Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅಪರಿಚಿತ ಮಹಿಳೆ ಕಂಡಾಗ ಪುರುಷ ಏನೆಲ್ಲಾ ಯೋಚಿಸುತ್ತಾನೆ..?
ಪುರುಷನೊಬ್ಬ ತನ್ನ ಪರಿಚಯಸ್ಥರೊಂದಿಗೆ ಇದ್ದಾಗ ಹಾಗೂ ಅಪರಿಚಿತರೊಂದಿಗೆ ಇದ್ದಾಗ ಆತನ ಭಾವನೆ, ಗುಣ,ವ್ಯಕ್ತಿತ್ವ ಬೇರೆಯದ್ದೇ ಆಗಿರುತ್ತದೆ. ಅದರಲ್ಲೂ ಮಹಿಳೆಯೊಂದಿಗೆ ಇದ್ದಾಗ ಆತನ ತಲೆಯಲ್ಲಿ ನೂರಾರು ಆಲೋಚನೆಗಳು ಬಂದು ಹೋಗುತ್ತಿರುತ್ತವೆ. ಅಪರಿಚಿತರೊಂದಿಗೆ ಆತ ಬೆರೆಯಲು ಹಲವು ಕಾರಣಗಳಿರುತ್ತವೆ. ಅದರಲ್ಲೂ ಅಪರಿಚಿತೆ ಜೊತೆಗೆ ಇದ್ದಾಗ ಆತನಲ್ಲಿ ನೂರಾರು ಆಲೋಚನೆಗಳಿರಲಿವೆಯಂತೆ.
ಮಹಿಳೆಯನ್ನು ಆತ ಮೊದಲು ನೋಡಿದ ತಕ್ಷಣ ತನ್ನಲ್ಲಿ ಹಲವು ರೀತಿಯ ಪ್ರಶ್ನೆಗಳ ಆತ ಹಾಕಿಕೊಳ್ಳುತ್ತಾನಂತೆ. ಅದರಲ್ಲೀ ವಿವಾಹಿತರು ಹಾಗೂ ಅವಿವಾಹಿತರ ನಡುವೆ ಭಿನ್ನ ಆಲೋಚನೆಗಳಿವೆ. ಈ ಆಲೋಚನಾ ಲಹರಿಯಲ್ಲಿ ಕೆಲವೊಂದು ಎಲ್ಲಾ ಪುರುಷರಲ್ಲೂ ಸಾಮಾನ್ಯವಾಗಿ ಕಂಡುಬರಬಹುದು ಎಂಬುದು ಮನೋವೈಜ್ಞಾನಿಕ ವಿಷಯ ವಸ್ತುವಾಗಿದೆ.

ಆದರೆ ಆತ ಅಪರಿಚಿತ ಮಹಿಳೆಯ ಕಂಡಾಗ ಆತನ ಮನದಲ್ಲಿ ಯಾವ ರೀತಿಯ ಆಲೋಚನೆಗಳು ಉಂಟಾಗಬಹುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಇಲ್ಲಿ ಕೆಲವೊಂದು ವಿಚಾರಗಳ ಹೇಳಲಾಗಿದೆ ನೋಡಿ.
ಅವರ ವಿವರ ತಿಳಿಯಲು ಆತುರ
ಯಾವುದೇ ಪುರುಷ ಆಗಿರಲಿ ಆತ ಅಪರಿಚಿತ ಮಹಿಳೆಯೊಂದಿಗೆ ಬೆರೆಯಬೇಕಾದರೆ ಇಲ್ಲವೆ ಆಕೆಯ ಮಾತನಾಡಿಸಬೇಕಾದ ಸಂದರ್ಭ ಬಂದರೆ ಆತ ಆಕೆಯ ವಿವರ ಕೇಳಲು ಇಚ್ಛಿಸುತ್ತಾನೆ. ಅಂದರೆ ಆಕೆಯ ಹೆಸರು, ಊರು ಹೀಗೆ ಅವರ ಕುರಿತು ತಿಳಿದುಕೊಳ್ಳಬೇಕು ಎಂಬುದು ಅವರ ತಲೆಯಲ್ಲಿ ಓಡುತ್ತಿರುತ್ತದೆ.
ಪರಿಚಯ ಮಾಡಿಕೊಳ್ಳಲು ಮುಂದಾಗುತ್ತಾರೆ
ಅಪರಿಚಿತ ಮಹಿಳೆಯೊಂದಿಗೆ ಇದ್ದಾಗ ಆಕೆಯನ್ನು ಪರಿಚಯ ಮಾಡಿಕೊಳ್ಳಬೇಕು ಎಂಬುದು ಪುರುಷರ ತಲೆಯಲ್ಲಿ ಓಡುತ್ತಿರುತ್ತದೆ. ಆಕೆಯನ್ನು ಯಾವುದಾದರು ವಿಚಾರದಲ್ಲಿ ಮಾತಿಗೆ ಎಳೆಯಬೇಕು. ಆಕೆಯೊಂದಿಗೆ ಮಾತನಾಡಬೇಕು ಎಂಬುದು ಅವರ ಆಲೋಚನೆಯಲ್ಲಿರುತ್ತದೆ.
