Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮದುವೆಯಾಗಲು ಭಾರತೀಯ ಹುಡುಗ ಬೇಕು! ಮಾಸ್ಕೋ ಯುವತಿಯ ಪೋಸ್ಟರ್ ವೈರಲ್
ಆನ್‌ಲೈನ್‌ನಲ್ಲಿ ನಮಗೆ ಎಂತಹ ವಿಚಾರಗಳು ನೋಡಲು ಸಿಗುತ್ತವೆ ಅಂದ್ರೆ ನೀವು ನಂಬಲು ಸಾಧ್ಯವಾಗುವುದಿಲ್ಲ. ಹಾಗೆ ಇಲ್ಲೊಬ್ಬ ವಿದೇಶಿ ಹುಡುಗಿಯ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವಿದೇಶಿಗರು ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಈ ಸಂಸ್ಕೃತಿಯಂತೆ ಬದುಕುವುದು ಸಂಪ್ರದಾಯಗಳ ಫಾಲೋ ಮಾಡುವುದನ್ನು ನಾವು ನೋಡಿದ್ದೇವೆ.
ಇದೀಗ ಮಾಸ್ಕೋದ ಯುವತಿಯೊಬ್ಬಳು ಭಾರತೀಯ ಹುಡುಗನ ಮದುವೆಯಾಗಬೇಕು ಎಂದು ಪೋಸ್ಟರ್ ಹಿಡಿದುಕೊಂಡು ನಿಂತಿರುವ ವಿಡಿಯೋ ವೈರಲ್ ಆಗಿದೆ. ಆಕೆ ಸೋಶಿಯಲ್ ಮೀಡಿಯಾ ಪ್ರಭಾವಿಯಾಗಿದ್ದು, ದಿನಾರಾ ಎಂಬುದಾಗಿ ತಿಳಿದುಬಂದಿದೆ. ಆಕೆ ಶಾಪಿಂಗ್ ಮಾಲ್‌ನಲ್ಲಿ ನಿಂತು ಭಾರತೀಯ ಹುಡುಗ ಬೇಕು ಎಂಬ ಪೋಸ್ಟರ್ ಹಿಡಿದಿದ್ದಾಳೆ.

'ಭಾರತೀಯ ಪತಿಯನ್ನು (ಅವಿವಾಹಿತ) ಹುಡುಕುತ್ತಿದ್ದೇನೆ' ಎಂದು ಬರೆದ ಪೋಸ್ಟರ್ ಅನ್ನು ಹಿಡಿದಿದ್ದಾಳೆ. ಪೋಸ್ಟರ್‌ನಲ್ಲಿ ಆಕೆಯ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನ ಕ್ಯೂಆರ್ ಕೋಡ್ ಅನ್ನು ಪೇಪರ್‌ನಲ್ಲಿ ಮುದ್ರಿಸಲಾಗಿದೆ. ಆಕೆ ಈ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.
ಇನ್‌ಸ್ಟಾಗ್ರಾಮ್‌ನಲ್ಲಿ 85,000 ಕ್ಕೂ ಹೆಚ್ಚು ಲೈಕ್ಸ್ ಮತ್ತು 8,000 ಕ್ಕೂ ಹೆಚ್ಚು ಕಾಮೆಂಟ್‌ಗಳೊಂದಿಗೆ ವೀಡಿಯೊ 7.8 ಮಿಲಿಯನ್ ವೀಕ್ಷಣೆ ಗಳಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕರು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಒಬ್ಬ ಬಳಕೆದಾರನು ದಿನಾರಾಳನ್ನು ಅವಳ ಜನ್ಮ ದಿನಾಂಕ ಮತ್ತು ಸಮಯವನ್ನು ಕುಂಡ್ಲಿಗೆ ಹೊಂದಿಸಲು ಕೇಳಿದ್ದಾನೆ. ಇನ್ನೊಬ್ಬ ಬಳಕೆದಾರರು, "ನಾನು ಸಿದ್ಧ, ನೀವು ನನ್ನನ್ನು ಮದುವೆಯಾಗುತ್ತೀರಾ" ಎಂದು ಕಾಮೆಂಟ್ ಮಾಡಿದ್ದಾರೆ.
ದಿನಾರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಕಥೆಗಳಲ್ಲಿ ಕಾಮೆಂಟ್ ಅನ್ನು ಪೋಸ್ಟ್ ಮಾಡಿ, ಅವರು ಭಾರತೀಯ ಗಂಡನನ್ನು ಏಕೆ ಹುಡುಕುತ್ತಿದ್ದಾರೆ ಮತ್ತು ಸೂಕ್ತವಾದ ವರನಲ್ಲಿ ಯಾವ ಗುಣಗಳನ್ನು ನಿರೀಕ್ಷಿಸಲಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. "ಹಲವು ವರ್ಷಗಳ ಹಿಂದೆ ನಾನು ಭಾರತೀಯ ಸಂಸ್ಕೃತಿಯ ಬಗ್ಗೆ ಕಲಿಯಲು ಪ್ರಾರಂಭಿಸಿದೆ, ನಾನು ಭಾರತೀಯ ಸ್ನೇಹಿತರನ್ನು ಗಳಿಸಿದ್ದೇನೆ. ಮತ್ತು ನಾನು ಅನೇಕ ಬಾರಿ ಭಾರತಕ್ಕೆ ಬಂದಿದ್ದೇನೆ. ಗುಣಗಳಿಗಾಗಿ, ವ್ಯಕ್ತಿಯು ಕುಟುಂಬಗಳನ್ನು ಗೌರವಿಸಬೇಕು ಮತ್ತು ಪ್ರಯಾಣದ ವಿಷಯದಲ್ಲಿ ನಾವು ಅದೇ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ ಎಂದು ಭಾವಿಸುತ್ತೇವೆ ಎಂದು ಆಕೆ ಬರೆದುಕೊಂಡಿದ್ದಾಳೆ.
ಈ ವಿಡಿಯೋ ನೋಡಿದ ಜನರು ಶಾಕ್ ಆಗಿದ್ದಾರೆ. ಏಕೆಂದರೆ ಭಾರತದಲ್ಲಿ ನೆಲೆಸಿರುವ ಯುವತಿರು ಪಾಶ್ಚಾತ್ಯ ಸಂಸ್ಕೃತಿಯತ್ತ ಹೊರಳುತ್ತಿದ್ದರೆ ಆಕೆ ಭಾರತೀಯ ಸಂಸ್ಕೃತಿಗೆ ಮಾರುಹೋಗಿದ್ದನ್ನು ಕಂಡು ಜನರು ಆಕೆಯನ್ನು ಹೊಗಳಿದ್ದಾರೆ. ಜೊತೆಗೆ ಒಂದಿಷ್ಟು ಮಂದಿ ಮದುವೆಯಾಗುವ ಇಚ್ಛೆ ಸಹ ಆಕೆಯ ಬಳಿ ಹೊರಹಾಕಿದ್ದಾರೆ.
ಇತ್ತ ಆಕೆ ಪೋಸ್ಟರ್ ಹಿಡಿದು ನಿಂತಿದ್ದ ವಿಡಿಯೋ ಸಹ ವರಲ್ ಆಗಿದ್ದು, ಯುವಕರು ಕಮೆಂಟ್‌ಗಳ ಮಳೆಯನ್ನೇ ಸುರಿಸಿದ್ದಾರೆ. ನಾವು ಮದುಯೆಯಾಗಲು ಸಿದ್ದರಿರುವುದಾಗಿ ಹೇಳಿದ್ದಾರೆ. ಆಕೆ ಯಾವ ಕಾರಣಕ್ಕೆ ಭಾರತೀಯ ಹುಡುಗ ಬೇನ್ನು ಅನ್ನುವುದನ್ನು ಸಹ ಬರೆದುಕೊಂಡಿದ್ದರಿಂದ ಒಂದಿಷ್ಟು ಮಂದಿ ಈ ಗುಣಗಳು ನಮ್ಮಲ್ಲಿವೆ ಎಂದು ಮುಂದೆ ಬಂದಿದ್ದಾರೆ.
ಆಕೆಯ ಸ್ನೇಹಿತರಲ್ಲಿ ಹಲವರು ಭಾರತೀಯರಾಗಿದ್ದರು, ಅವರ ಜೊತೆಗಿದ್ದ ದಿನಾರಾ ಭಾರತೀಯ ಸಂಸ್ಕೃತಿಗೆ, ಆಚಾರ -ವಿಚಾರಗಳಿಗೆ ಮಾರು ಹೋಗಿದ್ದಾಳೆ. ಹೀಗಾಗಿ ಭಾರತೀಯ ಸಂಸ್ಕೃತಿಯ ಹುಡುಗನನ್ನೇ ಮದುವೆಯಾಗಲು ಆಕೆ ಬಯಸಿದ್ದಾಳೆ. ಆದರೆ ಉತ್ತಮ ಗುಣಗಳಿರುವ ಹುಡುಗನ ಹುಡುಕುವುದು ಹೇಗೆ ಎಂದು ತಿಳಿಯದೆ ಮಾಲ್‌ನಲ್ಲಿ ಪೋಸ್ಟರ್ ಹಿಡಿದು ನಿಂತಿದ್ದಾಳೆ. ಸದ್ಯ ಆಕೆಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯುವಕರು ಚೆಲುವೆಯ ಕೈ ಹಿಡಿಲು ಮುಗಿಬಿದ್ದಿದ್ದಾರೆ. ಆದ್ರೆ ಆಕೆ ಯಾವ ಹುಡುಗನ ಆಯ್ಕೆ ಮಾಡಿಕೊಳ್ಳುತ್ತಾಳೆ ಅನ್ನೋದು ಕುತೂಹಲ ಮೂಡಿಸಿದೆ.



Click it and Unblock the Notifications
