Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಲ್‌ಫ್ರೆಂಡ್ ಬೇಕಾ..? ಬಾಡಿಗೆಗೆ ಸಿಗುತ್ತಾರೆ, ದರ ಪಟ್ಟಿಯೂ ಸಿದ್ಧವಿದೆ..!
ಯಾವುದೇ ಹುಡುಗ ಅಥವಾ ಹುಡುಗಿ ಒಂದು ಹುಡುಗಿಯನ್ನು ಅಥವಾ ಹುಡುಗನನ್ನು ಪ್ರೀತಿಸುವ ಮೊದಲು ಆಕೆ ಅಥವಾ ಆತನ ಜೊತೆ ಸುತ್ತಾಡಬೇಕು ಒಂದಿಷ್ಟು ಸಮಯ ಕಳೆಯಬೇಕು ಅಂದುಕೊಳ್ಳುತ್ತಾಳೆ. ಮದುವೆಗೂ ಮುನ್ನ ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದು ಅವರ ಆಸೆಯಾಗಿರುತ್ತೆ. ಇದಕ್ಕೆ ಡೇಟಿಂಗ್ ಎಂದು ಕರೆಯುತ್ತೇವೆ.
ಮೊದಲು ಪಾಶ್ಚಾತ್ಯ ಸಂಸ್ಕೃತಿ ಎನ್ನುತ್ತಿದ್ದ ಭಾರತೀಯರಿಗೆ ಈಗ ಇದು ಕಾಮನ್ ಆಗಿದೆ. ಪ್ರೀತಿಯಲ್ಲಿ ಇದ್ದರೆ ಅಥವಾ ಹೊಸ ಸಂಬಂಧ ಬೆಸೆದುಕೊಳ್ಳಲು ಪ್ರಯತ್ನಿಸಿದರೆ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಳ್ಳಲು ಒಟ್ಟಿಗೆ ಒಂದಷ್ಟು ಸಮಯ ಕಳೆಯಲು ಬಯಸುವುದು ಈಗ ಕಾಮನ್ ಆಗಿದೆ.

ಡೇಟಿಂಗ್ ಹೋಗುವ ಹುಡುಗ ಹುಡುಗಿ ಸಾಕಷ್ಟು ವಿಷಯಗಳ ಬಗ್ಗೆ ಗಮನ ವಹಿಸುತ್ತಾರೆ. ಆದರೆ ಡೇಟಿಂಗ್ ಹೋದ ತಕ್ಷಣ ಅವರನ್ನೇ ಮದುವೆಯಾಗಬೇಕು ಎಂದೇನು ಇಲ್ಲ. ಒಂದಿಷ್ಟು ದಿನ ಸುತ್ತಾಡಿ ಕೊನೆಯಲ್ಲಿ ಇಬ್ಬರ ಒಮ್ಮತದ ಬೇರೆಗೆ ಬೇರೆ ಬೇರೆ ಆಗುತ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ಡೇಟಿಂಗ್ ಮಾಡಲು ಆಫರ್ ನೀಡಿರವುದಲ್ಲದೆ ದರ ಪಟ್ಟಿ ಹಂಚಿಕೊಂಡಿದ್ದು ಎಲ್ಲರಿಗೂ ಶಾಕ್ ನೀಡಿದ್ದಾಳೆ
ಹೌದು ಯುವತಿ ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಡೇಟಿಂಗ್ ಮಾಡಲು ಬಯಸುವವರಿಗೆ ಆಕೆಯ ದರ ಪಟ್ಟಿ ನೀಡಿದ್ದಾಳೆ. ಆಸಕ್ತರು ಬೇಕಾದರೆ ಆಕೆಯ ಜೊತೆ ಪ್ಯಾಕೇಜ್ ಮಾತಾನಾಡಿಕೊಂಡು ಡೇಟಿಂಗ್‌ಗೆ ಹೋಗಬಹುದಂತೆ. ಈ ಪೋಸ್ಟ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೋಡುಗರು ನಿಬ್ಬೆರಗಾಗಿದ್ದಾರೆ.
