ಇತ್ತೀಚೆಗೆ ಸಂಗಾತಿಯೊಂದಿಗೆ ದೈಹಿಕ ಆಕರ್ಷಣೆ ಕಡಿಮೆಯಾಗುತ್ತಿದೆಯೇ?

ಸಂಬಂಧದಲ್ಲಿ ಆರಂಭದಲ್ಲಿ ಸೆಕ್ಸ್‌, ರೊಮ್ಯಾನ್ಸ್‌ ಬಗ್ಗೆ ಇದ್ದ ಉತ್ಸಾಹ ಕಾಲ ಕಳೆದಂತೆ ಕೆಲವರಲ್ಲಿ ಕಡಿಮೆಯಾಗಬಹುದು.. ಸೆಕ್ಸ್‌ ಬೋರಿಂಗ್‌ ಎನಿಸಬಹುದು. ಅನೇಕ ದಂಪತಿಗಳಲ್ಲಿ ಒಂದು ವರ್ಷದಲ್ಲಿ ಪ್ರಣಯದ ಬಗ್ಗೆ ಇದ್ದ ಅಮಲು, ನಿಧಾನವಾಗಿ ಇಳಿಯಬಹುದು. ಎಲಲ್ವೂ ನೀರಸವೆನಿಸಬಹುದು. ನಿಮಗೂ ಹೀಗೆ ಅನಿಸಿದಲ್ಲಿ ನಿಮ್ಮ ಸಂಬಂಧದಲ್ಲಿ ಈ ಟಿಪ್ಸ್‌ಗಳನ್ನು ತಪ್ಪದೇ ಅಳವಡಿಸಿಕೊಳ್ಳಿ.

Relationship Tips

ಲೈಂಗಿಕತೆ ಯಾಕೆ ನೀರಸವೆನಿಸುತ್ತೆ..?
ನಮ್ಮ ಮೆದುಳು ಒಂದೇ ರೀತಿಯ ದೃಶ್ಯಗಳು, ಪರಿಮಳಗಳು ಮತ್ತು ಚಟುವಟಿಕೆಗಳಿಗೆ ಒಗ್ಗಿಕೊಂಡಾಗ, ಅದು ಏಕತಾನತೆಯಿಂದ ಕೂಡಿರುತ್ತದೆ. ಉದಾಹರಣೆಗೆ ನಿಮಗೆ ಇಷ್ಟವೆಂದು ಪ್ರತಿದಿನ ಒಂದೇ ಫುಡ್‌ ತಿನ್ನುತ್ತಾ ಇದ್ದರೆ, ಕೊನೆಗೊಂದು ದಿನ ಅದೂ ಇಷ್ಟವಿಲ್ಲದ ಲಿಸ್ಟ್‌ಗೆ ಸೇರಿಬಿಡಬಹುದು. ಲೈಂಗಿಕತೆಯೂ ಹಾಗೇನೇ ಅದರಲ್ಲಿ ವೈವಿಧ್ಯತೆಯ ಕೊರತೆಯಿದ್ದರೆ, ಅದು ತುಂಬಾ ನೀರಸವಾಗಬಹುದು. ಇದಲ್ಲದೇ ಒತ್ತಡ, ಆಯಾಸ ಮತ್ತು ಜೀವನದ ಬದಲಾವಣೆಗಳಂತಹ ಬಾಹ್ಯ ಅಂಶಗಳು ಕೂಡಾ ಲೈಂಗಿಕ ಬೇಸರಕ್ಕೆ ಕಾರಣವಾಗಬಹುದು.

ನಿಮ್ಮ ಮಾನಸಿಕ ಸ್ಥಿತಿಯು ಕೂಡಾ ಉತ್ತಮ ಲೈಂಗಿಕತೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನೀವು ಮತ್ತು ನಿಮ್ಮ ಸಂಗಾತಿ ಜಗಳವಾಡುತ್ತಿದ್ದರೆ, ನಿಮ್ಮ ಸಂಬಂಧದಲ್ಲಿ ಅಸಮಾಧಾನವಿದ್ದರೆ ಅಥವಾ ನೀವು ದೂರವಿದ್ದರೆ, ಈ ಭಾವನಾತ್ಮಕ ಸವಾಲುಗಳು ನಿಮ್ಮನ್ನು ಸಂಪರ್ಕ ಕಡಿತಗೊಳಿಸಬಹುದು ಮತ್ತು ಲೈಂಗಿಕತೆಯಲ್ಲಿ ನೀರಸ, ಏಕತಾನತೆ ಅಥವಾ ಅಸಹನೀಯವಾಗಿಸಬಹುದು.

