Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಗಂಡ ಮನೆಕೆಲಸ ಮಾಡೋದಿಲ್ವಾ? ಸೋಮಾರಿಯಾಗಿದ್ದಾರಾ? ಅವರಿಂದ ಸಹಾಯ ಪಡೆಯೋದು ಹೇಗೆ?
ನಮಗೆಲ್ಲಾ ಗೊತ್ತಿರೋ ಹಾಗೆ ಹೆಚ್ಚಿನ ಮನೆಗಳಲ್ಲಿ ಮನೆ ಕೆಲಸವನ್ನು ಹೆಣ್ಣು ಮಕ್ಕಳು ನಿಭಾಯಿಸೋದು. ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗ್ಲಿ ಹೋಗದಿರಲಿ ಮನೆಕೆಲಸ ಮಾತ್ರ ಅವರ ಬೆನ್ನಿಗೆ ಅಂಟಿಕೊಂಡೇ ಇರುತ್ತದೆ. ಕೆಲವು ಮನೆಗಳಲ್ಲಿ ಮಾತ್ರ ಗಂಡನು ಹೆಂಡತಿಯ ಸಹಾಯಕ್ಕೆ ಬರುತ್ತಾನೆ.
ಅದನ್ನು ಬಿಟ್ರೆ ಹೆಚ್ಚಿನ ಗಂಡಸರಂತೂ ಮನೆ ಕೆಲಸ ಮಾಡೋ ಡ್ಯೂಟಿ ನಮ್ಮದಲ್ಲ. ಅದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಆಡುತ್ತಾರೆ. ಅಷ್ಟಕ್ಕು ಮನೆ ಕೆಲಸ ಮಾಡುವಾಗ ಗಂಡನ ಸಹಾಯ ಪಡೆದುಕೊಳ್ಳೋದು ಹೇಗೆ? ಗಂಡನನ್ನು ಮನೆ ಕೆಲಸದಲ್ಲಿ ಕೈ ಜೋಡಿಸುವಂತೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್.

1. ಮನೆ ಕೆಲಸ ಮಾಡಲು ನೀವು ಪಡುತ್ತಿರೋ ಕಷ್ಟಗಳನ್ನು ತಿಳಿಸಿ
ಗೃಹಿಣಿಯಾದವಳು ಕೆಲಸಕ್ಕೆ ಹೋಗಲಿ ಅಥವಾ ಹೋಗದಿರಿ ಮನೆ ಕೆಲಸ ಮಾಡಿ ಮುಗಿಸೋದು ಸುಲಭದ ವಿಚಾರವಲ್ಲ. ಮನೆಯಿಂದ ಹಿಡಿದು ಗಂಡ, ಮಕ್ಕಳ ಪ್ರತಿಯೊಂದು ಕೆಲಸವನ್ನು ಆಕೆ ನೋಡಿಕೊಳ್ಳಬೇಕು. ಮನೆ ಕೆಲಸ ಮಾಡಿ ಮುಗಿಸುವಷ್ಟರಲ್ಲಿ ಆಕೆಗೆ ಸಾಕು ಸಾಕು ಅನ್ನಿಸುರುತ್ತದೆ. ಈ ಎಲ್ಲಾ ವಿಚಾರಗಳನ್ನು ನೀವು ನಿಮ್ಮ ಗಂಡನ ಬಳ ಹೇಳದೇ ಹೋದರೆ ಖಂಡಿತ ಅವರಿಗೆ ತಿಳಿಯೋದಿಲ್ಲ.
ನಿಮಗಾಗುತ್ತಿರುವ ಕಷ್ಟದ ಬಗ್ಗೆ ಅವರಲ್ಲಿ ಮುಕ್ತವಾಗಿ ಮಾತನಾಡಿ. ಕೆಲಸವನ್ನು ಹಂಚಿಕೊಂಡು ಮಾಡಿದರೆ ಯಾವುದು ಕೂಡ ಕಷ್ಟ ಆಗೋದಿಲ್ಲ. ಚಿಕ್ಕ-ಪುಟ್ಟ ಕೆಲಸಗಳಲ್ಲಿ ಅವರ ಸಹಾಯ ಪಡೆಯಿರಿ ಸಾಕು. ನಿಮ್ಮ ಮೇಲಿನ ಒತ್ತಡವು ಕೊಂಚ ಮಟ್ಟಿಗೆ ಕಡಿಮೆ ಆಗುತ್ತದೆ.
