Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನಾವು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಈ ಬದಲಾವಣೆಗಳು ಖಂಡಿತ ಆಗುತ್ತವೆ
ಪ್ರೀತಿ ಎಂಬುವುದು ಒಂದು ಸುಂದರ ಭಾವನೆ. ಕೇವಲ ಸೌಂದರ್ಯ ನೋಡಿ ನಮಗೆ ಒಬ್ಬರ ಮೇಲೆ ಪ್ರೀತಿಯಾಗುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಒರ್ವ ವ್ಯಕ್ತಿ ಗುಣ, ನಡತೆಯನ್ನು ನೋಡಿ ನಮಗೆ ಅವರ ಮೇಲೆ ಪ್ರೀತಿಯಾಗುವ ಸಾಧ್ಯತೆ ಇದೆ. ನಾವು ಪ್ರೀತಿಯಲ್ಲಿ ಬಿದ್ದ ಮೇಲೆ ನಮ್ಮಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತದೆ. ಆ ಬದಲಾವಣೆಗಳು ನಮಗೆ ಖುಷಿ ಕೊಡುತ್ತದೆ. ಅಷ್ಟಕ್ಕು ಆ ಬದಲಾವಣೆಗಳು ಯಾವುದು ಅನ್ನೋದನ್ನು ತಿಳಿಯೋಣ.
1. ಪ್ರತಿಯೊಂದು ಅನುಭವದಲ್ಲೂ ನೀವು ಖುಷಿ ಪಡುತ್ತೀರಿ
ನಾವು ಪ್ರೀತಿಯಲ್ಲಿ ಬಿದ್ದಾಗ ನಮ್ಮ ಸುತ್ತಮುತ್ತ ಇರುವ ಪ್ರತಿಯೊಂದು ವಿಚಾರದಲ್ಲಿ ನಾವು ಸಂತೋಷ ಕಾಣುತ್ತೀವಿ. ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತಹ ಅನುಭವವಾಗುತ್ತದೆ. ಹಿತವಾದ ಗಾಳಿ ನಿಮಗೆ ಚಂದಾ ಅನ್ನಿಸುತ್ತದೆ. ಹಾಡಿನ ಪ್ರತಿಯೊಂದು ಸಾಲು ನಿಮಗೆ ಇಷ್ಟವಾಗುತ್ತದೆ. ಹೂವಿನ ಸೌಂದರ್ಯವನ್ನು ನೀವು ಆನಂದಿಸುತ್ತೀರಿ. ಪ್ರೀತಿಯಲ್ಲಿ ಬಿದ್ದಾಗ ಈ ಎಲ್ಲಾ ಅನುಭವಗಳಾಗೋದು ಸಹಜ.

2. ಧನಾತ್ಮಕವಾಗಿರುತ್ತೀವಿ
ನೀವು ಪ್ರೀತಿಯಲ್ಲಿದ್ದಾಗ ಖಂಡಿತ ಖುಷಿಯಾಗಿರುತ್ತೀರಿ. ಇಂತಹ ಸಂದರ್ಭದಲ್ಲಿ ನೀವು ಪ್ರತಿಯೊಂದು ಕೆಲಸ ಮಾಡೋದಕ್ಕೂ ಉತ್ಸುಕರಾಗಿರುತ್ತೀರಿ. ನಿಮ್ಮ ಚಿಂತನೆಗಳು ಎಲ್ಲವೂ ಕೂಡ ಧನಾತ್ಮಕವಾಗಿರುತ್ತದೆ. ಒಂದು ವೇಳೆ ನಿಮಗೆ ಕೆಲಸದ ಒತ್ತಡ ಹೆಚ್ಚಿದ್ದರೂ ಕೂಡ ಅದು ನಿಮಗೆ ಒತ್ತಡ ಅನ್ನಿಸೋದಿಲ್ಲ. ಪ್ರೀತಿಯಲ್ಲಿದ್ದಾಗ ಈ ರೀತಿ ಅನುಭವಗಳಾಗೋದು ಸಹಜ.