ಸಂಗಾತಿಯೊಂದಿಗೆ ಸೆಕ್ಸ್ ನೀರಸವೆನಿಸುತ್ತಿದ್ದರೆ ಹೀಗೆ ಮಾಡಿ
ಲೈಂಗಿಕತೆಯು ನೀರಸವಾಗುತ್ತಿದೆ ಎಂದು ನೀವು ಭಾವಿಸಿದರೆ, ಭಯಪಡುವ ಅಗತ್ಯವಿಲ್ಲ. ಬೋರಿಂಗ್‌ ಲೈಂಗಿಕತೆಯಿಂದ ಹೊರಬರಲು ಆರು ಮಾರ್ಗಗಳಿವೆ. ಅವೇನು ಎನ್ನುವ ಮಾಹಿತಿ ಈ ಕೆಳಗಿದೆ.

ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ
ಮಲಗುವ ಮುನ್ನ ಅಂದರೆ ರಾತ್ರಿಯ ಊಟದ ಸಮಯದಲ್ಲಿ ಅಥವಾ ವಾಕಿಂಗ್‌ ಹೋಗುವಾಗ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಇಷ್ಟಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ. ಆದರೆ ಪ್ರಣಯದಲ್ಲಿ ತೊಡಗುವ ಮುನ್ನ ಅಥವಾ ನಂತರ ಮಾತನಾಡಲು ಹೋಗಬೇಡಿ. ಇದು ಟೀಕೆಯಂತೆ ಅನಿಸಬಹುದು. ಹಾಗಾಗಿ ಮಲಗುವ ಸಮಯ ಹೊರತುಪಡಿಸಿ, ಏಕಾಂತದಲ್ಲಿದ್ದಾಗ ಸಂಗಾತಿಯೊಂದಿಗೆ ಲೈಂಗಿಕತೆಯ ಬಗ್ಗೆ ನೀವು ಏನು ಇಷ್ಟಪಡುತ್ತೀರಿ, ನಿಮ್ಮ ಸಂಗಾತಿ ಏನು ಮಾಡಬೇಕು ಎನ್ನುವುದನ್ನು ಮಾತನಾಡಿ.

ಮಲಗುವ ಕೋಣೆ ಹೊರತುಪಡಿಸಿ ಇತರ ಹೊಸ ವಿಚಾರಗಳನ್ನು ಪ್ರಯತ್ನಿಸಿ
ಭಾವನಾತ್ಮಕವಾಗಿ ಹೊಂದಾಣಿಕೆಯಿದ್ದಾಗ ಲೈಂಗಿಕ ಜೀವನವೂ ಉತ್ತಮವಾಗಿರುತ್ತದೆ. ಆದರೆ ಭಾವನಾತ್ಮಕವಾಗಿ ಪ್ರೀತಿಸಲು ಸೆಕ್ಸ್‌ ಮಾತ್ರವಲ್ಲ. ಇತರ ವಿಷಯಗಳನ್ನೂ ಜೊತೆಯಾಗಿ ಆನಂದಿಸಿ. ಉದಾಹರಣೆಗೆ ಇಬ್ಬರೂ ಹೊಸ ಡಿಶ್‌ ಟ್ರೈ ಮಾಡುವುದಾಗಲಿ, ಒಟ್ಟಿಗೆ ಕೂತು ಸಿನಿಮಾ ನೋಡುವುದು, ಹೊರಗೆ ಸುತ್ತಾಡುವುದು ಹೀಗೆ ನೀವು ಹಿಂದೆ ಮಾಡಿರದ ಪ್ರಯತ್ನಗಳನ್ನು ಮಾಡಿ ನೋಡಿ. ಇವೂ ಕೂಡಾ ನಿಮ್ಮನ್ನು ಭಾವನಾತ್ಮಕವಾಗಿ ಬೆಸೆಯಬಹುದು.

ಸೆನ್ಸೇಷನ್ ಪ್ಲೇ ಪ್ರಯತ್ನಿಸಿ ನೋಡಿ
ಒಂದೇ ರೀತಿಯ ಸೆಕ್ಸ್ ವಿಧಾನವೂ ಬೋರ್‌ ಹೊಡೆಸಬಹುದು. ಹಾಗಾಗಿ ಹೆಚ್ಚು ಉತ್ತೇಜನಕಾರಿಯಾಗಿ ಇದುವರೆಗೂ ಪ್ರಯತ್ನಿಸದ ಲೈಂಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ನಿಮ್ಮ ಬಾಯಿಯಲ್ಲಿ ಐಸ್ ಹಾಕುವುದು ಅಥವಾ ಬಿಸಿ ಚಹಾವನ್ನು ಹೀರುವುದು ಮತ್ತು ನಂತರ ಚುಂಬಿಸುವುದು. ಬ್ಲೈಂಡ್‌ ಫ್ಲೋಲ್ಡ್‌ ಬಳಸುವುದು, ಎಣ್ಣೆಯ ಮಸಾಜ್‌ ಮಾಡುವುದು, ಹೀಗೆ ನಿಮ್ಮ ಇತರ ಇಂದ್ರಿಯಗಳೂ ಪ್ರಚೋದನೆಗೆ ಒಳಪಡುವಂತೆ ಹೊಸ ರೀತಿಯ ಸೆಕ್ಸ್ ಟ್ರೈ ಮಾಡಿ ನೋಡಿ.

