ ನಡುವೆ ಸ್ನೇಹ ಮಾತ್ರವೇ ಎಂಬುವುದನ್ನು ಖಚಿತಪಡಿಸಿ.
ನಿಮ್ಮ ಗಂಡ ಮೋಸ ಮಾಡುತ್ತಿರುವುದು ಸಾಬೀತಾದರೆ
ನಿಮ್ಮ ಗಂಡ ನಿಮಗೆ ಮೋಸ ಮಾಡುತ್ತಿದ್ದಾರೆ ಎಂಬುವುದು ಸಾಬೀತಾದರೆ ಮೊದಲಿಗೆ ಅವರ ಬಳಿ ಈ ಕುರಿತು ಮಾತನಾಡಿ. ನೀವು ಮಾತನಾಡಿದ ತಕ್ಷಣ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ, ನಿಮ್ಮ ಜೊತೆ ವಾದ ಮಾಡಬಹುದು.
ನೀವು ಮಾತಿಗೆ ಮಾತು ಬೆಳೆಸದೆ ಸಮಧಾನದಿಂದಲೇ ನೀವು ಮಾಡುತ್ತಿರುವುದು ತಪ್ಪು ಆಗಿದ್ದು ಆಗಿ ಹೋಯ್ತು ಇನ್ಮುಂದೆ ಈ ತಪ್ಪು ಮಾಡಲ್ಲ ಎಂಬ ನಂಬಿಕೆ ನಿಮ್ಮ ಮೇಲಿದೆ ಎಂದು ಹೇಳಿ.
ನಿಮ್ಮ ಗಂಡನ ಜೊತೆ ಮಾತನಾಡುವ ಮುನ್ನ ಆ ಮಹಿಳೆಗೆ ಕರೆ ಮಾಡಬೇಡಿ
ನೀವು ನಂಬರ್ ಸಿಕ್ಕಿದೆ ಅಂತ ಆ ಮಹಿಳೆ ನಿಮಗೆ ಪರಿಚಯವಿದ್ದರೆ ಅವರಿಗೆ ಕರೆ ಮಾಡಿ ನನ್ನ ಗಂಡನ ಜೊತೆ ಏಕೆ ಮಾತನಾಡುತ್ತೀರು ಎಂದು ಜಗಳವಾಡಬೇಡಿ.
ಬದಲಿಗೆ ನಿಮ್ಮ ಗಂಡನ ಬಳಿ ಮೊದಲು ಮಾತನಾಡಿ. ಅವನ ಮಾತುಗಳಿಂದ ನಿಮಗೆ ಮೋಸದ ಸೂಚನೆ ಸಿಕ್ಕಾಗ ಮಾತ್ರ ಆ ಮಹಿಳೆ ಜೊತೆ ಮಾತನಾಡಿ, ಇಲ್ಲದಿದ್ದರೆ ಕರೆ ಮಾಡಿ ಮಾತನಾಡಿ ದೊಡ್ಡ ರಾದ್ದಾಂತ ಮಾಡಬೇಡಿ.
ನಾವು ನಂಬಿದವರು ನಮಗೆ ಮೋಸ ಮಾಡಿದಾಗ
ನಾವು ನಂಬಿದ ವ್ಯಕ್ತಿ ನಮಗೆ ಮೋಸ ಮಾಡುತ್ತಿದ್ದಾರೆ ಎಂದು ಗೊತ್ತಾಗ ತುಂಬಾನೇ ನೋವಾಗುವುದು. ಆದರೆ ನೀವು ಸಂಬಂಧ ಮುಂದುವರೆಸಲು ಬಯಸುವುದಾದರೆ ಅವರಿಗೆ ಆ ಸಂಬಂಧದಿಂದ ಹೊರಬರಲು ಹೇಳಿ, ಇಲ್ಲದಿದ್ದರೆ ನಿಮ್ಮ ನಿರ್ಧಾರ ನೀವು ತೆಗೆದುಕೊಳ್ಳಿ.



Click it and Unblock the Notifications

