Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಕೂಡು ಕುಟುಂಬದಲ್ಲಿ ಬೆಳೆದರೆ ಮಾತ್ರ ಮಕ್ಕಳಲ್ಲಿ ಈ ಗುಣಗಳು ಬಳುವಳಿಯಾಗಿ ಬರುತ್ತದೆ
ಕುಟುಂಬ ಅನ್ನೋದು ಮನುಷ್ಯನ ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಯಾಕೆಂದರೆ ಇಂದು ನಾವು ಎಷ್ಟೇ ಕಲಿತು ದೊಡ್ಡವರಾಗಿದ್ರು ಕೂಡ ನಮ್ಮಲ್ಲಿರುವ ಉತ್ತಮ ಮೌಲ್ಯಗಳು ನಮ್ಮ ಕುಟುಂಬದಿಂದಲೇ ಬಳವಳಿಯಾಗಿ ಬಂದಿರುತ್ತದೆ. ಅದ್ರಲ್ಲೂ ಕೂಡು ಕುಟುಂಬದಲ್ಲಿ ಬೆಳೆದ ಮಕ್ಕಳು ಉತ್ತಮ ಜೀವನ ಮೌಲ್ಯಗಳನ್ನೇ ಮೈಗೂಡಿಸಿಕೊಂಡಿರುತ್ತಾರೆ. ಅಷ್ಟಕ್ಕು ಕೂಡು ಕುಟುಂಬದಲ್ಲಿ ಎಲ್ಲರ ಜೊತೆಗೆ ಬದುಕೋದು ಯಾಕೆ ಮುಖ್ಯ? ಮಕ್ಕಳು ಕೂಡು ಕುಟುಂಬದಲ್ಲಿ ಎಂತಹ ಜೀವನ ಪಾಠಗಳನ್ನು ಮಕ್ಕಳು ಕಲಿತುಕೊಳ್ಳುತ್ತಾರೆ ಅನ್ನೋದನ್ನ ತಿಳಿಯೋಣ.

1. ಹಿರಿಯರನ್ನು ಗೌರವಿಸೋದು
ಮನೆಯಲ್ಲಿ ಅಪ್ಪ-ಅಮ್ಮ, ಅಜ್ಜ- ಅಜ್ಜಿ, ಚಿಕ್ಕಪ್ಪ, ದೊಡ್ಡಪ್ಪ ಹೀಗೆ ತುಂಬು ಕುಟುಂಬದಲ್ಲಿ ಬೆಳೆದ ಮಕ್ಕಳಿಗೆ ಸಂಬಂಧಗಳ ಬೆಲೆ ಗೊತ್ತಿರುತ್ತದೆ. ದೊಡ್ಡವರಿಗೆ ಗೌರವ ಕೊಡೋದನ್ನು ಅವರು ಚಿಕ್ಕಂದಿನಿಂದಲೇ ಕಲಿತಿರುತ್ತಾರೆ. ಹೀಗಾಗಿ ಹೊರಗಡೆ ಬಂದಾಗಲೂ ಇದನ್ನು ಅವರು ಮುಂದುವರಿಸುತ್ತಾರೆ. ಹಿರಿಯ ವ್ಯಕ್ತಿಗಳಿಗೆ ಗೌರವ ನೀಡುವುದು, ಯಾರ ಜೊತೆ ಹೇಗೆ ಮಾತನಾಡಬೇಕು ಎಂಬ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರುತ್ತಾರೆ.
2. ಹಬ್ಬಗಳನ್ನು ಒಟ್ಟಾಗಿ ಆಚರಣೆ ಮಾಡೋದು
ಕೂಡು ಕುಟುಂಬದಲ್ಲಿ ಹಬ್ಬಗಳ ಆಚರಣೆ ಯಾವ ರೀತಿ ನಡೆಯುತ್ತೆ ಅನ್ನೋದು ನಮಗೆಲ್ಲಾ ಗೊತ್ತಿರುತ್ತದೆ. ಎಲ್ಲಾರೂ ಒಟ್ಟಾಗಿ ಎಲ್ಲಾ ಕೆಲಸವನ್ನು ಹಂಚಿಕೊಂಡು, ಹಬ್ಬದ ಅಡುಗೆ ಮಾಡಿ ಒಟ್ಟಾಗಿ ಊಟ ಮಾಡುತ್ತಾರೆ. ಇಲ್ಲಿ ಮಕ್ಕಳನ್ನು ಕೂಡ ಸಣ್ಣ-ಪುಟ್ಟ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಇದರಿಂದ ಮಕ್ಕಳು ಕೂಡ ನಮ್ಮ ಆಚಾರ-ವಿಚಾರಗಳನ್ನು ತಿಳಿಕೊಳ್ಳುತ್ತಾರೆ. ಹಾಗೂ ದೊಡ್ಡವರಾದ ಮೇಲೆ ಅದನ್ನು ಪಾಲಿಸುತ್ತಾರೆ.
