Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾನು ತುಂಬಾ ಪೊಸೆಸಿವ್ ಅಂತ ಗೊತ್ತು, ಆದರೆ ಏನ್ಮಾಡಲಿ? ಎನ್ನುವುದೇ ನಿಮ್ಮ ಸಮಸ್ಯೆಯೇ?
"ನಾನು ತುಂಬಾ ಪೊಸೆಸಿವ್ ಅಂತ ನನಗೂ ಗೊತ್ತು ಆದರೂ ಏನ್ಮಾಡಲಿ? ನನಗೆ ಅವರನ್ನ ಕಂಡ್ರೆ ಬೆಟ್ಟದಷ್ಟು ಪ್ರೀತಿ.
ಬೇರೆ ಯಾರೂ ಸ್ವಲ್ಪ ಪ್ರೀತಿಯಿಂದ ಮಾತನಾಡಿಸಿದರೂ ನನಗೆ ಸಹಿಸಲು ಸಾಧ್ಯವಾಗಲ್ಲ. ಅವರ ಪ್ರಪಂಚದಲ್ಲಿ ನಾನು ಮಾತ್ರ ಇದ್ದೀನಿ, ನಾನು ಮಾತ್ರ ಇರಬೇಕು, ಅವರು ಅವರ ಸಮಯವನ್ನು ನನ್ನ ಜೊತೆಯೇ ಕಳೆಯಬೇಕು, ನನ್ನ ಬಿಟ್ಟು ಬೇರೆ ಯಾರ ಜೊತೆಯೂ ನಗು ನಗುತ್ತಾ ಮಾತನಾಡಿದರೆ ನಂಗೆ ಇಷ್ಟವಾಗಲ್ಲ.

ನನ್ನ ವರ್ತನೆಯಿಂದ ಅವರಿಗೆ ತುಂಬಾ ನೋವಾಗುತ್ತಿದೆ ಎಂದು ಗೊತ್ತಾಗುತ್ತೆ, ಆದರೂ ನನಗೆ ನನಗೆ ಭಯ, ಈ ಪೊಸೆಸಿವ್ ಕಂಟ್ರೋಲ್ ಮಾಡಲು ಏನು ಮಾಡಬೇಕು?" ಎಂದು ಫ್ರೆಂಡ್‌ಯೊಬ್ಬ ಹೇಳುತ್ತಿದ್ದ.
ಪ್ರೀತಿಯಲ್ಲಿ ಮೊದ-ಮೊದಲು ಪೊಸೆಸಿವ್ ಇದ್ದಾಗ ಖುಷಿಯಾಗುವುದು, ಅವರಿಗೆ ನಾನು ಎಂದ್ರೆ ಎಷ್ಟೊಂದು ಇಷ್ಟ ಎಂದು ಮನಸ್ಸಿನಲ್ಲಿಯೇ ಖುಷಿ ಪಡುತ್ತೇವೆ, ಆದರೆ ಆ ಖುಷಿ ತುಂಬಾ ದಿನ ಇರಲ್ಲ, ಪ್ರೀತಿಯಲ್ಲಿ ಪೊಸೆಸಿವ್ ತುಂಬಾ ಹೆಚ್ಚಾದರೆ ಉಸಿರು ಕಟ್ಟಿದ ಅನುಭವ ಉಂಟಾಗುವುದು.
ನಿಜವಾಗಲೂ ಅತಿಯಾದ ಪೊಸೆಸಿವ್‌ನೆಸ್ ಸ್ವಭಾವ ಕಡಿಮೆ ಮಾಡಬೇಕೆಂದು ನೀವು ಬಯಸಿದರೆ ಈ ಟಿಪ್ಸ್ ನಿಮಗಾಗಿ.
1. ನಿಮ್ಮ ಬದುಕಿನಲ್ಲಿ ಬ್ಯುಸಿಯಾಗಿ: ಸದಾ ನಿಮ್ಮ ಸಂಗಾತಿ ಬಗ್ಗೆ ಯೋಚಿಸುವುದರಿಂದ ಈ ರೀತಿಯ ಪೊಸೆಸಿವ್ ಅಧಿಕವಾಗುವುದು, ತುಂಬಾ ಕೆಟ್ಟ ಆಲೋಚನೆಗಳು ಸದಾ ತಲೆಯಲ್ಲಿ ಓಡಾಡುವುದು. ಅದೇ ನೀವು ತುಂಬಾ ಬ್ಯುಸಿಯಾದರೆ ಈ ಬಗೆಯ ನೆಗೆಟಿವ್ ಯೋಚನೆಯಿಂದ ಹೊರಬರಬಹುದು.
2. ಅಭದ್ರತೆ ಮೊದಲು ಬಿಡಿ: ಪೊಸೆಸಿವ್‌ನೆಸ್ ಪ್ರೀತಿಯಿಂದ ಬರುವುದು ಅಂತಾರೆ, ಆದರೆ ಪ್ರೀತಿಯಲ್ಲಿ ಅಭದ್ರತೆ ಇದ್ದಾಗ ಈ ರೀತಿಯ ಪೊಸೆಸಿವ್‌ನೆಸ್ ಅಧಿಕವಾಗುವುದು. ಅಭದ್ರತೆ ಇದ್ದಾಗಲೇ ಸಂಶಯ ಹೆಚ್ಚಾಗುವುದು. ನಿಮ್ಮ ಸಂಬಂಧದಲ್ಲಿ ನಿಮ್ಮನ್ನು ಕಾಡುವ ಅಭದ್ರತೆ ಯಾವುದು ಎಂದು ಯೋಚಿಸಿ. ಆ ವಿಷಯದ ಬಗ್ಗೆ ನಿಮ್ಮನ್ನು ಕಾಡುತ್ತಿರುವ ಭಯದಲ್ಲಿ ನಿಜವಾಗಲೂ ಸತ್ಯಾಂಶವಿದೆಯೇ ಅಥವಾ ನೀವು ಸುಮ್ಮನೆ ಆಲೋಚಿಸಿ ಇರುವ ನೆಮ್ಮದಿ ಕೆಡಿಸಿಕೊಳ್ಳುತ್ತಿದ್ದೀರಾ? ಎಂಬುವುದರ ಬಗ್ಗೆ ಆಲೋಚಿಸಿ.
