Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಪುರುಷರು ತಮ್ಮ ಪತ್ನಿಗೆ ಸಾಮಾನ್ಯವಾಗಿ ಹೇಳುವ ಸುಳ್ಳುಗಳಿವು, ಸುಂದರ ದಾಂಪತ್ಯಕ್ಕೆ ಇದು ರೀತಿ ಚೆನ್ನಾಗಿಯೇ ಇರುತ್ತೆ
ದಂಪತಿಗಳು ಅಂದ ಮೇಲೆ ಅಲ್ಲಿ ಜಗಳ, ಸಾಮರಸ್ಯ, ವಿರಸ, ಸರಸ ಎಲ್ಲವೂ ಇರುವುದು ಕಾಮನ್. ಇಲ್ಲಿ ಎಲ್ಲವೂ ಲಿಮಿಟ್ ನಲ್ಲಿ ಇದ್ದಾಗ ಮಾತ್ರ ದಾಂಪತ್ಯ ಉತ್ತಮವಾಗಿ ಸಾಗುತ್ತದೆ. ಸಾಮಾನ್ಯವಾಗಿ ಗಂಡ ಹೆಂಡತಿಯ ನಡುವೆ ಜಗಳ ಅಥವಾ ವೈಮನಸು ಉಂಟಾಗುವುದೇ ಪತಿ ಅಥವಾ ಪತ್ನಿ ಸುಳ್ಳು ಹೇಳಿದಾಗ ಸುಳ್ಳು ಭರವಸೆಗಳನ್ನ ನೀಡಿದಾಗ!
ಎಷ್ಟೋ ಬಾರಿ ಆತ ಸುಳ್ಳು ಹೇಳುತ್ತಿದ್ದಾನೆ ಎನ್ನುವುದು ಆಕೆಗೆ ಗೊತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೆ ಮತ್ತೆ ಸುಳ್ಳು ಹೇಳುತ್ತಾ ತಾನು ಹೇಳಿದ್ದನ್ನೇ ಸತ್ಯ ಎಂದು ನಂಬಿಸಲು ಹೋದರೆ ಆಗ ಆ ವ್ಯಕ್ತಿಯ ಮೇಲಿನ ನಂಬಿಕೆ ಮುರಿದು ಬೀಳುತ್ತದೆ ಹಾಗೂ ದಾಂಪತ್ಯ ಜೀವನ ಹಾಳಾಗುತ್ತದೆ. ಮದುವೆಯ ಮೊದಲ ಕೂಡ ಹುಡುಗ, ಹುಡುಗಿಯ ಬಳಿ ಹೇಳುವ ಕೆಲವು ಸಣ್ಣ ಪುಟ್ಟ ಸುಳ್ಳುಗಳು ಕೂಡ ಆಕೆಯ ಮನಸ್ಸಿನ ಮೇಲೆ ಬಹಳ ದೊಡ್ಡ ಪರಿಣಾಮ ಬೀರಬಹುದು ನನ್ನ ಬಳಿ ಯಾವಾಗಲೂ ಸುಳ್ಳು ಹೇಳುತ್ತಾನೆ ಎಂದೇ ಅನ್ನಿಸಬಹುದು. ಹೀಗೆ ಸುಳ್ಳು ಹೇಳುವ ಅಭ್ಯಾಸವನ್ನು ಮಾಡಿಕೊಂಡರೆ ಮತ್ತೆ ನೀವು ಸತ್ಯ ಹೇಳಿದರೆ ಕೂಡ ಅದನ್ನು ಯಾರು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ.

ಈ ಕೆಲವು ವಿಚಾರಗಳಲ್ಲಿ ಗಂಡಸರು ಹೆಂಗಸರ ಬಳಿ ಸತ್ಯ ಹೇಳುವುದಿಲ್ಲ. ಹಾಗಾದ್ರೆ ಗಂಡಸರು ಸಾಮಾನ್ಯವಾಗಿ ಹೇಳುವಂತಹ ಸುಳ್ಳುಗಳು ಯಾವವು ಹಾಗೂ ಮಹಿಳೆಯರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂಬುವ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ನಾನು ಟ್ರಾಫಿಕ್ ನಲ್ಲಿ ಇದ್ದೇನೆ ತಡವಾಗುತ್ತೆ!
