Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಟ್ರೆಂಡ್ ಆಗುತ್ತಿದೆ ಫ್ರೆಂಡ್‌ಶಿಪ್ ಮ್ಯಾರೇಜ್: ಜೋಡಿ ನಡುವೆ ದೈಹಿಕ ಸಂಪರ್ಕ ಇರಲ್ಲ, ಬೇರೆ ಕಡೆ ಸಂಬಂಧ ಇದ್ದರೆ ತಕರಾರು ಇಲ್ಲ
ಒಳ್ಳೆ ಫ್ರೆಂಡ್ಸ್ ಮದುವೆಯಾದರೆ ಚೆನ್ನಾಗಿರುತ್ತಾರೆ ಎಂದು ಹೇಳಿದ್ದನ್ನು ಕೇಳಿದ್ದೇವೆ, ಗಂಡ- ಹೆಂಡತಿ ನಡುವೆ ಒಳ್ಳೆಯ ಫ್ರೆಂಡ್‌ಶಿಪ್ ಇರಬೇಕು ಎಂಬ ರಿಲೇಷನ್‌ಶಿಪ್ ಟಿಪ್ಸ್ ಕೇಳಿದ್ದೇವೆ.
ಆದರೆ ಈ ಫ್ರೆಂಡ್‌ಶಿಪ್ ಮ್ಯಾರೇಜ್ ಮಾತ್ರ ತುಂಬಾನೇ ಭಿನ್ನ, ಇಲ್ಲಿ ಮದುವೆಯಾಗುತ್ತಾರೆ, ಆದರೆ ಗಂಡ-ಹೆಂಡತಿ ನಡುವಿನ ಯಾವುದೇ ರೊಮ್ಯಾನ್ಸ್ ಇರಲ್ಲ, ಬೇರೆ ಕಡೆ ಸಂಬಂಧ ಇಟ್ಟುಕೊಳ್ಳಬಹುದು, ಇದಕ್ಕೆ ಇಬ್ಬರ ಒಪ್ಪಿಗೆ ಇರುತ್ತದೆ. ಇಂಥದ್ದೊಂದು ಮದುವೆ ಈಗ ಜಪಾನ್‌ನಲ್ಲಿ ಟ್ರೆಂಡ್‌ನಲ್ಲಿ ಇದೆ, ಇಲ್ಲಿಯೂ ಬಂದಿರಬಹುದು ಅಥವಾ ಬರಲೂಬಹುದು...

ಈ ಫ್ರೆಂಡ್‌ಶಿಪ್ ಮ್ಯಾರೇಜ್ ಜಪಾನಿನ ಬಹುತೇಕ ಯುವಕ-ಯುವತಿಯರನ್ನು ಆಕರ್ಷಿಸಿದೆ
ಜಪಾನ್‌ನಲ್ಲಿ ಫ್ರೆಂಡ್‌ಶಿಪ್ ಮ್ಯಾರೇಜ್ ಟ್ರೆಂಡ್‌ನಲ್ಲಿದೆ. ಇದರಲ್ಲಿ ಪ್ರೀತಿ ಇರಲ್ಲ, ಲೈಂಗಿಕ ಸಂಬಂಧ ಇರಲ್ಲ ಅದನ್ನೇ ಫ್ರೆಂಡ್‌ಶಿಪ್ ಮ್ಯಾರೇಜ್ ಎಂದು ಹೇಳಲಾಗುವುದು.
ಜಪಾನ್‌ನ ಜನಸಂಖ್ಯೆಯಲ್ಲಿ ಶೇ. 1ರಷ್ಟು ಜನರು ಈ ರೀತಿಯ ಮದುವೆ ಸಂಬಂಧದಲ್ಲಿದ್ದಾರೆ ಅದು ಹೆಚ್ಚಾಗುತ್ತಿದೆ ಕೂಡ. ಅವರಲ್ಲಿ ಹೆಟ್ರೋಸೆಕ್ಸೂಯಲ್, ಹೋಮೋಸೆಕ್ಸೂಯಲ್‌ನವರು ಇದ್ದಾರೆ, ಇವರಿಗೆ ಸಾಂಪ್ರದಾಯಕ ಮದುವೆಯಲ್ಲಿ ನಂಬಿಕೆಯಿಲ್ಲ.
