Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ರಿಲೇಷನ್‌ಶಿಪ್‌ನಲ್ಲಿ ಈ 7 ಲಕ್ಷಣಗಳಿದ್ದರೆ ಸಂಬಂಧ ಉಳಿಯುವುದೇ ಕಷ್ಟ
ನಮಗೆ ಒಬ್ಬ ವ್ಯಕ್ತಿ ನೋಡಿದ ತಕ್ಷಣ ಇಷ್ಟವಾಗುವುದು ಅಥವಾ ಅವರ ಪರಿಚಯ ಪ್ರೇಮವಾಗಿ ಬದಲಾಗಬಹುದು. ಆದರೆ ನಮ್ಮ ಆಯ್ಕೆ ಸರಿಯಾಗುತ್ತೆ, ಇಲ್ವೇ ಎಂದು ತಿಳಿಯಲು ಕೆಲವು ತಿಂಗಳುಗಳು ಇನ್ನು ಕೆವರಿಗೆ ಕೆಲ ವರ್ಷಗಳು ಬೇಕಾಗಬಹುದು.
ನಾವು ಅವರನ್ನು ಇಷ್ಟಪಡುವಾಗ, ಮದುವೆಯಾಗುವಾಗ ಇಬ್ಬರ ನಡುವೆ ಎಲ್ಲವೂ ಸರಿಯಿರುತ್ತದೆ, ಆದರೆ ದಿನಗಳು ಕಳೆಯುತ್ತಿದ್ದಂತೆ ಸಂಬಂಧದಲ್ಲಿ ಏಕೋ ಏನೋ ಸರಿಯಿಲ್ಲ ಎಂದನಿಸಲಾರಂಭಿಸುತ್ತದೆ, ಅವರ ಸ್ವಭಾವದಲ್ಲಿ ಬದಲಾವಣೆಯಾಗುತ್ತದೆ.

ಇದನ್ನು ಟಾಕ್ಸಿಕ್ ರಿಲೇಷನ್‌ಶಿಪ್ ಎಂದು ಕರೆಯಲಾಗುವುದು. ಆಗ ನೀವು ಎಚ್ಚರಿಕೆವಹಿಸದಿದ್ದರೆ ನಿಮ್ಮ ಸಂಬಂಧ ಹಾಳಾಗಬಹುದು ಅಥವಾ ನಿಮಗೆ ಬೇರೆ ರೀತಿಯ ತೊಂದರೆ ಉಂಟಾಗಬಹುದು.
ನಿಮ್ಮ ಸಂಬಂಧದಲ್ಲಿ ಈ ರೀತಿಯಿದ್ದರೆ ನೀವು ಎಚ್ಚೆತ್ತುಕೊಂಡರೆ ಒಳ್ಳೆಯದು:
1. ಎಲ್ಲವೂ ಅವರದ್ದೇ, ಅಲ್ಲಿ ನಿಮ್ಮ ಭಾವನೆಗಳಿಗೆ ಬೆಲೆಯಿಲ್ಲ
ಸಂಬಂಧ ಹಾಳಾಗುತ್ತಿದೆ ಎಂಬ ಸೂಚನೆ ನಿಮಗೆ ಅವರ ನಡವಳಿಕೆಯಿಂದಲೇ ಸಿಗುತ್ತದೆ. ಅವರ ವಿಷಯಗಳಿಗಷ್ಟೇ ಗಮನ ಹರಿಸುತ್ತಾರೆ, ಆದರೆ ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ನಿಮಗೆ ನಿಮ್ಮವ/ನಿಮ್ಮವಳು ಕಡೆಗಣಿಸುತ್ತಿದ್ದಾರೆ ಎಂದು ಅನಿಸಲಾರಂಭಿಸುತ್ತದೆ.