@divya_giri__ ಎಂಬ ಇನ್ಸ್‌ಸ್ಟಾಗ್ರಾಮ್‌ನ ಪುಟದಲ್ಲಿ ಮಹಿಳೆಯೊಬ್ಬರು ಈ ರೀಲ್ಸ್ ಅನ್ನು ಪೋಸ್ಟ್ ಮಾಡಿದ್ದಾರೆ, ಏಕಾಂಗಿಯೇ? ಡೇಟ್‌ಗೆ ಹೋಗಲು ಸಿದ್ಧರಿದ್ದೀರಾ? ಡೇಟ್‌ಗಾಗಿ ನನ್ನ ಬಾಡಿಗೆ !!" ನಂತರ ಅವರು ವಿವಿಧ ರೀತಿಯ ದರಗಳ ವಿವರಣೆನೀಡಿ ಪೋಸ್ಟ್ ಹಾಕಿದ್ದಾರೆ. ಜೊತೆಗೆ 'ಚಿಲ್ ಕಾಫಿ ಡೇಟ್'. 1500, ಒಂದು 'ಸಾಮಾನ್ಯ ಡೇಟ್ (ಊಟ ಮತ್ತು ಮೂವಿ)' ರೂ. 2000, 'ಬೈಕ್ ಡೇಟ್' ರೂ. 4000, 'ನಮ್ಮ ಡೇಟ್ ಕುರಿತು ಸೋಶೀಯಲ್ ಮೀಡಿಯಾ ಪೋಸ್ಟ್' ರೂ. 6000 ಎಂಬ ದರದ ಪಟ್ಟಿ ಕಾಣಬಹುದು.
ಈ ರೀತಿಯ ದರ ಪಟ್ಟಿ ನೋಡಿದ ಮಂದಿ ಶಾಕ್ ಆಗಿರುವ ಜೊತೆಗೆ ಅವರ ಏಕಾಂಗಿ ಸ್ನೇಹಿತರಿಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಕಮೆಂಟ್‌ಗಳ ಸುರಿಮಳೆ ಬಂದಿದೆ. ಆಧುನಿಕ ಕಾಲದಲ್ಲಿ ಎಲ್ಲವೂ ಬಾಡಿಗೆಗೆ ಸಿಗುತ್ತಿದೆ. ಬಾಡಿಗೆಗೆ ಮದುವೆಯೂ ಆಗಬಹುದು. ಬಾಡಿಗೆ ಪತ್ನಿಯೂ ಮುಂದೆ ಸಿಗಬಹುದು ಎಂದು ಬಳಕರದಾರರೊಬ್ಬರು ಬರೆದುಕೊಂಡಿದ್ದಾರೆ.
ವಿಶೇಷ ಅಂದರೆ ಜಪಾನ್‌ನಲ್ಲಿ ರೀತಿಯ ಹಲವು ವಿದ್ಯಮಾನಗಳು ನಡೆಯುತ್ತವೆ. ಅಲ್ಲಿ ಬಾಡಿಗೆ ಪ್ರೇಯಸಿ ಸಿಗುತ್ತಾರೆ. ಅಲ್ಲಿ ಹುಡುಗಿಯರು ಹೇಳಿದಷ್ಟು ಹಣ ನೀಡಿದರೆ ನಿಮ್ಮ ಜೊತೆ ಇರುತ್ತಾರೆ. ಒಂದು ದಿನಕ್ಕೆ ಇಂತಿಷ್ಟು ಎಂದು ದರ ನಿಗದಿಯಾಗಿರುತ್ತದೆ. ಇಡೀ ದಿನ ನಿಮ್ಮ ಜೊತೆಗಿದ್ದು, ನಿಮ್ಮ ಜೊತೆ ಸುತ್ತಾಡುತ್ತಾರೆ. ಇಲ್ಲಿಯೂ ಸಹ ಇದೇ ಮಾದರಿಯ ದರ ಪಟ್ಟಿ ಕಂಡು ಜನರು ಭಾರತ ಜಪಾನ್ ಆಗಿವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎನ್ನುತ್ತಿದ್ದಾರೆ.
ಆದರೆ ಇದೊಂದು ದೊಡ್ಡ ನಕಲಿಗಳ ಜಾಲ, ಪುರುಷರೆ ಹುಷಾರಾಗಿರಿ ಎಂದು ಬಳಕೆದಾರರೊಬ್ಬರು ಎಚ್ಚರಿಸಿದ್ದಾರೆ. ಏಕೆಂದರೆ ಈ ರೀತಿ ಪೋಸ್ಟ್‌ಗೆ ಮರುಳಾಗಿ ಹುಡುಗಿ ಹಿಂದೆ ಹೋದರೆ ಹಣ, ಒಡವೆ ಎಲ್ಲ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಮತ್ತೆ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಯಾರಾದರು ಓದಿದವರು ಸ್ಟಾರ್ಟ್ ಅಪ್ ತೆರೆಯಲು ಬಹಳ ತಲೆ ಕೆಡಿಸಿಕೊಂಡಾಗ ಅವರಿಗೆ ಈ ಐಡಿಯಾ ಹೊಡೆದಿದೆ. ಒಳ್ಳೆಯ ಬ್ಯುಸಿನೆಸ್ ಆಗಲಿದೆ ಎಂದಿದ್ದಾರೆ.



Click it and Unblock the Notifications
