Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮದುವೆಯಾದ ಮೇಲೆ ಹೆಸರು ಬದಲಾಯಿಸೋದು ಉತ್ತಮ ಯಾಕೆ?
ಮದುವೆಯಾದ ಮೇಲೆ ಹೆಣ್ಣು ಮಕ್ಕಳು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಮ್ಮ ಹೆಸರಿನ ಜೊತೆಗೆ ಗಂಡನ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ಗಂಡನ ಹೆಸರಿನ ಕೊನೆಯ ಹೆಸರನ್ನು ಮಾತ್ರ ಇಟ್ಟುಕೊಳ್ಳುತ್ತಾರೆ.
ಈಗಂತೂ ಈ ಟ್ರೆಂಡ್ ಹೆಚ್ಚಾಗ್ತಿದೆ. ಹೆಚ್ಚಿನವರಿಗೆ ಹೆಸರು ಬದಲಾಯಿಸಬೇಕು ಅಂತಿರುತ್ತೆ. ಆದರೆ ಹೆಸರು ಬದಲಾಯಿಸೋ ವಿಧಾನ ಗೊತ್ತಿರೋದಿಲ್ಲ. ಹಾಗಾದ್ರೆ ಮದುವೆಯಾದ ಮೇಲೆ ಹೆಸರು ಬದಲು ಮಾಡೋದ್ರಿಂದ ಏನು ಲಾಭ? ಇದ್ರಿಂದ ಆಗುವ ಪ್ರಯೋಜನಗಳು ಏನು ಅನ್ನೋದನ್ನು ತಿಳಿಯೋಣ.

1. ಗಂಡನ ಮನೆತನದ ಜೊತೆಗೆ ಗುರುತಿಸಿಕೊಳ್ಳಬಹುದು
ಮದುವೆಯಾದ ಮೇಲೆ ನಮ್ಮ ಹೆಸರಿನ ಜೊತೆಗೆ ಗಂಡನ ಹೆಸರು ಸೇರಿಸಿಕೊಳ್ಳುವುದು ಒಂದು ರೀತಿ ಖುಷಿನೇ ಅಲ್ವಾ? ಒಂದು ಕಡೆಯಿಂದ ನಮ್ಮ ಹೆಸರಿನೊಂದಿಗೆ ಹೊಸ ಹೆಸರು ಸೇರುತ್ತೆ ಅನ್ನೋ ಸಂತೋಷ. ಮತ್ತೊಂದು ಕಡೆಯಿಂದ ನೀವು ಇನ್ನು ಮುಂದೆ ಗಂಡನ ಮನೆತನದೊಂದಿಗೆ ಗುರುತಿಸಿಕೊಳ್ಳಬಹುದು. ನಿಮ್ಮ ಹೆಸರಿನ ಜೊತೆಗೆ ಗಂಡನ ಹೆಸರಿದ್ದರೆ ನಿಮ್ಮ ಘನತೆ, ಗೌರವ ಮತ್ತಷ್ಟು ಹೆಚ್ಚಾಗುತ್ತದೆ.
2. ನಿಮ್ಮ ಮೊದಲ ಹೆಸರನ್ನೂ ಬದಲಾಯಿಸಿಕೊಳ್ಳಬಹುದು
ಕೆಲವೊಂದು ಸಲ ನಮ್ಮ ಹೆಸರು ನಮಗೆ ಇಷ್ಟವಿಲ್ಲದೇ ಇರಬಹುದು. ಅಥವಾ ನಮ್ಮ ಜಾತಕದೊಂದಿಗೆ ಹೋಲಿಕೆ ಆಗದಿರಬಹುದು. ಅಥವಾ ಆ ಹೆಸರಿನಿಂದ ಕರೆಯೋದಕ್ಕೆ ಬೇರೆಯವರಿಗೆ ಕಷ್ಟ ಆಗುತ್ತಿರಬಹುದು. ಇಂತಹ ಸಂದರ್ಭದಲ್ಲಿ ನಾವು ಹೆಸರು ಬದಲಾಯಿಸಬೇಕಾದರೆ ಕಾನೂನಿನ ಪ್ರಕಾರ ತುಂಬಾನೇ ಕಷ್ಟ ಆಗುತ್ತದೆ. ಆದರೆ ಮದುವೆಯಾದ ಮೇಲೆ ಸುಲಭವಾಗಿ ಹೆಸರು ಬದಲು ಮಾಡಿಕೊಳ್ಳಬಹುದು.