3. ಕೆಲಸವನ್ನು ಹಂಚಿಕೊಂಡು ಮಾಡೋದು
ಒಂದು ದೊಡ್ಡ ಕುಟುಂಬ ಅಂದ ಮೇಲೆ ಅದನ್ನು ನಿಭಾಯಿಸೋದು ಸುಲಭದ ಕೆಲಸವಲ್ಲ. ಹೀಗಾಗಿ ಮನೆಯಲ್ಲಿರೋ ಪ್ರತಿಯೊಬ್ಬರು ಕೂಡ ಒಂದೊಂದು ಕೆಲಸವನ್ನು ವಹಿಸಿಕೊಂಡು ಅದನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಾರೆ. ಹೀಗೆ ಮನೆಯಲ್ಲಿರುವ ಪುಟ್ಟ ಮಕ್ಕಳಿಗೂ ಕೂಡ ಅವರ ಕೈಯಲ್ಲಾಗೀ ಚಿಕ್ಕ-ಪುಟ್ಟ ಕೆಲಸಗಳನ್ನು ನೀಡಲಾಗುತ್ತದೆ. ಇಂತಹ ವಿಚಾರಗಳು ಅವರು ದೊಡ್ಡವರಾದ ಮೇಲೆ ತುಂಬಾನೇ ಉಪಯೋಗಕ್ಕೆ ಬರುತ್ತದೆ. ಎಂತಹ ಸಂಕಷ್ಟದ ಪರಿಸ್ಥಿತಿಯನ್ನು ಅವರು ನಿಭಾಯಿಸಲು ಸಿದ್ಧರಿರುತ್ತಾರೆ.
4. ದಾನ ಮಾಡುವುದು
ಕೂಡು ಕುಟುಂಬದಲ್ಲಿ ಬಾಳ್ವೆ ನಡೆಸುವಾಗ ನಮಗೆ ಸರಿ ತಪ್ಪುಗಳನ್ನು ತಿದ್ದಿ ಹೇಳೋದಕ್ಕೆ ಮನೆಯಲ್ಲಿ ಅಜ್ಜ- ಅಜ್ಜಿಯಿಂದ ಹಿಡಿದು ಅನೇಕ ಜನರಿರುತ್ತಾರೆ. ಕುಟುಂಬದಿಂದ ಮುಖ್ಯವಾಗಿ ನಾವು ದಾನದ ಮಹತ್ವ ಏನು ಅನ್ನೋದನ್ನು ಕೂಡ ತಿಳಿದುಕೊಳ್ಳಬಹುದು. ಮನೆ ಬಾಗಿಲಿಗೆ ಬಂದವರಿಗೆ ಅಕ್ಕಿ, ದಾವಸ-ಧಾನ್ಯಗಳನ್ನು ದಾನ ಮಾಡುವುದು. ಅಥವಾ ದೇವಸ್ಥಾನಕ್ಕೆ ಹೋಗಿ ನಿರ್ಗತಿಕರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುವುದು. ಈ ಎಲ್ಲಾ ವಿಚಾರಗಳನ್ನು ಚಿಕ್ಕ ವಯಸ್ಸಿನಲ್ಲೇ ತಿಳಿದುಕೊಂಡರೆ ದೊಡ್ಡವರಾದ ಮೇಲೆ ಕೂಡ ಇದು ಹಾಗೆಯೇ ಮುಂದುವರಿಯುತ್ತದೆ.
5. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು
ಕುಟುಂಬ ಅಂದ ಮೇಲೆ ಅಲ್ಲಿ ಮನಸ್ಥಾಪ, ಕೋಪ, ಜಗಳ, ಮುನಿಸು ಸಾಮಾನ್ಯವಾಗಿರುತ್ತದೆ. ಹಾಗಂತ ಇದೇ ವಿಚಾರವನ್ನು ದೊಡ್ಡದು ಮಾಡೋದಕ್ಕೆ ಹೋಗೋದಿಲ್ಲ. ಮಾತನಾಡಿಕೊಂಡು ಎಲ್ಲವನ್ನೂ ಬರೆ ಹರಿಸುತ್ತಾರೆ. ಕೆಲವೇ ಕ್ಷಣದಲ್ಲಿ ಕುಟುಂಬದಲ್ಲಿದ್ದ ಎಲ್ಲಾ ಸಮಸ್ಯೆಗಳು ಬಗೆ ಹರಿಯುತ್ತದೆ. ಈ ಗುಣಗಳನ್ನು ನಿಮ್ಮ ಮಕ್ಕಳು ಕಲಿತುಕೊಳ್ಳುತ್ತಾರೆ. ದೊಡ್ಡವರಾದ ಮೇಲೆ ಅನೇಕ ಸವಾಲುಗಳನ್ನು ಅವರು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿಯನ್ನು ಯಾವ ರೀತಿ ನಿಭಾಯಿಸಬೇಕು ಅನ್ನೋದನ್ನು ಅವರು ಕೂಡು ಕುಟುಂಬದಿಂದ ಕಲಿತಿರುತ್ತಾರೆ.
6. ಕುಟುಂಬದ ಪ್ರಾಮುಖ್ಯತೆಯನ್ನು ಅರಿತು ಕೊಂಡಿರುತ್ತಾರೆ
ಕೂಡು ಕುಟುಂಬದಲ್ಲಿ ಬೆಳೆದ ಮಕ್ಕಳು ಅಪ್ಪ- ಅಮ್ಮ, ಅಜ್ಜ- ಅಜ್ಜಿಯನ್ನು ನೋಡಿಕೊಂಡು ಬೆಳದಿರುತ್ತಾರೆ. ಅವರ ನಡುವಿನ ಸಂಬಂಧ, ಭಾಂದವ್ಯ ಹೇಗಿತ್ತು? ಒಬ್ಬರಿಗೊಬ್ಬರು ಯಾವ ರೀತಿ ಗೌರವ ನೀಡುತ್ತಿದ್ದರೂ ಎಲ್ಲವನ್ನೂ ಮಕ್ಕಳು ಪೋಷಕರಿಂದ ಕಲಿತುಕೊಳ್ಳುತ್ತಾರೆ. ಹಾಗೂ ದೊಡ್ಡವರಾದ ಮೇಲೆ ಅದನ್ನೇ ರೂಢಿಸಿಕೊಳ್ಳುತ್ತಾರೆ.
7. ನಂಬಿಕೆ, ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳುತ್ತಾರೆ
ಇತ್ತೀಚಿಗೆ ನ್ಯೂಕ್ಲಿಯರ್ ಕುಟುಂಬಗಳು ಹೆಚ್ಚಾಗುತ್ತಿದೆ. ಅಪ್ಪ- ಅಮ್ಮ ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಮಕ್ಕಳು ಇರೋದನ್ನೇ ಮರೆತಂತಿದೆ. ದುಡಿಯೋದಕಷ್ಟೇ ಅವರು ಪ್ರಾಮುಖ್ಯತೆ ನೀಡುತ್ತಾರೆ. ಮಕ್ಕಳನ್ನು ನೋಡಿಕೊಳ್ಳೋದಕ್ಕೆ ಸಮಯವಿರೋದಿಲ್ಲ ಇನ್ನೂ ಮೌಲ್ಯಗಳನ್ನು ಕಲಿಸೋದು ದೂರದ ಮಾತೇ ಸರಿ. ಕೂಡು ಕುಟುಂಬದಲ್ಲಿ ಬೆಳೆದ ಮಕ್ಕಳು ಎಲ್ಲರ ಮಧ್ಯೆ ಬದುಕೋದ್ರಿಂದ ನಂಬಿಕೆ, ಪ್ರಾಮಾಣಿಕತೆಯಂತಹ ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕೂಡು ಕುಟುಂಬ ಅನ್ನೋದು ಬರೀ ಹೆಸರಿಗಷ್ಟೇ ಎಂಬಂತಾಗಿದೆ. ಕೆಲವೊದು ಹಳ್ಳಿಗಳಲ್ಲಿ ಮಾತ್ರ ಇನ್ನೂ ಕೂಡ ಕೂಡು ಕುಟುಂಬಗಳು ಜೀವಂತವಾಗಿದೆ. ಇನ್ನೂ ಮುಂದಾದರೂ ಆದಷ್ಟು ಮದುವೆಯಾದ ಮೇಲೂ ಅಪ್ಪ ಅಮ್ಮನ ಜೊತೆಗೆ ಬದುಕಿ. ಇದು ನಿಮ್ಮ ಹಾಗೂ ನಿಮ್ಮ ಕುಟುಂಬದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.



Click it and Unblock the Notifications