ಗಂಡ ಆಫೀಸ್ ಗೆ ತೆರಳಿದ ನಂತರ ಆತ ಮನೆಗೆ ಬರುವವರೆಗೂ ಹೆಂಡತಿ ಕಾಯುತ್ತಾಳೆ. ಅದೆಷ್ಟು ಬಾರಿ ನಾವು ಸಂಜೆ ಹೊರಗಡೆ ಹೋಗೋಣ ಎಂದು ಹೇಳಿದ ಪತಿ ಮನೆಗೆ ಬೇಗ ಬರುವುದೇ ಇಲ್ಲ. ಇತ್ತ ಹೆಂಡತಿ ಕಾಯುತ್ತಲೇ ಇರುತ್ತಾಳೆ. ಅಂತಹ ಸಂದರ್ಭದಲ್ಲಿ ಫೋನ್ ಮಾಡಿ ಯಾಕೆ ಲೇಟ್ ಆಯ್ತು ಅಂತ ಕೇಳಿದ್ರೆ ಆತ ಹೇಳುವ ಮುಖ್ಯವಾಗಿರುವ ಸುಳ್ಳು ನಾನು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೇನೆ ಎನ್ನುವುದು. ಸಾಮಾನ್ಯವಾಗಿ ಒಂದೇ ರಸ್ತೆಯಲ್ಲಿ ಪ್ರತಿದಿನ ಓಡಾಡುವವರೆಗೆ ಯಾವ ಸಮಯದಲ್ಲಿ ಟ್ರಾಫಿಕ್ ಇರುತ್ತೆ ಯಾವ ಸಮಯದಲ್ಲಿ ರಸ್ತೆ ಖಾಲಿ ಇರುತ್ತೆ ಎನ್ನುವ ಮಾಹಿತಿ ಇದ್ದೇ ಇರುತ್ತೆ ಅಂತಹ ಸಂದರ್ಭದಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಮತ್ತೆ ಮತ್ತೆ ಸುಳ್ಳು ಹೇಳುವುದು ಅಷ್ಟು ಸಮಂಜಸವಲ್ಲ ಹಾಗೂ ಹೆಂಡತಿಯಾದವಳು ಇದನ್ನ ಒಪ್ಪಿಕೊಳ್ಳುವುದಿಲ್ಲ.
ನಾನು ನಿನ್ನನ್ನು ಮಾತ್ರ ಹೆಚ್ಚಾಗಿ ಪ್ರೀತಿಸುತ್ತೇನೆ!
ಹೆಂಡತಿಯನ್ನು ಮನವೊಲಿಸಲು ಅಥವಾ ಹೆಂಡತಿಯನ್ನು ಮೆಚ್ಚಿಸಲು ಈ ಒಂದು ಸುಳ್ಳು ಹೇಳುವುದು ಸ್ವಲ್ಪ ಮಟ್ಟಿಗೆ ಒಳ್ಳೆಯದೇ. ಆದರೆ ಇದು ಅಕ್ಷರಶಃ ಸುಳ್ಳು ಅನ್ನುವುದು ಹೆಂಡತಿಗೆ ತಿಳಿದು ಬಂದಾಗ ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ಹೆಂಡತಿಯನ್ನು ಹೊರತುಪಡಿಸಿ ಮತ್ತೊಬ್ಬ ಮಹಿಳೆಗೆ ಪ್ರಮುಖ ಸ್ಥಾನ ಇದ್ದೇ ಇರುತ್ತದೆ ಉದಾಹರಣೆಗೆ ತಾಯಿಯನ್ನ ಪ್ರೀತಿಸುವ ಗಂಡು ಮಕ್ಕಳು ಸಾಕಷ್ಟ ಜನ ಇದ್ದಾರೆ. ಆದರೆ ಹೆಂಡತಿಯನ್ನು ಮೆಚ್ಚಿಸಲು ನೀನೆ ನನಗೆ ಅತ್ಯಂತ ಪ್ರಿಯವಾದ ವ್ಯಕ್ತಿ ಎಂದು ಹೇಳುವುದು ಸುಳ್ಳು.
ಈ ಕೆಲಸ ನಾಳೆಯೇ ಮಾಡುತ್ತೇನೆ!
ಅದೆಷ್ಟೋ ಸಂದರ್ಭದಲ್ಲಿ ಗಂಡಸರ ಪಾಲಿಗೆ ನಾಳೆ ಎನ್ನುವುದು ಬರುವುದೇ ಇಲ್ಲ ಹೆಂಡತಿ ಯಾವುದೇ ಕೆಲಸ ಹೇಳಿದರು ಇವತ್ತೊಂದು ದಿನ ಬಿಟ್ಟುಬಿಡು ನಾಳೆ ಖಂಡಿತ ಮಾಡುತ್ತೇನೆ ಎಂದು ಹೇಳುತ್ತಾರೆ ಇದು ಗಂಡಸರು ನೀಡುವ ಅತಿ ದೊಡ್ಡ ಸುಳ್ಳು ಭರವಸೆ ಎಂದೇ ಹೇಳಬಹುದು ಹೀಗೆ ಪ್ರತಿ ಸಲ ನಾಳೆ ಮಾಡುತ್ತೇನೆ ನಾಳೆ ಮಾಡುತ್ತೇನೆ ಎಂದು ಕೆಲಸವನ್ನು ಮುಂದೂಡುತ್ತಾ ಬಂದರೆ ಆತನ ಮಾತನ್ನು ಎಂದಿಗೂ ಹೆಂಡತಿ ನಂಬಲು ಸಾಧ್ಯವೇ ಇಲ್ಲ.
ನಾನು ಸೋಶಿಯಲ್ ಡ್ರಿಂಕರ್ ಅಷ್ಟೇ!