2. ದಿನಚರಿಯ ಪಟ್ಟಿ ತಯಾರಿಸಿಕೊಳ್ಳಿ
ಮನೆಯಲ್ಲಿ ಇಬ್ಬರೂ ಕೆಲಸಕ್ಕೆ ಹೊರಗಡೆ ಹೋಗುತ್ತಿದ್ದರೆ ಮನೆಯ ಕೆಲಸವನ್ನು ಇಬ್ಬರೂ ಕೂಡ ಸಮನಾಗಿ ಹಂಚಿಕೊಳ್ಳಲೇಬೇಕು. ಆಗ ಒಬ್ಬರ ಮೇಲಿನ ಹೊರೆ ಖಂಡಿತ ಕಡಿಮೆಯಾಗುತ್ತದೆ. ಹೀಗಾಗಿ ಪ್ರತಿನಿತ್ಯ ಯಾವ ಕೆಲಸವನ್ನು ಯಾರು ಮಾಡಬೇಕು ಎಂಬ ಪಟ್ಟಿಯನ್ನು ತಯಾರಿಸಿಕೊಳ್ಳಿ. ಅದರ ಅನುಸಾರ ದಂಪತಿಗಳು ಕೆಲಸ ಮಾಡುತ್ತಾ ಹೋದರೆ ಒಳ್ಳೆಯದು.
3. ಪತಿಯ ಕೆಲಸವನ್ನು ಟೀಕೆ ಮಾಡಬೇಡಿ
ನಿಮ್ಮ ಪತಿ ಈಗಷ್ಟೇ ನಿಮಗೆ ಮನೆ ಕೆಲಸದಲ್ಲಿ ಸಹಾಯ ಮಾಡೋದಕ್ಕೆ ಶುರು ಮಾಡಿರಬಹುದು. ಹೆಚ್ಚಾಗಿ ಪುರುಷರಿಗೆ ಮನೆ ಕೆಲಸದ ಬಗ್ಗೆ ಅಷ್ಟಾಗಿ ಗೊತ್ತಿರೋದಿಲ್ಲ. ಅವರಿಗೆ ತಿಳಿದಿರುವ ಹಾಗೆ ಅವರು ಕೆಲಸಗಳನ್ನು ಮಾಡುತ್ತಾರೆ. ಮೊದ ಮೊದಲು ಅವರು ಮಾಡುವ ಕೆಲಸಗಳು ನಿಮಗೆ ಸರಿ ಅನ್ನಿಸದೇ ಇರಬಹುದು. ಹಾಗಂತ ಅವರನ್ನು ಟೀಕಿಸೋದಕ್ಕೆ ಹೋಗಲೇಬೇಡಿ. ಅವರಿಗೆ ಗೊತ್ತಿರುವಷ್ಟು ಕೆಲಸಗಳನ್ನು ಮಾಡಲಿ. ದಿನಕಳೆದಂತೆ ಅವರು ಎಲ್ಲಾ ಕೆಲಸವನ್ನು ಕಲಿತುಕೊಳ್ಳುತ್ತಾರೆ.
4. ಪತಿಗೆ ತಾಳ್ಮೆಯಿಂದ ಕಲಿಸಿಕೊಡಿ
ಗಂಡು ಮಕ್ಕಳಿಗೆ ಮನೆ ಕೆಲಸಗಳೆಲ್ಲಾ ಹೊಸತು. ಹೆಚ್ಚಿನ ಗಂಡಸರಿಗೆ ಈ ಬಗ್ಗೆ ಗೊತ್ತಿರೋದಿಲ್ಲ. ಹೆಂಡತಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಅವರು ಕೆಲಸಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಅವರು ತಪ್ಪುಗಳನ್ನು ಮಾಡಬಹುದು. ಹಾಗಂತ ಪತ್ನಿಯಾದವಳು ಸುಮ್ಮನೇ ಕೋಪಿಸಿಕೊಳ್ಳೋದನ್ನು ಬಿಟ್ಟು ಅವರಿಗೆ ಗೊತ್ತಿಲ್ಲದ ವಿಚಾರವನ್ನು ತಾಳ್ಮೆಯಿಂದ ಕಲಿಸಿ ಕೊಡುವುದು ಪತ್ನಿಯಾದವಳ ಕರ್ತವ್ಯ.