ಸೆಕ್ಸ್ ಕುರಿತಾಗಿ ಬೇಕು ಬೇಡಗಳ ಬಗ್ಗೆ ಲಿಸ್ಟ್ ಮಾಡಿ
ಲೈಂಗಿಕತೆಯ ಬಗ್ಗೆ ನೀವು ಮತ್ತು ನಿಮ್ಮ ಸಂಗಾತಿಯು ಹೌದು, ಇಲ್ಲ ಎಂದು ಗುರುತಿಸುವ ಲೈಂಗಿಕ ನಡವಳಿಕೆಗಳ ಪಟ್ಟಿಯನ್ನು ರೆಡಿ ಮಾಡಿ ಅಥವಾ ಅದನ್ನು ಪ್ರಯತ್ನಿಸುವುದೂ ನಿಮ್ಮ ಆಸಕ್ತಿಯ ಮಟ್ಟವನ್ನು ಸೂಚಿಸಬಹುದು. ಹಲವರಿಗೆ, ಇದು ಬೋರಿಂಗ್‌ ಸೆಕ್ಸ್‌ನಿಂದ ಹೊರಬರಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ ಏಕೆಂದರೆ ಇದು ನಿಮಗೆ ಎಂದಿಗೂ ಪರಿಗಣಿಸದಿರುವ ವಿಚಾರಗಳನ್ನು ನೀಡುತ್ತದೆ, ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ತಿಳಿದಿಲ್ಲದ ವಿಷಯಗಳನ್ನು ಕಲಿಯಲು ಸಹಾಯ ಮಾಡುತ್ತದೆ.

ಭಾವನಾತ್ಮಕ ಸಂಪರ್ಕಕ್ಕೂ ಆದ್ಯತೆ ನೀಡಿ
ನಿಮ್ಮ ಸಂಬಂಧದಲ್ಲಿ ಅಸಮಾಧಾನ, ಹತಾಶೆ ಅಥವಾ ಸಂಪರ್ಕ ಕಡಿತಗೊಳಿಸುವುದು ನೀರಸ ಲೈಂಗಿಕತೆಗೆ ಕೊಡುಗೆ ನೀಡುವ ದೊಡ್ಡ ಅಂಶಗಳಲ್ಲಿ ಒಂದಾಗಿದೆ. ನೀವು ಈ ಸಮಸ್ಯೆಯಲ್ಲಿದ್ದರೆ, ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯುವ ಮೂಲಕ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ, ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡುವ ಮೂಲಕ ನಿಮ್ಮ ಭಾವನಾತ್ಮಕ ಸಂಪರ್ಕಕ್ಕೆ ಆದ್ಯತೆ ನೀಡಿ. ನಿಮ್ಮ ಭಾವನಾತ್ಮಕ ಅನ್ಯೋನ್ಯತೆ ಹೆಚ್ಚಾದಷ್ಟೂ ನಿಮ್ಮ ಲೈಂಗಿಕ ಜೀವನದಲ್ಲಿಯೂ ಬದಲಾವಣೆಯಾಗಬಹುದು.

ಸಮಯದ ಅಭಾವ, ಆಸಕ್ತಿ ಇಲ್ಲದಿರುವುದು, ಅಥವಾ ವೈದ್ಯಕೀಯ ಸ್ಥಿತಿ ಸೇರಿದಂತೆ ಹಲವು ಕಾರಣಗಳಿಗಾಗಿ ಸೆಕ್ಸ್ ಬೋರಿಂಗ್‌ ಎನ್ನಲು ಪ್ರಾರಂಭಿಸಬಹುದು. ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮಾತನಾಡುವ ಮೂಲಕ ಮತ್ತು ಸರಿಯಾದ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಲೈಂಗಿಕ ಜೀವನದಲ್ಲಿ ನೀವು ಉತ್ಸಾಹವನ್ನು ಮರಳಿ ತರಬಹುದು.

English summary

What to Do if physical intimacy With Your Partner Is Getting Boring

Relationship Tips: What to do if intimacy with your partner is getting boring read on..
Story first published: Sunday, May 21, 2023, 21:22 [IST]
X
Desktop Bottom Promotion