ಈ ಫ್ರೆಂಡ್‌ಶಿಪ್ ಮ್ಯಾರೇಜ್ ಎಂದರೇನು?
ಈ ಫ್ರೆಂಡ್‌ಶಿಪ್ ಮ್ಯಾರೇಜ್‌ನಲ್ಲಿ ಜೋಡಿಗಳ ನಡುವೆ ಆಸಕ್ತಿ ಒಂದೇ ರೀತಿ ಇರುತ್ತದೆ, ಸಮಾನ ಮನಸ್ಕರಾಗಿರುತ್ತಾರೆ, ಆದರೆ ರೊಮ್ಯಾಂಟಿಕ್ ಸಂಬಂಧ ಇರಲ್ಲ. ಇವರು ಕಾನೂನು ಪ್ರಕಾರ ದಂಪತಿಗಳು, ಆದರೆ ಇವರ ನಡುವೆ ದೈಹಿಕ ಸಂಪರ್ಕ ಇರಲ್ಲ, ಇನ್ನು ಮಕ್ಕಳು ಬೇಕೆಂದರೆ ವೈದ್ಯಕೀಯ ತಂತ್ರಜ್ಞಾನ ಬಲಸಿ ಮಗು ಮಾಡಿಕೊಳ್ಳುತ್ತಾರೆ.
ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾರೆ
ಇವರಿಬ್ಬರ ನಡುವೆ ಯಾವುದೇ ಸಂಬಂಧವಿರಲ್ಲ, ಆದರೆ ಬೇರೆಯವರ ಜೊತೆ ದೈಹಿಕ ಸಂಪರ್ಕ ಇಟ್ಟುಕೊಳ್ಳಲು ಅಡ್ಡಿಪಡಿಸಲ್ಲ, ಇಬ್ಬರ ನಡುವೆ ಒಳ್ಳೆಯ ಹೊಂದಾಇಕೆ ಇರುತ್ತದೆ.
ಗರ್ಲ್ ಫ್ರೆಂಡ್, ಬಾಯ್ ಫ್ರೆಮಡ್ ಆಗಲಾರೆ ಫ್ರೆಂಡ್ ಆಗಿರುವೆ
ಈ ಸಂಬಂಧದಲ್ಲಿ ಗರ್ಲ್ ಫ್ರೆಂಡ್-ಬಾಯ್ ಪ್ರೆಂಡ್ ಅಂತ ಇರಲ್ಲ, ಇಬ್ಬರು ಫ್ರೆಂಡ್ ಆಗಿರಲು ಬಯಸುತ್ತಾರೆ. ಇಬ್ಬರು ಖುಷಿಯಾಗಿ ಶಾಪಿಂಗ್ ಮಾಡುತ್ತಾರೆ, ಅಡುಗೆ ಮಾಡುತ್ತಾರೆ, ಸುತ್ತಾಡಲು ಹೋಗುತ್ತಾರೆ, ಆದರೆ ಅವರಿಬ್ಬರ ನಡುವೆ ಫ್ರೆಂಡ್‌ಶಿಪ್ ಮಾತ್ರ ಇರುತ್ತದೆ.
ಇಂಥ ಜೋಡಿ ಹೇಗೆ ಕಂಡು ಹಿಡಿಯುತ್ತಾರೆ?
ಮದುವೆಗೆ ಮೊದಲೇ ಮಾತನಾಡಿಕೊಳ್ಳುತ್ತಾರೆ, ಇಬ್ಬರು ಜೊತೆಯಾಗಿ ಡಿನ್ನರ್‌ಗೆ ಹೋಗುತ್ತಾರೆ, ಸುತ್ತಾಡುತ್ತಾರೆ, ಇಬ್ಬರ ಡುವೆ ಒಳ್ಳೆಯ ಗೆಳೆತನ ಕಂಡು ಬರುವುದು.