5. ಅವರ ಕೆಲಸಕ್ಕೆ ಕ್ರೆಡಿಟ್ ನೀಡಿ
ಮನೆ ಕೆಲಸ ಮಾಡೋದು ಗಂಡ-ಹೆಂಡತಿ ಇಬ್ಬರ ಕರ್ತವ್ಯವಾಗಿದೆ. ಆದರೆ ನಿಮ್ಮ ಪತಿ ನಿಮಗೆ ಇತ್ತೀಚಿಗೆ ಮನೆ ಕೆಲಸದಲ್ಲಿ ಸಹಾಯ ಮಾಡೋದಕ್ಕೆ ಶುರು ಮಾಡಿರಬಹುದು. ಅವರು ನಿಮಗೆ ಸಣ್ಣ ಸಹಾಯವನ್ನೇ ಮಾಡಲಿ ಪರವಾಗಿಲ್ಲ. ಆದರೆ ಅವರು ಮಾಡಿದ ಕೆಲಸಕ್ಕೆ ಕ್ರೆಡಿಟ್ ಕೊಡೋದನ್ನು ಮರೀಬೇಡಿ. ನೀವು ಅವರಿಗೆ ಕ್ರೆಡಿಟ್ ಕೊಡುತ್ತಿದ್ದರೆ ಕೆಲಸ ಮಾಡೋದಕ್ಕೆ ಅವರಿಗೆ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತದೆ.
6. ಎಂಜಾಯ್ ಮಾಡುತ್ತಾ ಕೆಲಸ ಮಾಡಿ
ಮನೆ ಕೆಲಸ ಮಾಡುವುದು ಕೂಡ ಒಂದು ರೀತಿ ಕಲೆ ಇದ್ದ ಹಾಗೆ. ಅದು ಸುಲಭವಾಗಿ ಯಾರಿಗೂ ಒಲಿಯೋದಿಲ್ಲ. ನಾವು ಕೆಲಸವನ್ನು ದೊಡ್ಡ ಹೊರೆ ಅಂದುಕೊಂಡರೆ ಖಂಡಿತ ಅದು ಹೊರೆಯಾಗುತ್ತದೆ. ನಾವು ಟಿವಿ ನೋಡುವಾಗ, ಆಟ ಆಡುವಾಗ ಎಷ್ಟು ಆಸಕ್ತಿಯನ್ನು ತೋರಿಸುತ್ತೇವೆಯೋ ಕೆಲಸದಲ್ಲೂ ಅಷ್ಟೇ ಆಸಕ್ತಿ ಇರಬೇಕು. ಹೀಗಾಗಿ ಕೆಲಸವನ್ನು ಎಂಜಾಯ್ ಮಾಡಿಕೊಂಡು ಆಸಕ್ತಿಯಿಂದ ಮಾಡಬೇಕು. ಆಗ ಯಾವ ಕೆಲಸವೂ ಕಷ್ಟ ಆಗೋದಿಲ್ಲ.
ಗಂಡನು ತನ್ನ ಹೆಂಡತಿಯ ಕಷ್ಟವನ್ನು ಅರ್ಥ ಮಾಡಿಕೊಂಡರೆ ಸಾಕು. ಆಗ ಆತ ಯಾವುದೇ ಒತ್ತಾಯವಿಲ್ಲದೇ ಹೆಂಡತಿಯ ಸಹಾಯಕ್ಕೆ ಬರುತ್ತಾನೆ. ಇಲ್ಲಿ ಯಾವ ರೀತಿ ಒತ್ತಾಯವು ಬೇಕಾಗಿರೋದಿಲ್ಲ.



Click it and Unblock the Notifications