2.ಸಿಕ್ಕಾಪಟ್ಟೆ ಪೊಸೆಸಿವ್
ಪ್ರೀತಿ ಎಂದ ಮೇಲೆ ಅಲ್ಲಿ ಪೊಸೆಸಿವ್ ಇದ್ದೇ ಇರುತ್ತದೆ, ಆದರೆ ಸಿಕ್ಕಾಪಟ್ಟೆ ಪೊಸೆಸಿವ್ ಇದ್ದರೆ ಆ ಸಂಬಂಧ ಬಾಳುವುದು ಕಷ್ಟ. ನಿಮ್ಮನ್ನು ತುಂಬಾ ಕಂಟ್ರೋಲ್ ಮಾಡುತ್ತಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ ನಿಮಗೆ ನೋವುಂಟು ಮಾಡುತ್ತಿದ್ದಾರೆ ಎಂದಾದರೆ ನೀವು ಅವರಿಗೆ ನೀನು ಮಾಡುತ್ತಿರುವುದು ಸರಿಯಿಲ್ಲ ಎಂಬುವುದನ್ನು ಸ್ಪಷ್ಟವಾಗಿ ಹೇಳಿ. ಆದರೂ ಅವರು ಅವರ ಸ್ವಭಾವ ಬದಲಾಯಿಸಿಕೊಳ್ಳುತ್ತಿಲ್ಲ ಎಂದಾದರೆ ಅಂಥವರ ಜೊತೆ ಬಾಳ್ವೆ ಒಂದು ರೀತಿ ಹಾವಿನ ಜೊತೆ ಸರಸ ಎಂಬಂತೆ ಇರುತ್ತದೆ. ಯಾವಾಗ ಯಾವ ಅಪಾಯ ಬರುತ್ತದೋ ಎಂದು ಹೇಳಲು ಸಾಧ್ಯವಿಲ್ಲ.
3. ಅವರ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟವಾಗದಿದ್ದರೆ
ನಮ್ಮ ಸಂಗಾತಿ ಜೊತೆ ಒಂದಿಷ್ಟು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಅವನು ಅಥವಾ ಅವಳ ಜೊತೆ ಮಾತನಾಡಬೇಕೆಂದು ಅನಿಸುತ್ತಿಲ್ಲ. ಇಬ್ಬರ ನಡುವೆ ಸದಾ ಜಗಳ, ಯಾವುದೇ ಕನೆಕ್ಷನ್ ಇಲ್ಲದಂತೆ ಅನಿಸಲಾರಂಭಿಸಿದರೆ ನೀವು ಟಾಕ್ಸಿಕ್ ಸಂಬಂಧದಲ್ಲಿದ್ದೀರಾ ಎಂದು ಹೇಳಬಹುದು. ನೀವು ಎಲ್ಲಾ ಸರಿಪಡಿಸಿಕೊಂಡು ಹೋಗಲು ಎಷ್ಟೇ ಪ್ರಯತ್ನಿಸುತ್ತಿದ್ದರೂ ಆ ಕಡೆಯ ವ್ಯಕ್ತಿಯಿಂದ ನೀವು ಬಯಸಿದ ರೀತಿಯ ಪ್ರತಿಕ್ರಿಯೆ ಅಥವಾ ಸ್ಪಂದನೆ ಇಲ್ಲದಿದ್ದರೆ ಅಂಥ ಸಂಸಾರದಲ್ಲಿ ನೋವು ಮಾತ್ರ ಇರುತ್ತದೆ, ಖುಷಿ ಇರಲ್ಲ.
4. ನಿಮಗೆ ಬೌಂಡರಿ ಹಾಕಲಾರಂಭಿಸಿದರೆ
ನೀವು ಹೀಗೆ ಇರಬೇಕೆಂಬ ನಿಯಮ ರೂಪಿಸುವುದು, ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವುದು ಅಂದರೆ ನಿಮಗೆ ಮನೆಯಲ್ಲಿರಲು ಇಷ್ಟವಿರಲ್ಲ, ಹೊರಗಡೆ ಹೋಗಿ ದುಡಿಯಬೇಕೆಂಬ ಆಸೆ ಇದ್ದರೆ ಇಲ್ಲ ನನ್ನ ಜೊತೆ ಬಾಳಬೇಕೆಂದರೆ ಹೊರಗಡೆ ಹೋಗಿ ದುಡಿಯುವಂತಿಲ್ಲ ಎಂದು ಹೇಳುವುದು ಅಥವಾ ನಿಮ್ಮ ಕನಸುಗಳಿಗೆ ಅಡ್ಡಿಪಡಿಸುವುದು ಮಾಡುತ್ತಿದ್ದರೆ ಅಂಥ ಸಂಬಂಧದಲ್ಲಿ ನಿಮ್ಮ ಸ್ವಂತ ವ್ಯಕ್ತಿತ್ವಕ್ಕೆ ಯಾವುದೇ ಬೆಲೆ ಇರಲ್ಲ.