ಗಂಡಸರು ಮದುವೆಯಾದ ನಂತರ ಸ್ನೇಹಿತರ ಜೊತೆಗೆ ಹೊರಗಡೆ ಹೋಗಿ ಪಾರ್ಟಿ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಆದರೆ ಇದು ತನ್ನ ಹೆಂಡತಿಗೆ ಇಷ್ಟವಿಲ್ಲ ಎನ್ನುವ ವಿಚಾರ ಆತನಿಗೆ ಚೆನ್ನಾಗಿ ಗೊತ್ತಿರುತ್ತೆ ಹಾಗಾಗಿ ನಾನು ಹೆಚ್ಚು ಕುಡಿಯುವುದಿಲ್ಲ ನಾನು ಸ್ನೇಹಿತರ ಜೊತೆಗೆ ಬೆರೆಯುವುದಿಲ್ಲ ಎಂದು ಪ್ರತಿಸಲವೂ ಸುಳ್ಳು ಹೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ತನ್ನ ಸ್ನೇಹಿತರ ಜೊತೆಗೆ ಹೆಂಡತಿಗೆ ಗೊತ್ತಿಲ್ಲದೆ ಇರುವ ಹಾಗೆ ಸಾಕಷ್ಟು ಬಾರಿ ಪಾರ್ಟಿ ಮಾಡಿದರು ಕೂಡ ಆಕೆಯ ಬಳಿ ಮಾತ್ರ ವರ್ಷದಲ್ಲಿ ಒಂದು ಎರಡು ಬಾರಿ ಮಾತ್ರ ಅಥವಾ ಒಕೇಶನಲಿ ನಾನು ಡ್ರಿಂಕ್ಸ್ ಮಾಡುತ್ತೇನೆ ಎಂದು ಆತ ಸುಳ್ಳು ಹೇಳಬಹುದು.
ಸಾರಿ ನಿನ್ನ ಕರೆ ಬಂದಿದ್ದು ನೋಡೇ ಇಲ್ಲ!
ಹಲವು ಬಾರಿ ಹೆಂಡತಿ ಎಷ್ಟೇ ಸಲ ಫೋನ್ ಕಾಲ್ ಮಾಡಿದರು ಆತ ರಿಸೀವ್ ಮಾಡಿರುವುದಿಲ್ಲ ಕೆಲವೊಮ್ಮೆ ಹೆಂಡತಿಯ ಕರೆಯನ್ನ ಇಗ್ನೋರ್ ಮಾಡಿರಬಹುದು ಅಥವಾ ನಿಜವಾಗಿ ತಿಳಿಯದೆ ಇರಬಹುದು ಇನ್ನೂ ಎಷ್ಟೋ ಸಂದರ್ಭದಲ್ಲಿ ಕ್ರಿಕೆಟ್ ನೋಡುವಾಗಲು ಕೂಡ ಗಂಡಸರು ಹೆಂಡತಿಯ ಕರೆಯನ್ನು ಅವಾಯ್ಡ್ ಮಾಡುತ್ತಾರೆ ಅಥವಾ ಸ್ನೇಹಿತರ ಜೊತೆಗೆ ಇರುವಾಗ ಆಕೆಯ ಕರೆಯನ್ನು ನಿರ್ಲಕ್ಷಿಸುತ್ತಾರೆ. ಕೊನೆಗೆ ಆಕೆ ಮತ್ತೆ ಮತ್ತೆ ಕರೆ ಮಾಡಿದಾಗ ಅಥವಾ ಆತನನ್ನು ಭೇಟಿಯಾಗಿ ಪ್ರಶ್ನೆ ಮಾಡಿದಾಗ ಸಾರೀ.. ನಾನು ನಿನ್ನ ಫೋನ್ ಬಂದಿದ್ದು ನೋಡೇ ಇಲ್ಲ ಫೋನ್ ಸೈಲೆಂಟ್ ನಲ್ಲಿ ಇತ್ತು ಎಂದು ಸುಲಭವಾಗಿ ಸುಳ್ಳು ಹೇಳಿಬಿಡುತ್ತಾರೆ. ಇದು ಕೂಡ ಯಾವ ಹೆಂಗಸರಿಗೂ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.
ಸಣ್ಣ ಪುಟ್ಟ ಸುಳ್ಳು ಹೇಳುವುದು ಕೂಡ ಹೆಂಡತಿಯ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎನ್ನುವುದನ್ನು ಗಂಡಸರು ನೆನಪಿಟ್ಟುಕೊಳ್ಳಬೇಕು. ಆಕೆಗೆ ನೋವಾಗಬಾರದು ಎನ್ನುವ ಕಾರಣಕ್ಕೆ ಹೇಳುವ ಕೆಲವು ಸುಳ್ಳುಗಳು ಒಳ್ಳೆಯದೇ ಆಗಿದ್ದರೂ, ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡರೆ ದಾಂಪತ್ಯ ಜೀವನಕ್ಕೆ ಖಂಡಿತ ಅದು ಒಳ್ಳೆಯದಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.



Click it and Unblock the Notifications