3. ಹೆದರಿಕೆ ಇರುತ್ತದೆ
ಮೊದಲ ಸಲ ಪ್ರೀತಿಯಲ್ಲಿ ಬಿದ್ದಾಗ ಎಷ್ಟು ಖುಷಿ ಇರುತ್ತದೆಯೋ ಅಷ್ಟೇ ಭಯ ಇರುತ್ತದೆ. ಪ್ರೀತಿ ಮಾಡೋದು ಅವರ ಜೊತೆಗೆ ಕಡೆವರೆಗೂ ಜೊತೆಯಾಗಿ ಇರಬೇಕೆಂದು. ಆದರೆ ಎಲ್ಲರ ಪ್ರೀತಿ ಮದುವೆಯವರೆಗೂ ಹೋಗುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಅನೇಕ ಸಂದರ್ಭಗಳಲ್ಲಿ ಹುಡುಗ ಅಥವಾ ಹುಡುಗಿಯಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಹೃದಯವೇ ಒಡೆದು ಹೋದಂತಾಗುತ್ತದೆ. ಹೀಗಾಗಿ ಪ್ರೀತಿ ಮಾಡುವವರಲ್ಲಿ ಇದೊಂದು ಭಯ ಖಂಡಿತ ಇರುತ್ತದೆ.
4. ಕಮಿಟ್‌ಮೆಂಟ್‌ನ ಭಯ ಇರುತ್ತದೆ
ಪ್ರೀತಿ ಮಾಡೋದು ಸುಲಭ ಆದರೆ ಅದನ್ನು ಕಡೆವರೆಗೂ ಉಳಿಸಿಕೊಂಡು ಹೋಗೋದೇ ಕಷ್ಟ. ಯಾಕಂದ್ರೆ ಅನೇಕ ಜನ ಪ್ರೀತಿಯಲ್ಲಿರುವ ಸಂದರ್ಭದಲ್ಲಿ ತುಂಬಾನೇ ಖುಷಿಯಾಗಿರುತ್ತಾರೆ. ಅದೇ ಮದುವೆ, ಮಕ್ಕಳು, ಸಂಸಾರ ಅನ್ನೋ ವಿಚಾರ ಬಂದರೆ ಕೊಂಚ ಭಯ ಅವರನ್ನು ಕಾಡೋದಕ್ಕೆ ಶುರು ಆಗುತ್ತದೆ. ಯಾಕಂದ್ರೆ ಅವರಿಗೆ ಕಮಿಟ್‌ಮೆಂಟ್ ಇಷ್ಟ ಇರೋದಿಲ್ಲ. ಇದು ಅವರಿಗೆ ಒಂದು ರೀತಿಯಲ್ಲಿ ಬಂಧನವಾದಂತೆ ಭಾಸವಾಗುತ್ತದೆ.
5. ಬಾಂಧವ್ಯ ಹೆಚ್ಚಾಗಿರುತ್ತದೆ
ನಾವು ಎಲ್ಲಾ ವಿಚಾರಗಳನ್ನೂ ನಮ್ಮ ಪೋಷಕರಲ್ಲಿ ಹಂಚಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ. ಇಂತಹ ಸಮಯದಲ್ಲಿ ನಮ್ಮ ಸಂಗಾತಿಯಾಗುವವರಲ್ಲಿ ನಾವು ಪ್ರತಿಯೊಂದು ವಿಚಾರಗಳನ್ನು ಹಂಚಿಕೊಳ್ಳುತ್ತೇವೆ. ನಮ್ಮ ಖುಷಿ, ಸಂತೋಷ, ದುಃಖ, ಅವಮಾನ ಪ್ರತಿಯೊಂದು ವಿಚಾರಗಳ ಬಗ್ಗೆ ಸಂಗಾತಿಯ ಬಳಿ ಮುಕ್ತವಾಗಿ ಮಾತನಾಡುತ್ತೇವೆ. ಇದರಿಂದಾಗಿ ನಮ್ಮ ನಡುವಿನ ಆ ಬಾಂಧವ್ಯ ಗಟ್ಟಿಯಾಗುತ್ತಾ ಹೋಗುತ್ತದೆ.
6. ಒಳ್ಳೆಯ ಸ್ನೇಹಿತರಾಗಿರುತ್ತೀರಿ
ಕೆಲವೊಂದು ಪ್ರೀತಿ ಹೇಗಿರುತ್ತೆ ಎಂದರೆ ಆ ಜೋಡಿಗಳು ಪ್ರೇಮಿಗಳು ಅನ್ನೋದಕ್ಕಿಂತ ಹೆಚ್ಚಾಗಿ ಸ್ನೇಹಿತರಂತಿರುತ್ತಾರೆ. ಯಾವಾಗಲೂ ಜಗಳ, ಮನಸ್ಥಾಪ ಇವರ ಸಂಬಂಧದಲ್ಲಿ ಸುಳಿಯೋದಿಲ್ಲ. ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ನಗುತ್ತಾ ಖುಷಿಯಾಗಿರುತ್ತಾರೆ. ಇವರ ಮಧ್ಯೆ ಪ್ರಾಮಾಣಿಕ ಸ್ನೇಹ, ಹೇಳಿಕೊಳ್ಳಲಾಗದ ಪ್ರೀತಿ ಇರುತ್ತದೆ. ಪ್ರೀತಿಯಲ್ಲಿ ಇದು ಒಂದು ರೀತಿ ಖುಷಿ ನೀಡುತ್ತದೆ.