ಹೋಮೋಸೆಕ್ಸೂಯಲ್ ಯುವಕ-ಯುವತಿಯರು ಈ ರೀತಿ ಆಯ್ಕೆ ಮಾಡುತ್ತಿದ್ದಾರೆ
ಹೋಮೋಸೆಕ್ಸೂಯಲ್ ಅಂದರೆ ಸಲಿಂಗ ಕಾಮಿಗಳು. ಇಂಥ ಹುಡುಗ-ಹುಡುಗಿ ಮದುವೆಯಾಗುತ್ತಾರೆ, ಆದರೆ ಇವರ ನಡುವೆ ಯಾವುದೇ ಆಕರ್ಷಣೆ ಇರುವುದಿಲ್ಲ, ಇವರು ಸಲಿಂಗಕಾಮಿ ಸ್ನೇಹಿತರ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾರೆ, ಆದರೆ ಹೊರ ಜಗತ್ತಿಗೆ ಹೆಣ್ಣು- ಗಂಡು ಗಂಡ ಹೆಂಡತಿಯಣತೆ ಬಾಳುತ್ತಾರೆ.
ಕೆಲ ಹೆಟ್ರೋಸೆಕ್ಯೂಯಲ್ ಯುವಕ-ಯುವತಿಯರು ಕೂಡ ಈ ರೀತಿಯ ಮದುವೆಯಾಗುತ್ತಿದ್ದಾರೆ, ಅವರಿಗೆ ಸಾಂಪ್ರದಾಯಕ ಮದುವೆ ಬಂಧ ಇಷ್ಟವಿರಲ್ಲ, ಅವರಿಷ್ಟದಂತೆ ಬದುಕಬೇಕು, ಆದರೆ ಹೆಸರಿಗೆ ಮದುವೆಯಾಗಬೇಕು ಅಂಥವರು ಕೂಡ ಇಂಥ ಮದುವೆಯಾಗುತ್ತಾರೆ.
ಈ ರೀತಿ ಇರುವ ಶೇ. 70ರಷ್ಟು ದಂಪತಿಗೆ ಮಕ್ಕಳಿಲ್ಲ
ಇವರು ತಮ್ಮ ಬದುಕಿನಲ್ಲಿ ಮಗು ಮಾಡಬೇಕೆಂದು ಬಯಸುವುದಿಲ್ಲ, ಇಬ್ಬರು ಸ್ವತಂತ್ರವಾಗಿ ಬದುಕುತ್ತಾರೆ. ತಮಗೆ ಬೇಕಾದವರು ಜೊತೆ ದೈಹಿಕ ಸಂಪರ್ಕ ಬೆಳೆಸುತ್ತಾರೆ, ಆದರೆ ಇವರಿಬ್ಬರ ನಡುವೆ ಸ್ನೇಹವಷ್ಟೇ ಇರುತ್ತದೆ.
ಹೊರಗಡೆಯೂ ಇದೆ, ಆದರೆ ಗೊತ್ತಾಗಲ್ಲ ಅಷ್ಟೆ
ಭಾರತದಲ್ಲಿಯೂ ಸಲಿಂಗಕಾಮಿಗಳ ಸಂಖ್ಯೆ ತುಂಬಾನೇ ಇದೆ ಆದರೆ ಇವರು ಕುಟುಂಬದ ಭಯಕ್ಕೆ ಮದುವೆಯಾಗುತ್ತಾರೆ, ಇದು ಅವರ ಸಂಗಾತಿಗೆ ತಿಳಿದಾಗ ಸಮಸ್ಯೆಯಾಗುವುದು. ಆದರೆ ಜಪಾನ್‌ನಲ್ಲಿ ಇವರು ತಮ್ಮ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡು ಸತಿ-ಪತಿಯಾಗುತ್ತಾರೆ. ಇಲ್ಲಿಯೂ ಇಂಥ ಜೋಡಿ ಇರಬಹುದು, ಇದರ ಬಗ್ಗೆ ಅಧ್ಯಯನ ನಡೆಯಬೇಕಷ್ಟೆ.



Click it and Unblock the Notifications