ಇದರ ಕುರಿತು ಸಂಗಾತಿ ಬಳಿ ಮಾತನಾಡುವುದರಲ್ಲಿ ಯಾವುದೇ ತಪ್ಪಿಲ್ಲ, ಏಕೆಂದರೆ ಅವರ ಮಾತುಗಳನ್ನು ಕೇಳಿದಾಗ ನಿಮಗೂ ಆತ್ಮವಿಶ್ವಾಸ ಮೂಡುವುದು, ಈ ರೀತಿ ಓವರ್ ಪೊಸೆಸಿವ್ ಆಗುವುದು ಕಡಿಮೆಯಾಗುವುದು.
3. ಅವರ ಸ್ನೇಹಿತರ ಬಗ್ಗೆ ತಿಳಿದುಕೊಳ್ಳಿ
ಅವರ ಸ್ನೇಹಿತರು ಯಾರು, ಯಾರ ಜೊತೆ ಅವರು ಹೆಚ್ಚಾಗಿ ಸುತ್ತಾಡುತ್ತಾರೆ ಇವುಗಳೆನ್ನೆಲ್ಲಾ ತಿಳಿದುಕೊಳ್ಳಿ, ನಿಮ್ಮ ಸಂಗಾತಿಗೆ ವಿರುದ್ಧ ಲಿಂಗದವರು ಫ್ರೆಂಡ್ಸ್ ಇದ್ದರೆ ಈ ವಿಚಾರಕ್ಕೆ ಪೊಸೆಸಿವ್ ಆಗುವುದು ಮೊದಲು ಬಿಡಿ. ಆ ಫ್ರೆಂಡ್ ಜೊತೆ ಮಾತನಾಡಬೇಡ ಎಂದು ನೀವು ಹೇಳಿದ ತಕ್ಷಣ ಬಿಡಲು ಸಾಧ್ಯವಿಲ್ಲ. ನಿಮಗೂ ಫ್ರೆಂಡ್ಸ್ ಇಲ್ವೇ ಅದೇ ರೀತಿ ಅವರಿಗೂ ಇರುತ್ತಾರೆ. ಸ್ನೇಹಕ್ಕೂ ಒಂದು ಮೌಲ್ಯವಿದೆ ಎಂಬುವುದನ್ನು ಮರೆಯದಿರಿ.
4. ಅವರನ್ನು ಬದಲಾಯಿಸಲು ಪ್ರಯತ್ನಿಸುವ ಬದಲಿಗೆ ನೀವು ಬದಲಾಗಿ
ನೀವು ನಿಮ್ಮ ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ, ಬದಲಿಗೆ ನೀವು ಬದಲಾಗಿ, ನೀವು ಅವರನ್ನು ಅಷ್ಟೊಂದು ಪ್ರೀತಿಸುತ್ತಿದ್ದ ಮೇಲೆ ಅವರಿಗಾಗಿ ಒಂದಿಷ್ಟು ಬದಲಾಗುವುದರಲ್ಲಿ ತಪ್ಪೇನಿದೆ ಅಲ್ವಾ? ನಾನು ಬದಲಾಗಬೇಕು ಆದರೆ ಅವರು ಆಗಬಾರದಾ? ಎಂದು ಕೇಳಬೇಡಿ. ಏಕೆಂದರೆ ತುಂಬಾ ಪೊಸೆಸಿವ್ ಆಗಿರುವುದು ನೀವು, ಅವರಲ್ಲ ಅಲ್ವಾ?
5. ಎಲ್ಲಿ ಬೇರೆ ಸಂಬಂಧದಲ್ಲಿ ಬೀಳಬಹುದೋ ಎಂದು ಸದಾ ಗೂಢಚಾರ ಮಾಡಬೇಡಿ
ನಿಮ್ಮ ಮೇಲೆ ಅವರಿಗೆ ತುಂಬಾ ಪ್ರೀತಿಯಿದ್ದರೆ ಖಂಡಿತ ಅವರು ನಿಮ್ಮ ಪ್ರೀತಿಗೆ ಎಂದಿಗೂ ಮೋಸ ಮಾಡಲ್ಲ. ಮೋಸ ಮಾಡುವವರು ನಾವೇ ಎಷ್ಟೇ ಪ್ರೀತಿ ತೋರಿಸಲಿ, ಅವರು ಎಲ್ಲಿ ದಾರಿ ತಪ್ಪುತ್ತಾರೆ ಎಂದು ಕಾಯಲಿ ಅವರ ಬುದ್ಧಿ ಅವರು ತೋರಿಸಿಯೇ ತೋರಿಸುತ್ತಾರೆ.
ಆದ್ದರಿಂದ ನಿಮ್ಮ ಸಂಗಾತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾರೆ ಎಂದು ಗ್ಯಾರಂಟಿ ಇದೆ ತಾನೆ? ವೈ ಟು ವರಿ, ಜಸ್ಟ್ ರಿಲ್ಯಾಕ್ಸ್....ನಮ್ಮ ಪೊಸೆಸಿವ್ ಗುಣದಿಂದಲೇ ಸಂಬಂಧ ಮುರಿಯಬಾರದು ಅಲ್ವಾ?



Click it and Unblock the Notifications