7. ಪ್ರೀತಿಸಿದವರ ಮೇಲೆ ಸಂಪೂರ್ಣ ನಂಬಿಕೆ ಇರುತ್ತದೆ
ನೀವು ಪ್ರೀತಿಸುತ್ತಿರುವವರನ್ನು ಖಂಡಿತ ನೀವು ನಂಬಲೇಬೇಕು. ಒಂದು ವೇಳೆ ನಂಬಿಕೆ ಇರದೇ ಹೋದರೆ ಅಲ್ಲಿಂದ ಸಮಸ್ಯೆಗಳು ಶುರುವಾಗುತ್ತಾ ಹೋಗುತ್ತದೆ. ನಮಗೆ ಒಬ್ಬರ ಪ್ರೀತಿಯಾದರೆ ಮೊದಲಿಗೆ ನಾವು ಅವರನ್ನು ತುಂಬಾನೇ ನಂಬೋದಕ್ಕೆ ಶುರು ಮಾಡುತ್ತೇವೆ. ನಾವು ಪ್ರತಿಯೊಂದು ವಿಚಾರಗಳನ್ನು ಅವರ ಜೊತೆಗೆ ಹಂಚಿಕೊಳ್ಳೋದಕ್ಕೆ ಇಷ್ಟ ಪಡುತ್ತೀವಿ.
8. ಭವಿಷ್ಯದ ಕನಸು ಕಾಣುತ್ತೇವೆ
ಪ್ರೀತಿ ಮಾಡೋದೇ ಕಡೆವರೆಗೂ ಕೈ ಕೈ ಹಿಡಿದು ಜೊತೆಯಾಗಿರಬೇಕೆಂದು. ಹೀಗಾಗಿ ನಾವು ಒಬ್ಬರನ್ನು ಪ್ರೀತಿಸೋದಕ್ಕೆ ಶುರು ಮಾಡಿದಾಗ ಅವರ ಜೊತೆಗೆ ನಮ್ಮ ಭವಿಷ್ಯದ ಕನಸು ಕಾಣುತ್ತೇವೆ. ಮದುವೆ, ಮಕ್ಕಳು ಹಾಗೂ ಮುಂದೆ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು, ಸಾಧನೆ ಮಾಡಬೇಕೋ ಆಗ ಸಂಗಾತಿ ನಮ್ಮ ಜೊತೆಯಲ್ಲಿ ಇರಬೇಕು ಎಂದು ಬಯಸುತ್ತೇವೆ.
9. ಭದ್ರತೆ ಸಿಕ್ಕ ಅನುಭವವಾಗುತ್ತದೆ
ನಾವು ಪ್ರೀತಿಸಿದವರು ಎಂತಹ ಕ್ಷಣದಲ್ಲಾದರೂ ನಮ್ಮನ್ನು ಬಿಟ್ಟು ಹೋಗೋದಿಲ್ಲ. ನಮ್ಮ ಕಷ್ಟದ ಸಂದರ್ಭದಲ್ಲಿ, ನಮ್ಮ ದುಃಖದಲ್ಲಿ ಇವರು ನಮ್ಮ ಜೊತೆಯಾಗಿರುತ್ತಾರೆ. ಅದ್ರಲ್ಲೂ ಮುಖ್ಯವಾಗಿ ಪ್ರತಿ ಹಂತದಲ್ಲೂ ಇವರು ನಮ್ಮ ರಕ್ಷಣೆ ಮಾಡುತ್ತಾರೆ. ನಮಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ ತೊಂದರೆಯಾಗೋದಕ್ಕೆ ಖಂಡಿತ ಇವರು ಬಿಡೋದಿಲ್ಲ.
ಪ್ರೀತಿಯಲ್ಲಿ ಇದ್ದವರಿಗೆ ಖಂಡಿತವಾಗಿ ಈ ಅನುಭವಗಳು ಆಗಿರುತ್ತದೆ. ಒಂದು ಈ ಎಲ್ಲಾ ಅನುಭವಗಳು ನಿಮಗೆ ಆಗಿರದಿದ್ದರೆ ನೀವು ನಿಜವಾಗಿ ಪ್ರೀತಿ ಮಾಡಿಲ್ಲ ಎಂದರ್ಥ.



Click it and Unblock the Notifications