ಆಕೆಯ ನಡತೆಯ ಗಮನಿಸುವುದು
ಪುರುಷರು ಯಾರಾದರು ಅಪರಿಚಿತ ಮಹಿಳೆಯೊಂದಿಗೆ ಇದ್ದಾಗ ಆಕೆಯ ನಡತೆಯನ್ನು ತೀವ್ರವಾಗಿ ಗಮನಿಸುತ್ತಾರೆ. ಆಕೆಯ ಹಾವಾಬಾವ ಮುಖ ಭಾವ, ಮಾತನಾಡುವ ಶೈಲಿ ಹೀಗೆ ಹಲವು ವಿಚಾರಗಳ ಮೇಲೆ ಅವರು ಗಮನ ಇಡುತ್ತಾರೆ. ಆದರೆ ಆಕೆಗೆ ತಿಳಿಯದಂತೆ ಇದನೆಲ್ಲ ಗುಪ್ತವಾಗಿ ಮಾಡುತ್ತಾರೆ.
ಅವರ ಗಮನ ಸೆಳೆಯಲು ಮುಂದಾಗುವುದು
ಪ್ರತಿಯೊಬ್ಬ ಪುರುಷನು ಸಹ ಅಪರಿಚಿತ ಮಹಿಳೆಯ ಗಮನ ತನ್ನತ್ತ ಸೆಳೆಯಬೇಕು ಎಂದು ಆಲೋಚಿಸುತ್ತಾನೆ. ಇದಕ್ಕಾಗಿ ಆತ ಯಾವ ಕೆಲಸ ಮಾಡಲು ಮುಂದಾಗಬಹುದು. ಅನಾವಶ್ಯಕ ಮಾತುಗಳು, ನಗಿಸುವುದ, ಹರಟೆ ಹೀಗೆ ಒಂದಲ್ಲಾ ಒಂದು ರೂಪದಲ್ಲಿ ಆಕೆಯ ಗಮನ ತನ್ನತ್ತ ಸೆಳೆಯುವಂತೆ ಮಾಡಲು ಆತ ಮುಂದಾಗುತ್ತಾನೆ.
ಆಕೆ ಕೇಳದಿದ್ದರೂ ಸಹಾಯ
ಅಪರಿಚಿತ ಮಹಿಳೆ ಬಾಯಿ ಬಿಟ್ಟು ಏನನ್ನೂ ಹೇಳದಿದ್ದರೂ ಆತ ಆಕೆಯ ಸಹಾಯ ಮಾಡಲು ಮುಂದಾಗುವುದು. ಇಲ್ಲವೆ ಆ ರೀತಿಯ ಪರಿಸ್ಥಿತಿ ಬರಲು ಪ್ರಾರ್ಥಿಸುತ್ತಾನೆ. ಆಕೆಗೆ ಸಹಾಯ ಮಾಡುವುದರಿಂದ ಆಕೆಯಲ್ಲಿ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಬಹುದು ಎಂಬುದು ಆತನ ಆಲೋಚನೆಯಾಗಿರಲಿದೆ.
ತನ್ನ ಉದ್ಯೋಗ ಹಾಗೂ ಕುಟುಂಬ ಕುರಿತು ಹೇಳುವುದು
ಅಪರಿಚಿತೆ ಆಗಿದ್ದರು ಕೆಲವರು ಆಕೆಯನ್ನು ನೋಡಿದಾಗ ಆಕೆಯೊಂದಿಗೆ ತನ್ನ ಕುಟುಂಬ ಹಾಗೂ ಉದ್ಯೋಗದ ಬಗ್ಗೆ ಹೇಳಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಇಲ್ಲವೆ ಆಕೆಯೆ ಈ ಕುರಿತು ಕೇಳಲಿ ಎಂದುಕೊಳ್ಳುತ್ತಿರುತ್ತಾರೆ. ಇದು ಆತನ ಮನದಲ್ಲಿ ಯಾವಾಗಲು ಕಾಡುವ ಪ್ರಶ್ನೆಯಾಗಿರುತ್ತದೆ.
ಆಕೆಯ ದೈಹಿಕ ಸೌಂದರ್ಯದ ಕಡೆ ಗಮನ
ಆಕೆ ಯಾವ ಬಣ್ಣದ ಬಟ್ಟೆ ಧರಿಸಿದ್ದಾಳೆ. ಚಪ್ಪಲಿ, ಬಳೆ, ಬ್ಯಾಗ್ ಇತ್ಯಾದಿಗಳ ಕುರಿತು ಆತ ಗಮನ ಹರಿಸುತ್ತಾನೆ. ಇಲ್ಲವೆ ಆಕೆಯ ಆಭರಣ ಇದೆಲ್ಲದರ ಕಡೆ ಆತ ಒಮ್ಮೆಯಾದರು ನೋಡಿ ಆ ಕುರಿತು ಯಾವುದಾದರು ಪ್ರಶ್ನೆ ಕೇಳಿಯೇ ಕೇಳುತ್ತಾನೆ.



Click it and Unblock the Notifications