5.ಕುಟುಂಬದವರಿಂದ, ಸ್ನೇಹಿತರಿಂದ ದೂರವಿಡುವುದು
ಪ್ರೀತಿಯಲ್ಲಿರುವಾಗ ನಮ್ಮ ಲೋಕದಲ್ಲಿ ನಾವಿಬ್ಬರೇ ಇರಬೇಕೆಂದು ಬಯಸುವುದು ಸಹಜ.. ಆದರೆ ಫ್ರೆಂಡ್ಸ್ ಜೊತೆ ಮಾತನಾಡಿದರೆ ಕೋಪಗೊಳ್ಳುವುದು, ಮನೆಯವರ ಜೊತೆ ಮಾತನಾಡಿದಾಗ ಕೋಪಗೊಳ್ಳುವುದು ಮಾಡುತ್ತಿದ್ದರೆ ತುಂಬಾನೇ ಕಷ್ಟ ಅನಿಸಲಾರಂಭಿಸುತ್ತದೆ. ಅವರಿಗೆ ನಿಮ್ಮ ಮೇಲೆ ಅತಿಯಾದ ಪ್ರೀತಿಯಿಂದ ಆ ರೀತಿ ವರ್ತಿಸುತ್ತಿದ್ದರೂ ಅದನ್ನು ಸಹಿಸುವುದು ಕಷ್ಟವಾಗುವುದು. ಆದ್ದರಿಂದ ನಿಮಗೆ ಅವರು ನಿನ್ನ ಮನೆಗೆ ಹೋಗಬೇಡ, ಸ್ನೇಹಿತರನ್ನು ಭೇಟಿಯಾಗಬೇಡ ಎಂದೆಲ್ಲಾ ಹೇಳುವಾಗ ಪ್ರಾರಂಭದಲ್ಲಿಯೇ ಅವರ ವರ್ತನೆ ಬದಲಾಯಿಸಿ. ಪ್ರಾರಂಭದಲ್ಲಿ ಅವರು ಹೇಳಿದಂತೆ ಕೇಳುತ್ತಾ ಹೋದರೆ ಮುಂದೆ ಉಸಿರುಕಟ್ಟಿದಂತಾಗುವುದು, ನಿಜತಾನೆ?
6. ನಿಮ್ಮ ಭಾವನೆಗಳೊಂದಿಗೆ ಆಟವಾಡುವುದು
ಸಂಬಂಧದಲ್ಲಿ ಭಾವನೆಗಳೊಂದಿಗೆ ಆಟವಾಡಲು ಹೋಗಲೇಬಾರದು. ನಿಮ್ಮ ಜೀವನದಲ್ಲಿ ಹಾಗಾಗುತ್ತಿದೆ ಎಂದಾದರೆ ಆತ/ಆಕೆ ನಿಮಗೆ ಸೂಕ್ತ ವ್ಯಕ್ತಿಯಲ್ಲ ಎಂಬುವುದನ್ನು ಸೂಚಿಸುತ್ತದೆ. ಅನೈತಿಕ ಸಂಬಂಧ ಬೆಳೆಸುವುದು, ನಿಮ್ಮ ಕಡೆ ಆಸಕ್ತಿ ತೋರದಿರುವುದು ಇವೆಲ್ಲಾ ಕೆಟ್ಟ ಸಂಬಂಧದ ಸೂಚನೆಯಾಗಿದೆ.
ಈ ರೀತಿಯ ಸಂಬಂಧವಿದ್ದಾಗ ಏನು ಮಾಡಬೇಕು?
ಕೆಲವರನ್ನು ಬದಲಾಯಿಸಬಹುದು, ಮೊದಲಿಗೆ ಅವರಿಗೆ ಅವರ ನಡವಳಿಕೆ ನಿಮ್ಮ ಮನಸ್ಸಿಗೆ ಎಷ್ಟು ನೋವಾಗುತ್ತಿದೆ ಎಂಬುವುದನ್ನು ಮನವರಿಕೆ ಮಾಡಿ. ಆದರೂ ಅವರು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡದೇ ಇದ್ದರೆ ಅಂಥ ಸಂಬಂಧದಲ್ಲಿ ಇರಬೇಕೋ ಅಥವಾ ಹೊರ ನಡೆಯಬೇಕೋ ಎಂಬ ನಿರ್ಧಾರ ನಿಮ್ಮದು.



Click it and Unblock the Notifications