3. ಕುಟುಂಬದ ಜೊತೆಗೆ ಒಂದು ಉತ್ತಮ ಸಂಬಂಧ ಬೆಸೆಯುತ್ತದೆ
ಮದುವೆಯಾದ ಮೇಲೆ ನೀವು ಕೊನೆಯ ಹೆಸರನ್ನು ಸೇರಿಸಿಕೊಳ್ಳುವುದರ ಮೂಲಕ ಗಂಡನ ಕುಟುಂಬದ ಜೊತೆಗೆ ಗುರುತಿಸಿಕೊಳ್ಳಬಹುದು. ಹೊರಗಿನವರು ನಿಮ್ಮನ್ನು ಆ ಕುಟುಂಬಕ್ಕೆ ಸೇರಿದವರು ಎಂದು ಗುರುತಿಸುತ್ತಾರೆ. ಜೊತೆಗೆ ಕುಟುಂಬದೊಂದಿಗೆ ನಿಮ್ಮ ಭಾಂದವ್ಯವೂ ಉತ್ತಮವಾಗುತ್ತಾ ಹೋಗುತ್ತದೆ. ಇನ್ನೂ ಮಕ್ಕಳಾದ ಮೇಲೆ ಅವರಿಗೂ ಕೂಡ ಯಾವುದೇ ಗೊಂದಲಗಳಿಲ್ಲದೇ ಗಂಡನ ಕೊನೆಯ ಹೆಸರನ್ನು ಸೇರ್ಪಡೆ ಮಾಡಬಹುದು.
ಹೆಸರು ಬದಲಾಯಿಸೋದು ಹೇಗೆ ಅನ್ನೋದನ್ನು ತಿಳಿಯೋಣ :
1. ನೀವು ನವೀಕರಿಸಬೇಕಾದ ಡಾಕ್ಯುಮೆಂಟ್ ಗಳತ್ತ ಗಮನಕೊಡಿ
ಮದುವೆಯ ನಂತರ ಹೆಸರನ್ನು ಬದಲಾಯಿಸುವ ಪ್ರಕ್ರಿಯೆಯು ಮೂಲಭೂತ ದಾಖಲೆಗಳೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಹೆಸರನ್ನು ನವೀಕರಿಸಲು ಯಾವೆಲ್ಲಾ ಡಾಕ್ಯುಮೆಂಟ್‌ಗಳು ಇರಬೇಕೆಂದು ಮೊದಲಿಗೆ ಪಟ್ಟಿ ಮಾಡಿ. ಸರಿಯಾದ ಡಾಕ್ಯುಮೆಂಟ್ ಗಳನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಿ.
2. ಜನನ ಪ್ರಮಾಣ ಪತ್ರ ಸೇರಿದಂತೆ ಎಲ್ಲವೂ ನಿಮ್ಮೊಂದಿಗಿರಲಿ
ಮದುವೆಯ ನಂತರ ಹೆಸರು ಬದಲು ಮಾಡಬೇಕಾದರೆ ಕೆಲವೊಂದು ಡಾಕ್ಯುಮೆಂಟ್ ನಮ್ಮ ಜೊತೆಗೆ ಇರಲೇಬೇಕು. ಸಾಮಾಜಿಕ ಭದ್ರತಾ ಕಾರ್ಡ್‌ಗಳು, ಜನನ ಮತ್ತು ವಿವಾಹ ಪ್ರಮಾಣಪತ್ರಗಳು, ಪೌರತ್ವವನ್ನು ತೋರಿಸುವ ಪುರಾವೆಗಳು ಇತ್ಯಾದಿ.
3. ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಮೊದಲಿಗೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಲ್ಲಿರುವ ನಿಮ್ಮ ದಾಖಲೆಗಳನ್ನು ನವೀಕರಿಸಲು ತಿಳಿಸಿ. ಈಗಾಗಲೇ ನಿಮ್ಮ ಅಧಿಕೃತ ದಾಖಲೆಗಳು ಮತ್ತು ನವೀಕರಿಸಿದ ಐಡಿಗಳನ್ನು ನೀವು ಹೊಂದಿದ್ದರೆ ಬ್ಯಾಂಕ್ ನಲ್ಲಿ ಹೆಸರು ನವೀಕರಿಸೋದು ಹೆಚ್ಚು ಕಷ್ಟ ಆಗೋದಿಲ್ಲ. ಹೀಗಾಗಿ ನೀವು ಅಲ್ಲಿಗೆ ಹೋಗಿ ಬ್ಯಾಂಕ್ ನವರೊಂದಿಗೆ ಮಾತನಾಡಿ ನಿಮ್ಮ ಹೆಸರನ್ನು ನವೀಕರಿಸಲು ಬಯಸುತ್ತೀರಿ ಎಂದು ಅವರಿಗೆ ತಿಳಿಸಿ. ನಿಮಗೆ ಬ್ಯಾಂಕ್ ನವರು ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ.
4. ನೀವು ಕೆಲಸ ಮಾಡುವ ಕಂಪನಿಗೆ ತಿಳಿಸಿ
ಒಂದು ವೇಳೆ ನೀವು ಮದುವೆಯಾದ ಮೇಲೆ ನಿಮ್ಮ ಹೆಸರನ್ನು ಬದಲಾಯಿಸಿದ್ದರೆ ನೀವು ಕೆಲಸ ಮಾಡುವ ಕಂಪನಿಗೆ ತಿಳಿಸಬೇಕು. ಏಕೆಂದರೆ ಅವರು ನಿಮ್ಮ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ. ನೀವು ಮದುವೆಯಾಗಿದ್ದೀರಿ ಎಂದು ನಿಮ್ಮ ಕಂಪನಿಗೆ ತಿಳಿದಿರುವ ಕಾರಣ ಹೆಸರು ಬದಲಾಗಿರೋ ವಿಚಾರವನ್ನು ತಿಳಿಸಿ. ಆಫಿಸ್ ಡಾಕ್ಯುಮೆಂಟ್ ನಲ್ಲಿ ಹೆಸರು ಬದಲಾಯಿಸಿಕೊಳ್ಳಿ. ನಿಮ್ಮ ಹೊಸ ಹೆಸರಿನೊಂದಿಗೆ ನಿಮ್ಮ ಐಡಿಗಳು ಅಥವಾ ಡಾಕ್ಯುಮೆಂಟ್‌ಗಳ ಫೋಟೋಕಾಪಿಗಳನ್ನು ಕಂಪನಿಗೆ ಸಲ್ಲಿಸಬೇಕಾಗುತ್ತದೆ.
5. ಸೋಶಿಯಲ್ ಮಿಡಿಯಾ ಖಾತೆಗಳಲ್ಲೂ ನಿಮ್ಮ ಹೆಸರು ಬದಲಾಯಿಸಿ
ನೀವು ಮದುವೆಯಾದ ಮೇಲೆ ಅಧಿಕೃತವಾಗಿ ನಿಮ್ಮ ಹೆಸರನ್ನು ಬದಲಾಯಿಸಿದರೆ ಸೋಶಿಯಲ್ ಮಿಡಿಯಾ ಖಾತೆಯಲ್ಲಿಯೂ ಹೆಸರು ಬದಲಾವಣೆ ಮಾಡೋದು ಮುಖ್ಯವಾಗುತ್ತದೆ. ಹೆಚ್ಚಿನವರು ನಿಮ್ಮ ಸೋಶಿಯಲ್ ಮಿಡಿಯಾ ಖಾತೆಯ ಮೂಲಕ ಸ್ನೇಹಿತರಾಗಿರುತ್ತಾರೆ. ಹೀಗಾಗಿ ಎಲ್ಲರಿಗೂ ನಿಮ್ಮ ಹೆಸರು ಬದಲಾದ ವಿಚಾರ ಗೊತ್ತಾಗುತ್ತದೆ.
ಮದುವೆಯಾದ ನಂತರ ಹೆಸರು ಬದಲಾಯಿಸಲು ಬಯಸುವವರು ಈ ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ನೀಡಲೇಬೇಕು. ಹೆಸರು ಬದಲಾಯಿಸುವ ಸಂದರ್ಭದಲ್ಲಿ ಈ ಎಲ್ಲಾ ಕ್ರಮಗಳನ್ನು ತಪ್ಪದೇ ಪಾಲಿಸಿ.



Click it and Unblock the Notifications












